MESCOM Officer / ಮಲೆನಾಡು ಟುಡೆ ಸುದ್ದಿ / ಸೊರಬ / ತಾಲೂಕಿನ ಆನವಟ್ಟಿಯಲ್ಲಿ ವಿದ್ಯುತ್ ಸಂಪರ್ಕ ಕೊಡುವ ಸಲುವಾಗಿ ಬಿಲ್ಡಿಂಗ್ ಇನ್ಸ್ಪೆಕ್ಷನ್ ಮಾಡುತ್ತಿದ್ದ ಮೆಸ್ಕಾಂ ಶಾಖಾಧಿಕಾರಿಯೊಬ್ಬರು ಬಿದ್ದು ಮೃತಪಟ್ಟಿರುವ ಬಗ್ಗೆ ವರದಿಯಾಗಿದೆ. ಕಳೆದ ಭಾನುವಾರ ಈ ಘಟನೆ ನಡೆದಿದೆಯಂತೆ. ಮೃತರು ಜಡೆ ಮೆಸ್ಕಾಂ ಶಾಖೆಯ ಶಾಖಾಧಿಕಾರಿ ಮಹಾನಿಂಗ್ ಅಪರಾಜ್ (ಮಹಾಲಿಂಗಪ್ಪ) ಎಂದು ತಿಳಿದುಬಂದಿದ್ದು , ಇವರಿಗೆ 46 ವರ್ಷ ವಯಸ್ಸಾಗಿತ್ತು.
ಮೂಲತಃ ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಐನಾಪುರ ಗ್ರಾಮದ ಮೂಲದವರಾದ ಮಹಾನಿಂಗ್ ಅಪರಾಜ್ ಆರಂಭದಲ್ಲಿ ಪವರ್ ಮ್ಯಾನ್ ಆಗಿ ಉದ್ಯೋಗಕ್ಕೆ ಸೇರಿಕೊಂಡಿದ್ದರು. ಆನಂತರ ಬಡ್ತಿ ಪಡೆದು, ಕಿರಿಯ ಎಂಜಿನಿಯರ್ ಆಗಿ ಸೇವೆ ಸಲ್ಲಿಸಿದ್ದರು. ತದನಂತರ ಅವರು ಜಡೆ ಮೆಸ್ಕಾಂ ಶಾಖಾಧಿಕಾರಿಯಾಗಿ ಕೆಲಸ ಮಾಡುತ್ತಿದ್ದರು.
ಕಳೆದ ಭಾನುವಾರ, ಕನ್ಸ್ಟಕ್ಷನ್ ಬಿಲ್ಡಿಂಗ್ ಒಂದನ್ನ ಇನ್ಸ್ಪೆಕ್ಷನ್ ಮಾಡಲು ತೆರಳಿದ್ದರು. ಈ ವೇಳೆ ಬಣೆಯಿಂದ ಆಯತಪ್ಪಿ ಕೆಳಗೆ ಬಿದ್ದಿದ್ದಾರೆ. ಆಗ ಕಟ್ಟಡದ ಗೋಡೆಯು ತಲೆಗೆ ಬಲವಾಗಿ ಬಡಿದಿದೆ. ಪರಿಣಾಮವಾಗಿ ಅವರು ಸಾವನ್ನಪ್ಪಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಆನವಟ್ಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
Related News
🔔 Breaking News Alerts
ತಾಜಾ ಸುದ್ದಿಗಳನ್ನು ಮೊದಲು ಪಡೆಯಲು ನಮ್ಮ ನೋಟಿಫಿಕೇಶನ್ ಸೇವೆಯನ್ನು ಸಬ್‌ಸ್ಕ್ರೈಬ್ ಮಾಡಿ.
