ಮದುವೆ ವಿಚಾರಕ್ಕೆ ಶಿವಮೊಗ್ಗದ ಯುವತಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿದ್ಧಾಳೆ. ಮದುವೆಯಾಗುವ ಹುಡುಗನ ಕಡೆಯವರು ಹುಡುಗಿಯ ಮನೆಗೆ ಬಂದು ಶೀಘ್ರ ಮದುವೆ ಮಾಡಿಕೊಡಿ ಎಂದು ಒತ್ತಾಯಿಸಿದ್ದಲ್ಲದೆ, ಹುಡುಗಿಗೆ ಮದುವೆಗೆ ಮನಸ್ಸಿಲ್ಲ ಎಂದರೆ ಹೋಗಿ ಸಾಯಿ ಎಂದು ಬೈದಿದ್ದರಿಂದ ಶಿವಮೊಗ್ಗದ ಬೊಮ್ಮನಕಟ್ಟೆಯ ಯುವತಿ ಸುಮಾ ಎಂಬಾಕೆ ಆತ್ಮಹತ್ಯೆ ಮಾಡಿಕೊಂಡಿದ್ಧಾಳೆ ಎಂದು ಆರೋಪಿಸಲಾಗಿದೆ. ಸುಮಾ ಆತ್ಮಹತ್ಯೆ ಮಾಡಿಕೊಂಡವರು. ಈಕೆ ನಗರದ ಕಾಲೇಜೊಂದರಲ್ಲಿ ಎಂಸಿಎ ಎರಡನೆಯ ವರ್ಷ ಓದುತ್ತಿದ್ದರು. 2019ರಲ್ಲಿ ನ್ಯಾಮತಿ ಮೂಲದ ಯುವಕನೊಂದಿಗೆ ನಿಶ್ಚಿತಾರ್ಥವಾಗಿತ್ತು. ಓದು ಮುಗಿದ ಮೇಲೆ ವಿವಾಹವಾಗುವ ಬಗ್ಗೆ ಮಾತುಕತೆಯಾಗಿತ್ತು ಎನ್ನಲಾಗಿದೆ.

ಏನಿದು ಪುಕರಣ ?
ಎಂಸಿಎ ಓದುತ್ತಿದ್ದ ವಿದ್ಯಾರ್ಥಿನಿ ಸುಮಾಳಿಗೆ ಎರಡು ವರ್ಷದ ಹಿಂದೆಯೇ ಮದುವ ಪ್ರಸ್ತಾಪ ಬಂದಿತ್ತು. ಮನೆಯವರೆಲ್ಲ ಸೇರಿಕೊಂಡು ಕಂಕನಹಳ್ಳಿಯ ಪ್ರವೀಣ್ ಜತೆ ಮದುವ ಮಾಡಲು ಮುಂದಾಗಿದ್ದರು. ಆದರೆ ಎಂಸಿಎ ಮಾಡುವ ಕನಸು ಕಟ್ಟಿಕೊಂಡಿದ್ದ ಸುಮಾ ಎರಡು ವರ್ಷ ಮದುವೆ ಮುಂದೂಡಿದ್ದಳು. ಈ ನಡುವ ಪ್ರವೀಣ್ ತನ್ನನ್ನು ಮದುವ ಆಗುವಂತೆ ಫೋನ್‌ನಲ್ಲಿ ಒತ್ತಾಯ ಮಾಡುತ್ತಿದ್ದಲ್ಲದೆ, ಕಾಲೇಜು, ಬಸ್ ನಿಲ್ದಾಣದ ಬಳಿ ಬಂದು ಪೀಡಿಸುತ್ತಿದ್ದ ಎನ್ನಲಾಗಿದೆ.
ಮನೆ ಬಂದು ನಿಂದನೆ
ಮದುವೆ ಮುಂದೂಡುತ್ತಿದ್ದ ಸುಮಾಳ ವರ್ತನೆಯಿಂದ ಕಂಗೆಟ್ಟಿದ್ದ ಪ್ರವೀಣ್ ಕುಟುಂಬದವರು ಕಳೆದ ಫೆಬ್ರವರಿ 9ರಂದು ಸುಮಾಳ ಮನೆಗೆ ಬಂದಿದ್ದರು. ಈ ವೇಳೆ ಮದುವೆ ಮಾಡಿಕೊಳ್ಳುವಂತೆ ಒತ್ತಡ ಹಾಕಿದ್ದರು. ಆದರೆ ಎಂಸಿಎ ಮುಗಿಯುವವರೆಗೆ ಮದುವೆ ಆಗುವುದಿಲ್ಲ ಎಂದು ಸುಮಾ ಪಟ್ಟು ಹಿಡಿದಿದ್ದಳು ಎನ್ನಲಾಗಿದೆ. ಇದರಿಂದ ಸಿಟ್ಟಿಗೆದ್ದ ಪ್ರವೀಣ್ ಕುಟುಂಬದವರು ಗಲಾಟೆ ಮಾಡಿದ್ದು ನಿಂದಿಸಿದ್ದಾರೆ ಎನ್ನಲಾಗಿದೆ. ಅಲ್ಲದೆ ಸಾಯಿ ಎಂದಿದ್ದಾರೆ ಎಂದು ದೂರಲಾಗಿದೆ. ಇದರಿಂದ ನೋಂದ ಸುಮಾ ಅದೇ ದಿನ ಮನೆಯಲ್ಲೇ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾಳೆ. ತಕ್ಷಣವೇ ಆಕೆಯನ್ನುಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಿ ಅಲ್ಲಿಂದ ಹಚ್ಚಿನ ಚಿಕಿತ್ಸೆಗೆ ಮಣಿಪಾಲ್ ಆಸ್ಪತ್ರೆಗೆ ಸ್ಥಳಾಂತರಿಸಲಾಗಿತ್ತು. ಆದರ ಚಿಕಿತ್ಸೆ ಫಲಿಸದೇ ಸುಮಾ ಮೃತಪಟ್ಟಿದ್ದಾಳೆ
ಮೀನು ಹಿಡಿಯಲು ಬಂದವರ ಮೇಲೆ ಜೇನುನೊಣಗಳ ದಾಳಿ! 6 ಜನರಿಗೆ ಗಂಭೀರ ಪೆಟ್ಟು!
Facebook ನಲ್ಲಿ ನಮ್ಮ ಪೇಜ್ ನೋಡಿ : Malenadutoday.com
Twitter ನಲ್ಲಿ ನಾವಿದ್ದೇವೆ, ಫಾಲೋ ಮಾಡಿ : Malenadutoday.com
Instagram ನಲ್ಲಿ ಕ್ಲಿಕ್ ಮಾಡಿ : Malenadutoday.com
Telegram ನಲ್ಲಿ ಸುದ್ದಿ ಪಡೆಯಲು ಲಿಂಕ್ ಒತ್ತಿ : Malenadutoday.com
