ಲಾಡ್ಜ್​ & ರೆಸಾರ್ಟ್​ ಅತಿಥಿಗಳ ಮೇಲೆ ಶಿವಮೊಗ್ಗ ಪೊಲೀಸರ ಕಣ್ಣು! 15 ದಿನದ ಮಾಹಿತಿ ಪರಿಶೀಲನೆ, ಮಾಲೀಕರಿಗೆ ನಾಲ್ಕು ಸೂಚನೆ

Shimoga police's eye on lodge & resort guests! 15-day data verification, four instructions to owners

ಲಾಡ್ಜ್​  & ರೆಸಾರ್ಟ್​ ಅತಿಥಿಗಳ ಮೇಲೆ ಶಿವಮೊಗ್ಗ ಪೊಲೀಸರ ಕಣ್ಣು! 15 ದಿನದ ಮಾಹಿತಿ ಪರಿಶೀಲನೆ, ಮಾಲೀಕರಿಗೆ ನಾಲ್ಕು ಸೂಚನೆ
ಲಾಡ್ಜ್​ & ರೆಸಾರ್ಟ್​ ಅತಿಥಿಗಳ ಮೇಲೆ ಶಿವಮೊಗ್ಗ ಪೊಲೀಸರ ಕಣ್ಣು! 15 ದಿನದ ಮಾಹಿತಿ ಪರಿಶೀಲನೆ, ಮಾಲೀಕರಿಗೆ ನಾಲ್ಕು ಸೂಚನೆ

 ಶಿವಮೊಗ್ಗ ಪೊಲೀಸರು ಇದೀಗ ಶಿವಮೊಗ್ಗ ಜಿಲ್ಲೆಯ ಲಾಡ್ಜ್​ಗಳ ಮೇಲೆ ಹದ್ದಿನ ಕಣ್ಣು ನೆಟ್ಟಿದ್ದಾರೆ, ಅಕ್ರಮ ಚಟುವಟಿಕೆಗಳಿಗೆ ಅವಕಾಶ ಸಿಗುವ ಸಾಧ್ಯತೆ ಹಿನ್ನೆಲೆಯಲ್ಲಿ ಲಾಡ್ಜ್​​ಗಳಲ್ಲಿ ಉಳಿದುಕೊಳ್ಳುವ ಅತಿಥಿಗಳ ಮಾಹಿತಿ ಬಗ್ಗೆ, ನಿಖರವಾಗಿ ದಾಖಲು ಮಾಡಲಾಗುತ್ತಿದೆಯೇ ಇಲ್ಲವೇ ಎಂದು ಪೊಲೀಸರು ಪರಿಶೀಲನೆ ನಡೆಸ್ತಿದ್ದಾರೆ. ಅಲ್ಲದೆ ಕಳೆದ 15 ದಿನಗಳಲ್ಲಿ ಲಾಡ್ಜ್​ಗಳಲ್ಲಿ ತಂಗಿರುವ ಗ್ರಾಹಕರ ಮಾಹಿತಿಯ ಬಗ್ಗೆ ಪರಿಶೀಲನೆ ನಡೆಸಿದ್ದಾರೆ. 

ಇದಕ್ಕೆ ಪೂರಕವಾಗಿ ಆಗುಂಬೆ ಪೊಲೀಸ್ ಠಾಣೆ ಪಿಎಸ್​ಐ ಶಿವಕುಮಾರ್,  ಶಿಕಾರಿಪುರ ಟೌನ್ ಪೊಲೀಸ್ ಠಾಣೆ ಪಿಎಸ್​ಐ  ಮಂಜುನಾಥ್ ಕೊಪ್ಪಲೂರು , ಮಾಳೂರು ಪೊಲೀಸ್ ಠಾಣೆ ಪಿಎಸ್​ಐ  ನವೀನ್ ಮಠಪತಿ  ತಮ್ಮ ಸ್ಟೇಷನ್​ ಲಿಮಿಟ್ಸ್​ನ  ಲಾಡ್ಜ್ / ರೆಸಾರ್ಟ್ ಗಳಿಗೆ ಭೇಟಿ ನೀಡಿ, ಲಾಡ್ಜ್ / ರೆಸಾರ್ಟ್ ಗಳಿಗೆ ಬಂದು ತಂಗಿರುವ ಗ್ರಾಹಕರ ಮಾಹಿತಿಯನ್ನು ರಿಜಿಸ್ಟರ್ ನಲ್ಲಿ ನಮೂದು ಮಾಡಿರುವದನ್ನು ಮತ್ತು ಲಾಡ್ಜ್ ಗಳಲ್ಲಿ ಸಿಸಿ ಟಿವಿ ಕ್ಯಾಮೆರಾಗಳನ್ನು ಅಳವಡಿಸಿರುವ ಬಗ್ಗೆ ಹಾಗೂ  ಅವುಗಳು ಸರಿಯಾದ ರೀತಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವುದ್ದಾರೆಯೇ ಎಂಧು ಪರಿಶೀಲನೆ ನಡೆಸಿದ್ದಾರೆ. ಅಲ್ಲದೆ  ಕಳೆದ 15 ದಿನಗಳಲ್ಲಿ ಲಾಡ್ಜ್ / ರೆಸಾರ್ಟ್ ಗಳಲ್ಲಿ  ಬಂದು ತಂಗಿದ್ದ ಗ್ರಾಹಕರ ಮಾಹಿತಿಯನ್ನು ಪರಿಶೀಲನೆ ಮಾಡಿದ್ದಾರೆ. 

ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕಿನ ಆನಂದಪುರದ ಬಳಿ ಭೀಕರ ಅಪಘಾತ! ಭದ್ರಾವತಿಯ ಯುವತಿ ಸಾವು

ಇತ್ತ ಕೋಟೆ ಪೊಲೀಸ್ ಠಾಣೆ,  ಸೊರಬ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಲಾಡ್ಜ್ ಗಳ ಮಾಲೀಕರು ಹಾಗೂ ವ್ಯವಸ್ಥಾಕರುಗಳ ಸಭೆಯನ್ನು ನಡೆಸಿ ಅವರುಗಳಿಗೆ ಲಾಡ್ಜ್​ಗೆ ಸಂಬಂಧಿಸಿದಂತೆ ಇರುವ ನಿಯಮಗಳನ್ನು ವಿವರಿಸಿದ್ದಾರೆ. ಇನ್ನೂ ಜಯನಗರ ಪೊಲೀಸ್ ಠಾಣೆರವರು ಠಾಣಾ ವ್ಯಾಪ್ತಿಯಲ್ಲಿರುವ ಲಾಡ್ಜ್ ಗಳ ಮಾಲೀಕರು ಹಾಗೂ ವ್ಯವಸ್ಥಾಕರುಗಳ ಸಭೆಯನ್ನು ನಡೆಸಿ ಕೆಲವು ಸೂಚನೆಗಳನ್ನು ನೀಡಲಾಗಿದೆ. 

ಪೊಲೀಸ್ ಇಲಾಖೆ ನೀಡಿದ ಸೂಚನೆ ಏನು?

  • 1) ಲಾಡ್ಜ್ ಗಳಲ್ಲಿ  ಕಾರಿಡಾರ್ ಮತ್ತು ಲಾಡ್ಜ್ ನ ಮುಂಭಾಗದಲ್ಲಿ ರಸ್ತೆಗೆ ಮುಖ ಮಾಡಿ ಸಿಸಿ ಟಿವಿ ಕ್ಯಾಮೆರಾಗಳನ್ನು ಅಳವಡಿಸುವುದು. 
  • 2) ಲಾಡ್ಜ್ ಗಳಿಗೆ ಬರುವ ಗ್ರಾಹಕರುಗಳ ಹೆಸರು, ವಿಳಾಸ ಹಾಗೂ ಮೊಬೈಲ್ ನಂಬರ್ ಸೇರಿದತೆ ಸಂಪೂರ್ಣ ಮಾಹಿತಿಯನ್ನು ಪಡೆದು ರಿಜಿಸ್ಟರ್ ನಲ್ಲಿ ನಮೂದು ಮಾಡುವುದು ಮತ್ತು ವಿಳಾಸದ ಮಾಹಿತಿ ಇರುವ ಐಡಿ ಕಾರ್ಡ್ ಗಳ ಜೆರಾಕ್ಸ್ ಪ್ರತಿಯನ್ನು ಪಡೆದುಕೊಳ್ಳುವುದು ಮತ್ತು ಅದರಲ್ಲಿರುವ ವಿವರವನ್ನು ಪರಿಶೀಲಿಸಿ ಖಚಿತ ಪಡಿಸಿಕೊಳ್ಳುವುದು.  
  • 3) ಲಾಡ್ಜ್ ಗೆ ಬರುವ ಗ್ರಾಹಕರ ತಂಗುವ ಉದ್ದೇಶವನ್ನು ಕೇಳಿ ಪಡೆದು, ಖಚಿತ ಪಡಿಸಿಕೊಂಡು ಕಡ್ಡಾಯವಾಗಿ ರಿಜಿಸ್ಟರ್ ನಲ್ಲಿ ನೋಂದಾಯಿಸುವುದು.
  • 4) ಲಾಡ್ಜ್ ಗೆ ಬರುವ ಗ್ರಾಹಕರುಗಳ ಮೇಲೆ ಯಾವುದೇ ಅನುಮಾನ ಕಂಡು ಬಂದಲ್ಲಿ ಕೂಡಲೇ ಹತ್ತಿರದ ಪೊಲೀಸ್ ಠಾಣೆ / ಪೊಲೀಸ್ ಕಂಟ್ರೋಲ್ ರೂಂ / 112 ತುರ್ತು ಸಹಾಯವಾಣಿಗೆ ಕರೆ ಮಾಡಿ ಮಾಹಿತಿ ನೀಡುವಂತೆ ಸೂಚಿನೆಗಳನ್ನು ನೀಡಿದರು. 

ಜಿಲ್ಲಾ ಜಂಕ್ಷನ್ ನಡೆದಿದ್ದು ಆಕ್ಸಿಡೆಂಟ್! ಬಯಲಾಗಿದ್ದು ಕೊಲೆ ಹಾಗೂ ದರೋಡೆ ಕೇಸ್!? ದ್ವೇಷ ಹೀಗೂ ತೀರಿಸಿಕೊಳ್ಳುತ್ತಾರಾ? ವಿಚಿತ್ರ ಕ್ರೈಂ ಕಥೆ

Facebook ನಲ್ಲಿ ನಮ್ಮ ಪೇಜ್​ ನೋಡಿ : Malenadutoday.com

Twitter ನಲ್ಲಿ ನಾವಿದ್ದೇವೆಫಾಲೋ ಮಾಡಿ : Malenadutoday.com

Instagram ನಲ್ಲಿ ಕ್ಲಿಕ್​ ಮಾಡಿ : Malenadutoday.com

Telegram ನಲ್ಲಿ ಸುದ್ದಿ ಪಡೆಯಲು ಲಿಂಕ್ ಒತ್ತಿ : Malenadutoday.com

ಈ ದಿನ ಪಿಎಸ್ಐ ಆಗುಂಬೆ, ಶಿಕಾರಿಪುರ ಟೌನ್& ಮಾಳೂರುರವರು ಲಾಡ್ಜ್ / ರೆಸಾರ್ಟ್ ಗಳಿಗೆ ಭೇಟಿ ನೀಡ ಗ್ರಾಹಕರ ವಿವರವನ್ನು ರಿಜಿಸ್ಟರ್ ನಲ್ಲಿ ನಮೂದು ಮಾಡಿರುವದನ್ನು& ಲಾಡ್ಜ್ ಗಳಲ್ಲಿ ಸಿಸಿ ಟಿವಿ ಕ್ಯಾಮೆರಾಗಳ ಅಳವಡಿಕೆ &ಕಳೆದ 15 ದಿನಗಳಲ್ಲಿಬಂದು ತಂಗಿದ್ದ ಗ್ರಾಹಕರ ಮಾಹಿತಿಯನ್ನು ಪರಿಶೀಲನೆ ಮಾಡಿರುತ್ತಾರೆ@DgpKarnataka@alokkumar6994 pic.twitter.com/lFvRatHsD3 — SP Shivamogga (@Shivamogga_SP) February 19, 2023