ಮಂಗನ ಕಾಯಿಲೆ ಆತಂಕದ ನಡುವೆ ಡೆಂಗ್ಯು ಭೀತಿ ! ಯುವತಿ ಸಾವು

Malenadu Today

Shivamogga | Feb 8, 2024 |  ನೆರೆಯ ಚಿಕ್ಕಮಗಳೂರು ಜಿಲ್ಲೆಯನ್ನು  ( Chikkamagaluru) ಸಹ ಮಂಗನ ಕಾಯಿಲೆ ಭಾದಿಸುತ್ತಿದೆ. ಕೊಪ್ಪದಲ್ಲಿಯೆ ಹೆಚ್ಚು ಪ್ರಕರಣ ಕಂಡುಬರುತ್ತಿದೆ ಎನ್ನಲಾಗುತ್ತಿದೆ. ಇದರ ನಡುವೆ ಇದೀಗ ಡೆಂಗ್ಯು ಜ್ವರದ ಬೀತಿಯ ಚಿಕ್ಕಮಗಳೂರು ಜಿಲ್ಲೆ ಯಲ್ಲಿ ಆವರಿಸಿದೆ. ಇದಕ್ಕೆ ಪೂರಕ ಎಂಬಂತೆ ವಿದ್ಯಾರ್ಥಿನಿಯೊಬ್ಬರು ಡೆಂಗ್ಯು ಸಸ್ಪೆಕ್ಟ್​ನಿಂದ ಸಾವನ್ನಪ್ಪಿದ್ದಾರೆ. ಈ ಬಗ್ಗೆ ರಾಜ್ಯ ಮಾಧ್ಯಮಗಳು ವರದಿ ಮಾಡಿದೆ. 

ಮಾಧ್ಯಮಗಳ ವರದಿಯ ಪ್ರಕಾರ, ಚಿಕ್ಕಮಗಳೂರು ನಗರ ನಿವಾಸಿ ಸಹರಾ ಬಾನು ಎಂಬವರು ಡೆಂಗ್ಯನಿಂದ ಸಾವನ್ನಪ್ಪಿದ್ದಾರೆ. ಇವರು ಸ್ತಳೀಯ ಕಾಲೇಜಿನಲ್ಲಿ ಓದುತ್ತಿದ್ದರು ಕಳೆದ ಎರಡು ತಿಂಗಳಿಂದ ಜ್ವರದಿಂದ ಬಳಲುತ್ತಿದ್ದು ಬುಧವಾರ ಸಂಜೆ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ. 


Share This Article