20 ಸಾವಿರ ರೂಪಾಯಿ ಅಡ್ವಾನ್ಸ್ ಕೊಟ್ಟು ವರ್ಷವಾದರೂ ರಿಪೇರಿ ಆಗದ ಬೈಕ್! ಎಂಟ್ರಿಯಾದ್ರು ಪೊಲೀಸ್!

ಹಂಚಿಕೊಳ್ಳಿ
WhatsApp Facebook X Telegram
shivamogga crime news iamge
shivamogga police

112 Police / ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ / ಒಂದು ವರ್ಷ ರಿಪೇರಿ ಮಾಡದೇ ಬೈಕ್​ವೊಂದನ್ನ ಗ್ಯಾರೇಜ್​ನಲ್ಲಿಯೇ ಇಟ್ಟುಕೊಂಡ ವಿಚಾರಕ್ಕೆ ಕೊನೆಗೆ ಪೊಲೀಸರ ಮಧ್ಯಪ್ರವೇಶಿಸಿ ವಿಷಯ ಇತ್ಯರ್ಥ ಮಾಡಿದ ಬಗ್ಗೆ ತುಂಗಾನಗರ ಪೊಲೀಸ್ ಠಾಣೆ ಲಿಮಿಟ್ಸ್​ನಲ್ಲಿ ವರದಿಯಾಗಿದೆ.

112 ಶಿವಮೊಗ್ಗ ಈ ಬಗ್ಗೆ ತನ್ನ ಅಧಿಕೃತ ಸೋಶಿಯಲ್ ಮೀಡಿಯಾದಲ್ಲಿ ವಿವರ ನೀಡಿದೆ. ಇಲ್ಲಿನ ಗ್ಯಾರೇಜ್​ ಒಂದರಲ್ಲಿ ವ್ಯಕ್ತಿಯೊಬ್ಬರು ಬೈಕ್ ರಿಪೇರಿಗೆ ಕೊಟ್ಟು 20 ಸಾವಿರ ರೂಪಾಯಿ ಅಡ್ವಾನ್ಸ್ ಸಹ ನೀಡಿದ್ದರಂತೆ. ಆದರೆ ಬೈಕ್​ ರಿಪೇರಿ ಮಾಡದೇ ಗ್ಯಾರೇಜ್ ಓನರ್ ಸತಾಯಿಸಿದ್ದಾರೆ. ಹೀಗಾಗಿ ಸಂತ್ರಸ್ತ ವ್ಯಕ್ತಿ 112 ಸಹಾಯವಾಣಿಗೆ ಕರೆ ಮಾಡಿ ನೆರವು ಕೇಳಿದ್ದಾರೆ.

ಸ್ಥಳಕ್ಕೆ ಬಂದ ಪೊಲೀಸರು ಎರಡು ಕಡೆಯವರನ್ನು ವಿಚಾರಿಸಿ ಮಾಹಿತಿ ಕಲೆ ಹಾಕಿದರು, ಆನಂತರ ಇಬ್ಬರಿಗೂ ತಿಳುವಳಿಕೆ ನೀಡಿ ಗ್ಯಾರೇಜ್‌ನಲ್ಲಿ ಪರಿಶೀಲನೆ ನಡೆಸಿ, ಆದಷ್ಟು ಬೇಗ ಬೈಕ್ ದುರಸ್ತಿ ಮಾಡಿಕೊಡುವಂತೆ ಅಥವಾ ಪಡೆದುಕೊಂಡಿರುವ ಹಣ ದೂರುದಾರರಿಗೆ ಹಿಂದಿರುಗಿಸುವಂತೆ ತಿಳುವಳಿಕೆ ನೀಡಿ ವಿಷಯ ಇತ್ಯರ್ಥ ಮಾಡಿದ್ದಾರೆ.

ಹಂಚಿಕೊಳ್ಳಿ
WhatsApp Facebook X Telegram
Ajjimane Ganesh
ಲೇಖಕರ ಬಗ್ಗೆ

Ajjimane Ganesh

Malenadu Today Contributor