ತೆಂಗಿನ ಕಾಯಿ ಕೀಳುವಾಗ ಕಲ್ಲಿನಲ್ಲಿ ಹೊಡೆದು ಹಲ್ಲೆ! ದಾಖಲಾಯ್ತು ಎಫ್​ಐಆರ್

Seven men attacked for plucking coconuts! FIR registered

ತೆಂಗಿನ ಕಾಯಿ ಕೀಳುವಾಗ ಕಲ್ಲಿನಲ್ಲಿ ಹೊಡೆದು ಹಲ್ಲೆ! ದಾಖಲಾಯ್ತು ಎಫ್​ಐಆರ್

KARNATAKA NEWS/ ONLINE / Malenadu today/ May 22, 2023 SHIVAMOGGA NEWS

ಆನವಟ್ಟಿ/ ತೆಂಗಿನ ಕಾಯಿ ಕೀಳುವ ವಿಚಾರದಲ್ಲಿ ಏಳು ಜನರು ಹಲ್ಲೆ ಮಾಡಿದ್ದರ ಸಂಬಂಧ ಆನವಟ್ಟಿ ಪೊಲೀಸ್ ಸ್ಟೇಷನ್​ನಲ್ಲಿ ಎಫ್​ಐಆರ್ ದಾಖಲಾಗಿದೆ. 

ಕಳೆದ 18 ನೇ ತಾರೀಳು ಹಿರೆಚೌತಿ ಗ್ರಾಮದ ಲೋಕಪ್ಪ ಎಂಬವರು ತಮ್ಮ ಹಿಸ್ಸೆಯಲ್ಲಿರುವ ತೆಂಗಿನತೋಟದ ಕಾಯಿ ಕೀಳಿಸಲು ತೆರಳಿದ್ದರಂತೆ. ಇವರು ಮರ ಹತ್ತಿ ತೆಂಗಿನಕಾಯಿ ಕೀಳುತ್ತಿದ್ದಾಗ, ಅಲ್ಲಿಗೆ ಬಂದ ಏಳು ಮಂದಿ ಗುಂಪು ಪಿರ್ಯಾದಿಗೆ ಕಲ್ಲಿನಿಂದ ಹೊಡೆಯಲು ಆರಂಭಿಸಿದ್ದಾರೆ. ಬಳಿಕ ಕೆಳಕ್ಕೆ ಇಳಿಯುತ್ತಲೇ ಅವರ ಮೇಲೆ ಹಲ್ಲೆ ಮಾಡಿ ಜೀವ ಬೆದರಿಕೆ ಹಾಕಿದ್ಧಾರೆ ಎಂದು ದೂರಲಾಗಿದೆ. ಈ ಸಂಬಂಧ  ಬಸವರಾಜ್ ಸೇರಿದಂತೆ ಏಳು ಮಂದಿ ವಿರುದ್ಧ ಎಫ್​ಐಆರ್ ದಾಖಲಾಗಿದೆ. ಆಸ್ತಿ ವಿಚಾರದಲ್ಲಿ ಈ ಜಗಳ ನಡೆದಿದ್ದು, ಆನವಟ್ಟಿ ಪೊಲೀಸ್ ಸ್ಟೇಷನ್​ನಲ್ಲಿ ದೂರು ಪ್ರತಿದೂರು ಎರಡು ಸಹ ದಾಖಲಾಗಿದೆ.  ಇನ್ನೂ ಇದೇ ಘಟನೆಯ ಸಂಬಂಧ ಲೋಕಪ್ಪರವರ ವಿರುದ್ಧವೂ ಎಫ್​ಐಆರ್​ ಆಗಿದ್ದು,  ತಮ್ಮ ಮೇಲೆ ಹಲ್ಲೆಯಾಗಿದೆ ಎಂದು ಮಹಿಳೆಯೊಬ್ಬರು ದೂರು ನೀಡಿದ್ದಾರೆ. 

ಆಧಾರ್ ಕಾರ್ಡ್​ ಅಪ್​ಡೇಟ್ ಮಾಡುವುದಾಗಿ ಹೇಳಿ ಲಕ್ಷ ಲಕ್ಷ ದೋಖಾ

CEN Police station /  ಆನ್​ಲೈನ್ ವಂಚನೆಗೆ ಸಂಬಂಧಿಸಿದಂತೆ ಮತ್ತೊಂದು ಕೇಸ್ ಶಿವಮೊಗ್ಗದ ಸಿಇಎನ್​ ಪೊಲೀಸ್ ಸ್ಟೇಷನ್​ನಲ್ಲಿ ದಾಖಲಾಗಿದೆ. ಅಚ್ಚರಿ ಅಂದರೆ, ಆಧಾರ್ ಕಾರ್ಡ್​ಅಪ್​ಡೇಟ್​ ಮಾಡಿಕೊಡುವುದಾಗಿ ಹೇಳಿ ,  ಒಂದು ಲಕ್ಷದ 85 ಸಾವಿರ ರೂಪಾಯಿಗಳನ್ನು ಲಪಟಾಯಿಸಿದ ಬಗ್ಗೆ ವರದಿಯಾಗಿದೆ. 

ನಡೆದಿದ್ದೇನು? 

ಸೊರಬ ತಾಲ್ಲೂಕಿನ ಶಿಂಡ್ಲಿ ಹಳ್ಳಿಯ 71 ವರ್ಷದ ಹಿರಿಯೊಬ್ಬರ ಮೊಬೈಲ್​ಗೆ ಕಳೇದ 18 ರಂದು ಕಸ್ಟಮರ್ ಕೇರ್​ ಹೆಸರಿನ ನಂಬರ್​ನಿಂದ ಮೆಸೆಜ್​ ಬಂದಿದೆ. 

ಮೆಸೇಜ್​ನಲ್ಲಿ ನಿಮ್ಮ  ಬ್ಯಾಂಕ್ ಖಾತೆಗೆ ಪಾನ್ ಕಾರ್ಡ್, ಆಧಾರ ಕಾರ್ಡ್ ಅಪ್​ಡೇಟ್​  ಮಾಡಬೇಕು.  ಇಲ್ಲದಿದ್ದರೆ 24 ಗಂಟೆಯೊಳಗೆ ನಿಮ್ಮ ಅಕೌಂಟ್ ಬ್ಲಾಕ್​  ಆಗುತ್ತದೆ ಹಾಗೂ ಎಟಿಎಂ ಕಾರ್ಡ್ ಅವಧಿ ಮುಕ್ತಾಯವಾಗುತ್ತದೆ ಎಂದುಬರೆಯಲಾಗಿತ್ತು. ಅಲ್ಲದೆ ಇದಕ್ಕಾಗಿ ಇಂತಹದ್ದೊಂದು ನಂಬರ್​ಗೆ ಕರೆಮಾಡಿ ಎಂದು ತಿಳಿಸಲಾಗಿತ್ತು. 

ಅದರಂತೆ ಹಿರಿಯರು ಮೆಸೇಜ್​ನಲ್ಲಿದ್ದ ನಂಬರ್​ಗೆ ಕರೆಮಾಡಿದ್ದಾರೆ. ಆಕಡೆಯಿಂದ ಕರೆ ಸ್ವೀಕರಿಸಿದ ವ್ಯಕ್ತಿ ಹಿರಿಯರ ಬ್ಯಾಂಕ್​ ಖಾತೆಗೆ ಸಂಬಂಧಿಸಿದ ಮಾಹಿತಿ ಎಲ್ಲವನ್ನು ಪಡೆದುಕೊಂಡು ಒಟಿಪಿ ಕೇಳಿದ್ದಾನೆ. ಅದನ್ನ ಸಹ ಹಿರಿಯರು ನೀಡಿದ್ದಾರೆ. ಒಟಿಪಿ ಕೊಟ್ಟ ತಕ್ಷಣವೇ  ಹಿರಿಯರ ಖಾತೆಯಿಂದ 1,85,000/-ರೂ ಹಣ ಡ್ರಾ ಆಗಿದೆ. ಇದರಿಂದ ಆತಂಕಗೊಂಡು ಸಿಇಎನ್​ ಪೊಲೀಸ್ ಸ್ಠೇಷನ್​ಗೆ ಬಂದು ದೂರು ನೀಡಿದ್ಧಾರೆ.