ಶಿವಮೊಗ್ಗ ಜಿಲ್ಲೆಯ ಶೆಟ್ಟಿಹಳ್ಳಿ ಅಭಯಾರಣ್ಯದಲ್ಲಿ ಈ ಮೊದಲು ಕೇವಲ ಮೂರು ನಾಲ್ಕು ಕಾಡಾನೆಗಳು ಇವೆ ಎಂದೇ ನಂಬಲಾಗಿತ್ತು. ಆದರೆ ಇದೀಗ ಈ ಶೆಟ್ಟಿಹಳ್ಳಿಯ ಕಾಡಲ್ಲಿ 15 ಕ್ಕೂ ಹೆಚ್ಚು ಕಾಡಾನೆಗಳಿವೆ ಎಂದು ಸ್ಥಳೀಯರು ಹೇಳುತ್ತಿದ್ಧಾರೆ. ಅಲ್ಲದೆ ಈ ಆನೆಗಳು ಈಗೀಗ ಬಯಲಿಗೆ ಬಂದು ಘೀಳಿಡುವುದು, ಪ್ರಾಣಿಗಳನ್ನ ಬೆದರಿಸುವುದು , ಅಲ್ಲಲ್ಲಿ ಓಡಾಡುವುದು ಮಾಡುತ್ತಿವೆ ಎಂದು ಸ್ಥಳೀಯರು ಹೇಳುತ್ತಿದ್ಧಾರೆ.
ಇದಕ್ಕೆ ಸಾಕ್ಷಿ ಎಂಬಂತೆ ಸಕ್ರೆಬೈಲು ಗ್ರಾಮದ ಸನಿಹವೇ ಹಾಡಹಗಲೇ ಕಾಡಾನೆಯೊಂದು ಕಾಣಿಸಿಕೊಂಡು ರೌದ್ರಾವತಾರ ಮೆರೆದಿದೆ. ಸನಿಹದಲ್ಲಿಯೇ ಕಾಡಾನೆಗಳನ್ನು ಪಳಗಿಸುವ ಕ್ರಾಲ್ ಇದ್ದು ಮಾವುತ ಕಾವಾಡಿಗಳು ಅಲ್ಲೇ ಬೀಡುಬಿಟ್ಟಿದ್ದಾರ. ಅಣತಿ ದೂರದಲ್ಲಿದ್ದ ಕಾಡಾನೆ ಬಿಡಾರದ ಆನೆಗಳ ಹಿಂಡು ನೋಡುತ್ತಿದ್ದಂತೆ ಕಾಲ್ಕಿತ್ತಿದೆ.
ಇತ್ತ ಮಾವುತ ಕಾವಾಡಿಗಳು ಸಹ ಕಾಡಾನೆಯನ್ನು ಹಿಮ್ಮೆಟ್ಟಿಸಲು ಸಾಕಾನೆಗಳನ್ನು ಸಜ್ಜುಗೊಳಿಸಿದ್ದರು. ನರಿ ಕಾಲಿಗೆ ಬುದ್ದಿ ಹೇಳಿತು ಎಂಬಂತೆ ಕಾಡಾನೆ ಖೆಡ್ಡಾದತ್ತ ಸುಳಿಯದೇ ವಾಪಸ್ಸಾಯಿತು. ಜೊತೆಯಲ್ಲಿ ಸ್ಥಳೀಯರು ಸಾಕಿದ್ದ ನಾಯಿಗಳು ಕಾಡಾನೆಯನ್ನು ಚೂರು ಮುಂದಕ್ಕೆ ಬರಲು ಬಿಡದೇ ಬೆದರಿಸಿ, ವಾಪಸ್ ಕಳಿಸಿವೆ. ಈ ಮಧ್ಯೆ ಎರಡು ಮೂರು ಸಲ ಆನೆ ದಾಳಿ ಮಾಡುವಂತೆ ಮುಂದೆ ಬಂದು ಹೆದರಿಸದರೂ ಸಹ ಆನಂತರ ವಾಪಸ್ ಕಾಡಿಗೆ ಹೋಯಿತು.
ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕಿನ ಆನಂದಪುರದ ಬಳಿ ಭೀಕರ ಅಪಘಾತ! ಭದ್ರಾವತಿಯ ಯುವತಿ ಸಾವು
ಸಕ್ರೆಬೈಲು ಗ್ರಾಮದ ಕಾಡಿಗೆ ಎಲಿಫೆಂಟ್ ಟ್ರೆಂಚ್ ಹೊಡೆಯಲಾಗಿದೆ, ಹಾಗಿದ್ದರೂ ಕೆಲವೆಡೆ ಇರುವ ಗ್ಯಾಪ್ ನಲ್ಲಿ ಕಾಡಾನೆ ನುಸುಳಿಕೊಂಡು ಅನಾಯಾಸವಾಗಿ ಗ್ರಾಮದವರೆಗೂ ಬಂದು ಹೋಗುತ್ತಿದೆ. ಶೆಟ್ಟಿಹಳ್ಳಿ ಕಾಡಿನಲ್ಲಿ 15 ಕ್ಕೂ ಹೆಚ್ಚು ಕಾಡಾನೆಗಳಿವೆ ಎಂದು ಅಂದಾಜಿಸಲಾಗಿದೆ. ಈ ಹಿಂದಿದ್ದ ಡಿಸಿಎಫ್ ನಾಗರಾಜ್ ಹೇಳುವಂತೆ ಇಪ್ಪತ್ತಕ್ಕು ಹೆಚ್ಚು ಕಾಡಾನೆಗಳು ಶೆಟ್ಟಿಹಳ್ಳಿ ಕಾಡಿನಲ್ಲಿ ಆಶ್ರಯ ಪಡೆದುಕೊಂಡಿವೆ. ಬಿಡಾರದ ಹೆಣ್ಣು ಸಾಕಾನೆಗಳು ಆವುಗಳ ಆಕರ್ಷಣೆಯಾಗಿದೆ ಎಂದು ಹೇಳಿದ್ದಾರೆ.
ಈ ಕಾಡಾನೆಗಳಿಂದ ಈವರೆಗೂ ಉಪಟಳವಿರಲಿಲ್ಲ. ಕೇವಲ ಮೂರು ಕಾಡಾನೆಗಳಿದ್ದ ಶೆಟ್ಟಿಹಳ್ಳಿ ಕಾಡು ಈಗ ಇಪ್ಪತ್ತಕ್ಕು ಹೆಚ್ಚು ಕಾಡಾನೆಗಳನ್ನು ಹೊಂದಿದ ಪ್ರದೇಶವಾಗಿದೆ. ಹೀಗಾಗಿಯೇ ಶೆಟ್ಟಿಹಳ್ಳಿ ಅಭಯಾರಣ್ಯ ವ್ಯಾಪ್ತಿಯ ಕಾಡಂಚಿನ ಗ್ರಾಮಗಳಿಗೆ ಲಗ್ಗೆ ಇಡುತ್ತಿರುವ ಕಾಡಾನೆಗಳು ತೋಟ ಬಾಳೆ ಕಬ್ಬಿನ ಗದ್ದೆಯನ್ನೇ ನಾಶ ಪಡಿಸುತ್ತಿವೆ. ಇತ್ತಿಚ್ಚಗೆ ರೈತರ ಹೊಲಕ್ಕೆ ನುಗ್ಗಿದ ಎರಡು ಕಾಡಾನೆಗಳು ಅಕ್ರಮ ವಿದ್ಯುತ್ ತಂತಿಗೆ ಸಿಲುಕಿ ಪ್ರಾಣಬಿಟ್ಟ ಘಟನೆ ಇನ್ನು ಹಸಿರಾಗಿಯೇ ಇದೆ. ಕಾಡಾನೆಗಳ ಸಂಖ್ಯೆ ದಿನದಿನಕ್ಕೂ ಹೆಚ್ಚುತ್ತಿರುವ ಸಂದರ್ಭದಲ್ಲಿ ಅರಣ್ಯಾಧಿಕಾರಿಗಳು ಎಚ್ಚೆತ್ತುಕೊಳ್ಳಬೇಕಿದೆ. ಮಾನವ ಮತ್ತು ಆನೆಯ ಸಂಘರ್ಷ ಹೆಚ್ಚಾಗದಂತೆ ತಡೆಯುವಲ್ಲಿ ಕಟ್ಟುನಿಟ್ಟಿನ ಕ್ರಮ ಹಾಗು ಜಾಗೃತ ಕಾರ್ಯಕ್ರಮಗಳನ್ನು ರೂಪಿಸಬೇಕಿದೆ. ಆನೆಗಳನ್ನು ಹಿಮ್ಮೆಟ್ಟಿಸಬೇಕಾದಂತ ಪ್ರದೇಶದಲ್ಲಿ ಕ್ಯಾಂಪ್ ಗಳನ್ನು ತೆರೆಯಬೇಕಿದೆ.
Facebook ನಲ್ಲಿ ನಮ್ಮ ಪೇಜ್ ನೋಡಿ : Malenadutoday.com
Twitter ನಲ್ಲಿ ನಾವಿದ್ದೇವೆ, ಫಾಲೋ ಮಾಡಿ : Malenadutoday.com
Instagram ನಲ್ಲಿ ಕ್ಲಿಕ್ ಮಾಡಿ : Malenadutoday.com
Telegram ನಲ್ಲಿ ಸುದ್ದಿ ಪಡೆಯಲು ಲಿಂಕ್ ಒತ್ತಿ : Malenadutoday.com