ಬಿ.ವೈ. ವಿಜಯೇಂದ್ರರಿಗೆ ಥ್ಯಾಂಕ್ಸ್‌ ಹೇಳಿದ ಕೆ. ಎಸ್‌. ಈಶ್ವರಪ್ಪ | ಕಾರಣವೇನು?

K. S. Eshwarappa thanked B. Y. Vijayendra What is the reason?

ಬಿ.ವೈ. ವಿಜಯೇಂದ್ರರಿಗೆ ಥ್ಯಾಂಕ್ಸ್‌ ಹೇಳಿದ ಕೆ. ಎಸ್‌. ಈಶ್ವರಪ್ಪ |  ಕಾರಣವೇನು?
K. S. Eshwarappa, B. Y. Vijayendra

SHIVAMOGGA | MALENADUTODAY NEWS | Apr 23, 2024   



ಶಿವಮೊಗ್ಗದಲ್ಲಿ ಪಕ್ಷೇತರ ಅಭ್ಯರ್ಥಿ ಕೆ.ಎಸ್. ಈಶ್ವರಪ್ಪ ಸುದ್ದಿಗೋಷ್ಠಿ ನಡೆಸಿ ಹಲವು ವಿಷಯಗಳಿಗೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ್ದಾರೆ. ನನ್ನನ್ನು ಉಚ್ಚಾಟಿಸಿದ್ದಕ್ಕೆ  ಬಿ.ವೈ. ವಿಜಯೇಂದ್ರರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದ ಕೆ.ಎಸ್‌. ಈಶ್ವರಪ್ಪ ಯಡಿಯೂರಪ್ಪ, ವಿಜಯೇಂದ್ರ, ರಾಘವೇಂದ್ರ ಈ ಮೂವರು ಬಹಳಷ್ಟು ಗೊಂದಲ ಮೂಡಿಸುತ್ತಿದ್ರು. ಈಗ ಗೊಂದಲಗಳಿಗೆ  ಉತ್ತರ ಸಿಕ್ಕಿದೆ. 



ಜಗದೀಶ್ ಶೆಟ್ಟರ್ ಬಿಜೆಪಿ ಬಿಟ್ಟು ಕಾಂಗ್ರೆಸ್‌ಗೆ ಸೇರ್ಪಡೆಗೊಂಡಿದ್ರು. ಅವರನ್ನೇ ಹೋಗಿ ಅವರ ಕಾಲು ಹಿಡಿದು ಮತ್ತೆ ಬಿಜೆಪಿಗೆ ಕರೆ ತಂದಿದ್ದಾರೆ. ಇದು ಕೂಡ ಹಾಗೇನೆ, ತಾತ್ಕಾಲಿಕವಾಗಿ ನಾನು ಪಕ್ಷದಿಂದ ಹೊರ ಇದ್ದೇನೆ ಅಷ್ಟೇ. ಈ ಉಚ್ಚಾಟನೆ ತುಂಬಾ ತಾತ್ಕಾಲಿಕ.  ಕುತಂತ್ರ ಹಾಗೂ ಷಡ್ಯಂತ್ರದಿಂದ ನಾನು ಈಗ ಬಿಜೆಪಿಯಿಂದ ಹೊರಬಂದಿದ್ದೇನೆ. ಒಬ್ಬ ಎಳಸು ರಾಜ್ಯಾಧ್ಯಕ್ಷ ನನ್ನನ್ನು ಸಸ್ಪೆಂಡ್ ಮಾಡಿದ್ದಾರೆ. ಬಿಜೆಪಿ ಬಗ್ಗೆ ಏನೂ ಗೊತ್ತಿಲ್ಲದೇ ಇರುವ ಒಬ್ಬ ವ್ಯಕ್ತಿ ನನಗೆ ಬಿಜೆಪಿಯಿಂದ ಹೊರ ಹಾಕಿದ್ದಾರೆ ಎಂದು ಹಲವಾರು ಜನರು ನನಗೆ ಫೋನ್ ಮಾಡಿ ಹೇಳುತ್ತಿದ್ದಾರೆ. ಇದು ತಾತ್ಕಾಲಿಕ ಬೆಳವಣಿಗೆ ಅಷ್ಟೇ. ನಾನೆಂದೂ ಬಿಜೆಪಿ ಬಿಟ್ಟು ಹೋಗಿಲ್ಲ. ಕಾಂಗ್ರೆಸ್ ಪಕ್ಷವನ್ನು ಈ ಜನ್ಮದಲ್ಲಿ ಸೇರಲ್ಲ. ನಾನು ಮತ್ತೆ ಬಿಜೆಪಿಗೆ ಸೇರುವವನೇ. ಇದನ್ನು ತಡೆಯಲು ಸಾಧ್ಯವಿಲ್ಲ ಎಂದಿದ್ದಾರೆ. 

ವಿಜಯೇಂದ್ರ ಕುಂಕಮ ಅಳಿಸಿಕೊಂಡ್ರಾ?

 

ಬಿ.ವೈ. ವಿಜಯೇಂದ್ರರವರು ಕುಂಕುಮ ಅಳಿಸಿಕೊಂಡ ವಿಡಿಯೋ ವೈರಲ್ ವಿಚಾರಕ್ಕೆ  ಪ್ರತಿಕ್ರಿಯಿಸಿದ ಕೆ.ಎಸ್‌.ಈಶ್ವರಪ್ಪ ಅವರಿಗೆ ನೀತಿ, ನೈತಿಕತೆಯೇ ಇಲ್ಲ. ಕಾಂಗ್ರೆಸ್ ಜೊತೆ ಹೊಂದಾಣಿಕೆ ಮಾಡಿಕೊಂಡವರು ಅವರು.ಕುಂಕುಮ ಯಾವಾಗ ಬೇಕಾದ್ರೂ ಹಚ್ಕೋತ್ತಾರೆ.. ಹಾಗೇ ತೆಗೆಯುತ್ತಾರೆ. ಯಡಿಯೂರಪ್ಪ ಕೆಜೆಪಿ ಜೊತೆಗೆ ಹೋದಾಗ ಟಿಪ್ಪು ಸುಲ್ತಾನ್ ಜಯಂತಿಯಂದು ಟೋಪಿ ಹಾಕಿಕೊಂಡು ಹೋಗಿದ್ದರು. ವಿಜಯೇಂದ್ರ ಜೊತೆಗೆ ಗೀತಾ ಹಾಗೂ ಶಿವರಾಜ್ ಕುಮಾರ್ ಅವರಿಗೂ ಕೇಳ್ತೇನೆ. ಅವರಿಗೆ ಹಿಂದೂ ಧರ್ಮ ಬೇಡ್ವಾ..?ಹಿಂದೂ ಸಮಾಜದ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದ್ದಾರೆ. 

3 ಗಂಟೆ ಆಗೋದನ್ನೆ ಕಾಯುತಿದ್ದ ವಿಜಯೇಂದ್ರ 

ನಾನು ಗೆದ್ದ ಕೂಡಲೇ ಅವರಪ್ಪನೇ ಬಿಜೆಪಿಗೆ ಕರೆದುಕೊಂಡು ಹೋಗ್ತಾರೆ. ನಾನು ಕಟ್ಟಿ ಬೆಳೆಸಿದ ಪಕ್ಷ ಇದು.ಯಡಿಯೂರಪ್ಪ ಕೆಜೆಪಿಗೆ ಹೋಗಿ ಬಂದಿದ್ದಾರೆ.ಅವರು ಡೂಪ್ಲೀಕೇಟ್, ನಾನು ಒರಿಜಿನಲ್ ಎಂದ ಕೆಎಸ್‌ ಈಶ್ವರಪ್ಪರವರು  ತಮ್ಮ ಉಚ್ಚಾಟನೆಗಾಗಿ ಬಿಜೆಪಿ ರಾಜ್ಯಾಧ್ಯಕ್ಷ  ವಿಜಯೇಂದ್ರ 3 ಗಂಟೆ ಆಗೋದೆ ಕಾಯುತ್ತಿದ್ದ ಅನಿಸುತ್ತೆ ಎಂದು ವ್ಯಂಗ್ಯವಾಡಿದ್ದಾರೆ. 

ಡಿಎಸ್‌ ಈಶ್ವರಪ್ಪರವರ ಸ್ಪರ್ಧೆ 

ಈಶ್ವರಪ್ಪ ಹೆಸರಿನ ಇನ್ನೋಬ್ಬ ವ್ಯಕ್ತಿ ಸ್ಫರ್ಧೆ ವಿಚಾರಕ್ಕೆ ಉತ್ತರಿಸಿದ ಈಶ್ವರಪ್ಪ ಡಿ.ಎಸ್.ಈಶ್ವರಪ್ಪನ್ನ ಹಾಕಿಸಿದ್ದು ಇವರೇ (ಬಿಎಸ್‌ವೈ) ಜನರು ಕನ್ಫ್ಯೂಸ್ ಅಗಲಿ ಅಂತಾ ಹಾಕಿದ್ದಾರೆ. ಆದರೇ, ಜನರು ದಡ್ಡರಲ್ಲ. ವೋಟರ್ಸ್ ಹುಡುಕುತ್ತಾರೆ.. ಚಿಹ್ನೆ ನೋಡ್ತಾರೆ. ಒಂದು ಯಾಕೇ..? ಇನ್ನು ಹತ್ತು ಈಶ್ವರಪ್ಪರನ್ನ ಹಾಕಿಸಬೇಕಿತ್ತು ಎಂದರು.