ಅರಣ್ಯ ಇಲಾಖೆ ಸಿಬ್ಬಂದಿಯನ್ನೆ ಆಟವಾಡಿಸಿದ ಮುಶಿಯಾ ಪಡೆ! 14 ಮಕ್ಕಳಿಗೆ ಗಾಯ! ಸೆರೆ ಸಿಕ್ಕಿದ್ದು ಹೇಗೆ ಗೊತ್ತಾ?

Musia Kata in Soraba taluk! Four Hanuman langurs were captured by forest officials

ಅರಣ್ಯ ಇಲಾಖೆ ಸಿಬ್ಬಂದಿಯನ್ನೆ ಆಟವಾಡಿಸಿದ ಮುಶಿಯಾ ಪಡೆ!  14 ಮಕ್ಕಳಿಗೆ ಗಾಯ! ಸೆರೆ ಸಿಕ್ಕಿದ್ದು ಹೇಗೆ ಗೊತ್ತಾ?
Hanuman langurs,Musia, Soraba taluk

Shivamogga  Apr 3, 2024   ಶಿವಮೊಗ್ಗ ಜಿಲ್ಲೆ ಸೊರಬ ತಾಲ್ಲೂಕುನಲ್ಲಿ ಮುಶಿಯಾಗಳ ಕಾಟ ಅತಿಯಾಗಿದೆ ಈ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ ಮೂರು ಮಂಗಳನ್ನ ಹಿಡಿದಿದ್ದಾರೆ. ಹನುಮಾನ್‌ ಲಂಗೂರ್‌ ಎಂದು ಕರೆಯಲ್ಪಡುವ ಮುಸಿಯಾಗಳು ಈ ಭಾಗದಲ್ಲಿ ಶಕುನವಳ್ಳಿಯಲ್ಲಿ ಹೆಚ್ಚು ತೊಂದರೆ ಕೊಡುತ್ತಿದ್ದವು. 

ಮುಶಿಯಾಗಳ ದಂಡೆ ಇಲ್ಲಿದ್ದು ಪುಟ್ಟ ಪುಟ್ಟ ಮಕ್ಕಳ ಮೇಲೆ ಇವುಗಳು ದಾಳಿ ನಡೆಸ್ತಿದ್ದವು.  ಮಕ್ಕಳ ಮೇಲೆ ದಾಳಿ ನಡೆಸ್ತಿದ್ದ ಇವುಗಳು ಮಕ್ಕಳನ್ನ ಕಚ್ಚಿ ಗಾಯಗೊಳಿಸುತ್ತಿದ್ದವು. ಇವುಗಳ ದಾಳಿಯಿಂದಾಗಿ 14 ಕ್ಕೂ ಹೆಚ್ಚು ಮಕ್ಕಳು ಗಾಯಗೊಂಡಿದ್ದರು. ಇದರ ಬೆನ್ನಲ್ಲೆ ಎಚ್ಚೆತ್ತ ಅರಣ್ಯ ಇಲಾಖೆ ಮುಶಿಯಾಗಳಿಗೆ ಅರವಳಿಕೆ ಮದ್ದು ನೀಡಿ ಅವುಗಳನ್ನ ಹಿಡಿಯುವ ಕಾರ್ಯಾಚರಣೆಗೆ ಮುಂದಾಗಿದ್ದು ನಾಲ್ಕು ಮುಶಿಯಾಗಳನ್ನ ಹಿಡಿದಿದ್ದಾರೆ ಎಂದು ತಿಳಿದು ಬಂದಿದೆ.  

ಇನ್ನೂ ವಿಚಿತ್ರ ಅಂದರೆ ಮುಶಿಯಾಗಳು ಅರಣ್ಯ ಸಿಬ್ಬಂದಿ ತಮ್ಮನ್ನು ಹಿಡಿಯುತ್ತಾರೆ ಎಂದು ಗೊತ್ತಾಗುತ್ತಲೇ ಸಿಕ್ಕಾಪಟ್ಟೆ ಆಟವಾಡಿಸಿವೆ. ಅರಣ್ಯ ಸಿಬ್ಬಂದಿ ಕಾಣುತ್ತಲೇ ಸಿಕ್ಕಸಿಕ್ಕಲ್ಲಿ ಹಾರುತ್ತಾ ಓಡಿವೆ. ಹಾಗಿದ್ದರೂ ಹರಸಾಹಸ ಮಾಡಿ ಅರಣ್ಯ ಇಲಾಖೆ ಸಿಬ್ಬಂದಿ ನಾಲ್ಕು ಮುಶಿಯಾಗಳನ್ನ ಹಿಡಿದಿದ್ದಾರೆ. 

TODAY ವಾಟ್ಸ್ಯಾಪ್​ ಚಾನಲ್​ ಫಾಲೋ ಮಾಡಿ! ಯಾವಾಗ ಬೇಕೋ ಆಗಲೇ  ಸುದ್ದಿ ಓದಿ,  ಲಿಂಕ್​ ಕ್ಲಿಕ್ ಮಾಡಿ

https://whatsapp.com/channel/0029Va9I91s3LdQVrdq7yl1h

ಇದನ್ನು ಓದಿ : ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್‌ನಲ್ಲೀಗ ಮಧು ಬಂಗಾರಪ್ಪನವರೇ ಸುಪ್ರೀಂ!  ಶೀಘ್ರದಲ್ಲಿಯೇ ಇನ್ನೊಂದು ಬದಲಾವಣೆ! ಏನದು ರಾಜಕಾರಣ