ತೀರ್ಥಹಳ್ಳಿಯಲ್ಲಿ ಕೆಲಸಕ್ಕೆ ಬಂದಿದ್ದ 6 ಮಂದಿಗೆ ಕೆಎಫ್​ಡಿ ಪಾಸಿಟಿವ್! ಶಿವಮೊಗ್ಗದಲ್ಲಿ ಹೆಚ್ಚಿದ ಮಂಗನ ಕಾಯಿಲೆ ಆತಂಕ!

6 KFD positive in Thirthahalli Monkey disease scares rise in Shimoga

ತೀರ್ಥಹಳ್ಳಿಯಲ್ಲಿ ಕೆಲಸಕ್ಕೆ  ಬಂದಿದ್ದ  6 ಮಂದಿಗೆ ಕೆಎಫ್​ಡಿ ಪಾಸಿಟಿವ್! ಶಿವಮೊಗ್ಗದಲ್ಲಿ ಹೆಚ್ಚಿದ ಮಂಗನ ಕಾಯಿಲೆ ಆತಂಕ!
KFD positive

Shivamogga Feb 12, 2024 |   ಶಿವಮೊಗ್ಗದಲ್ಲಿ ಮಂಗನ ಕಾಯಿಲೆಯ ಆತಂಕ ಇನ್ನಷ್ಟು ಹೆಚ್ಚಾಗಿದೆ. ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲ್ಲೂಕುನಲ್ಲಿ ಆರು ಪ್ರಕರಣಗಳು ಪತ್ತೆಯಾಗಿವೆ. ಅವರನ್ನ ತೀರ್ಥಹಳ್ಳಿ ಸರ್ಕಾರಿ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ. ಇವರು ಈ ಹಿಂದೆ ಹೊಸನಗರ ತಾಲ್ಲೂಕುನಲ್ಲಿ ಸಾವನ್ನಪ್ಪಿದ್ದ ಯುವತಿಯ ಊರಿನವರು , ತೀರ್ಥಹಳ್ಳಿಯಲ್ಲಿ ಅಡಿಕೆ ಕೆಲಸಕ್ಕೆ ಅಂತಾ ಬಂದಿದ್ದವರು. ಇದೀಗ ಇವರಲ್ಲಿ ಜ್ವರ ಕಾಣಿಸಿದ ಹಿನ್ನೆಲೆಯಲ್ಲಿ ಅವರುಗಳ ಬ್ಲಡ್ ಸ್ಯಾಂಪಲ್​ನ್ನ ಪರೀಕ್ಷೆಗೆ ಒಳಪಡಿಸಲಾಗಿದೆ 

ಕೆಎಫ್​ಡಿ ಪಾಸಿಟಿವ್ ಏರಿಯಾದಲ್ಲಿ ಜ್ವರ ಕಾಣಿಸಿದ ಆರು ಮಂದಿಯನ್ನು ಆರೋಗ್ಯ ಇಲಾಖೆ ಸಿಬ್ಬಂದಿ ತಕ್ಷಣವೇ ತೀರ್ಥಹಳ್ಳಿ ತಾಲ್ಲೂಕು ಆಸ್ಪತ್ರೆಗೆ ಶಿಫ್ಟ್ ಮಾಡಿತ್ತು. ಅಲ್ಲದೆ ಅವರ ಬ್ಲಡ್ ಸ್ಯಾಂಪಲ್ ಪಡೆದು  ಶಿವಮೊಗ್ಗದ ವೈರಲ್‌ ಡಯಾಗ್ನಸ್ಟಿಕ್‌ ಲ್ಯಾಬ್‌ಗೆ ಪರೀಕ್ಷೆಗೆ ರವಾನೆ ಮಾಡಲಾಗಿತ್ತು. ಅದರ ವರದಿ ಪಾಸಿಟಿವ್ ಬಂದಿದ್ದು ಸದ್ಯ ಜ್ವರ ಕಾಣಿಸಿಕೊಂಡವರ ಆರೋಗ್ಯ ಸ್ಥಿರವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 

ಕೆಎಫ್​ಡಿ ಹೆಲ್ತ್​ ಬುಲೆಟಿನ್ ಪ್ರಕಾರ, ನಿನ್ನೆ ಒಟ್ಟು 63 ಬ್ಲಡ್ ಸ್ಯಾಂಪಲ್​ಗಳನ್ನ ಟೆಸ್ಟ್​ಗೆ ಒಳಪಡಿಸಲಾಗಿದೆ. ಈ ಪೈಕಿ 13 ಮಂದಿಗೆ ಕೆಎಫ್​ಡಿ ಪಾಸಿಟಿವ್ ಇದೆ. ಇದರಲ್ಲಿ ಶಿವಮೊಗ್ಗದಲ್ಲಿ ಆರು ಮಂದಿ, ಚಿಕ್ಕಮಗಳೂರುನಲ್ಲಿ 7 ಮಂದಿಗೆ ಸೋಂಕು ಕಾಣಿಸಿಕೊಂಡಿದೆ. ಇದುವರೆಗೂ 3220 ಮಂದಿ  ಬ್ಲಡ್ ಸ್ಯಾಂಪಲ್ ಟೆಸ್ಟ್ ಮಾಡಲಾಗಿದ್ದು, ಈ ಪೈಕಿ 89 ಮಂದಿಯಲ್ಲಿ ಕೆಎಫ್​ಡಿ ಕಾಣಿಸಿದೆ. ಅಲ್ಲದೆ ಇದುವರೆಗೂ 63 ಗುಣಮುಖರಾಗಿ ಡಿಸ್​ಚಾರ್ಜ್ ಆಗಿದ್ದು ಇಬ್ಬರು ಸಾವನ್ನಪ್ಪಿದ್ದಾರೆ. ಸದ್ಯ 24 ಮಂದಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ಧಾರೆ. ಈ ಪೈಕಿ 20 ಮಂದಿ ಸರ್ಕಾರಿ ಆಸ್ಪತ್ರೆಯಲ್ಲಿ ಟ್ರೀಟ್ಮೆಂಟ್ ಪಡೆಯುತ್ತಿದ್ದಾರೆ. 4 ಮಂದಿ ಖಾಸಗಿ ಆಸ್ಪತ್ರೆಯಲ್ಲಿದ್ದಾರೆ