ಶಿವಮೊಗ್ಗ ಲೋಕಸಭಾ ಕ್ಷೇತ್ರ | ಒಂದು ಗಂಟೆಗೆ 45.19 ರಷ್ಟು ಮತದಾನ | ಯಾವ ತಾಲ್ಲೂಕುನಲ್ಲಿ ಎಷ್ಟಾಯ್ತು ವೋಟಿಂಗ್

Shimoga Lok Sabha Constituency | 45.19 percent polling at 1 pm How much voting in which taluk?

ಶಿವಮೊಗ್ಗ ಲೋಕಸಭಾ ಕ್ಷೇತ್ರ | ಒಂದು ಗಂಟೆಗೆ  45.19 ರಷ್ಟು ಮತದಾನ | ಯಾವ ತಾಲ್ಲೂಕುನಲ್ಲಿ ಎಷ್ಟಾಯ್ತು ವೋಟಿಂಗ್
Shimoga Lok Sabha Constituency voting

SHIVAMOGGA | MALENADUTODAY NEWS | May 7, 2024  

ಶಿವಮೊಗ್ಗ ಲೋಕಸಭಾ ಚುನಾವಣೆಯ ಮತದಾನ ಅರ್ಧ ಹಂತಕ್ಕೆ ಬಂದು ತಲುಪಿದ್ದು ಮತದಾನ 45.19% ಪರ್ಸೆಂಟ್‌ ಗೆ ಬಂದು ತಲುಪಿದೆ. ಬೆಳಗ್ಗೆ ವೇಗವಾಗಿದ್ದ ಮತದಾನ ಆನಂತರ ತುಸು ನಿಧಾನವಾಗಿ ಸಾಗುತ್ತಿದ್ದು, ಎಲ್ಲೆಡೆ ಸಣ್ಣ ಪುಟ್ಟ ತಾಂತ್ರಿಕ ತೊಂದರೆಗಳನ್ನು ಹೊರತುಪಡಿಸಿ ಸುಗಮವಾಗಿ ಮತದಾನವಾಗುತ್ತಿದೆ. 

 

ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಬೆಳಗ್ಗೆ ಒಂಬತ್ತುವರೆಗೆ  11 ಪರ್ಸೆಂಟ್‌ ಮತದಾನವಾಗಿತ್ತು. ಬಳಿಕ 11 ಗಂಟೆಗೆ ಹೊರಬಿದ್ದಿರುವ ಮಾಹಿತಿ ಪ್ರಕಾರ, ಒಟ್ಟಾರೆ, 27.21 ರಷ್ಟು ಮತದಾನವಾಗಿತ್ತು. ಇದೀಗ ಒಂದು ಗಂಟೆಯ ಲೆಕ್ಕಾಚಾರದ ಪ್ರಕಾರ ಶೇಕಡಾ 43.80 ರಷ್ಟು ಮತದಾನ ವಾಗಿದೆ. 

 

ಈ ಪೈಕಿ ಬೈಂದೂರು 48.09 % ತೀರ್ಥಹಳ್ಳಿ 48.15 %,  ರಷ್ಟು ಮತದಾನವಾಗಿದೆ. ಇನ್ನೂ ಸಾಗರದಲ್ಲಿ 47.53 %,, ರಷ್ಟು ಮತದಾನವಾಗಿದೆ. ಶಿವಮೊಗ್ಗ ಗ್ರಾಮಾಂತರದಲ್ಲಿ 46.11 %, ರಷ್ಟು ಮತದಾನವಾಗಿದೆ.  ಉಳಿದಂತೆ ಶಿವಮೊಗ್ಗ ಸಿಟಿಯಲ್ಲಿ  43.00 %, ರಷ್ಟು ಮತದಾನವಾಗಿದ್ದು  ಸೊರಬದಲ್ಲಿ 44.45 %,, ಮತ್ತು ಶಿಕಾರಿಪುರದಲ್ಲಿ 44.25%, , ಭದ್ರಾವತಿಯಲ್ಲಿ  41.65% ರಷ್ಟು  ಮತದಾನವಾಗಿದೆ. ಇದುವರೆಗೂ ಒಟ್ಟು ಚಲಾವಣೆಯಾದ ಮತಗಳು:788545