ಮಳೆ ಜೊತೆ ಬೀಸಿದ ಗಾಳಿ, ಹಾರಿ ಹೋಯಿತು ಮನೆ ಮೇಲ್ಚಾವಣಿ! ಈ ದೃಶ್ಯ ನೋಡಿ

ಹಂಚಿಕೊಳ್ಳಿ
WhatsApp Facebook X Telegram
Wind in Hosanagara House Roof Blown Off,
Wind in Hosanagara House Roof Blown Off,

Wind in Hosanagara / ಮಲೆನಾಡುಟುಡೆ / ಹೊಸನಗರ / ತಾಲೂಕಿನಾದ್ಯಂತ ಎಡೆಬಿಡದೇ ಮಳೆಯಾಗುತ್ತಿದೆ. ಮಳೆಯಾಗುತ್ತಿರುವುದರ ಜೊತೆಜೊತೆಗೆ ಅನಾಹುತವೂ ಸಂಭವಿಸುತ್ತಿದೆ. ಇದಕ್ಕೆ ಪೂರಕ ಎಂಬಂತೆ ಜೋರಾಗಿ ಬೀಸಿದ ಗಾಳಿಗೆ ಮನೆಯೊಂದ ಚಾವಣಿಯು ಹಾರಿ ಹೋಗಿದೆ.

ತಾಲೂಕಿನ ಅರಮನೆಕೊಪ್ಪ ಗ್ರಾಮದ ಗಣೇಶ ಉಡುಪ ಎಂಬುವವರ ವಾಸದ ಮನೆ ಚಾವಣಿ ಗಾಳಿಯ ರಭಸಕ್ಕೆ ಹಾರಿ ಹೋಗಿದೆ. ಇನ್ನು ಗಾಳಿ ಮಳೆಗೆ ಹಲವೆಡೆ ವಿದ್ಯುತ್ ಕಂಬಗಳು ತುಂಡಾಗಿದೆ.

ತಾಲೂಕಿನಲ್ಲಿ ಕಳೆದ 5 ಮಳೆಯಿಂದಾಗಿ ದಿನಗಳಿಂದ ವಿದ್ಯುತ್ ಸಮಸ್ಯೆ ಕಾಣುತ್ತಿದೆ. ಮೆಸ್ಕಾಂನಲ್ಲಿ ಸಿಬ್ಬಂದಿ ಕೊರತೆ ಇರುವುದಿಂದ ರಿಪೇರಿ ಕೆಲಸ ಲೇಟಾಗುತ್ತಿದೆ. ಆದರೆ ಮಳೆ ಗಾಳಿ ಥಂಡಿಯಲ್ಲಿ ಜನರು ಪರದಾಡುವಂತಾಗಿದೆ.

ಬೇಸಿಗೆಯಲ್ಲಿ ಜಂಗಲ್ ಕಟಿಂಗ್ ನೆಪದಲ್ಲಿ ದಿನವಿಡೀ ವಿದ್ಯುತ್ ವ್ಯತ್ಯಯ ಮಾಡುವ ಮೆಸ್ಕಾಂ ಅಧಿಕಾರಿಗಳು ಮಳೆಗಾಲದಲ್ಲಿ ಮರ ಬಿದ್ದಿದೆ, ದುರಸ್ತಿ ಆಗಬೇಕು ಎಂಬ ನೆಪ ಹೇಳುತ್ತಿದ್ದಾರೆ ಅಂತಾ ನೆಪ ಹೇಳುತ್ತಿದ್ದಾರಂತೆ

ಹಂಚಿಕೊಳ್ಳಿ
WhatsApp Facebook X Telegram
ajjimane ganesh
ಲೇಖಕರ ಬಗ್ಗೆ

ajjimane ganesh

Malenadu Today Contributor