ಜಿಲ್ಲೆಯ ಅನೇಕ ಪ್ರದೇಶಗಳಲ್ಲಿ ಮಳೆ: ಎಷ್ಟಿದೆ ತಂಗಾ ನದಿಯ ಒಳಹರಿವು

ಹಂಚಿಕೊಳ್ಳಿ
WhatsApp Facebook X Telegram
Dam Inflow Tunga Dam Water Level Dam water level dam deatiles Dam Inflow and Outflow
Dam Inflow Tunga Dam Water Dam InflowLevel Dam water level Inflow and Outflow

Tunga Dam Water Level ಶಿವಮೊಗ್ಗ:  ಜಿಲ್ಲೆಯಾದ್ಯಂತ ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ನದಿ ಮೂಲಗಳಲ್ಲಿ ನೀರಿನ ಮಟ್ಟ ಗಣನೀಯವಾಗಿ ಏರಿಕೆಯಾಗಿದೆ. ಮಲೆನಾಡಿನ ಜೀವನದಿಯಾದ ತುಂಗಾ ನದಿಗೆ ಹರಿದುಬರುತ್ತಿರುವ ನೀರಿನ ಪ್ರಮಾಣ ಹೆಚ್ಚಾಗಿದ್ದು, ಗಾಜನೂರಿನ ತುಂಗಾ ಜಲಾಶಯವು ಬಹುತೇಕ ಭರ್ತಿಯಾಗುವ ಹಂತಕ್ಕೆ ತಲುಪಿದೆ. ಜುಲೈ 4ರ ಇಂದಿನ ವರದಿಯ ಪ್ರಕಾರ, ಪ್ರಸ್ತುತ ಅಣೆಕಟ್ಟಿನ ಪರಿಸ್ಥಿತಿ ಹಾಗೂ ನದಿಯ ಒಳಹರಿವು ಮತ್ತು ಹೊರಹರಿವಿನ ಸಮಗ್ರ ವಿವರ ಇಲ್ಲಿದೆ.

ತುಂಗಾ ಜಲಾಶಯದ ಗರಿಷ್ಠ ಮಟ್ಟ  588.24 ಮೀಟರ್‌ಗಳಾಗಿದ್ದು, ಸದ್ಯದ ತೇವಾಂಶ ಭರಿತ ಹವಾಮಾನದಿಂದಾಗಿ ಜಲಾಶಯದ ಇಂದಿನ ನೀರಿನ ಮಟ್ಟವು 588.11 ಮೀಟರ್‌ಗೆ ತಲುಪಿದೆ . ಅಣೆಕಟ್ಟಿನ ಒಟ್ಟು ಮರುಸಂಗ್ರಹ ಸಾಮರ್ಥ್ಯ 3.24 ಟಿಎಂಸಿ ಆಗಿದ್ದರೆ, ಇಂದಿನ ಒಟ್ಟು ಸಂಗ್ರಹಣೆ 3.168 ಟಿಎಂಸಿ ದಾಟಿದೆ. ಇನ್ನು ಜಲಾಶಯದ ಬಳಕೆಯಾಗುವ ಲೈವ್ ಸಾಮರ್ಥ್ಯ 2.411 ಟಿಎಂಸಿ ಆಗಿದ್ದು, ಪ್ರಸ್ತುತ 2.339 ಟಿಎಂಸಿ ಲೈವ್ ಸ್ಟೋರೇಜ್ ಲಭ್ಯವಿದ್ದು, ಜಲಾಶಯದ ಡೆಡ್ ಸ್ಟೋರೇಜ್ ಪ್ರಮಾಣ 0.829 ಟಿಎಂಸಿ ಆಗಿದೆ.

ನದಿ ಪಾತ್ರದಲ್ಲಿ ಸುರಿಯುತ್ತಿರುವ ಮಳೆಯಿಂದಾಗಿ ಜಲಾಶಯಕ್ಕೆ ಸದ್ಯ ಒಟ್ಟು 6147.0 ಕ್ಯೂಸೆಕ್ ಒಳಹರಿವು ದಾಖಲಾಗಿದ್ದು, ಇದರಲ್ಲಿ ನದಿಯ ಮೂಲಕವೇ 4912.0 ಕ್ಯೂಸೆಕ್ ನೀರು ಹರಿದುಬರುತ್ತಿದೆ. ಇನ್ನು ಜಲಾಶಯದಿಂದ ಒಟ್ಟು 6020.0 ಕ್ಯೂಸೆಕ್ ನೀರನ್ನು ವಿವಿಧ ಮೂಲಗಳಿಗೆ ಹೊರಬಿಡಲಾಗುತ್ತಿದೆ 

ಕಳೆದ ವರ್ಷ ಇದೇ ಸಮಯದಲ್ಲಿ ಒಳಹರಿವು 56926.0 ಕ್ಯೂಸೆಕ್ ಹಾಗೂ ಹೊರಹರಿವು 67990.0 ಕ್ಯೂಸೆಕ್‌ನಷ್ಟು ಅತ್ಯಂತ ಬೃಹತ್ ಪ್ರಮಾಣದಲ್ಲಿತ್ತು.

Tunga Dam Water Level Today Inflow & Outflow

ಹಂಚಿಕೊಳ್ಳಿ
WhatsApp Facebook X Telegram
Prathapa thirthahalli
ಲೇಖಕರ ಬಗ್ಗೆ

Prathapa thirthahalli

Malenadu Today Contributor