ಅಪಘಾತದಲ್ಲಿ ನಡೀತು ಕೊಲೆ! ಅದರ ಬೆನ್ನಲ್ಲೆ ಊರೊಳಗೆ ಹೀಗೆಲ್ಲಾ ನಡೀತು! ಎಂಟ್ರಿಯಾದ್ರು ಡಿಸಿ!?

Murder in an accident! After that, all this happened inside the village! Dc entered!?ಸೊರಬ, Soraba

ಅಪಘಾತದಲ್ಲಿ ನಡೀತು ಕೊಲೆ! ಅದರ ಬೆನ್ನಲ್ಲೆ ಊರೊಳಗೆ ಹೀಗೆಲ್ಲಾ ನಡೀತು! ಎಂಟ್ರಿಯಾದ್ರು ಡಿಸಿ!?
ಸೊರಬ, Soraba

Shivamogga Feb 20, 2024  ಆ ದಾಯಾದಿ ಕುಟುಂಬಗಳಲ್ಲಿ ಆಸ್ತಿ ವಿಚಾರಕ್ಕಾಗಿ ನಡೆದಿತ್ತು ಒಂದು ಕೊಲೆ. ಬೈಕ್ ನಲ್ಲಿ ಹೋಗುತ್ತಿದ್ದ ವ್ಯಕ್ತಿಯನ್ನು ಕಾರಿನಿಂದ ಡಿಕ್ಕಿ ಹೊಡೆದು ಕೊಂದು ಅಪಘಾತ ಎಂಬಂತೆ ಬಿಂಬಿಸಲಾಗಿತ್ತು.

ಆದರೆ ತನಿಖೆ ಕೈಗೊಂಡ ಪೊಲೀಸರು ಇದೊಂದು ವ್ಯವಸ್ಥಿತ ಕೊಲೆ ಎಂದು ಬಿಂಬಿಸಿದ್ದರು. ಆರೋಪಿಗಳು ಜೈಲಿನಲ್ಲಿ ಕಂಬಿ ಎಣಿಸುತ್ತಿದ್ದಾರೆ. ಇದರ ಬಗ್ಗೆ ಮಲೆನಾಡು ಟುಡೆ ಶಿವಮೊಗ್ಗದಲ್ಲಿ ಸಿನಿಮಾ ಸ್ಟೈಲ್​ ನಲ್ಲಿ ನಡೆಯುತ್ತಿವೆ ಹೈಟೆಕ್​ ಕೊಲೆಗಳು!? ಹೇಗೆ ಗೊತ್ತಾ? ಜೆಪಿ ಬರೆಯುತ್ತಾರೆ! ಎಂಬ ಟೈಟಲ್​ ನಡಿಯಲ್ಲಿ ವರದಿ ಒದಗಿಸಿತ್ತು. ಇದೀಗ ಇದೇ ವಿಷಯಕ್ಕೆ ಸಂಬಂಧಿಸಿದಂತೆ, ವಿಭಿನ್ನವಾದ ವರದಿಯೊಂದನ್ನ ನಿಮ್ಮ ಮುಂದೆ ಇಡುತ್ತಿದೆ ಮಲೆನಾಡು ಟುಡೆ.ಕಾಂ

ಸೂಚನೆ : (ಅಂದು ನಡೆದಿದ್ದು ಕೊಲೆಯೋ ಅಪಘಾತವೋ ಅದು ಕೋರ್ಟ್​ನಲ್ಲಿ ತೀರ್ಮಾನವಾಗಬೇಕಿದೆ. ಆದರೆ ಪೊಲೀಸ್​ ತನಿಖೆಯ ಪ್ರಕಾರ ಅದೊಂದು ಕೊಲೆ, ಪೊಲೀಸ್ ವರದಿ ಆಧರಿಸಿಯೇ ಮಾಧ್ಯಮಗಳು ವರದಿಮಾಡಿದ್ದವು.) 

ಅವತ್ತಿನ ಘಟನೆಯಲ್ಲಿ  ಕೊಲೆ ಮಾಡಿದ ಆರೋಪ ಹೊತ್ತಿರುವ ಕುಟುಂಬಕ್ಕೆ ಇಡೀ ಗ್ರಾಮವೇ ಬಹಿಷ್ಕಾರ ಹಾಕಿದೆ ಎಂಬ ಆರೋಪವೊಂದು ಇದೀಗ ಕೇಳಿ ಬಂದಿದೆ. ಅಲ್ಲದೆ  ಆರೋಪ ಹೊತ್ತವರ ಆಸ್ತಿಪಾಸ್ತಿ ಹಾನಿಗೊಳಲಾಗಿದೆ. ಹೀಗಾಗಿ ತಮಗೆ. ರಕ್ಷಣೆ ನೀಡಿ ಎಂದು ಸಂತ್ರಸ್ತ  ಕುಟುಂಬ ನ್ಯಾಯಾಕ್ಕಾಗಿ ಅಲವತ್ತುಕೊಂಡಿದೆ.  

ಹಳ್ಳಿ ಊರು, ಬೇಲಿ ಜಗಳ

ಹಳ್ಳಿಗಳಲ್ಲಿ ಕಾಲು ದಾರಿಯ ಕಲಹದಿಂದ ಹಿಡಿದು ಜಮೀನು ವಿಚಾರಗಳಿಗೆ ಗಲಾಟೆಗಳಾಗಿ ಅದು ದ್ಷೇಷ ಪ್ರತಿಕಾರದ ಭಾಗವಾಗಿ ಕೊಲೆಯಲ್ಲಿ ಅಂತ್ಯಗೊಳ್ಶುತ್ತದೆ. ಇತಂಹದ್ದೆ ಘಟನೆ ದಾಯಾದಿಗಳ ಕುಟುಂಬದಲ್ಲಿ ನಡೆದುಹೋಗಿದ್ದರಬಹುದು. ಅದೀಗ ಸಾಮಾಜಿಕ ಬಹಿಷ್ಠಾರದವರೆಗೆ ವಿಸ್ತರಿಸಿಕೊಂಡಿದೆ. 2023 ರಲ್ಲಿ ಸೊರಬದ ಕುಂಬತ್ತಿ ಮಾವಲಿ ರಸ್ತೆಯಲ್ಲಿ ಅಪಘಾತ ಎಸಗಿದ ಪ್ರಕರಣವನ್ನು ಪೊಲೀಸರು ಕೊಲೆ ಎಂದು ತನಿಖೆಯಲ್ಲಿ ತೋರಿಸಿದ್ದರು

ಅಂದು ನಡೆದಿದ್ದು ಏನು? 

 

2023 ಭೂಮಿ ಹುಣ್ಣಿಮೆ ದಿನದಂದು ಸೊರಬ ಹೊರವಲಯದ ಕುಂಬತ್ತಿ ಮಾವಲಿ ರಸ್ತೆಯಲ್ಲಿ ಹೊಲಕ್ಕೆ ಹೊರಟಿದ್ದ ಮಂಜಪ್ಪ ಎಂಬುವರಿಗೆ ಕಾರು ಅಪಘಾತವಾಗಿ ಸಾವನ್ನಪ್ಪಿದ್ದರು. ಅವರು ಹೊರಟಿದ್ದ ಟಿವಿಎಸ್ ಬೈಕ್ ಗೆ ಕಾರೊಂದು ಡಿಕ್ಕಿ ಹೊಡೆದಿತ್ತು. ಸ್ಥಳಕ್ಕೆ ಎಸ್ಪಿ ಮಿಥುನ್ ಕುಮಾರ್ ಭೇಟಿ ಮಾಡಿ ಪರಿಶೀಲನೆ ನಡೆಸಿದ್ದರು. 

ಅಪಘಾತ ಎಸಗಿದ್ದ ಕಾರು ಚಾಲಕರು ಸ್ಥಳದಿಂದ ಪರಾರಿಯಾಗಿದ್ರು, ಕಾರಿಗೆ ನಂಬರ್ ಪ್ಲೇಟ್ ಕೂಡ ಇರಲಿಲ್ಲ. ಇಂಟಸ್ಟ್ರಿಂಗ್ ಅಂದರೆ, ಕಾರು ಬಂದು ಡಿಕ್ಕಿ ಹೊಡೆದಿದ್ದನ್ನು ರಸ್ತೆಯಲ್ಲಿ ಸಾಗುತ್ತಿದ್ದ ಪ್ರತ್ಯಕ್ಷದರ್ಶಿಯೊಬ್ಬರು ನೋಡಿದ್ದರು. ಅವರ ಹೇಳಿಕೆ ಗಮನಿಸಿದ ಪೊಲೀಸರಿಗೆ ಅನುಮಾನ ಮೂಡಿತ್ತು.

ಮಂಜಪ್ಪನವರ ಸಹೋದರಿ ಕುಟುಂಬ ಆಸ್ತಿ ವಿಚಾರದಲ್ಲಿ ಗಲಾಟೆ ಮಾಡಿಕೊಂಡಿದ್ದರು. ಅದರ ಮುಂದುವರಿದ ಭಾಗವಾಗಿ ಮಂಜಪ್ಪನನ್ನು ಹಳೆಯ ಕಾರು ಬಳಸಿ ಅಪಘಾತ ಎಸಗುವ ರೀತಿಯಲ್ಲಿ ಬಿಂಬಿಸಿ ಕೊಲೆ ಮಾಡಿದ್ದ ಎಂದು ತನಿಖೆ ಮೂಲಕ ಸಾಬೀತು ಮಾಡಿದ ಸೊರಬ ಪೊಲೀಸರು ಓರ್ವ ಮಹಿಳೆ ಸೇರಿ ನಾಲ್ವರ ವಿರುದ್ಧ ಕೇಸು ದಾಖಲಿಸಿದ್ರು. 

ಜೈಲು ಸೇರಿದ ಕೆಲವರಿಗೆ ಜಾಮೀನು ಸಿಗುತ್ತಿದ್ದಂತೆ ಕುಳುವಳ್ಳಿ ಗ್ರಾಮದಲ್ಲಿ ವಾತಾವರಣವೇ ಬದಲಾಗಿದೆ. ಕೊಲೆ ಆರೋಪ ಹೊತ್ತಿರುವ ಕುಟುಂಬ ಅಂದು ನಡೆದಿದ್ದು ಅಪಘಾತ ಎಂದು ಹೇಳುತ್ತಿದೆ. ಆದರೆ ಆ  ಕುಟುಂಬಕ್ಕೆ ಕುಳುವಳ್ಳಿ ಗ್ರಾಮಸ್ಥರು ಸಾಮಾಜಿಕ ಬಹಿಷ್ಖಾರ ಹಾಕಿದ್ದಾರಂತೆ. ಹೀಗೆಂದು  ನೊಂದ ಸರೋಜಮ್ಮ ಮತ್ತು ಕೆರೆಯಪ್ಪ ದಂಪತಿಯ ಆರೋಪವಾಗಿದೆ.

ಬಹಿಷ್ಕಾರಕ್ಕೊಳಗಾದ ಕುಟುಂಬದ ಆರೋಪವೇನು? 

ಈಡಿಗ ಸಮುದಾಯಕ್ಕೆ ಸೇರಿದ ಕೆರಿಯಪ್ಪ ಸರೋಜಮ್ಮ ದಂಪತಿ ಕುಟುಂಬ ಸಾಮಾಜಿಕ ಬಹಿಷ್ಕಾರಕ್ಕೆ ಒಳಗಾಗಿದೆ. ಸುಮಾರು 60 ವರ್ಷಗಳಿಂದ ಗ್ರಾಮದಲ್ಲಿ ವಾಸವಿದ್ದು, ವ್ಯವಸಾಯ ಮಾಡಿಕೊಂಡು ಜೀವನ ನಿರ್ವಹಿಸುತ್ತಿದೆ. ಕೆರಿಯಪ್ಪ ದಂಪತಿಗೆ ಮೂವರು ಮಕ್ಕಳಿದ್ದು, ದೊಡ್ಡ ಮಗನಾದ ಪ್ರವೀಣ ಚಿಕ್ಕೇರಿ ಎಂಬ ಗ್ರಾಮದಲ್ಲಿ ಬೇಕರಿಯಲ್ಲಿ ಸುಮಾರು ಒಂಬತ್ತು ವರ್ಷದಿಂದ ಕೆಲಸ ಮಾಡುತ್ತಿದ್ದಾನೆ. ಇನ್ನಿಬ್ಬರು ಮಕ್ಕಳೊಂದಿಗೆ ಕೆರಿಯಪ್ಪ ಕುಟುಂಬ ಗ್ರಾಮದಲ್ಲಿ ವಾಸವಿದೆ.

ಸೊರಬದ ಸಿವಿಲ್ ನ್ಯಾಯಾಲದಲ್ಲಿ  ಸರೋಜಮ್ಮ ನವರ  ತವರು ಮನೆಯವರ ವಿರುದ್ಧ ಹಿಸ್ಸೆ ಕೇಳಿ ಪ್ರಕರಣ ದಾಖಲಿಸಿದ್ದಾರೆ. ಹೀಗಿರಲು ದಿನಾಂಕ 28-10-23 ರಂದು ಕೆರಿಯಪ್ಪ ಮಗನಾದ ಪ್ರವೀಣ ಊರಿನ ಹಬ್ಬಕ್ಕೆಂದು ಬರುತ್ತಿದ್ದಾಗ ರಸ್ತೆಯ ಅಪಘಾತದಲ್ಲಿ ನನ್ನ ತಮ್ಮನಾದ ಮಂಜಪ್ಪನವರು ಮೃತ ಪಟ್ಟಿರುತ್ತಾರೆ

ಈ ವಿಚಾರವಾಗಿ ತಮ್ಮ ವಿರುದ್ಧ ಠಾಣೆಯಲ್ಲಿ  ಪ್ರಕರಣ ದಾಖಲಾಗಿ, ಈಗ ವಿಚಾರಣಾ ಹಂತದಲ್ಲಿರುತ್ತದೆ ಈ ವಿಚಾರದಲ್ಲಿ ನಮ್ಮೂರಿನ ಕೆಲ ಮುಖ್ಯಸ್ಥರು ಎಲ್ಲಾ ಊರು ಪಂಚಾಯಿತಿ ಸೇರಿಸಿ ನಮ್ಮ ಕುಟುಂಬದವರನ್ನು ಊರಿನಿಂದ ಭಹಿಷ್ಕರಿಸಿ ನಮಗೆ ಕುಡಿಯಲು ನೀರಿಲ್ಲದೆ ಇದ್ದ ವಿದ್ಯುತ್ ಅನ್ನು  ಕಡಿತ ಗೊಳಿಸಿ ನಾವು ಓಡಾಡುವ ಹಾದಿಯನ್ನು ಹಾಳು ಮಾಡಿ ಮನೆಗೆ ಬಾರದಂತೆ ಮಾಡಿರುತ್ತಾರೆ ಎಂದು ಆರೋಪಿಸ್ತಿದ್ದಾರೆ. 

ಅಲ್ಲದೆ  ಇವರುಗಳ ಬಹಿಷ್ಕಾರದಿಂದ ಊರಿನೊಳಗೆ ನೀರು ಬೆಳಕು ಇಲ್ಲದೆ ಜೀವನ ಕಷ್ಟವಾಗಿರುವುದರಿಂದ ನಾವು ಬೇರೆ ಊರಿನಲ್ಲಿರುವ ನಮ್ಮ ಸಂಬಂಧಿಕರ ಮನೆಯಲ್ಲಿ ವಾಸವಿರಲು ನಮ್ಮ ಮನೆಯಲ್ಲಿದ್ದ ಒಂದು ಆಕಳು, ಒಂದು ಎಮ್ಮೆ ಎರಡು ಹೋರಿ ಕರುಗಳನ್ನು ಐವತ್ತು ಕೋಳಿಗಳು ಕೃಷಿ ಹೊಂಡದಲ್ಲಿದ್ದ ಎರಡು ಸಾವಿರ ಮೀನುಗಳು ಕಳವು ಮಾಡಿರುತ್ತಾರೆ ಎಂದು ದೂರಿದ್ದಾರೆ.  

ಇದಲ್ಲದೆ ನಮ್ಮ ತೋಟದ ಬದಿಯಲ್ಲಿರುವ ಹಲಸಿನ ಮರಗಳು ಒಂದು ಸಾಲು ಅಡಿಕೆ ಮರ ನಾಶ ಮಾಡಿರುತ್ತಾರೆ. ಹಾಗು ಈಗಾಗಲೇ ಹತ್ತು ವರ್ಷಗಳ ಹಿಂದೆ ನಮ್ಮ ಊರಿನವರಾದ ಕೆಲವರು ಹದಿನಾರು ಸಾವಿರ ರೂಗಳನ್ನು ನಮ್ಮಿಂದ ಪಡೆದುಕೊಂಡು ನಮಗೆ ನೀರಿನ ಮೋಟರ್ ಗೆ ವಿದ್ಯುತ್ ನೀಡಿದ್ದಾರೆ. ಹಾಗು ಇವರೆಲ್ಲರು ಹಲವಾರು ಬಾರಿ ಸರ್ವಿಸ್ ಗಾಗಿ ನಮ್ಮಿಂದ 25 ಸಾವಿರ ಹಣವನ್ನು ಪಡೆದುಕೊಂಡಿದ್ದರು. ಈಗ ನಮಗೆ ವಿದ್ಯುತ್ ನ್ನು ಕೊಡದೆ ವೈರ್ ಗಳನ್ನು ಕಿತ್ತಿರುತ್ತಾರೆ.

ಈ ಕೃತ್ಯದಿಂದ ನಮಗೆ ವಿದ್ಯುತ್ ಇಲ್ಲದೆ ಅಡಿಕೆ ಸಸಿಗಳನ್ನು ನಾಶವಾಗಿವೆ. ಮತ್ತು ಮನೆಗೆ ಬೇರೆ ಬೀಗ ಹಾಕಲಾಗಿದೆ. ನಮ್ಮ ಊರಿನಲ್ಲಿ ಯಾರಾದರೂ ಯಾವುದೇ ರೀತಿಯಲ್ಲಿ ನೆರವು ನೀಡಿದಲ್ಲಿ ಮಾತನಾಡಿದ್ದಲ್ಲಿ ಒಂದು ಸಾವಿರ ಹಣವನ್ನು ದಂಡವನ್ನು ವ್ಯವಸ್ಥಾನದಲ್ಲಿ ಕಟ್ಟುವಂತೆ ತಿಳಿಸಿದ್ದಾರೆ. ಊರಿನೊಳಗೆ ಕಾಲಿಟ್ಟರೆ ಕೊಚ್ಚಿ ಹಾಕುವುದಾಗಿ ಪ್ರಮೋದ್ ಹಾಲಮ್ಮ ಸೇರಿದಂತೆ ಹಲವರ  ಬೆದರಿಕೆ ಹಾಕಿದ್ದಾರೆ ಎಂದು ದೂರಿದ್ದಾರೆ.

ಕೆರಿಯಪ್ಪ ಸರೋಜಮ್ಮ ಕುಟುಂಬ ಅಪರಾಧಿಗಳೋ ಅಥವಾ  ನಿರಪರಾಧಿಗಳೋ ಅದನ್ನು ಕೋರ್ಟ್ ತೀರ್ಮಾನಿಸುತ್ತದೆ.  ಕಾನೂನಿನ ಚೌಕಟ್ಟಿನಲ್ಲಿ ಎಲ್ಲರಿಗೂ ಸಮಾನವಾದ ಹಕ್ಕಿರುವಾಗ ಸರೋಜಮ್ಮ ಕುಟುಂಬಕ್ಕೂ ಬದುಕುವ ಹಕ್ಕಿದೆ. ಆ ಹಕ್ಕನ್ನು ಜಿಲ್ಲಾಡಳಿತ ಕೊಡಿಸಬೇಕಿದೆ. ನಿಜಕ್ಕೂ ಗ್ರಾಮಸ್ಥರು ಬಹಿಷ್ಕಾರ ಹಾಕುವುದು ಸರಿಯಲ್ಲ.  

ಜಿಲ್ಲಾಧಿಕಾರಿ ಗುರುದತ್ತ ಹೆಗೆಡೆ ಈ ಬಗ್ಗೆ ಪ್ರತಿಕ್ರಿಯಿಸಿದ್ದು, ಸ್ಥಳಕ್ಕೆ  ಕೂಡಲೇ ತಹಶಿಲ್ದಾರ್ ತಂಡವನ್ನ ಕಳಿಸಿ ಪರಿಶೀಲನೆ ನಡೆಸುತ್ತೇವೆ ಎಂದಿದ್ದಾರೆ. ಅಲ್ಲದೆ ಈ ಸಂಬಂಧ  ಗ್ರಾಮದಲ್ಲಿ ಸಭೆ ನಡೆಸಿ ಅರಿವು ಮೂಡಿಸಲಾಗುವುದು ಎಂದು ತಿಳಿಸಿದ್ದಾರೆ. 

ಈ ರೀತಿ ಬಹಿಷ್ಕಾರ ಹಾಕೋದು ಸರಿಯಲ್ಲ, ಇದಕ್ಕೆ ಕಾನೂನಿನಲ್ಲಿ ಅವಕಾಶ ಇಲ್ಲ ಕುಟುಂಬಕ್ಕೆ ರಕ್ಷಣೆ ನೀಡುತ್ತೇವೆ ಎಂದಿದ್ದಾರೆ.