STATE NEWS

ಮನೆ ಬಿಟ್ಟು ಹೊರಟಿದ್ದ ನಾಲ್ಕು ಮಕ್ಕಳು! ಸಿನಿಮಾ ಸ್ಟೈಲ್​ನಲ್ಲಿ ರೆಸ್ಕ್ಯೂ ಮಾಡಿದ ಶಿವಮೊಗ್ಗ ಪೊಲೀಸ್!

ajjimane ganesh ಅಥಾರಿಟಿ: ಮಲೆನಾಡು ಟುಡೆ ಡೆಸ್ಕ್

shivamogga police | ಮಲೆನಾಡು ಟುಡೆ ಸುದ್ದಿ | ಶಿವಮೊಗ್ಗ | ಇದೊಂದು ಸಿನಿಮಾ ಸ್ಟೈಲ್​ನ ಸ್ಟೋರಿ, ಸಾಮಾನ್ಯವಾಗಿ ರಾಜಧಾನಿ ಬೆಂಗಳೂರಿನಲ್ಲಿ ನಡೆದಿದ್ದರೇ , ಟಿವಿ ಮಾಧ್ಯಮಗಳೇ ಕ್ಷಣಕ್ಷಣದ ಬ್ರೇಕಿಂಗ್ ನ್ಯೂಸ್​ ನೊಂದಿಗೆ ವರದಿ ಮಾಡುತ್ತಿದ್ದವು. ಆದರೆ ಅದ್ಯಾವುದಕ್ಕೂ ಸನ್ನಿವೇಶವನ್ನೆ ಕ್ರಿಯೆಟ್ ಮಾಡದ ಶಿವಮೊಗ್ಗ ಪೊಲೀಸರು ಸೈಲೆಂಟ್ ಆಗಿ ನಾಲ್ಕು ಮಕ್ಕಳನ್ನು ರೆಸ್ಕ್ಯೂ ಮಾಡಿ ಅವರ ಮನೆಗೆ ಬಿಟ್ಟು, ಪೋಷಕರ ಸುಪರ್ಧಿಗೆ ಒಪ್ಪಿಸಿದ್ದಾರೆ.

ಮಕ್ಕಳ ವಿಚಾರ ಆದ್ದರಿಂದ ವೈಯಕ್ತಿಕ ಮಾಹಿತಿಗೆ ಅವಕಾಶವಿಲ್ಲ. ಕೇವಲ ಪೊಲೀಸ್ ಇಲಾಖೆಯ ಕರ್ತವ್ಯ ಪ್ರಜ್ಞೆ ಹಾಗೂ ಅವರ ಪ್ರಯತ್ನವನ್ನು ಗೌರವಿಸುವ ಹಾಗೂ ವರದಿಯನ್ನು ತಿಳಿಸುವ ಉದ್ದೇಶದದಲ್ಲಿ ಮಾತ್ರ ಈ ಸ್ಟೋರಿಯನ್ನು ಗಮನಿಸುವುದಾದರೆ, ನಡೆದ ಘಟನೆ ಹೀಗಿದೆ.

ಪ್ರದೇಶವೊಂದರ ನಾಲ್ವರು ಮಕ್ಕಳು ಮನೆಯಲ್ಲಿ ಬೈದ್ರು ಎಂಬ ಕಾರಣಕ್ಕೆ ಮನೆ ಬಿಟ್ಟು ನಡಿ ಎಂದು ಹೊರಟಿದ್ದರು. ಎಲ್ಲಿಗೆ ಹೊರಟಿದ್ದರೋ ದಾರಿಯಾವುದು? ಎತ್ತ ಸಾಗಿದರೂ ಯಾರಿಗೂ ಗೊತ್ತಿಲ್ಲ. ಆದರೆ ಆತಂಕ ಮಾತ್ರ ಪೋಷಕರ ಎದೆಯನ್ನು ನಡುಗಿಸಿತ್ತು. ಈ ಮಧ್ಯೆ ನಮ್ಮ ಶಿವಮೊಗ್ಗ ಪೊಲೀಸರಿಗೆ ಈ ಬಗ್ಗೆ ಮಾಹಿತಿ ಬಂದಿತ್ತು, ನಡೆದ ಘಟನೆ ಹಾಗೂ ವಿವರ ಸಿಕ್ಕ ಕ್ಲ್ಯೂ ಬಗ್ಗೆ ಮಾಹಿತಿ ಪೂರ್ಣ ಅಂತಿಮವಾಗಿ ಆನಂದ ಪುರ ಪೊಲೀಸ್ ಠಾಣೆಯ ಎಸ್​ಐ ಪ್ರವೀಣ್​ಗೆ ಶಿಫ್ಟ್​ ಆಗಿತ್ತು.

ಪೊಲೀಸ್ ಕಾರ್ಯಾಚರಣೆಯಲ್ಲಿತ್ತು ಟ್ರೈನ್ ಸ್ಟೋರಿ

ತಮಗೆ ಬಂದ ಇನ್ಫಾರ್ಮೇಶನ್​ ಜೊತೆಗೊಂದಿಷ್ಟು ಮಾಹಿತಿ ಕಲೆ ಹಾಕಿದ ಎಸ್​ಐ ಪ್ರವೀಣ್​ ಮೊದಲು ಅಂದಾಜು ಮಾಡಿದ್ದು ಆ ಸಮಯದಲ್ಲಿ ಓಡಾಡುವ ಟ್ರೈನ್​. ಸಾಮಾನ್ಯವಾಗಿ ಮಕ್ಕಳ ಮಿಸ್ಸಿಂಗ್ ಪ್ರಕರಣದಲ್ಲಿ , ಅವರು ಸುಲಭವಾಗಿ ಟ್ರಾವೆಲ್ ಮಾಡಬಹುದಾದ ವ್ಯವಸ್ಥೆ ಯಾವುದು ಥಿಂಕ್ ಮಾಡೋದು ಸಹಜ. ಹೀಗೆ ಮಕ್ಕಳು ಟ್ರೈನ್​ ಹತ್ತಿರಬಹುದು, ಬಹುಶಃ ಶಿವಮೊಗ್ಗ ಹೋಗಿಬಹುದು ಎಂದು ಅನುಮಾನಿಸಿದ ಪ್ರವೀಣ್​ಗೆ ಮಕ್ಕಳು ಮೈಸೂರು ಕಡೆ ಹೋಗಿರುವ ಬಗ್ಗೆಯು ಮಾಹಿತಿ ಸಿಕ್ಕಿತ್ತು. ಲಭ್ಯ ಇನ್ಫಾರ್ಮೇಶನ್​ ಜೊತೆಗೆ ತಮ್ಮದೊಂದು ಟೀಂ ಕಟ್ಟಿಕೊಂಡು ಸರ್ಚಿಂಗ್​ ಶುರುಮಾಡಿದ್ರು ಎಸ್​ ಐ ಪ್ರವೀಣ್​.

ಎಸ್​ಐ ಪ್ರವೀಣ್​ರವರ ಅನುಮಾನ ನಿಜವಾಗಿತ್ತು ಮಕ್ಕಳು ಟ್ರೈನ್​ ಹತ್ತಿದ್ದರು, ಪೋಷಕರ ಮಾತಿಗೆ ಮೂಡಿದ್ದ ಆ ಕ್ಷಣದ ಸಿಟ್ಟು, ದಾರಿತಪ್ಪಿದ್ದ ಹಾದಿಯಲ್ಲಿ ಅದಾಗಲೇ ಇಳಿದು ಹೋಗಿತ್ತು. ಪ್ರವೀಣ್​ ಆಂಡ್ ಟೀಂ ಮಕ್ಕಳನ್ನು ಶಿವಮೊಗ್ಗದ ಸಮೀಪ ಪತ್ತೆ ಮಾಡಿ, ರೆಸ್ಕ್ಯೂ ಮಾಡಿ ಮಕ್ಕಳೆ ಹೆದರಬೇಡಿ ನಾವು ಪೊಲೀಸರು, ಎಲ್ಲಾ ಸರಿಮಾಡೋಣ ಎನ್ನುತ್ತಾ ಮಕ್ಕಳನ್ನ ತಮ್ಮ ಸುಪರ್ಧಿಗೆ ತೆಗೆದುಕೊಂಡಿದ್ದರು. ಗಾಬರಿಯಲ್ಲಿದ್ದ ಮಕ್ಕಳು ತಾವು ಸುರಕ್ಷಿತ ಎನ್ನುವ ಫೀಲ್​ ನೀಡಿದ ಖಾಕಿ ಪಡೆ, ಅಂತಿಮವಾಗಿ ಮೇಲಾಧಿಕಾರಿಗಳ ಸಜೀಶನ್ ಪಡೆದು, ಆ ಮಕ್ಕಳ ಪೋಷಕರನ್ನು ಕರೆಸಿ, ಮಿಸ್ಸಿಂಗ್​ ವಿಚಾರದ ಪ್ರೊಸಿಜರ್​ ಮುಗಿಸಿತು. ಅಂತಿಮವಾಗಿ ಮಕ್ಕಳನ್ನು ಸೇಫ್​ ಆಗಿ ಅವರ ಪಾಲಕರ ಜೊತೆಗೆ ಕಳುಹಿಸಿಕೊಟ್ಟರು.

ಸಿಂಗಂ ಆಗಬಹುದಾದ ಸೀನ್​ನಲ್ಲಿ ಸೈಲೆಂಟ್ ಆಗಿ ಕೆಲಸ ಮಾಡಿದ ಶಿವಮೊಗ್ಗ ಪೊಲೀಸ್

ಯಾವೊಂದು ಪ್ರಚಾರವಿಲ್ಲದೆ ಎಸ್​ಐ ಪ್ರವೀಣ್​ ಆಂಡ್ ಟೀಂ ಮಕ್ಕಳನ್ನ ರೆಸ್ಕ್ಯೂ ಮಾಡಿತ್ತು. ಇದಕ್ಕೆ ಪೂರಕವಾಗಿ ಪೊಲೀಸ್ ಇಂಟಲಿಜೆನ್ಸಿಯಿಂದ ಹಿಡಿದು ಹಲವು ಕೈಗಳು ಕ್ವಿಕ್ಲಿ ರೆಸ್ಪಾನ್ಸ್​ ನೀಡಿ, ಸಹಕಾರ ನೀಡಿದ್ದವು. ಎಸ್​ಪಿ ನಿಖಿಲ್​ ಬಿ, ಕೇಸಗೆ ಸಂಬಂಧಿಸಿದಂತೆ ಮಾನಿಟರ್​ ಮಾಡಿ, ಪೂರ್ಣ ಆಪರೇಷನ್​ ವಿವರ ಪಡೆದುಕೊಂಡು ಫೈನಲಾಗೊಂದು ಸ್ಮೈಲ್​ ಕೊಟ್ಟು ಆಲ್​ ರೈಟ್ ನೆಕ್ಟ್ಸ್​ ಕೇಸ್​ ಹೋಗೋಣ ಅಂತಾ ತಮ್ಮ ಡ್ಯೂಟಿಯಲ್ಲಿ ತಲ್ಲೀನರಾದ್ರು. ವಿಷಯ ಸಿಂಪಲ್ ಆಗಿ ಕ್ಷ್ಲೈಮ್ಯಾಕ್ಸ್​ ಕಂಡಿತ್ತಾದರೂ, ಇಡೀ ಟೀಂ ಮಾಡಿದ ಸಾಧನೆ ವಿಶೇಷ ಅರ್ಥವಿದೆ ಎನ್ನುವುದಲ್ಲಿ ಸಂಶಯವಿಲ್ಲ.

END OF STORY
ಮಲೆನಾಡು ಟುಡೆ ಫಾಲೋ ಮಾಡಿ

ತಾಜಾ ಸ್ಥಳೀಯ ಸುದ್ದಿಗಳಿಗಾಗಿ ನಮ್ಮ ಅಧಿಕೃತ ಚಾನೆಲ್‌ಗಳಿಗೆ ಸೇರಿ.

ಇತ್ತೀಚಿನ ವೀಡಿಯೊಗಳು
ajjimane ganesh

ಅಜ್ಜಮನೆ ಗಣೇಶ, ಪತ್ರಕರ್ತ, ಸಮಯ, ಟಿವಿ9, ನ್ಯೂಸ್​ ಫಸ್ಟ್​ನಲ್ಲಿ ವೃತ್ತಿ ನಿರ್ವಹಿಸಿರುವ ಅನುಭವವಿದೆ. ಗಳಿಸಿದ ಅನುಭವದ ಅನುಭಾವದ ಜೊತೆಗೆ ಮಲೆನಾಡು ಟುಡೆಯಲ್ಲಿ ಸೀನಿಯರ್​​ ಜರ್ನಲಿಸ್ಟ್​ ಆಗಿ ಕೆಲಸ ನಿರ್ವಹಿಸುತ್ತಿರುವೆ