ಸೊರಬ ಕ್ಷೇತ್ರಕ್ಕೆ ಶಿವರಾಜ್‌ಕುಮಾರ್‌ MLA ಆಗುತಿದ್ರು | ಕುಮಾರ್‌ ಬಂಗಾರಪ್ಪ ಹೇಳಿದ್ದೇನು?

If Dr. Rajkumar had agreed, Shivrajkumar would have become the MLA for Soraba Constituency. What did Kumar Bangarappa say? . Madhu Bangarappa, S Bangarappa, Soraba Taluk

ಸೊರಬ ಕ್ಷೇತ್ರಕ್ಕೆ ಶಿವರಾಜ್‌ಕುಮಾರ್‌ MLA  ಆಗುತಿದ್ರು | ಕುಮಾರ್‌ ಬಂಗಾರಪ್ಪ ಹೇಳಿದ್ದೇನು?
Kumar Bangarappa say, Madhu Bangarappa, S Bangarappa, Soraba Taluk,Dr. Rajkumar

SHIVAMOGGA | MALENADUTODAY NEWS | Apr 27, 2024    ‌

ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಪ್ರಚಾರ ಮಾಡುತ್ತಾ ಹ್ಯಾಟ್ರಿಕ್‌ ಹೀರೋ ಶಿವರಾಜ್‌ ಕುಮಾರ್‌ ತಮ್ಮ ತಂದೆಗೂ ರಾಜಕಾರಣದ ಬಗ್ಗೆ ಒಲವಿತ್ತು ಎಂದಿದ್ದರು. ಅವರ ಮಾತು ಕುತೂಹಲ ಮೂಡಿಸಿತ್ತು. ಇದೀಗ ನಿನ್ನೆ ಸೊರಬ ತಾಲ್ಲೂಕು ನಲ್ಲಿ ಬಿಜೆಪಿ ಪರ ಮತಯಾಚನೆ ನಡೆಸಿದ ಕುಮಾರ್‌ ಬಂಗಾರಪ್ಪ ಶಿವಣ್ಣರ ಮಾತಿಗೆ ಪ್ರತಿಕ್ರಿಯಿಸಿದ್ದು, ಅಣ್ಣಾವ್ರು ಮನಸ್ಸು ಮಾಡಿದ್ದರೇ ಶಿವಣ್ಣರವರೇ ಸೊರಬ ಕ್ಷೇತ್ರದ ಶಾಸಕರಾಗಿರುತ್ತಿದ್ದರು ಎಂದಿದ್ದಾರೆ. ತಮ್ಮ ಮಾತಿಗೆ ಪೂರಕವಾಗಿ ಹಳೆಯ ಘಟನೆಯೊಂದನ್ನ ನೆನಪಿನಿಂದ ಹೊರಕ್ಕೆ ಹಾಕಿದ್ದಾರೆ. 

ಸೊರಬದಲ್ಲಿ ಮಾತನಾಡ್ತಾ  ಅಣ್ಣಾವ್ರು  ಡಾ.ರಾಜಕುಮಾರ್ ಅವರಿಗೆ ರಾಜಕೀಯ ಹಂಬಲವಿತ್ತು ಎಂದು  ಶಿವರಾಜಕುಮಾರ್ ಹೇಳುತ್ತಾರೆ. ಅಲ್ಲದೆ ಇದೇ  ಕಾರಣಕ್ಕೆ ಪತ್ನಿ ಗೀತಾ ಅವರು ಸ್ಪರ್ಧೆ ಮಾಡಿದ್ದಾರೆ ಎನ್ನುತ್ತಾರೆ. ಆದರೆ ಹಾಗೊಂದು ವೇಳೆ ಅಣ್ಣಾವ್ರಿಗೆ ರಾಜಕಾರಣದ ಹಂಬಲವಿದ್ದಿದ್ದರೇ ಬೇರೆಯದ್ದೆ ಕಥೆ ನಡೆಯುತ್ತಿತ್ತು. 

ಹಿಂದೊಮ್ಮೆ ಸೊರಬ ತಾಲ್ಲೂಕಿನ ಬಂಕಸಾಣದ ಹೊಳೆಲಿಂಗೇಶ್ವರ ಜಾತ್ರೆಗೆ ಡಾ.ರಾಜಕುಮಾರ್ ಬಂದಿದ್ದರು. ಆಗ ಅವರು ರಾಜಕೀಯದ ಬಗ್ಗೆ ಆಸಕ್ತಿ ವ್ಯಕ್ತಪಡಿಸಿದ್ದರೆ ತಮ್ಮ ತಂದೆ ಬಂಗಾರಪ್ಪರವರು ಅಳಿಯ ಶಿವಣ್ಣರನ್ನ ಅಂದೇ ಕ್ಷೇತ್ರದ ಶಾಸಕರನ್ನಾಗಿ ಮಾಡುತ್ತಿದ್ದರು. ಇದಕ್ಕೆ ಇಡೀ ಕುಟುಂಬದ ಸಹಮತವೂ ಇರುತ್ತಿತ್ತು ಎಂದಿದ್ದಾರೆ. 

ಆ ಹೊತ್ತಿನಲ್ಲಿ ಡಾ.ರಾಜ್ ರಾಜಕಾರಣಕ್ಕೆ ಒಲವು ತೋರಿರಲಿಲ್ಲ. ಈಗ ಅಣ್ಣಾವ್ರಾಗಲಿ, ತಮ್ಮ ತಂದೆ ಬಂಗಾರಪ್ಪರವಾಗಲಿ ಇಲ್ಲ. ಈ ಸಮಯದಲ್ಲಿ ಪತ್ನಿಯನ್ನು ಚುನಾವಣೆಗೆ ನಿಲ್ಲಿಸಿ ರಾಜಕುಮಾರ್ ಹೆಸರಿಗೆ ಮಸಿ ಬಳಿಯುತ್ತಿದ್ದಾರೆ ಎಂದು ಆಕ್ಷೇಪಿಸಿದರು.