ಭದ್ರಾವತಿ | ಗಾಂಜಾ ಲೇಡಿ ಅರೆಸ್ಟ್‌ | ನಾಲ್ಕುವರೆ ಲಕ್ಷ ಮೌಲ್ಯದ ಮಾಲ್‌ ಸೀಜ್‌ |

Bhadravati | Ganja Lady Arrest | Mall siege worth four and a half lakhs

ಭದ್ರಾವತಿ | ಗಾಂಜಾ ಲೇಡಿ ಅರೆಸ್ಟ್‌ | ನಾಲ್ಕುವರೆ ಲಕ್ಷ ಮೌಲ್ಯದ ಮಾಲ್‌ ಸೀಜ್‌ |
Bhadravati

SHIVAMOGGA | MALENADUTODAY NEWS | Apr 23, 2024   

ಮಾದಕ ವಸ್ತುಗಳ ವಿಚಾರದಲ್ಲಿ ಶಿವಮೊಗ್ಗ ಪೊಲೀಸ್‌ ಇಲಾಖೆ ದೊಡ್ಡ ಬೇಟೆ ಆಡಿದೆ. ಅಕ್ರಮವಾಗಿ ಸಾಗಿಸ್ತಿದ್ದ  ನಾಲ್ಕುವರೆ ಲಕ್ಷ ಮೌಲ್ಯದ ಗಾಂಜಾವನ್ನು ಪೊಲೀಸರು ಜಪ್ತಿ ಮಾಡಿದ್ದಾರೆ. ಈ ಸಂಬಂಧ ಭದ್ರಾವತಿ ಹೊಸಮನೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ಪ್ರಕರಣದ ವಿವರ 

ದಿನಾಂಕ: 22-04-2024 ರಂದು ಮದ್ಯಾಹ್ನ ಭದ್ರಾವತಿ ನಗರದ ಹೊಸಮನೆ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಇಲ್ಲಿನ ಸತ್ಯ ಸಾಯಿ ನಗರದ ಕಡೆಗೆ ಮಾದಕ ವಸ್ತು ಗಾಂಜಾವನ್ನು ಸಾಗಾಟ ಮಾಡುತ್ತಿರುವ ಬಗ್ಗೆ  ಪೊಲೀಸರಿಗೆ ಮಾಹಿತಿ ಬಂದಿದೆ. 

ಈ ಮಾಹಿತಿಯನ್ನ ಆಧರಿಸಿ ನಾಗರಾಜ್ ಪೊಲೀಸ್ ಉಪಾಧೀಕ್ಷಕರು ಭದ್ರಾವತಿ, ಉಪ ವಿಭಾಗ ಮತ್ತು ಶ್ರೀಶೈಲ ಕುಮಾರ್ ಪೊಲೀಸ್ ವೃತ್ತ ನಿರೀಕ್ಷಕರು ಭದ್ರಾವತಿ ನಗರ ವೃತ್ತ ರವರ ಮೇಲ್ವಿಚಾರಣೆಯ,  ಕೃಷ್ಣ ಕುಮಾರ್ ಬಿ ಮಾನೆ ಪೋಲಿಸ್ ಉಪನಿರೀಕ್ಷಕರು ಹೊಸಮನೆ ಪೊಲೀಸ್ ಠಾಣೆ ಹಾಗೂ ಸಿಬ್ಬಂದಿಗಳ ತಂಡ ದಾಳಿ ನಡೆಸಿದೆ. 

ದಾಳಿಯಲ್ಲಿ ಗಾಂಜಾ ಸಾಗಾಟ ಮಾಡುತ್ತಿದ್ದ  ಹುಸೇನ್ ಬಿ, 35 ವರ್ಷ ಮಹಿಳೆ ಸಿಕ್ಕಿಬಿದ್ದಿದ್ದಾಳೆ. ಆಕೆಯನ್ನ ವಶಕ್ಕೆ ಪಡೆದ ಪೊಲೀಸರು ಅಂದಾಜು ಮೌಲ್ಯ 4,50,000 /- ರೂ ಗಳ 7ಕೆಜಿ 590 ಗ್ರಾಂ ಒಣ ಗಾಂಜಾವನ್ನು  ಅಮಾನತುಪಡಿಸಿಕೊಂಡಿದ್ದಾರೆ. ಅಲ್ಲದೆ ಆರೋಪಿತಳ ವಿರುದ್ಧ ಹೊಸಮನೆ ಪೊಲೀಸ್ ಠಾಣೆಯಲ್ಲಿ ಕಲಂ 20 (ಬಿ) ii (ಬಿ) NDPS ಕಾಯ್ದೆ ರೀತ್ಯಾ ಪ್ರಕರಣ ದಾಖಲಿಸಿದ್ದಾರೆ.