ಶಿವಮೊಗ್ಗ ಜಿಲ್ಲೆಯಲ್ಲಿಯು ಕಾಡ್ಗಿಚ್ಚು! ಸೊರಬ ಚಂದ್ರಗುತ್ತಿ ಬೆಟ್ಟದಲ್ಲಿ ಬೆಂಕಿ

Malenadu Today

ಬೇಸಿಗೆ ಸಮೀಪಿಸುತ್ತಿದ್ದಂತೆ ಕಾಡ್ಗಿಚ್ಚಿನ ಜ್ವಾಲೆಯ ಎಲ್ಲೆಡೆ ಹರಡುತ್ತಿದೆ. ಇದಕ್ಕೆ ಪೂರಕವೆಂಬಂತೆ ಶಿವಮೊಗ್ಗ ಜಿಲ್ಲೆ  ಸೊರಬ  ತಾಲೂಕಿನ ಚಂದ್ರಗುತ್ತಿ ರೇಣುಕಾಂಬಾ ದೇವಸ್ಥಾನದ ಬೆಟ್ಟದ ಮೇಲೆ ಕಾಡ್ಗಿಚ್ಚು ಹೊತ್ತಿಕೊಂಡಿದೆ. ಶೇಕಡಾ 38 ರಷ್ಟು ಅರಣ್ಯ ಭೂಮಿ ಹೊಂದಿರುವ ತಾಲ್ಲೂಕಿನಲ್ಲಿ, ಚಂದ್ರಗುತ್ತಿ ಹೋಬಳಿ ಬಹುತೇಕ ಕಾಡಿನ ಪರಿಸರ ಹೊಂದಿದೆ. ಈ ಮಧ್ಯೆ ಗುಡ್ಡದ ಮೇಲ್ಬಾಗದಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಅದನ್ನು ಆರಿಸುವ ಬಗ್ಗೆ ಯಾರೊಬ್ಬರು ಹೆಚ್ಚು ತಲೆಕೆಡಿಸಿಕೊಳ್ಳುತ್ತಿಲ್ಲ ಎಂದು ಸ್ಥಳೀಯರು ಆರೋಪಿಸಿದ್ದಾರೆ. 

ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕಿನ ಆನಂದಪುರದ ಬಳಿ ಭೀಕರ ಅಪಘಾತ! ಭದ್ರಾವತಿಯ ಯುವತಿ ಸಾವು

ಕಾಡ್ಗಿಚ್ಚು ನಂದಿಸಲು ಅರಣ್ಯ ಸಿಬ್ಬಂದಿ ಪ್ರಯತ್ನಿಸುತ್ತಿದ್ದು, ಸೂಕ್ತ ಸಾಮಗ್ರಿಗಳ ಸಾಗಾಣಿಕೆಗೆ ಅನುಕೂಲ ಇಲ್ಲದಿರುವುದು ಬೆಂಕಿ ನಂದಿಸಲು ಸಮಸ್ಯೆಯಾಗುತ್ತಿದೆ. ಈ ಮಧ್ಯೆ ಬೆಂಕಿ ವ್ಯಾಪಿಸಿದರೇ  ಬರದವಳ್ಳಿ, ಕಮಲಾಪುರ, ಬಸ್ತಿಕೊಪ್ಪ, ಮಾವಿನಬಳ್ಳಿ ಕೊಪ್ಪ ಸೇರಿದಂತೆ ಇತರೆ ಗ್ರಾಮಗಳಿಗೂ ಹಬ್ಬುವ  ಸಾಧ್ಯತೆ ಇದೆ ಎನ್ನಲಾಗುತ್ತಿದೆ.

ಜಿಲ್ಲಾ ಜಂಕ್ಷನ್ ನಡೆದಿದ್ದು ಆಕ್ಸಿಡೆಂಟ್! ಬಯಲಾಗಿದ್ದು ಕೊಲೆ ಹಾಗೂ ದರೋಡೆ ಕೇಸ್!? ದ್ವೇಷ ಹೀಗೂ ತೀರಿಸಿಕೊಳ್ಳುತ್ತಾರಾ? ವಿಚಿತ್ರ ಕ್ರೈಂ ಕಥೆ

Facebook ನಲ್ಲಿ ನಮ್ಮ ಪೇಜ್​ ನೋಡಿ : Malenadutoday.com

Twitter ನಲ್ಲಿ ನಾವಿದ್ದೇವೆಫಾಲೋ ಮಾಡಿ : Malenadutoday.com

Instagram ನಲ್ಲಿ ಕ್ಲಿಕ್​ ಮಾಡಿ : Malenadutoday.com

Telegram ನಲ್ಲಿ ಸುದ್ದಿ ಪಡೆಯಲು ಲಿಂಕ್ ಒತ್ತಿ : Malenadutoday.com

Share This Article