ಹೇಗಿದ್ದ ನಕ್ಸಲ್ ನಾಯಕರು ಈಗ ಹೇಗಾಗಿದ್ದಾರೆ ನೋಡಿ, ಎಕ್ಸ್ಕ್ಲೂಸಿವ್ ಫೋಟೋಸ್ ! ಕೇರಳ, ತಮಿಳು ನಾಡು ಪೊಲೀಸರ ಮುಂದಿನ ಬೇಟೆ ಯಾರು ಗೊತ್ತಾ? ಶಿವಮೊಗ್ಗ ಪೊಲೀಸ್ರ ಮುಂದಿನ ಕ್ರಮವೇನು?ಒಂದು ಕಾಲವಿತ್ತು ಶಿವಮೊಗ್ಗ ವನ್ನ ನಕ್ಸಲ್ ರ ಕಾರ್ಖಾನೆ ಅಂತಾ ಕರೆಯಲಾಗಿತ್ತು. ಹಾಗಿದ್ದ ನಕ್ಸಲ್ ಚಟುವಟಿಕೆಯ ನಡು ಮುರಿದಿದ್ದು ಎಸ್ಪಿ ಮುರುಗನ್ ಸಮಯದಲ್ಲಿ ..ಆ ನಂತರ ಮಲೆನಾಡ ಘಟ್ಟ ಪ್ರದೇಶಗಳಿಂದ ಕ್ರಮೇಣವಾಗಿ ಕಣ್ಮರೆಯಾದ ನಕ್ಸಲ್ರು ಬೇರೆ ಬೇರೆ ಕಡೆಗಳಲ್ಲಿ ತೆರಳಿದರು.ಜನರ ಸಹಕಾರವೂ ಸಿಗದೇ ಹಾಗೂ ತಮ್ಮನ್ನ ಬೆಂಬಲಿಸಿದವರ ಪೈಕಿ, ಕೆಲವರ ಒಳಪೆಟ್ಟಿನಿಂದ ಮೋಸಗಳಿಂದಾಗಿ ತಮ್ಮ ಸಿದ್ಧಾಂತಗಳ ಹೋರಾಟದಲ್ಲಿ ಏಕಾಂಗಿಯಾದ ಮುಖಂಡರ ಪೈಕಿ ಹಲವರು ಶರಣಾದರು.ಮತ್ತೆ ಕೆಲವರು ಎನ್ಕೌಂಟರ್ ಭಯದಲ್ಲಿ ತೆರೆಮರೆಯಲ್ಲಿಯೇ ಜೀವನ ಸಾಗಿಸುತ್ತಿದ್ದರು. ಆದಾಗ್ಯು ಪೊಲೀಸ್ ವ್ಯವಸ್ಥೆ ಅಡಿಯಲ್ಲಿ ಕೆಲ ನಕ್ಸಲ್ರನ್ನು ಹಿಡಿಯುವುದು ಕಷ್ಟವಾಗಿತ್ತು.

ಹೇಗಿದ್ದ ನಕ್ಸಲ್ ನಾಯಕರು ಈಗ ಹೇಗಾಗಿದ್ದಾರೆ ನೋಡಿ, ಎಕ್ಸ್ಕ್ಲೂಸಿವ್ ಫೋಟೋಸ್ !
ಯಾಕೆಂದರೆ, ಯವ್ವನದ ಕಾಲದಲ್ಲಿಯೇ ಕಾಡು ಸೇರಿದ್ದ ವರು, ಈಗ ಹೇಗಿದ್ದಾರೆ ಎನ್ನುವುದು ತಿಳಿಯದೇ ಪೊಲೀಸರು ಆರೋಪಿಗಳನ್ನ ಹಿಡಿಯುವುದು ಕಷ್ಟವಾಗಿತ್ತು. ಇನ್ನೂ ಕೇರಳ ಹಾಗೂ ತಮಿಳುನಾಡು ಪೊಲೀಸರು ನಕ್ಸಲ್ ವಿಚಾರದಲ್ಲಿ ಅಗ್ರೆಸಿವ್ ಮೂಮೆಂಟ್ ಕಳೆದೊಂದು ವರ್ಷದಿಂದ ತೋರುತ್ತಿದೆ.ಇದರ ಪರಿಣಾಮವಾಗಿ ನಕ್ಸಲ್ ನಾಯಕ ಬಿಜಿ ಕೃಷ್ಣಮೂರ್ತಿ, ಸಾವಿತ್ರಿ ಸೆರೆಸಿಕ್ಕಿದ್ದರು.ಯಾವಾಗ ಬಿಜಿ ಕೃಷ್ಣಮೂರ್ತಿ ಸೆರೆಯಾದ ಬೆನ್ನಲ್ಲೇ ಇದೀಗ ಆತನ ಪತ್ನಿ ಹೊಸಗದ್ದೆ ಪ್ರಭಾ ಕೂಡ ನಿನ್ನೆ ತಮಿಳುನಾಡು ಪೊಲೀಸರು ಶರಣಾಗಿದ್ದಾರೆ.ಇಷ್ಟಕ್ಕೂ ಅಂದು ತಮ್ಮ ಮೇಲೆ ಬಹುಮಾನದ ಘೋಷಣೆ ಯನ್ನ ಪೊಲೀಸರಿಂದ ಮಾಡಿಸಿಕೊಂಡಿದ್ದ ನಕ್ಸಲ್ರ ಈಗ ಹೇಗಿದ್ದಾರೆ ಎನ್ನುವ ಫೋಟೋಗಳು ಮಲೆನಾಡು ಟುಡೇ ಗೆ ಲಭ್ಯವಾಗಿದೆ.

ಕೇರಳ, ತಮಿಳು ನಾಡು ಪೊಲೀಸರ ಮುಂದಿನ ಬೇಟೆ ಯಾರು ಗೊತ್ತಾ? ಶಿವಮೊಗ್ಗ ಪೊಲೀಸ್ ರ ಮುಂದಿನ ಕ್ರಮವೇನು?
ಕಬಿನಿ ಹಾಗೂ ತುಂಗಾ ಟೀಂನಲ್ಲಿದ್ದ ನಕ್ಸಲ್ ರನ್ನ ಪೊಲೀಸರು ಒಬ್ಬೊಬ್ಬರನ್ನಾಗಿಯೇ ಲಿಫ್ಟ್ ಮಾಡುತ್ತಿದ್ದಾರೆ. ಇದೀಗ ಕೇರಳ , ತಮಿಳುನಾಡು ಪೊಲೀಸರ ಮುಂದಿನ ಬೇಟೆ ಯಾರು ಎನ್ನುವ ಪ್ರಶ್ನೆ ಕೇಳಿಬರುತ್ತಿದೆ.ಇದಕ್ಕೆ ಉತ್ತರಗಳು ವಿಕ್ರಂಗೌಡ ಎನ್ನಲಾಗುತ್ತಿದೆ. ಮೂಲಗಳ ಪ್ರಕಾರ ವಿಕ್ರಂ ಗೌಡನ ಶರಣಾಗತಿ ಕಷ್ಟ ಎನ್ನಲಾಗುತ್ತಿದೆ.ಆತನ ಪತ್ತೆಗಾಗಿ ಬಲೆ ಬೀಸಿರುವ ಪೊಲೀಸರು, ಸದ್ಯದಲ್ಲಿಯೇ ಬಂಧಿಸುವ ವಿಶ್ವಾಸ ದಲ್ಲಿದ್ದಾರೆ.

ಶಿವಮೊಗ್ಗ ಪೊಲೀಸ್ ರ ಮುಂದಿನ ಕ್ರಮವೇನು?
ಇನ್ನೂ ಸದ್ಯ ಸೆರೆ ಸಿಕ್ಕಿರುವ ನಕ್ಸಲ್ ನಾಯಕರು, ಶಿವಮೊಗ್ಗ ಪೊಲೀಸ್ ಇಲಾಖೆ ವ್ಯಾಪ್ತಿಯಲ್ಲಿ ಮೋಸ್ಟ್ ವಾಂಟೆಡ್ ಲಿಸ್ಟ್ ನಲ್ಲಿ ಇರುವವರು. ಆದ್ದರಿಂದ ಕೇರಳ ಹಾಗೂ ತಮಿಳು ನಾಡು ಪೊಲೀಸ್ ವಶದಲ್ಲಿರುವ ಆರೋಪಿಗಳನ್ನ ಶಿವಮೊಗ್ಗ ಪೊಲೀಸ್ ಇಲಾಖೆ ಕರೆದುಕೊಂಡು ಬಂದು ವಿಚಾರಣೆ ನಡೆಸುವ ಸಾಧ್ಯತೆಯಿದೆ.ಇದಕ್ಕಾಗಿ ಈಗಾಗಲೇ ಪ್ರಕ್ರಿಯೇಯನ್ನ ಆರಂಭಿಸಲಾಗಿದೆ.ಹೊಸಗದ್ದೆ ಪ್ರಭಾ ವಿರುದ್ಧವೇ 40 ಕ್ಕೂ ಹೆಚ್ಚು ಪ್ರಕರಣಗಳಿದ್ದು, ಆರೋಪಿಗಳನ್ನ ಬಾಡಿ ವಾರೆಂಟ್ ಮೂಲಕ ಕರೆತಂದು ಕೋರ್ಟ್ಗಳಿಗೆ ಹಾಜರು ಪಡಿಸುವ ಸಂಬಂಧ ಇಲಾಖೆ ಕೆಲಸ ಆರಂಭಿಸಿದ

