ಕುವೆಂಪು ವಿಶ್ವವಿದ್ಯಾಲಯದ ವೆಬ್​ಸೈಟ್ ಹ್ಯಾಕ್ ! ಆಮೇಲಾನಾಯ್ತು?

SHIVAMOGGA |  Dec 21, 2023  |   ಶಿವಮೊಗ್ಗದ ಪ್ರತಿಷ್ಟಿತ ಕುವೆಂಪು ವಿಶ್ವವಿದ್ಯಾಲಯದ ಅಧಿಕೃತ ವೆಬ್​ಸೈಟ್ ಹ್ಯಾಕ್ ಆಗಿರುವ ಬಗ್ಗೆ ಮಾಹಿತಿಯೊಂದು ಹೊರಬಿದಿದ್ದೆ. Save palestine ಎಂಬ ಬರಹ ಬರುವಂತೆ ಕುವೆಂಪು ವಿವಿ ವೆಬ್ ಸೈಟ್ ಹ್ಯಾಕ್ ಮಾಡಲಾಗಿದೆ. ನಿನ್ನೆ ರಾತ್ರಿ ಈ ಕೃತ್ಯವೆಸಗಲಾಗಿದೆ ಎಂದು ತಿಳಿದು ಬಂದಿದೆ. 

READ : ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ಏನೆಲ್ಲಾ ಕೆಲಸಗಳು ಆಗ್ತಿದೆ ಗೊತ್ತಾ? ತಾಂತ್ರಿಕ ದೋಷಕ್ಕೆ ಯಾವಾಗ ಸಿಗುತ್ತೆ ಮುಕ್ತಿ? ಇಲ್ಲಿದೆ ರಿಪೋರ್ಟ್

ಇನ್ನೂ ಈ ರೀತಿ ಆದ ಬಳಿಕ ಕುವೆಂಪು ವಿವಿ ವೆಬ್ಸೈಟ್​ ಓಪನ್ ಆಗುತ್ತಿಲ್ಲ ಎಂಬ ದೂರುಗಳು ಸಹ ಕೇಳಿಬಂದಿದೆ. ಇನ್ನೂ ಮಾಧ್ಯಮ ವರದಿ ಪ್ರಕಾರ,  ಕಲೀಮಲ್ಯಾಂಗ್ ಬ್ಲಾಕ್ ಹ್ಯಾಟ್ ಟೀಂ ಎಂಬ ಗ್ಯಾಂಗ್​  ಈ ಕೃತ್ಯವೆಸಗಿದೆ ಎನ್ನಲಾಗುತ್ತಿದೆ. 

ಸೇವ್ ಪ್ಯಾಲೆಸ್ಟೈನ್- ಇಸ್ರೇಲ್ ಡಾಗ್ ಎಂದು ವೆಬ್ಸೈಟ್ ನಲ್ಲಿ ಹ್ಯಾಕರ್ಸ್​ ನಮೂದಿಸಿದ್ದಾರೆ. ಇನ್ನೂ ಈ ಘಟನೆ ಬೆನ್ನಲ್ಲೆ  ವೆಬ್ಸೈಟ್ ನ್ನ  ವಿವಿ ಟೆಕ್ನಿಕಲ್ ಟೀಂ ಡೌನ್ ಮಾಡಿದೆ.  ಅಲ್ಲದೆ ಈ ಸಂಬಂಧ ಪೊಲೀಸರಿಗೆ ದೂರು ನೀಡುವ ಪ್ರಯತ್ನಗಳು ನಡೆಯುತ್ತಿವೆ ಎಂಬ ಮಾಹಿತಿ ಲಭ್ಯವಾಗಿದೆ. 


Leave a Comment