JP BIG EXCLUSIVE : ಸಕ್ರೆಬೈಲ್ ಅನೆ ಬಿಡಾರದಿಂದ ಮತ್ತೆ ಮೂರು ಆನೆಗಳ ಸ್ಥಳಾಂತರಕ್ಕೆ ಬೇಡಿಕೆ!

JP BIG EXCLUSIVE: Demand for relocation of three more elephants from shimoga sakrebailu elephant camp

JP BIG EXCLUSIVE :  ಸಕ್ರೆಬೈಲ್ ಅನೆ ಬಿಡಾರದಿಂದ ಮತ್ತೆ ಮೂರು ಆನೆಗಳ ಸ್ಥಳಾಂತರಕ್ಕೆ ಬೇಡಿಕೆ!
JP BIG EXCLUSIVE : ಸಕ್ರೆಬೈಲ್ ಅನೆ ಬಿಡಾರದಿಂದ ಮತ್ತೆ ಮೂರು ಆನೆಗಳ ಸ್ಥಳಾಂತರಕ್ಕೆ ಬೇಡಿಕೆ!

MALENADUTODAY.COM |  JP BIG EXCLUSIVE

ಇತ್ತೀಚೆ್ಗೆ ಸಕ್ರೆಬೈಲ್​ ಆನೆ ಬಿಡಾರದಿಂದ ಮಧ್ಯಪ್ರದೇಶಕ್ಕೆ ಎರಡು ಆನೆಗಳನ್ನು ಶಿಫ್ಟ್ ಮಾಡಲಾಗಿತ್ತು. ನಾಲ್ಕು ಆನೆಗಳ ಪೈಕಿ, ಎರಡು ಖಟುಮಸ್ತಾದ ಆನೆಗಳನ್ನು ಉತ್ತರ ಭಾರತದ ಅರಣ್ಯ ಇಲಾಖೆ, ಮಧ್ಯಪ್ರದೇಶದಲ್ಲಿರುವ ಹುಲಿ ಸಂರಕ್ಷಿತ ಪ್ರದೇಶಕ್ಕೆ ಶಿಫ್ಟ್ ಮಾಡಿದೆ. ಇದರ ಬೆನ್ನೆಲ್ಲೆ, ಶಿವಮೊಗ್ಗದ ಸಕ್ರೆಬೈಲ್​ ಆನೆ ಬಿಡಾರದಿಂದ (shimoga sakrebailu elephant)ಮತ್ತೆ ಮೂರು ಆನೆಗಳ ಸ್ಥಳಾಂತರಕ್ಕೆ ಉತ್ತರ ಭಾರತದಿಂದ ಬೇಡಿಕೆ ಬಂದಿದೆ. ಈ ಸಂಬಂಧ ರಾಜ್ಯದ ಅರಣ್ಯ ಇಲಾಖೆಗೆ ಬೇಡಿಕೆಯನ್ನು ಸಹ ಸಲ್ಲಿಸಲಾಗಿದೆ.

ಸಕ್ರೆಬೈಲ್ ಆನೆ ಬಿಡಾರದ ಆರು ವರ್ಷದ ಐರಾವತ, ನಾಲ್ಕು ವರ್ಷದ ಧನುಶ್​ 14 ವರ್ಷದ ಆಲೆ ಆನೆಗಳನ್ನು ಉತ್ತರ ಭಾರತದ ಮಧ್ಯಪ್ರದೇಶಕ್ಕೆ ಶಿಫ್ಟ್ ಮಾಡುವ ಸಾಧ್ಯತೆ ಇದೆ. ಇತ್ತೀಚೆಗೆ ಆನೆಗಳನ್ನು ತೆಗೆದುಕೊಂಡು ಹೋಗಲು ಬಂದಿದ್ದ ಅಧಿಕಾರಿಗಳ ತಂಡ, ಈ ಮೂರು ಆನೆಗಳನ್ನು ಆಯ್ಕೆಮಾಡಿ, ಅವುಗಳನ್ನು ತಮಗೆ ನೀಡುವಂತೆ ಅರಣ್ಯ ಇಲಾಖೆಗೆ ನೀಡಿದೆ. ಇನ್ನೂ ಈ ಸಂಬಂಧ ಅರಣ್ಯ ಇಲಾಖೆ ತನ್ನ ಟೇಬಲ್​ ಮೇಲಿನ ಪ್ರಸ್ತಾಪವನ್ನು ಸರ್ಕಾರಕ್ಕೆ ಕಳುಹಿಸಿ ಅನುಮೋದನೆ ಪಡೆದುಕೊಳ್ಳಬೇಕಿದೆ. 

Sakrebail elephant camp : ಬೆಂಗಳೂರು ಗಣೇಶ, ಮಣಿಕಂಠನನ್ನ ಬಿಟ್ಟು ಶಿವ,ರವಿಯನ್ನು ಕರೆದುಕೊಂಡು ಮಧ್ಯಪ್ರದೇಶಕ್ಕೆ ಹೊರಟ ಟೀಂ! ಸಕ್ರೆಬೈಲ್​ ಆನೆ ಬಿಡಾರದಲ್ಲಿ ನಡೆದಿದ್ದೇನು?

ಆನೆ ಸ್ಥಳಾಂತರ ಖಾಲಿಯಾಗುವುದೇ ಬಿಡಾರ!? 

ಇನ್ನೂ ಕಳೆದ ಒಂದು-ಒಂದುವರೆ ವರ್ಷದ ಅವಧಿಯಲ್ಲಿ ರಾಜ್ಯ ಹಲವು ಬಿಡಾರಗಳಿಂದ ಸಾಕಷ್ಟು ಆನೆಗಳು ಉತ್ತರ ಭಾರತಕ್ಕೆ ಶಿಫ್ಟ್​ ಆಗಿದೆ. ಅಲ್ಲಿ ಅವುಗಳ ಇರುವಿಕೆ ಹಾಗೂ ಹೊಂದಾಣಿಕೆಯ ಬಗ್ಗೆ ಸ್ಪಷ್ಟ ಮಾಹಿತಿಗಳು ಲಭ್ಯವಾಗಿಲ್ಲ. ಅದರ ನಡುವೆ ಆನೆಗಳನ್ನು ಸ್ಥಳಾಂತರಗೊಳಿಸುವ ಪ್ರಕ್ರಿಯೆಗಳು ಮುಂದುವರಿದಿದೆ. ಮೇಲಾಗಿ, ಇದಕ್ಕೆ ರಾಜ್ಯಸರ್ಕಾರವೂ ಸಹ ಅನುಮತಿಯನ್ನು ನೀಡುತ್ತಿದೆ. ಇನ್ನೊಂದೆಡೆ ಈ ಸ್ಥಳಾಂತರಕ್ಕೆ ಅರಣ್ಯಪ್ರೇಮಿಗಳಿಂದ ವಿರೋಧವೂ ವ್ಯಕ್ತವಾಗುತ್ತಿದೆ. ಹೀಗೆ ಬಿಡಾರಗಳಿಂದ ಆನೆಗಳನ್ನು ಬೇರೆಡೆಗೆ ಶಿಫ್ಟ್ ಮಾಡಿದರೆ, ಪ್ರವಾಸೋದ್ಯಮದ ಮೇಲೂ ಪರಿಣಾಮ ಬೀರುವುದಷ್ಟೆ ಅಲ್ಲದೆ,  ಆನೆಕ್ಯಾಂಪ್​ಗಳನ್ನು ಖಾಲಿ ಮಾಡಿದಂತಾಗುವುದಿಲ್ಲವೇ ಎಂಬ ಪ್ರಶ್ನೆ ಕೇಳಿಬರುತ್ತಿದೆ. 

ಒಂದು ಬಿಡಾರ-10 ಆನೆಗಳಿಗಷ್ಟೆ ಸೀಮಿತ

ಇನ್ನೂ ಸದ್ಯ ಸಿಕ್ಕಿರುವ ಮಾಹಿತಿ ಪ್ರಕಾರ, ಅರಣ್ಯ ಇಲಾಖೆಯ ಮೇಲ್ಪಂಕ್ತಿಯ ಅಧಿಕಾರಿಗಳ ಎದುರಿಗೆ ಬಂದಿರುವ ಸ್ಥಳಾಂತರದ ಪ್ರಸ್ತಾವನೆಯು ಸರ್ಕಾರದ ಮುಂದೆ ಬರುತ್ತದೆ. ಈ ವೇಳೆ ಅರಣ್ಯ ಇಲಾಖೆಯ ಅಧಿಕಾರಿಗಳು ಸಚಿವರು ಹಾಗೂ ಸರ್ಕಾರಕ್ಕೆ ವಿಚಾರವನ್ನು ಮನವರಿಕೆ ಮಾಡಿಕೊಡುತ್ತಾರೆ. ಈ ಮಧ್ಯೆ ಹೈಕೋರ್ಟ್ ಆದೇಶದ ಪ್ರಕಾರ, ಒಂದು ಕ್ಯಾಂಪ್​ನಲ್ಲಿ 10 ಆನೆಗಳಷ್ಟೆ ಇರಬೇಕು ಎಂಬ ನಿಯಮವಿದೆ. ಇದು ಸಹ ಆನೆಗಳ ವರ್ಗಾವಣೆಯಲ್ಲಿ ಮುಖ್ಯ ಅಂಶವಾಗಿ ಗಮನ ಸೆಳೆಯಲಿದೆ. ಒಟ್ಟಾರೆ, ಎರಡು ಆನೆಗಳ ಬೆನ್ನಲ್ಲೆ ಇದೀಗ ಮತ್ತೆ ಮೂರು ಆನೆಗಳ ವರ್ಗಾವೆಣೆಗೆ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಈ ಆನೆಗಳ ವರ್ಗಾವಣೆ ಸಕ್ರೆಬೈಲ್ ಬಿಡಾರದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ.  


ನಮ್ಮ ವಾಟ್ಸ್ಯಾಪ್ ಗ್ರೂಪ್ ಲಿಂಕ್ ಇದು  ಕ್ಲಿಕ್ ಮಾಡಿ

Facebook ನಲ್ಲಿ ನಮ್ಮ ಪೇಜ್​ ನೋಡಿ : Malenadutoday.com

Twitter ನಲ್ಲಿ ನಾವಿದ್ದೇವೆಫಾಲೋ ಮಾಡಿ : Malenadutoday.com

Instagram ನಲ್ಲಿ ಕ್ಲಿಕ್​ ಮಾಡಿ : Malenadutoday.com

Telegram ನಲ್ಲಿ ಸುದ್ದಿ ಪಡೆಯಲು ಲಿಂಕ್ ಒತ್ತಿ : Malenadutoday.com