ಸುದ್ದಿಯ ಸ್ಥಳ: Shivamogga district, Karnataka
ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ : ಇತ್ತೀಚಿನ ಯವಜನತೆ ಸಾಮಾಜಿಕ ಜಾಲತಾಣಕ್ಕೆ ಒಗ್ಗಿ ಹೋಗಿದ್ದಾರೆ. ಪೇಸ್ಬುಕ್ ಇನ್ಸ್ಟಾಗ್ರಾಮ್ ನೋಡುತ್ತಾ ರೀಲ್ಸ್ ಮಾಡುತ್ತ ಟೈಮ್ ಪಾಸ್ ಮಾಡ್ತಿದ್ದಾರೆ. ಅದರಲ್ಲೂ ಕೆಲವರು ಎರಡ್ಮೂರು ಫೇಕ್ ಇನ್ಸ್ಟಾಗ್ರಾಮ್ ಅಕೌಂಟ್ ಮಾಡಿಕೊಂಡು ಬೇರೆಯವರನ್ನು ಯಾಮಾರ್ಸ್ತಾ ಇರ್ತಾರೆ. ಆದರೆ ಶಿವಮೊಗ್ಗದಲ್ಲೊಂದು ನಡೆದ ಘಟನೆಯಲ್ಲಿ ಕಿಡಿಗೇಡಿಗಳು ಪೇಕ್ ಅಕೌಂಟ್ ಒಂದನ್ನು ತೆರೆದು ಅದಕ್ಕೆ ಯುವತಿಯ ಪೋಟೋ ಗಳನ್ನು ಅಪ್ಲೋಡ್ ಮಾಡಿ ಅದಕ್ಕೆ ಕಾಲ್ ಗರ್ಲ್ ಶಿವಮೊಗ್ಗ ಎಂಬ ಹೆಸರಿಟ್ಟು ಗೌರವಕ್ಕೆ ದಕ್ಕೆ ತಂದಿರುವ ಘಟನೆ ನಡೆದಿದೆ.
ಹೌದು ಶಿವಮೊಗ್ಗದ ಯುವತಿಯೊಬ್ಬರು ಹೀಗೆ ಇನ್ಸ್ಟಾಗ್ರಾಮ್ ನೊಡ್ತಿದ್ದಾಗ callgirl_shivamogga ಎಂಬ ಇನ್ಸ್ಟಾಗ್ರಾಮ್ ಖಾತೆ ಕಾಣಿಸಿದೆ. ಅದನ್ನು ನೋಡಿದ ಕೂಡಲೇ ಯುವತಿಗೆ ಒಮ್ಮೆ ದಿಗಿಲು ಬಡಿದಂತಾಗಿದೆ. ಏಕೆಂದರೆ ಆರೋಪಿಗಳು ಯುವತಿಯ ಪೋಟೊವನ್ನು ಯಾವುದೋ ಸಾಮಾಜಿಕ ಜಾಲತಾಣದಿಂದ ಕದ್ದು ಆ ಡಿಪಿ ಗೆ ಯವತಿಯ ಪೋಟೋವನ್ನ ಬಳಿಸಿಕೊಂಡಿದ್ದಾರೆ ಎಂದು ಆರೋಪಿಸಲಾಗಿದೆ.
ಅಷ್ಟೇ ಅಲ್ಲದೆ ಯುವತಿ ಪಿಚಿತ ಯುವರೊಂದಿಗೆ ತೆಗೆಸಿಕೊಮಡಿದ್ದ ಪೋಟೋವನ್ನು ಸಹ ಯವತಿಯ ಸಂಬಂಧಿಕರಿಗೆ ಕಳುಹಿಸಿ. ನಂತರ ಯುವತಿಗೆ ಅಶ್ಲೀಲವಾಗಿ ಮೆಸೇಜ್ ಮಾಡಿ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಲಾಗಿದೆ,. ಈ ಹಿನ್ನೆಲೇ ಶಿವಮೊಗ್ಗದ ಸಿ ಇ ಎನ್ ಪೊಲೀಸ್ ಠಾಣೆಯಲ್ಲಿ ಆರೋಪಿಗಳ ವಿರುದ್ದ ಪ್ರಕರಣ ದಾಖಲಾಗಿದೆ.
