ಲೋಕಸಭಾ ಚುನಾವಣೆಗಾಗಿ ಏನೆಲ್ಲಾ ನಡೆಯತ್ತಿದೆ ಗೊತ್ತಾ? ಇಲ್ಲಿದೆ ಓದಿ ವಿವರ!

Do you know what is going on for the Lok Sabha elections? Read the details here!

ಲೋಕಸಭಾ ಚುನಾವಣೆಗಾಗಿ ಏನೆಲ್ಲಾ ನಡೆಯತ್ತಿದೆ ಗೊತ್ತಾ? ಇಲ್ಲಿದೆ ಓದಿ ವಿವರ!
Lok Sabha election

Shivamogga Mar 31, 2024   Lok Sabha election  ಲೋಕಸಭಾ ಚುನಾವಣೆ 2024 ಪ್ರಚಾರದ ನಡುವೆ ಚುನಾವಣಾ ಸಿಬ್ಬಂದಿಗಳು ಮತದಾನ ಹೆಚ್ಚಳಕ್ಕೆ ತನ್ನದೇ ಆದ ರೀತಿಯಲ್ಲಿ ಶ್ರಮವಹಿಸುತ್ತಿದ್ದಾರೆ. ಈ ನಿಟ್ಟಿನಲ್ಲಿ ಜಿಲ್ಲೆಯೆಲ್ಲೆಡೆ ಸ್ವೀಪ್ ಸಮಿತಿಗಳು ಈ ಹಿಂದೆ ಕಡಿಮೆ ಮತದಾನವಾದ ಏರಿಯಾಗಳಿಗೆ ತೆರಳಿ, ಅಲ್ಲಿಯ ಮತದಾರ ಮನವೊಲಿಸಿ ಅವರಿಂದ ಕಡ್ಡಾಯ ಮತದಾನದ ಮಾತು ತೆಗೆದುಕೊಳ್ಳುತ್ತಿದ್ದಾರೆ. ಈ ನಿಟ್ಟಿನಲ್ಲಿ ಸ್ವೀಪ್ ಸಮಿತಿಯ ಕೈಗೊಳ್ಳುತ್ತಿರುವ ಕಾರ್ಯ ಇಲ್ಲಿದೆ. 

 

ಬೊಮ್ಮನಕಟ್ಟೆಯಲ್ಲಿ ಮತದಾನ ಜಾಗೃತಿ ಕಾರ್ಯಕ್ರಮ

 

ಶಿವಮೊಗ್ಗ ಲೋಕಸಭಾ ಚುನಾವಣೆ ಸಂಬಂಧ, ಕಳೆದ ಚುನಾವಣೆಯಲ್ಲಿ ಕಡಿಮೆ ಪ್ರಮಾಣದ ಮತದಾನವಾದ ಬೂತ್ ಸಂಖ್ಯೆ, 26 ರ ಹಳೆ ಬೊಮ್ಮನಕಟ್ಟೆಯಲ್ಲಿ ಶಿವಮೊಗ್ಗ ಮಹಾನಗರಪಾಲಿಕೆ ಸ್ವೀಪ್ ವತಿಯಿಂದ ಮತದಾನದಲ್ಲಿ ಜಾಗೃತಿ ಮೂಡಿಸುವ ಸಲುವಾಗ್ಗಿ ಪುರುಷರು  ಮತ್ತು ಮಹಿಳೆಯರಿಗೆ, ಸ್ವಸಹಾಯ ಸಂಘದ ಸದಸ್ಯರಿಗೆ ಪಾಸ್ ಇನ್ ದ ಬಾಲ್ ಆಟ ಆಡಿಸುವ ಮೂಲಕ ಕಡ್ಡಾಯ ಮತದಾನ ಮಾಡುವಂತೆ ಜಾಗೃತಿ ಮೂಡಿಲಾಯಿತು.

shivamogga palike

 

ಹಾಗೂ ಜಾಗೃತಿ ಕಾರ್ಯಕ್ರಮದಲ್ಲಿ ಭಾಗವಹಿಸಿದಂತೆ ಮತದಾನದದಿನವೂ ಉತ್ಸಾಹದಲ್ಲಿ ತಪ್ಪದೇ ಮತದಾನ ಮಾಡಬೇಕೆಂದು ಪ್ರತಿಜ್ಞಾ ವಿಧಿ ಬೋಧಿಸಲಾಯಿತು. ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆಯ ಸ್ವೀಪ್ ನೋಡಲ್ ಅಧಿಕಾರಿಗಳಾದ ಅನುಪಮ ಟಿ ಆರ್, ಸುಪ್ರಿಯಾ. ರತ್ನಾಕರ್. ರೇಣು. ಗೀತಾ ಮತ್ತು ಅಧಿಕಾರಿ ಸಿಬ್ಬಂದಿಗಳು, ಬಿ.ಎಲ್.ಓ ಮತ್ತು ಮೇಲ್ವಿಚಾರಕರು, ಹಾಜರಿದ್ದರು.

 

ಭದ್ರಾವತಿ ತರಕಾರಿ ಮಾರುಕಟ್ಟೆಯಲ್ಲಿ ಮತದಾನ ಜಾಗೃತಿ ಕಾರ್ಯಕ್ರಮ

 ಭದ್ರಾವತಿ ನಗರದ ಬಸವೇಶ್ವರ ವೃತ್ತದಲ್ಲಿ ಭಾರತ ಚುನಾವಣಾ ಆಯೋಗ, ರಾಜ್ಯ ಚುನಾವಣಾ ಆಯೋಗ, ಜಿಲ್ಲಾ ಸ್ವೀಪ್ ಸಮಿತಿ, ತಾಲ್ಲೂಕು ಸ್ವೀಪ್ ಸಮಿತಿ, ನಗರಸಭೆ ಭದ್ರಾವತಿ ಇವರ ಸಹಯೋಗದೊಂದಿಗೆ ಭದ್ರಾವತಿ ನಗರದ ಬಸವೇಶ್ವರ ವೃತ್ತದ ತರಕಾರಿ ಮಾರುಕಟ್ಟೆ, ಸೇರಿ ವಿವಿಧ ಮತಗಟ್ಟೆ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಮತದಾನ ಜಾಗೃತಿ ಕಾರ್ಯಕ್ರಮವನ್ನು ನಡೆಸಲಾಯಿತು

bhadravati

 

.ಈ ಸಂದರ್ಭದಲ್ಲಿ ತಾಲ್ಲೂಕು ಸ್ವೀಪ್ ಸಮಿತಿಯ ಅಧಿಕಾರಿಗಳು, ಮತಗಟ್ಟೆಯ ಮತದಾರರು ಉಪಸ್ಥಿತರಿದ್ದರು.

 

ಏ.2 ರಂದು ಸ್ವೀಪ್ ವತಿಯಿಂದ ಮತದಾನ ಜಾಗೃತಿಗಾಗಿ ಬೈಕ್ ಜಾಥಾ

 

ಈ ಬಾರಿಯ ಲೋಕಸಭಾ ಚುನಾವಣೆ ಹಿನ್ನೆಲೆ ಮತದಾನ ಜಾಗೃತಿ ಕುರಿತು ಜಿಲ್ಲೆಯಾದ್ಯಂತ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದ್ದು, ಏ.2 ರಂದು ಜಿಲ್ಲಾ ಸ್ವೀಪ್ ಸಮಿತಿ ವತಿಯಿಂದ ನಗರದಲ್ಲಿ ಬೈಕ್ ಜಾಥಾ ಹಮ್ಮಿಕೊಳ್ಳಲಾಗಿದೆ. ಏಪ್ರಿಲ್ 2 ರಂದು ಬೆಳಿಗ್ಗೆ 8 ಗಂಟೆಗೆ  ಜಿಲ್ಲಾಧಿಕಾರಿಗಳ ಕಚೇರಿಯಿಂದ ಬೈಕ್ ಜಾಥಾ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗುವುದು.  ಈ ಕಾರ್ಯಕ್ರಮದಲ್ಲಿ ಎಲ್ಲಾ ಇಲಾಖೆಗಳ ಅಧಿಕಾರಿಗಳು ಸಿಬ್ಬಂದಿಗಳು ಹಾಗೂ ಜಿಲ್ಲೆಯ ವಿವಿಧ ಸಂಘ ಸಂಸ್ಥೆಗಳ ಸದಸ್ಯರು, ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಬೇಕೆಂದು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಹಾಗೂ ಜಿಲ್ಲಾ ಸ್ವೀಪ್ ಸಮಿತಿಯ ಅಧ್ಯಕ್ಷರಾದ ಸ್ನೇಹಲ್ ಸುಧಾಕರ್ ಲೋಖಂಡೆ ಅವರು ತಿಳಿಸಿರುತ್ತಾರೆ.