ಬಿಜೆಪಿಯಲ್ಲಿ ಬಂಡಾಯದ ಮುಂಗಾರು | ಕೆಎಸ್‌ಇ, ರಘುಪತಿ ಭಟ್‌ ಬೆನ್ನಲ್ಲೆ ಸಿಡಿದ ಸಾಗರ ಬಿಜೆಪಿ ಮುಖಂಡ

After KSE, Raghupathi Bhat, 'Sagar BJP leader' rebels against party | KS Eshwarappa, Raghupathi Bhat, Shivamogga BJP Office News, Praveen Sagar, Sagar BJP leader

ಬಿಜೆಪಿಯಲ್ಲಿ ಬಂಡಾಯದ ಮುಂಗಾರು |  ಕೆಎಸ್‌ಇ, ರಘುಪತಿ ಭಟ್‌ ಬೆನ್ನಲ್ಲೆ ಸಿಡಿದ ಸಾಗರ ಬಿಜೆಪಿ ಮುಖಂಡ
KS Eshwarappa, Raghupathi Bhat, Shivamogga BJP Office News, Praveen Sagar, Sagar BJP leader

SHIVAMOGGA | MALENADUTODAY NEWS | May 17, 2024  ಮಲೆನಾಡು ಟುಡೆ 

ಶಿವಮೊಗ್ಗ | ಬಂಡಾಯದ ಮೆಲ್ಪಂಕ್ತಿ ಹಾಕಿದ ಕೆಎಸ್‌ ಈಶ್ವರಪ್ಪನವರ ಸಾಲಿಗೆ ಒಬ್ಬರ ಹಿಂದೊಬ್ಬರು ಜೊತೆಯಾಗುತ್ತಿದ್ದಾರೆ. ಎಂಎಲ್‌ಸಿ ಟಿಕೆಟ್‌ ಆಕಾಂಕ್ಷಿಗಳಿಗೆ ನಿರಾಸೆಯಾದ ಹಿನ್ನೆಲೆಯಲ್ಲಿ ಕಮಲ ಪಕ್ಷದಲ್ಲಿ ಅಸಮಾಧಾನ ಹೊಗೆಯಾಡುತ್ತಿದೆ. ಇತ್ತೀಚೆಗೆ ರಘುಪತಿ ಭಟ್‌ ಸ್ವತಂತ್ರ ಸ್ಪರ್ಧೆಯನ್ನು ನಿಕ್ಕಿಗೊಳಿಸಿ ಕೆಎಸ್‌ ಈಶ್ವರಪ್ಪನವರ ಬೆಂಬಲ ಕೋರಿದ ಬೆನ್ನಲ್ಲೆ ಇವತ್ತು ಇನ್ನೊಬ್ಬ ಬಿಜೆಪಿ ಮುಖಂಡ ಹಾಗೂ ವಕೀಲರೊಬ್ಬರು ಪಕ್ಷದ ವಿರುದ್ಧ ತಮ್ಮ ಸಿಟ್ಟನ್ನು ಹೊರಹಾಕಿದ್ದಾರೆ. 

ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕು ಬಿಜೆಪಿ ಮುಖಂಡ ಪ್ರವೀಣ್‌ ಸಾಗರ್‌ ನೈರುತ್ಯ ಪದವೀಧರ ಕ್ಷೇತ್ರದಿಂದ ನಾನು ಸಹ ಸ್ಪರ್ಧಿಸಲು ಬಯಸಿದ್ದೆ. ಆದರೆ ತಮಗೆ ಟಿಕೆಟ್‌ ನೀಡಿಲ್ಲ, ಮೇಲಾಗಿ ಕನಿಷ್ಠ ಸೌಜನ್ಯಕ್ಕೂ ನಮ್ಮನ್ನು ಕರೆದು ಮಾತನಾಡಿಲ್ಲ ಎಂದು ತಮ್ಮ ನೋವನ್ನ ಹೊರಹಾಕಿದ್ದಾರೆ. 

ಶಿವಮೊಗ್ಗ ಪ್ರೆಸ್‌ ಟ್ರಸ್ಟ್‌ನಲ್ಲಿ ಮಾತನಾಡಿದ ಪ್ರವೀಣ್‌ ಸಾಗರ್‌ ನೈರುತ್ಯ ಪದವೀಧರ ಕ್ಷೇತ್ರದಿಂದ  ಡಾ. ಧನಂಜಯ ಸರ್ಜಿ ಅವರಿಗೆ ಟಿಕೆಟ್ ನೀಡಲಾಗಿದೆ. ನಾನು ಸಹ ನೈರುತ್ಯ ಪದವೀಧರ ಕ್ಷೇತ್ರಕ್ಕೆ ಆಕಾಂಕ್ಷಿ ಆಗಿದ್ದೆ, ಆದರೆ ಟಿಕೆಟ್‌ ನಿರಾಕರಿಸಿದ ಹೊರತಾಗಿ,  ಸೌಜನ್ಯಕ್ಕೂ ಕೂಡ ಆಕಾಂಕ್ಷಿಗಳನ್ನು ಕರೆದು ಪಕ್ಷ ಮಾತನಾಡಿಸಲಿಲ್ಲ ಎಂದಿದ್ದಾರೆ. 

ಒಟ್ಟು ಆರೇಳು ಆಕಾಂಕ್ಷಿಗಳಿದ್ದವು, ಆದರೆ ನಮ್ಮೊಂದಿಗೆ ಯಾರು ಮಾತಾಡಿಲ್ಲ. ಕಾರ್ಯಕರ್ತರಿಗೆ ಅನ್ಯಾಯ ಆದಾಗ ನಾವು ಬೇಕು? ಈಗ ಬೇಡವಾ? ಪಕ್ಷಕ್ಕಾಗಿ ದುಡಿದ ಕಾರ್ಯಕರ್ತರಿಗೆ ಅವಕಾಶ ನೀಡಬೇಕಿತ್ತು. ನಿನ್ನೆ ಮೊನ್ನೆ ಪಕ್ಷಕ್ಕೆ ಬಂದ ಧನಂಜಯ ಸರ್ಜಿ ಅವರಿಗೆ ಟಿಕೆಟ್ ಕೊಡಲಾಗಿದೆ. ಇದರಿಂದಾಗಿ ನಮಗೆ ತುಂಬಾ ನೋವಾಗಿದೆ. ಜಾತಿಯನ್ನು ಆಧಾರವನ್ನಾಗಿ ಮಾಡಿಕೊಂಡು ರಾಜಕೀಯ ಮಾಡುತ್ತಿದ್ದಾರೆ ಎಂದು ದೂರಿದ್ದಾರೆ. 

ಇನ್ನೂ ಶಿಕ್ಷಕರ ಕ್ಷೇತ್ರದಲ್ಲಿ ಸಿ.ಟಿ ರವಿಯನ್ನ ಸೋಲಿಸಿದ ಅಭ್ಯರ್ಥಿಗೆ ಟಿಕೆಟ್ ನೀಡಲಾಗಿದೆ. ನಾವು ಯಾವುದೇ ಕಾರಣಕ್ಕೂ ಎನ್ಡಿಎ ಅಭ್ಯರ್ಥಿಗೆ ಬೆಂಬಲಿಸುವುದಿಲ್ಲ,  ಎಸ್.ಎಲ್ ಭೋಜೆಗೌಡ ನಮ್ಮ ಅಭ್ಯರ್ಥಿ ಅಲ್ಲ ನಾವು ಬೆಂಬಲಿಸಲ್ಲ. 21ನೇ ತಾರೀಖು ನಮ್ಮ ಬೆಂಬಲ‌ ಯಾರಿಗೆ ಅಂತ ತಿಳಿಸುತ್ತೇವೆ ಎಂದಿದ್ದಾರೆ.