EWS ಕೊಟ್ಟಿರುವುದು ತಪ್ಪು ,ಸುಪ್ರೀಂಕೋರ್ಟ್​ನ ಜಡ್ಜ್​ಮೆಂಟ್​ನ್ನು ಪುನರ್ ಪರಿಶೀಲಿಸುವ ಅಗತ್ಯವಿದೆ- ನಿವೃತ್ತ ನ್ಯಾಯಮೂರ್ತಿ ಹೆಚ್.ಎನ್ ನಾಗಮೋಹನ್ ದಾಸ್ ಅಭಿಪ್ರಾಯ

What EWS has given is wrong, supreme court's judgement needs to be reviewed: Retired Justice H N Nagamohan Das

EWS ಕೊಟ್ಟಿರುವುದು ತಪ್ಪು ,ಸುಪ್ರೀಂಕೋರ್ಟ್​ನ  ಜಡ್ಜ್​ಮೆಂಟ್​ನ್ನು ಪುನರ್ ಪರಿಶೀಲಿಸುವ ಅಗತ್ಯವಿದೆ- ನಿವೃತ್ತ ನ್ಯಾಯಮೂರ್ತಿ ಹೆಚ್.ಎನ್ ನಾಗಮೋಹನ್ ದಾಸ್ ಅಭಿಪ್ರಾಯ
EWS ಕೊಟ್ಟಿರುವುದು ತಪ್ಪು ,ಸುಪ್ರೀಂಕೋರ್ಟ್​ನ ಜಡ್ಜ್​ಮೆಂಟ್​ನ್ನು ಪುನರ್ ಪರಿಶೀಲಿಸುವ ಅಗತ್ಯವಿದೆ- ನಿವೃತ್ತ ನ್ಯಾಯಮೂರ್ತಿ ಹೆಚ್.ಎನ್ ನಾಗಮೋಹನ್ ದಾಸ್ ಅಭಿಪ್ರಾಯ

ಶಿವಮೊಗ್ಗದ ಪತ್ರಿಕಾಭವನದಲ್ಲಿ ಶಿವಮೊಗ್ಗ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಹಾಗು ಶಿವಮೊಗ್ಗ ಪ್ರೆಸ್ ಟ್ರಸ್ಟ್ ಜಂಟಿಯಾಗಿ ಆಯೋಜಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಹೆಚ್.ಎನ್. ನಾಗಮೋಹನ್ ದಾಸ್ ನ್ಯಾಯಾಂಗ ವ್ಯವಸ್ಥೆ ಮತ್ತು ಮೀಸಲಾತಿ ಕುರಿತಂತೆ ಗಂಭೀರವಾಗಿ ಚರ್ಚೆ ನಡೆಸಿದರು. ಸಂವಿಧಾನ ಓದು ಅಭಿಯಾನಕ್ಕೆ ರಾಜ್ಯಾದ್ಯಂತ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ ಹಾಗೂ ಈ ಅಭಿಯಾನವನ್ನು ಸರ್ಕಾರ ಅಥವಾ ಕಾರ್ಪೊರೇಟ್ ವ್ಯವಸ್ಥೆಯಿಂದ ಮಾಡಿದ್ದಲ್ಲ. ಜನರೇ ನಮ್ಮನ್ನು ಕರೆಸಿಕೊಂಡು ಕಾರ್ಯಕ್ರಮ ಮಾಡುತ್ತಿದ್ದಾರೆ. ವಿದ್ಯಾರ್ಥಿ ಯುವ ಜನರಿಗೆ ಅಂತಾ ಪ್ರಾರಂಭ ಮಾಡಿದ ಅಭಿಯಾನ, ರೈತರಿಗೆ, ಕಾರ್ಮಿಕರಿಗೆ, ಮಹಿಳೆಯರಿಗೆ, ಪತ್ರಕರ್ತರಿಗೆ ಮಠಾಧೀಶರಿಗೆ ಅಭಿಯಾನ ಖುಷಿ ತಂದುಕೊಟ್ಟಿದೆ ಎಂದು ತಿಳಿಸಿದ್ರು. 

ಮೀನು ಹಿಡಿಯಲು ಬಂದವರ ಮೇಲೆ ಜೇನುನೊಣಗಳ ದಾಳಿ! 6 ಜನರಿಗೆ ಗಂಭೀರ ಪೆಟ್ಟು!

ಈ ದೇಶದಲ್ಲಿ ಸಮಸ್ಯೆಗಳು ಇವೆ, ಹಾಗೆಯೇ ಸವಾಲುಗಳೂ ಕೂಡ ಇವೆ. ದೇಶದಲ್ಲಿ ಭಯೋತ್ಪಾದನೆ, ಮೂಲಭೂತವಾದ,  ಭ್ರಷ್ಟಾಚಾರ, ಅಪರಾಧಿಕರಣವಿದೆ. ಸಾಂಸ್ಕೃತಿಕ ದಿವಾಳಿತನ ಎಂಬ ಸವಾಲುಗಳಿವೆ. ಈ ಸಮಸ್ಯೆಗಳನ್ನು ಪರಿಹಾರ ಮಾಡಿಕೊಳ್ಳಬಹುದೆಂಬ ವಿಶ್ವಾಸ ನನಗಿದೆ. ಈ ಸವಾಲುಗಳನ್ನು ಹಿಮ್ಮೆಟ್ಟಿಸಬಹುದು.  ಈ ಎಲ್ಲಾ ಸವಾಲುಗಳಿಗೆ ಸಂವಿಧಾನ ದಾರಿಯಾಗಿದೆ. 73 ವರ್ಷಗಳ ಸಂವಿಧಾನದ ಅನುಷ್ಟಾನದಲ್ಲಿ ನಾವು ಸಾಕಷ್ಟು ಪ್ರಗತಿ ಸಾಧಿಸಿದ್ದೇವೆ. ಇಂತಹ ಸಂವಿಧಾನವನ್ನು ಉತ್ತಮ ಪಡಿಸಿಕೊಳ್ಳುವುದಕ್ಕೂ ಅವಕಾಶವಿದೆ  ಎಂದರು

JP BIG EXCLUSIVE : ಸಕ್ರೆಬೈಲ್ ಅನೆ ಬಿಡಾರದಿಂದ ಮತ್ತೆ ಮೂರು ಆನೆಗಳ ಸ್ಥಳಾಂತರಕ್ಕೆ ಬೇಡಿಕೆ!

ನಂದಿನಿ ಜಂಬೋ ಪಾಕೆಟ್ ಹಾಲಿನ ದರ 3 ರೂಪಾಯಿ ಹೆಚ್ಚಳ!

ಸಂವಿಧಾನದ 365 ನೇ ಅನುಚ್ಛೇದ ತಿದ್ದುಪಡಿಗೆ ಅವಕಾಶ ಮಾಡಿಕೊಟ್ಟಿದೆ. ಅದನ್ನು ಬಳಕೆ ಮಾಡಿಕೊಂಡು ನಾವು 105 ಬಾರಿ ಸಂವಿಧಾನ ತಿದ್ದುಪಡಿ ಮಾಡಿದ್ದೇವೆ. ಅವಶ್ಯಕತೆ ಇದ್ರೆ ಇನ್ನು ಸಹ ಮಾಡಬಹುದಾಗಿದೆ. ಸಂವಿಧಾನವನ್ನು ಇನ್ನು ಪರಿಣಾಮಕಾರಿಯಾಗಿ ಉತ್ತಮಗೊಳಿಸಲು ತಿದ್ದುಪಡಿಗಳೊಂದಿಗೆ ನಾವು ಮುಂದುವರೆಯಬೇಕು. ಸಂವಿಧಾನವನ್ನು ಉಳಿಸಿಕೊಳ್ಳಬೇಕು. ಅದನ್ನು ಗಟ್ಟಿಗೊಳಿಸಬೇಕು. ಜನರ ಸಮಸ್ಯೆ ಸವಾಲುಗಳಿಗೆ ನಾವು ಸ್ಪಂದಿಸಬೇಕು. ಈ ದಿಕ್ಕಿನಲ್ಲಿ ಶಾಸಕಾಂಗ ಕಾರ್ಯಾಂಗ ನ್ಯಾಯಾಂಗ ಮಾಧ್ಯಮ ಈ ನಾಲ್ಕು ಅಂಗಗಳು ಕೆಲಸ ಮಾಡಿಯೂ, ಎಲ್ಲೋ ಒಂದು ಕಡೆ ನಾವು ಗಳಿಸಿದ್ದನ್ನು ಕಳೆದುಕೊಳ್ಳುತ್ತಿದ್ದೇವೆ ಎನ್ನುವ ಪರಿಸ್ಥಿತಿಯಲ್ಲಿ ಇದ್ದೇವೆ. ಇಂತಹ ಪರಿಸ್ಥಿತಿಯಲ್ಲಿ ಎಲ್ಲಾ ಅಂಗಗಳು ಸಂವಿಧಾನ ಉಳಿಸುವ ಕೆಲಸಕ್ಕೆ ಮುಂದಾಗಬೇಕಿದೆ.

ನಂದಿನಿ ಜಂಬೋ ಪಾಕೆಟ್ ಹಾಲಿನ ದರ 3 ರೂಪಾಯಿ ಹೆಚ್ಚಳ!

ಶಾಸಕಾಂಗ ಕಾರ್ಯಾಂಗ ಮತ್ತು ನ್ಯಾಯಾಂಗವೂ ಸೇರಿದಂತೆ ಎಲ್ಲಾ ಅಂಗಗಳು ತಪ್ಪು ಮಾಡಿವೆ. ಮಾಡಿದ ತಪ್ಪುಗಳನ್ನು ತಿದ್ದಿಕೊಂಡು ಮುಂದುವರೆಯಲೂ ಈಗಲೂ ಅವಕಾಶವಿದೆ. ಈ ಹಿಂದೆಲ್ಲಾ ಮಾಡಿದ ತಪ್ಪುಗಳನ್ನು ತಿದ್ದಿಕೊಂಡು ಮುಂದುವರೆಯುವ ವಿವೇಕತನವಿತ್ತು. ಈ ಹಿಂದೆ  ಜಸ್ಟೀಸ್ ಭಗವತಿಯವರು ಸುಪ್ರೀಂಕೋರ್ಟ್​ನಲ್ಲಿ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ತೀರ್ಪು ನೀಡಿದ್ದರು. ಅದಾದ ನಂತರ ಆ ವರ್ಷಕ್ಕೆ ಅಂತಹದ್ದೇ ಒಂದು ಪ್ರಕರಣ ಅವರ ಮುಂದೆ ಬರುತ್ತದೆ. ಆದರೆ ಲಾಯರ್​ಗಳು ಬೇರೆಯಾಗಿದ್ರು. ಅವರು​ಗಳ ಆರ್ಗ್ಯುಮೆಂಟ್ ಕೇಳಿದಾಗ ಭಗವತಿಯವರ ತಲೆಯಲ್ಲಿ ಹೊಸ ಆಲೋಚನೆ ಮೂಡುತ್ತದೆ. ನಾನು ಹಿಂದೆ ತೆಗೆದುಕೊಂಡ ತೀರ್ಮಾನ ತಪ್ಪು ಎಂದು ಬೇರೆಯದ್ದೇ ತೀರ್ಮಾನ ತೆಗೆದುಕೊಂಡರು. ಒಂದು ವರ್ಷದ ಹಿಂದೆ ತೆಗೆದುಕೊಂಡ ತೀರ್ಮಾನಕ್ಕೂ ಎರಡನೇ ವರ್ಷ ತೆಗೆದುಕೊಂಡ ತೀರ್ಮಾನಕ್ಕೂ ವ್ಯತ್ಯಾಸವಾದ್ರೆ. ಜನರಿಗೆ ತಪ್ಪು ಸಂದೇಶ ಹೋಗುವುದಿಲ್ಲವೇ ಎಂಬ ಭಾವನೆ ಮೂಡುವುದು ಸಹಜ. ಆದರೆ ಅದಕ್ಕೆ ಅವರು ತಮ್ಮ ಜಡ್ಜ್ ಮೆಂಟ್ ನಲ್ಲಿ.Perpetuating an error is not heroism  ಎಂದು ಬರೆಯುತ್ತಾರೆ. ಮಾಡಿದ ತಪ್ಪನ್ನು ಮುಂದುವರೆಸಿಕೊಂಡು ಹೋಗುವುದು ದೊಡ್ಡಸ್ತಿಕೆಯಲ್ಲ. ಮಾಡಿರುವಂತ ತಪ್ಪನ್ನು ಸರಿಪಡಿಸಿಕೊಂಡು ಮುಂದುವರೆಯುವುದು ದೊಡ್ಡಸ್ತಿಕೆ ಎಂದು ಬರೆಯುತ್ತಾರೆ. ಇದು ನಿಜವಾದ ಜ್ಯುಡಿಷಿಯರಿ. ಆದರೆ ಪ್ರಸ್ತುತ ಸಂದರ್ಭದಲ್ಲಿ ಮಾಡಿದ ತಪ್ಪುಗಳನ್ನು ತಿದ್ದಿಕೊಂಡು ಹೋಗುವ ಪ್ರವೃತ್ತಿ ಇಲ್ಲದಿರುವುದನ್ನು ನಾವು ಕಾಣುತ್ತಿದ್ದೇವೆ ಎಂದು ಬೇಸರ ವ್ಯಕ್ತಪಡಿಸಿದ್ರು.  

ಕೊಲಿಜಿಯಂ ಸಿಸ್ಟಮ್ ಸರಿಯಿಲ್ಲ ಎಂದು ಜನರು ಮಾತನಾಡಿಕೊಳ್ಳುವ ಸಂದರ್ಭದಲ್ಲಿ ಸರ್ಕಾರ ನ್ಯಾಷನಲ್ ಜ್ಯುಡಿಷಿಯಲ್ ಕಮಿಷನ್ ಬಿಲ್ ಜಾರಿಗೆ ತರುತ್ತೆ.  ಮುಂದೆ ಸುಪ್ರೀಂಕೋರ್ಟ್ ನವರು ಇದು ನ್ಯಾಯಾಂಗ ವ್ಯವಸ್ಥೆಗೆ ಧಕ್ಕೆ ತರುವಂತ ಕಾಯ್ದೆ ಅಂತಾ ರದ್ದುಪಡಿಸ್ತಾರೆ. ಆ ಜಡ್ಜ್​ಮೆಂಟ್​ನಲ್ಲಿ ಸುಪ್ರೀಂ ಕೋರ್ಟ್ ಕೊಲಿಜಿಯಂ ಸಿಸ್ಟಮ್​ನಲ್ಲಿ ಲೋಪದೋಷಗಳಿವೆ. ಅದನ್ನು ಸರಿಪಡಿಸಬೇಕು. ನೀವೆಲ್ಲಾ ಸಲಹೆ ಸೂಚನೆ ಕೊಡಿ ಎಂದು ಕೇಳಿದ್ರೂ,  ಇದುವರೆಗೂ ಆ ಸಲಹೆ ಸೂಚನೆಗಳು ಫೈನಲೈಸ್ ಆಗಿಲ್ಲ ಎಂದು ಹೆಚ್.ಎನ್ ನಾಗಮೋಹನ್ ದಾಸ್ ಹೇಳಿದ್ದಾರೆ

ಎಕನಾಮಿಕಲ್ ವೀಕರ್ ಸೆಕ್ಷನ್

ಸಂವಿಧಾನದಲ್ಲಿ ಶೈಕ್ಷಣಿಕವಾಗಿ ಸಾಮಾಜಿಕವಾಗಿ ಹಿಂದುಳಿದವರಿಗೆ ಮೀಸಲಾತಿ ಸವಲತ್ತುಗಳನ್ನು ಕೊಡಬಹುದು ಎಂದಿದೆ. ಆ ಮಾನದಂಡದಲ್ಲಿಯೇ ಎಸ್ಸಿ ಎಸ್ಟಿ ಓಬಿಸಿ ಮೈನಾರಿಟಿಯವರಿಗೆ ಮೀಸಲಾತಿ ಕೊಡಲಾಗಿದೆ. ಆದರೆ ಸಂವಿದಾನದಲ್ಲಿ ಎಲ್ಲೂ ಕೂಡ ಆರ್ಥಿಕವಾಗಿ ಹಿಂದುಳಿದ ವರ್ಗ ಎಂಬುದು ಇಲ್ಲ. ಈಗ ಎಕನಾಮಿಕಲ್ ವೀಕರ್ ಸೆಕ್ಷನ್ ಅಡಿ 10 ಪರ್ಸೆಂಟ್ ಮೀಸಲಾತಿ ನೀಡಲಾಗಿದೆ. ಸುಪ್ರೀಂಕೋರ್ಟ್ ಅದನ್ನು ಎತ್ತಿ ಹಿಡಿದಿದೆ. ನನ್ನ ಅಭಿಪ್ರಾಯದಲ್ಲಿ ಇ ಡಬ್ಲು ಎಸ್ ಕೊಟ್ಟಿರುವುದು ತಪ್ಪು ,ಸುಪ್ರೀಂಕೋರ್ಟ್ ಜಡ್ಜ್​ಮೆಂಟ್ ಕೂಡ ತಪ್ಪು. ಈ ಜಡ್ಜ್​​ಮೆಂಟ್​ನ್ನು ಪುನರ್ ಪರಿಶೀಲಿಸುವ ಅಗತ್ಯವಿದೆ ಎಂದು ನಾಗಮೋಹನ್ ದಾಸ್ ಹೇಳಿದ್ದಾರೆ.

ಸುಪ್ರೀಂಕೋರ್ಟ್ ಜಡ್ಜ್​ಮೆಂಟ್​ ಮೇಲೆ ಇನ್ನೊಂದು ಅಪೀಲ್ ಇಲ್ಲ. ಆದರೆ ಸುಪ್ರೀಂಕೋಟ್​ಗೆ ಪುನರ್ ಪರಿಶೀಲನೆಗೆ ಅವಕಾಶ ಕೋರಿ ಅರ್ಜಿ ಸಲ್ಲಿಸಬಹುದಾಗಿದೆ. ಈಗ  ಅರ್ಜಿ ಗಳು ಸಲ್ಲಿಕೆಯಾಗಿದ್ದು, ಸುಪ್ರೀಂಕೋರ್ಟ್ ಅರ್ಜಿಗಳನ್ನು ಪುನರ್ ಪರಿಶೀಲನೆ ಮಾಡಬೇಕೆಂಬುದೇ ನನ್ನ ಆಸೆಯಾಗಿದೆ. ಅವರು ಮಾಡಲಿಲ್ಲ ಎಂದರೇ ನಾವುಗಳು ಜನಾಭಿಪ್ರಾಯ ಮೂಡಿಸಬೇಕು ಎಂದಿದ್ಧಾರೆ. 

ಹೈವೆ ರಸ್ತೆಯಲ್ಲಿ ಕಾರಿಗೆ ಬೆಂಕಿ! ಆತಂಕ ಮೂಡಿಸಿದ ಹೊಗೆ!

ಇವತ್ತು ಬೇರೆ ಬೇರೆ ಜಾತಿಗಳು ಮೀಸಲಾತಿಗಾಗಿ ಬೇಡಿಕೆ ಇಟ್ಟಿದೆ. ಇದಕ್ಕೆ ಕಾರಣ ಕೃಷಿ ಬಿಕ್ಕಟ್ಟು, ಈ ಸಮುದಾಯಗಳಲ್ಲಿ ಶೇಕಡಾ 80 ರಷ್ಟು ಮಂದಿ ಕೃಷಿ ಅವಲಂಬಿತರಾಗಿದ್ದಾರೆ. ಇವರಿಗೆ ಮಕ್ಕಳನ್ನು ಓದಿಸಲು ಸಾಧ್ಯವಾಗುತ್ತಿಲ್ಲ ಓದಿದ ಮಕ್ಕಳಿಗೆ ಉದ್ಯೋಗ ಲಭಿಸುತ್ತಿಲ್ಲ. ಇವರಲ್ಲಿ ಬಹುತೇಕರು ಸರ್ಕಾರಿ ಉದ್ಯೋಗಿ ಆಕಾಂಕ್ಷಿಗಳಾಗಿದ್ದಾರೆ. ಆದರೆ ಸರ್ಕಾರ ನೂರಕ್ಕೆ ನೂರು ಪರ್ಸೆಂಟ್ ಮೀಸಲಾತಿಯನ್ನು ಜಾರಿಗೆ ತಂದರೂ ಈ ಸಮಸ್ಯೆ ಬಗೆಹರಿಯುವುದಿಲ್ಲ. ದೇಶದಲ್ಲಿ ಕೃಷಿ ಬಿಕ್ಕಟ್ಟನ್ನು ಬಗೆಹರಿಸದ ಹೊರತು ಮೀಸಲಾತಿ ಒಳಮೀಸಲಾತಿ ಸಮಸ್ಯೆಗೆ ಪರಿಹಾರವಿಲ್ಲ, ಇನ್ನು ಯಾರನ್ನು ಎಸ್ಸಿಗೆ ಎಸ್ಟಿಗೆ ಓಬಿಸಿಗೆ ಸೇರಿಸಬೇಕೆಂಬ ನಿಯಮ  ಇಲ್ಲ. ಕೋಡಿಫೈಡ್ ಗೈಡ್ ಲೈನ್ಸ್ ಇಲ್ಲ. ಯಾರನ್ನು ಎಲ್ಲಿಗೆ ನಿಲ್ಲಿಸಬೇಕು ಎಂಬುದನ್ನು ಮೊದಲು ಗೈಡ್ ಲೈನ್ ಮಾಡಲಿ. ಈ ಗೈಡ್ ಲೈನ್ ಇಲ್ಲದೆ ಮೀಸಲಾತಿ ಮಾಡುತ್ತಿರುವುದು ರಾಜಕೀಯದ ಓಟ್ ಗಾಗಿ ನಡೆಯುತ್ತಿರುವ ಹುನ್ನಾರವಷ್ಟೆ. ದೇಶದ ಒಟ್ಟಾರೇ ಉದ್ಯೋಗವಕಾಶಗಳು ಶೇಕಡಾ 98 ರಷ್ಟು ಖಾಸಗಿ ಕ್ಷೇತ್ರದ ಕೈಯಲ್ಲಿದೆ . ಅಲ್ಲಿ ಮೀಸಲಾತಿ ಇಲ್ಲ.  ಶೇಕಡಾ 2 ರಷ್ಟು ಮೀಸಲಾತಿಗೆ ಉದ್ಯೋಗವಕಾಶಗಳು ಸಿಗುವುದು ತೀರ ಕಡಿಮೆ. ದೇಶದಲ್ಲಿ ಕೇಂದ್ರ ಮತ್ತು ಬೇರೆ ರಾಜ್ಯಗಳ ಒಟ್ಟು 60 ಲಕ್ಷದ 40 ಸಾವಿರ ಮಂಜೂರಾದ ಉದ್ಯೋಗಗಳು ಖಾಲಿ ಉಳಿದಿದೆ. 1998 ರಲ್ಲಿ ದೇಶದಲ್ಲಿ ಮಿಸ್ ಇನ್ ವೆಸ್ಟ್ ಮೆಂಟ್ ಎಂಬ ಪ್ರಕ್ರಿಯೆಯಲ್ಲಿ ಕೋಟ್ಯಾಂತರ ಮೌಲ್ಯದ ಪಬ್ಲಿಕ್ ಸೆಕ್ಟರ್ ಪ್ರಾಪರ್ಟಿ ಖಾಸಗಿ ಕ್ಷೇತ್ರದ ಪಾಲಾಗಿದೆ. ಖಾಸಗಿ ಕ್ಷೇತ್ರಕ್ಕೆ ಹೋದರೆ ಮೀಸಲಾತಿ ಸಿಗುತ್ತಾ?  ಇದು ಸಾಲದೆಂಬಂತೆ ಇಂದು ಸರ್ಕಾರಿ ಕೆಲಸದಲ್ಲಿ ಕಾಂಟ್ರಾಕ್ಟ್ ಲೇಬರ್ ಸಿಸ್ಟಮ್ ಜಾರಿಗೆ ತರಲಾಗಿದೆ. ಹೊರ ಮತ್ತು ಒಳ ಗುತ್ತಿಗೆಯಲ್ಲೂ ಮೀಸಲಾತಿ ಇಲ್ಲ. ಅಲ್ಲಿಗೆ ಮೀಸಲಾತಿ ಏನಾಯ್ತು. ಮೀಸಲಾತಿ ಎಂಬುದರ ಸುತ್ತ ಸುತ್ತುವುದನ್ನು ಕಡಿಮೆ ಮಾಡಬೇಕು. ನಾನು ಮೀಸಲಾತಿ ವಿರೋಧಿಯಲ್ಲ. ಇರೋ ಮೀಸಲಾತಿಯನ್ನು ಮುಂದುವರೆಸಿಕೊಂಡು ಹೋಗಿ. ಆದರೆ ಅದಕ್ಕಿಂತ ಹೆಚ್ಚಾಗಿ ಎಲ್ಲರಿಗೂ ಉದ್ಯೋಗ ಮತ್ತು ಶಿಕ್ಷಣ ಸಿಗುವಂತ ಯೋಜನೆಯನ್ನು ಸರ್ಕಾರ ರೂಪಿಸಬೇಕು. ಎಲ್ಲಾ ಜಾತಿ ಧರ್ಮದಲ್ಲಿ ಕೂಡ ಬಡವರಿದ್ದಾರೆ. ಎಲ್ಲಾ ಬಡವರಲ್ಲಿ ಪ್ರತಿಭೆಗಳಿವೆ. ಈ ಎಲ್ಲಾ ಪ್ರತಿಭೆಗಳನ್ನು ಪ್ರೋತ್ಸಾಹ ಕೊಡಬೇಕಿದೆ ಎಂದು ನಾಗಮೋಹನ್ ದಾಸ್ ಅಭಿಪ್ರಾಯ ಪಟ್ಟಿದ್ದಾರೆ. ಪತ್ರಿಕಾ ಸಂವಾದದಲ್ಲಿ ಹಿರಿಯ ವಕೀಲ ಶ್ರೀಪಾಲ್ ನಾಗಮೋಹನ್ ದಾಸ್ ಪರಿಚಯ ಮಾಡಿಕೊಟ್ಟರು. ಪ್ರೆಸ್ ಟ್ರಸ್ಟ್ ಅಧ್ಯಕ್ಷ ಎನ್. ಮಂಜುನಾಥ್ ಹಾಗು ಕಾರ್ಯದರ್ಶಿ ನಾಗರಾಜ್ ನೇರಿಗೆ ಉಪಸ್ಥಿತರಿದ್ದರು.

ನಂದಿನಿ ಜಂಬೋ ಪಾಕೆಟ್ ಹಾಲಿನ ದರ 3 ರೂಪಾಯಿ ಹೆಚ್ಚಳ!

Facebook ನಲ್ಲಿ ನಮ್ಮ ಪೇಜ್​ ನೋಡಿ : Malenadutoday.com

Twitter ನಲ್ಲಿ ನಾವಿದ್ದೇವೆಫಾಲೋ ಮಾಡಿ : Malenadutoday.com

Instagram ನಲ್ಲಿ ಕ್ಲಿಕ್​ ಮಾಡಿ : Malenadutoday.com

Telegram ನಲ್ಲಿ ಸುದ್ದಿ ಪಡೆಯಲು ಲಿಂಕ್ ಒತ್ತಿ : Malenadutoday.com