ಶಿವಮೊಗ್ಗದಲ್ಲಿ ಸಿನಿಮಾ ಸ್ಟೈಲ್​ ನಲ್ಲಿ ನಡೆಯುತ್ತಿವೆ ಹೈಟೆಕ್​ ಕೊಲೆಗಳು!? ಹೇಗೆ ಗೊತ್ತಾ? ಜೆಪಿ ಬರೆಯುತ್ತಾರೆ!

Crimes are happening in cinema style in Shimoga JP writes about such incidents ಶಿವಮೊಗ್ಗದಲ್ಲಿ ಸಿನಿಮಾ ಸ್ಟೈಲ್​ನಲ್ಲಿ ಕ್ರೈಂಗಳು ನಡೆಯುತ್ತಿವೆ ಅಂತಹ ಘಟನೆಗಳ ವಿವರ ಜೆಪಿ ಬರೆಯುತ್ತಾರೆ

ಶಿವಮೊಗ್ಗದಲ್ಲಿ  ಸಿನಿಮಾ ಸ್ಟೈಲ್​ ನಲ್ಲಿ ನಡೆಯುತ್ತಿವೆ ಹೈಟೆಕ್​ ಕೊಲೆಗಳು!? ಹೇಗೆ ಗೊತ್ತಾ? ಜೆಪಿ ಬರೆಯುತ್ತಾರೆ!

KARNATAKA NEWS/ ONLINE / Malenadu today/ Nov 10, 2023 SHIVAMOGGA NEWS

Shivamogga  |  ಎಲ್ಲಾ ಅಪಘಾತಗಳು ಆಕಸ್ಮಿಕವಲ್ಲ…ರಸ್ತೆಬದಿಯ ಸಾವುಗಳು ಸಹಜವಾದುದಲ್ಲ… ಅದು ದ್ವೇಷ ಪ್ರತಿಕಾರಕ್ಕಾಗಿ ನಡೆದ ಕೊಲೆಯ ಸಂಚು ಕೂಡ ಆಗಿರುತ್ತೆ..ಹಲವು ವಿಷಯಗಳ ಜಟಿಲ ಕಾನನ ಶಿವಮೊಗ್ಗದಲ್ಲಿ ಇಂತಹ ನಿಗೂಢ ಕೃತ್ಯಗಳು ಸಿನಿಮಾ ಸ್ಟೈಲ್​ನಲ್ಲಿ ನಡೆಯುತ್ತಿವೆ. .ಹೇಗೆ ಗೊತ್ತಾ? ಜೆಪಿ ಬರೆಯುತ್ತಾರೆ

ಹಳೇಕಾಲದ ಸಿನಿಮಾ ತಗೊಳ್ಳಿ ಅಥವಾ ಈಗಿನ ಕಾಲದ ಫಿಲ್ಮ್​ಗಳನ್ನೆ ತಗೊಳ್ಳಿ! ಯಾವುದೋ ಸರ್ಕಾರಿ ನೌಕರ ಅಥವಾ ಯಾರೋ ಒಬ್ಬ ಪ್ರಾಮಾಣಿಕ ವ್ಯಕ್ತಿ…ತಮಗೆ ಕಂಟಕವಾದ ಅನ್ನುವ ಕಾರಣಕ್ಕೆ ಆತನ ಮೇಲೆ ಲಾರಿ ಹತ್ತಿಸಲಾಗುತ್ತದೆ. ಆ ಸೀನ್ ಹೀರೋಗೆ ಲಿಂಕ್​, ಆಮೇಲೆ ಕ್ಲೈಮ್ಯಾಕ್ಸ್​ನಲ್ಲಿ ಬ್ಲಿಂಕ್​ ಆಗುತ್ತದೆ.. ರಿಯಲ್​ ಲೈಫ್​​ನಲ್ಲಿಯು ಹೀಗೆ ನಡೆಯುತ್ತಾ? ನಡೆಯುತ್ತೆ ಎನ್ನುವುದಕ್ಕೇ ಈಗಾಗಲೇ ಹಲವು ಸಾಕ್ಷ್ಯಗಳು ಪೊಲೀಸ್ ಫೈಲ್​ಗಳಲ್ಲಿದೆ.. 

ಆದರೆ ವೈಯಕ್ತಿಕ ದ್ವೇಷಕ್ಕೆ, ಆಸ್ತಿ ವಿಚಾರಕ್ಕೆ, ಹೀಗೆ ತಮ್ಮದೇ ಕಾರಣಕ್ಕೆ ತಮ್ಮವರನ್ನೆ ಡಿಕ್ಕಿ ಹೊಡೆಸಿ ಸಾಯಿಸುವಂತಹ ಕುಕೃತ್ಯಗಳು ಶಿವಮೊಗ್ಗದಲ್ಲಿ ನಡೆಯುತ್ತಿದೆ. ಇದು ಕಳೆದ ಕೆಲವರ್ಷಗಳ ಸೀನ್​ ಆಫ್​ ಕ್ರೈಂ ಆಗ್ತಿದೆ…ಇತ್ತಿಚ್ಚಿನ ವರ್ಷಗಳಲ್ಲಿ ಶಿವಮೊಗ್ಗ ಜಿಲ್ಲೆ ಪೊಲೀಸರು ಬೇದಿಸಿರುವ ಪ್ರಕರಣಗಳೇ ಇದಕ್ಕೆ  ಸಾಕ್ಷಿಯಾಗಿದೆ. 

ಆರೋಪಿ ಎಸಗುವ  ಪ್ರತಿಯೊಂದು ಕೊಲೆಗೂ ಒಂದು ಕಾರಣ ಇದ್ದೇ ಇರುತ್ತೆ. ಹಾಗೇನೆ ಕೊಲೆಗಾರನೊಬ್ಬನಿಗೆ ತಾನೆಸಗುವ ಕೃತ್ಯದ ಪ್ಲಾನ್​ ಇದ್ದಂತೆ ಪ್ರಕರಣದಿಂದ ಹೇಗೆ ತಪ್ಪಿಸಿಕೊಳ್ಳಬೇಕೆನ್ನೋ ಜಾಣ್ಮೆ ಕೂಡ ಇರುತ್ತದೆ. ಈ ಕಾರಣಕ್ಕೆ ಅಪರಾಧ ಕೃತ್ಯ ಎಸಗಿರೋ  ಸ್ಥಳದಲ್ಲಿ ಯಾವ ಸಾಕ್ಷ್ಯಗಳನ್ನು ಆತ ಬಿಟ್ಟಿರಲ್ಲ ಅಥವಾ ಆತನೇ ಹಾಗಂದುಕೊಂಡಿರುತ್ತಾನೆ.  

ಆದರೆ ಕ್ರಿಮಿನಲ್ ಗಳು ಆತುರದ ಬುದ್ದಿಯಲ್ಲಿ ಎನನ್ನಾದ್ರೂ ಸಾಕ್ಷಿ ಬಿಟ್ಟಿರ್ತಾರೆ, ಅನ್ನೋ ಆತ್ಮವಿಶ್ವಾಸ ಪೊಲೀಸ್ರಿಗಿರುತ್ತೆ. ಕಳ್ಳನಾಗ್ಲಿ ಕೊಲೆಗಾರನಾಗ್ಲಿ ಎಂತಹ ಅಪರಾಧ ಎಸಗಿದ್ರೂ,ಆತ ಆ ಸ್ಥಳದಲ್ಲಿ ಸಣ್ಣ ಕ್ಲೂ ಅನ್ನಾದ್ರೂ ಬಿಟ್ಟಿರ್ತಾನೆ ಅನ್ನೋದು ವಾಸ್ತವದ ಕಟುಸತ್ಯ

ಇಂತಹ ಸಣ್ಣ ಎಳೆಗಳ ಮೂಲಕ ಪೊಲೀಸ್ರು ಅನೇಕ ಪ್ರಕರಣವನ್ನು ಭೇದಿಸಿದ್ದಾರೆ.ಆದ್ರೆ ಇನ್ನು ಕೆಲವು ಪ್ರಕರಣಗಳಲ್ಲಿ ಕೊಲೆಗೆ ಸಾಕ್ಷ್ಯ ಆಗಬಲ್ಲ ಕ್ಲೂಗಳು ಸಿಕ್ಕರೂ ಆರೋಪಿಗಳನ್ನ ಪತ್ತೆ ಮಾಡೋಕೆ ಸಾಧ್ಯನೇ ಆಗೋದಿಲ್ಲ.ಅಂತಹ ಕ್ಲಿಷ್ಟಕರ ಪ್ರಕರಣಗಳಲ್ಲಿ ವಿಮರ್ಷಕನಾಗಿ,ಸಂಶೋಧಕನಾಗಿ,ಥೀಸಿಸ್ ಬರೆವ ರೀತಿಯಲ್ಲಿ ತನಿಖೆ ಮಾಡೋ ಪೊಲೀಸ್ರಿಗೆ ಒಂದು ನಿಖರವಾದ ಸಣ್ಣ ಕ್ಲೂ ಸಿಕ್ಕಿರುತ್ತೆ.ಇದನ್ನೇ ಆಧಾರವಾಗಿಟ್ಟುಕೊಂಡು ಮಿಂಚುಹುಳದ ಮಂದಬೆಳಕಿನಲ್ಲಿ  ತನಿಖೆಗೆ ಹೊರಡೋ ಪೊಲೀಸ್ರಿಗೆ,ಬೆಳದಿಂಗಳ ಹಬ್ಬದ ಊಟದಂತೆ ಸಿಗುವವನು..,ನಿಜವಾದ ಆರೋಪಿ.

READ :  ಅಪ್ರಾಪ್ತೆಯನ್ನ ಪ್ರೀತಿಸಿದ ತಪ್ಪಿಗೆ ಆತನಿಗೆ ಹತ್ತು ವರ್ಷ ಶಿಕ್ಷೆ..ಜೈಲಿಗೆ ಹೋದವನಿಗಾಗಿ ಕಾದು ಕೂತ ಪ್ರೇಯಸಿ! ಆದರೆ ಪೆರೋಲ್ ಮೇಲೆ ಬಂದ ಪ್ರಿಯಕರಿನಿಗೆ ಕಂಡಿದ್ದೇ ಬೇರೆ : JP Exclusive truth love stories

ಇಂತಹ ಸವಾಲಿನ ಅಪರೂಪದ ಪ್ರಕರಣವನ್ನು ಶಿವಮೊಗ್ಗ ಜಿಲ್ಲೆ ಪೊಲೀಸರು ಭೇದಿಸುತ್ತಾ ಬಂದಿದ್ದಾರೆ. ಇಂತಹ ಪ್ರಕರಣಗಳಲ್ಲಿ  ಸಣ್ಣ ಸುಳಿವು ಸಿಗದೆ ಹೋಗಿದ್ರೆ,ಅದೊಂದು ಅಪಘಾತ ಎಂದು ಪೈಲ್ ಕ್ಲೋಸ್ ಆಗಿ ಹೋಗ್ತಿತ್ತು. ಆದರೆ ಪೊಲೀಸರು ಇಂತಹ ಅಪರಾಧ ಪ್ರಕರಣಗಳಲ್ಲಿ ಆರೋಪಿಗಳನ್ನು ಬಂಧಿಸಿ ಜೈಲಿಗಟ್ಟಿದ್ದಾರೆ. ನೊಂದ ಕುಟುಂಬಗಳಿಗೆ ನ್ಯಾಯ ಕೊಡಿಸಿದ್ದಾರೆ.

ಸೊರಬ ಶಿಕಾರಿಪುರ ಶಿರಾಳಕೊಪ್ಪದಲ್ಲಿ ಅತೀ ಹೆಚ್ಚು ರಸ್ತೆ ಅಪಘಾತಗಳು ನಡೆಯುತ್ತವೆ.ಅದರಲ್ಲೂ ವೇಗವಾಗಿ ಬರುವ ಬೈಕ್ ಸವಾರರೇ ಹೆಚ್ಚಿನ ಸಂಖ್ಯೆಯಲ್ಲಿ ಜೀವ ತೆತ್ತಿದ್ದಾರೆ. ಇಂತಹ ಬಹುತೇಕ ಪ್ರಕರಣಗಳು ಆಕಸ್ಮಿಕ ಘಟನೆಗಳಾಗಿದ್ರೂ ಕೆಲವು ಘಟನೆಗಳು ಉದ್ದೇಶಪೂರ್ವಕಾಗಿ ನಡೆದ ಅಪಘಾತಗಳಾಗಿರುತ್ತವೆ. 




2023 ಭೂಮಿ ಹುಣ್ಣಿಮೆ ದಿನದಂದು ಸೊರಬ ಹೊರವಲಯದ ಕುಂಬತ್ತಿ ಮಾವಲಿ ರಸ್ತೆಯಲ್ಲಿ ಹೊಲಕ್ಕೆ ಹೊರಟಿದ್ದ ಮಂಜಪ್ಪ ಎಂಬುವರಿಗೆ ಕಾರು ಅಪಘಾತವಾಗಿ ಸಾವನ್ನಪ್ಪಿದ್ದರು. ಅವರು ಹೊರಟಿದ್ದ ಟಿವಿಎಸ್ ಬೈಕ್ ಗೆ ಕಾರೊಂದು ಡಿಕ್ಕಿ ಹೊಡೆದಿತ್ತು. ಸ್ಥಳಕ್ಕೆ ಎಸ್ಪಿ ಮಿಥುನ್ ಕುಮಾರ್ ಭೇಟಿ ಮಾಡಿ ಪರಿಶೀಲನೆ ನಡೆಸಿದ್ದರು. ಆದರೆ ಅಪಘಾತ ಎಸಗಿದ್ದ ಕಾರು ಚಾಲಕರು ಸ್ಥಳದಿಂದ ಪರಾರಿಯಾಗಿದ್ದರು

ಅಲ್ಲದೆ ಕಾರಿಗೆ ನಂಬರ್ ಪ್ಲೇಟ್ ಕೂಡ ಇರಲಿಲ್ಲ. ಆದರೆ ಕಾರು ಬಂದು ಡಿಕ್ಕಿ ಹೊಡೆದಿದ್ದನ್ನು ರಸ್ತೆಯಲ್ಲಿ ಸಾಗುತ್ತಿದ್ದ ಪ್ರತ್ಯಕ್ಷದರ್ಶಿಯೊಬ್ಬರು ಹೇಳಿದ್ದಾರೆ. ಅವರ ಹೇಳಿಕೆ ಗಮನಿಸಿದ ಪೊಲೀಸರಿಗೆ ಅನುಮಾನ ಮೂಡಿದೆ. ಮಂಜಪ್ಪನವರ ಸಹೋದರಿ ಕುಟುಂಬ ಆಸ್ತಿ ವಿಚಾರದಲ್ಲಿ ಗಲಾಟೆ ಮಾಡಿಕೊಂಡಿದ್ದರು. ಅದರ ಮುಂದುವರಿದ ಭಾಗವಾಗಿ ಮಂಜಪ್ಪನನ್ನು ಹಳೆಯ ಕಾರು ಬಳಸಿ ಅಪಘಾತ ಎಸಗುವ ರೀತಿಯಲ್ಲಿ ಬಿಂಬಿಸಿ ಕೊಲೆ ಮಾಡಿದ್ದರು ಎಂಬುದು ಗೊತ್ತಾಗುತ್ತದೆ. ತಕ್ಷಣವೇ ಸೊರಬ ಪೊಲೀಸರು ಓರ್ವ ಮಹಿಳೆ ಸೇರಿ ನಾಲ್ವರ ವಿರುದ್ಧ ಕೇಸು ದಾಖಲಿಸಿದ್ರು. 

ಈ ಬಗ್ಗೆ ಇನ್ನಷ್ಟು ವಿಷಯ ಇಲ್ಲಿದೆ ಓದಿ : TVS ಬೈಕ್​ & OLD ಕಾರು | ಭೂಮಿ ಹುಣ್ಣಿಮೆ ದಿನ ನಡೆದಿದ್ದು ಅಪಘಾತವಲ್ಲ! ಕೊಲೆ? ಏನಿದು ಶಿವಮೊಗ್ಗದಲ್ಲಿ?

ಇದು ಉದಾಹರಣೆಯಷ್ಟೆ.. ಇದೇ ರೀತಿಯ ಘಟನೆಗಳು ಶಿವಮೊಗ್ಗದಲ್ಲಿ ಇತ್ತೀಚಿನ ದಿನಗಳಲ್ಲಿ ಸಾಕಷ್ಟು ನಡೆದಿವೆ. 

ಕಳೆದ ಎರಡು ತಿಂಗಳ ಹಿಂದೆ ಶಿರಾಳಕೊಪ್ಪ ಠಾಣಾ ವ್ಯಾಪ್ತಿಯ ತೋಗರ್ಸಿ ಬಳಿಯಲ್ಲಿ ಬೈಕ್ ಅಪಘಾತ ಎಂಬಂತೆ ದಾಖಲಾದ ಕೇಸು ಕೂಡ ನಂತರ ಕೊಲೆ ಎಂದು ಸಾಭೀತಾಯಿತು. ಬೇರೆಯವರ ಪತ್ನಿಯೊಂದಿಗೆ ಅನೈತಿಕ ಸಂಬಂದ ಹೊಂದಿದ್ದ ಕಾರ್ಮಿಕ ಆಕೆಯಿಂದ ಬಂಗಾರದ ಒಡವೆಗಳನ್ನು ಪಡೆದಿದ್ದ. ಈ ಮಾಹಿತಿ ಗಂಡನಿಗೆ ಗೊತ್ತಾಗಿ ಬಂಗಾರದ ಒಡವೆಗಳನ್ನು ಕೇಳುವ ನೆಪದಲ್ಲಿ ಕಾರ್ಮಿಕನ ಮೇಲೆ ಬೈಕ್ ಹರಿಸಿ ಕೊಲೆ ಮಾಡಿದ್ದನು.

READ : ದೇವರ ಶಾಪ? ದೇವಸ್ಥಾನದಲ್ಲಿ ಅಜ್ಜಿಯನ್ನ ಕೊಂದು, ವರ್ಷ ಕಳೆವಷ್ಟರಲ್ಲಿ ಆತನೂ ಖಲ್ಲಾಸ್! ಕೈದಿ ಕರುಣಾಕರನ ವಿಚಿತ್ರ ಕಥೆ! ಜೆಪಿ ಬರೆಯುತ್ತಾರೆ?

2016 ರಲ್ಲಿ ಶಿಕಾರಿಪುರ ಠಾಣಾ ವ್ಯಾಪ್ತಿಯ ಅಮಟೆಕೊಪ್ಪದಲ್ಲಿ ಕ್ಯಾಂಟರ್ ಬೈಕ್ ಗೆ ಗುದ್ದಿ ಅಪಘಾತವಾಗಿತ್ತು. ಅಪಘಾತದಲ್ಲಿ ಅಂಗವಿಕಲ ವ್ಯಕ್ತಿ ಸಾವನ್ನಪ್ಪಿದ್ದ. ಆದರೆ ಅಪಘಾತದ ಮಾದರಿಯನ್ನು ಅವಲೋಕಿಸಿದ ಪೊಲೀಸರಿಗೆ ಅನುಮಾನ ಕಾಡಿತ್ತು. ಸ್ವಂತ ಅಣ್ಣ ತಮ್ಮ ನ ಇನ್ಸುರೆನ್ಸ್​ಗೆ  ಓಡಾಡುತ್ತಿದ್ದ ಪರಿ ಗಮನಿಸಿದ ಪೊಲೀಸರಿಗೆ ಅನುಮಾನ ನಿಜವಾಗಿತ್ತು. ಅಣ್ಣನೇ ಅಂಗವಿಕಲ ಸಹೋದರನಿಗೆ ದೊಡ್ಡ ಮೊತ್ತದ ಇನ್ ಶುರೆನ್ಸ್ ಮಾಡಿಸಿ, ಅಪಘಾತದ ರೀತಿಯಲ್ಲಿ ಕೊಲೆ ಮಾಡಿದ್ದ.

READ : ಒಂದು ಮನೆ ಗಲಾಟೆಗೆ ಇಡೀ ಊರು ಆಗಿತ್ತು ಬಂದ್! ತನ್ನವರಿಂದ ಬೀದಿಗೆ ಬಿದ್ದವಳಿಗೆ ಸಿಕ್ಕಿದ್ದು ದೇವರ ಮಕ್ಕಳು! ಧರ್ಮ, ಜಾತಿ ಹಂಗಿಲ್ಲದೇ ಕಟ್ಟಿದ ‘ಅಜ್ಜಿಮನೆ’ ಕಥೆ! JP FLASHBACK ನಲ್ಲಿ

2017 ರಲ್ಲಿ ಶಿಕಾರಿಪುರದ ಮಾಸೂರು ರಸ್ತೆಯ ಗ್ರಾಮವೊಂದರ ಬಳಿ ಟ್ರಾಕ್ಟರ್ ಗುದ್ದಿ ಓರ್ವ ವ್ಯಕ್ತಿ ಸಾವನ್ನಪ್ಪಿದ್ದ. ಟ್ರಾಕ್ಟರ್ ಚಾಲಕ  ನಾನೆ ಅಪಘಾತ ಎಸಗಿದ್ದು ಅಂತಾ ಶಿರಾಳಕೊಪ್ಪ ಪೊಲೀಸರಿಗೆ ಶರಣಾಗಿದ್ದ. ಅಲ್ಲಿಗೆ ಕೇಸ್ ಕ್ಲೋಸ್ ಅಂದುಕೊಂಡಿದ್ದ ಗ್ರಾಮಸ್ಥರು ಇದು ಅಪಘಾತವಲ್ಲ ಮರು ತನಿಖೆ ಮಾಡಿ ಎಂದು ಪಟ್ಟು ಹಿಡಿದಾಗ  ಅಂದಿನ ಎಸ್ಪಿ ಅಭಿನವ್ ಖರೆ ಒಪ್ಪಿ ತನಿಖೆಗೆ ಆದೇಶ ಮಾಡಿದ್ದರು.. 

ಅಂದು ಟ್ರಾಕ್ಟರ್ ಚಲಾಯಿಸಿದ್ದು ಬೇರೆಯವನು ಎಂಬುದು ಗೊತ್ತಾಗುತ್ತದೆ. ಇಲ್ಲಿ ಆರೋಪಿ ವ್ಯಕ್ತಿಯೊಬ್ಬನಿಂದ ಟ್ರ್ಯಾಕ್ಟರ್​ನ್ನ ಒಂದು ಲಕ್ಷ ರೂಪಾಯಿಗೆ ಬಾಡಿಗೆ ಪಡೆದಿದ್ದ. ಆನಂತರ ಇನ್ನೊಬ್ಬ ಚಾಲಕನಿಂದ ತನ್ನ ಸಂಬಂಧಿಗೆ ಟ್ರ್ಯಾಕ್ಟರ್​ ಡಿಕ್ಕಿ ಹೊಡೆಸಿ ಕೊಲೆ ಮಾಡಿದ್ದ. ಬಳಿಕ ಟ್ರ್ಯಾಕ್ಟರ್ ಮಾಲೀಕನಿಗೆ ಹೇಳಿ ಆಕ್ಸಿಡೆಂಟ್ ಆಗಿದೆ. ಚಾಲಕನ ಬಳಿ ಡಿಎಲ್​ ಇಲ್ಲ ನೀನೇ ಸೆರೆಂಡರ್ ಆಗು ಎಂದಿದ್ದ. ಇರಬೇಕು ಅಂತಾ ಆತನು ಶರಣಾಗಿದ್ದ. ಆನಂತರ ವಿಚಾರಣೆ ಮಾಡಿದಾಗ ಕೊಲೆಯ ರಹಸ್ಯ ಬಯಲಾಗಿತ್ತು. 



ಜನವರಿ 1, 2014 ಭದ್ರಾವತಿ ನಗರದಲ್ಲಿ ಇನ್ನು ಹೊಸವರ್ಷದ ಸಂಭ್ರಮ ಮುಗಿದಿರಲಿಲ್ಲ .ಜನವರಿ ಒಂದರ ರಾತ್ರಿಯೂ ಸಹ ಹೊಸವರ್ಷದ ತಂಗಳು ಹಬ್ಬಕ್ಕೇನು ಕೊರತೆಯಿರಲಿಲ್ಲ.ಈ ಸಂತೋಷ ಸಂಭ್ರಮ ಇರುವಾಗಲೇ ಭದ್ರಾವತಿ ನಗರದ ಬೈಪಾಸ್ ನಲ್ಲಿ  ಸೈಲೆಂಟ್ ಆಗಿ ಒಂದು ಬೈಕ್ ಆಕ್ಸಿಡೆಂಟ್ ಆಗಿರುತ್ತೆ.

ಜನವರಿ 2 ರಂದು ಮುಂಜಾನೆ ಅಂದ್ರೆ 3 ಗಂಟೆಯ ಸಮಯ ಭದ್ರಾವತಿ ಬೈ ಪಾಸ್ ರಸ್ತೆಯ ಭದ್ರಾ ಸೇತುವೆಯ ಸನಿಹದಲ್ಲಿ 50 ವರ್ಷ ವಯೋಮಾನದ ವ್ಯಕ್ತಿಯೊಬ್ಬರ ಮೃತದೇಹ ಪತ್ತೆಯಾಗುತ್ತದೆ.ರಸ್ತೆ ಪಕ್ಕದಲ್ಲಿ ಹಿರೋಹೊಂಡ ಬೈಕ್ ಕೂಡ ಬಿದ್ದಿರುತ್ತೆ, ಅಪಘಾತದಲ್ಲಿ ಸಾವನ್ನಪ್ಪಿದ ಮರಿಗೌಡರ, ತಲೆಯ ಮೇಲೆ ಗಾಯದ ಗುರುತುಗಳು ಇನ್ನು  ಹಸಿಯಾಗಿಯೇ ಇರುತ್ತೆ.ತನಿಖೆ ಕೈಗೊಂಡ  ಪೊಲೀಸರಿಗೆ ಯಾರೋ ರಸ್ತೆಯಲ್ಲಿ ಹಿಟ್ ಅಂಡ್ ರನ್ ಮಾಡಿರಬೇಕು ಎಂಬ ಅನುಮಾನ ಕಾಡುತ್ತೆ.ಯಾವ ಆಂಗಲ್ ನಲ್ಲಿ ನೋಡಿದ್ರೂ ಅದು ಪಕ್ಕಾ ಅಕ್ಸಿಡೆಂಟ್ ಆಗಿರುತ್ತೆ. 

READ : ಶಿವಮೊಗ್ಗದ ಸ್ಪಾ ಮೇಲಿನ ರೇಡ್​ಗಳ ಹಿಂದೆ ಪ್ರೀತಿಸಿ ಮದುವೆಯಾದ ನವ ಜೋಡಿಯ ಕಣ್ಣೀರಿನ ಕಥೆ ! ಕೇಳದೇ ನಿಮಗೀಗಾ?

ಆದರೆ ಅಪಘಾತ ಸ್ಥಳಕ್ಕೆ ಬಂದ ಮೃತನ ಮಗನ ತಲೆ ಕೂದಲಿನ ಎಳೆಯಿಂದಲೇ ಪೊಲೀಸರು ಅನುಮಾನಗೊಳ್ಳುತ್ತಾರೆ. ತನಿಖೆ ನಡೆಸಿದ ಪೊಲೀಸರಿಗೆ ಮಗನೆ ಅಪ್ಪನ ಕೊಲೆ ಮಾಡಿರುವುದು ಗೊತ್ತಾಗುತ್ತದೆ. ಅಪ್ಪನ ಅನೈತಿಕ ಸಂಬಂಧವನ್ನು ಕಣ್ಣಾರೆ ಕಂಡಿದ್ದ ಮಗನೇ ಅಪ್ಪನನ್ನು ಮನೆಯಲ್ಲಿ ಕೊಂದು ರಸ್ತೆಯಲ್ಲಿ ಅಪಘಾತದಂತೆ ಬಿಂಬಿಸಿದ್ದ.

ಈ ಸ್ಟೋರಿ ಪೂರ್ಣ ವಿವರ ಇಲ್ಲಿದೆ ಓದಿ : ಅಪ್ಪನನ್ನೆ ಕೊಂದು, ತಲೆಬೋಳಿಸಿಕೊಂಡು ಧರ್ಮಸ್ಥಳಕ್ಕೆ ಹೋಗಿದ್ದೆ ಎಂದಿದ್ದ ಮಗ! ಜಸ್ಟ್ 10 ಗಂಟೆಯಲ್ಲಿ ಬಯಲಾಗಿತ್ತು ಆಕ್ಸಿಡೆಂಟ್ ಕೇಸ್​ನ ಮರ್ಡರ್ ಮಿಸ್ಟ್ರಿ ! JP FLASHBACK

ಹೀಗೆ ಶಿವಮೊಗ್ಗದಲ್ಲಿ ಇದುವರೆಗೂ ಸಾಕಷ್ಟು ರೋಚಕ ಕ್ರೈಂ ಪ್ರಕರಣಗಳು ನಡೆದಿವೆ. ಆದರೆ ಆರೋಪಿಗಳು ಚಾಪೆ ಕೆಳಗಷ್ಟೆ ನುಸುಳಲು ಸಾಧ್ಯ, ರಂಗೋಲಿ ಕೆಳಗೆ ನುಸಳಲು ಅವಕಾಶ ಇರೋದು ಪೊಲೀಸರಿಗೆ ಮಾತ್ರ.. ನಿತ್ಯ ಕ್ರೈಂ ಸೀನ್​ಗಳ ಜೊತೆಗೆ ಪಳಗುವ ಪೊಲೀಸರಿಗೆ, ನೆಲ ಒರಿಸಿ ಕ್ಲೀನ್ ಮಾಡಿದ ಜಾಗದಲ್ಲಿಯು ರಕ್ತದ ಸ್ಮೆಲ್​ ರಾಚುತ್ತದೆ ಎಂದರೇ ಯೋಚಿಸಿ ಪೊಲೀಸ್ ಇಲಾಖೆ ಎಷ್ಟೊಂದು ಫಾರವರ್ಡ್​ ಇದೆ ಎಂಬುದನ್ನ… 

READ : ಇಂಜಿನಿಯರ್ ಪತ್ನಿಯ ಕೊಲೆ! ಮಿಸ್ಸಿಂಗ್​​ ಆದ 32 ಲಕ್ಷ ರೂಪಾಯಿ ಎಲ್ಲಿ? ಆತ ಗೋವಾಕ್ಕೆ ಹೋಗದೇ ಮನೇಗೇಕೆ ಬಂದಿದ್ದ! ನಿಗೂಢ ಹತ್ಯೆಯ ಇನ್​ಸೈಡ್ ಸ್ಟೋರಿ JP ಬರೆಯುತ್ತಾರೆ

ದೇವಸ್ಥಾನಕ್ಕೆ ಹೋಗಿ ತಲೆ ಕೊಟ್ಟು ಈಗಷ್ಟೆ ಬಂದೆ ಎಂದ ಬುದ್ದಿವಂತನ ಮಂಡೆಯಲ್ಲಿ ಒಂದು ಇಂಚು ಕೂದಲು ಬೆಳದಿದ್ದನ್ನ ಕಂಡ ಪೊಲೀಸರು ಆಕ್ಸಿಡೆಂಟ್ ಪ್ರಕರಣವನ್ನು ಕೊಲೆ ಎಂದು ಬಯಲು ಮಾಡುತ್ತಾರೆ. ಇನ್ಸುರೆನ್ಸ್​ಗಾಗಿ ಓಡಾಡುತ್ತಿರುವ ರೀತಿ, ಜನರ ನಡುವೆ ಹಬ್ಬಿದ ಪುಕಾರು, ಮೃತನ ಮನೆಯಲ್ಲಿ ಹೊಮ್ಮಿದ ವಾಸನೆ, ಅಪಘಾತದ ನಡೆದ ಸೀನ್​ನಲ್ಲಿರುವ ವತ್ಯಾಸ, ಹೀಗೆ ಚಿಕ್ಕ ಕ್ಲೂ ಸಿಕ್ಕರೇ ಅಪರಾಧಿ ಅರೆಸ್ಟ್ ಪಕ್ಕಾ! ಆದರೆ ಹಿಟ್​ ಆ್ಯಂಡ್ ರನ್​ ಅಪಘಾತ ಪ್ರಕರಣಗಳಲ್ಲಿ ಕೊಲೆಯ ಉದ್ದೇಶ ಪದೇ ಪದೇ ಸಾಬೀತಾಗುತ್ತಿರುವುದು ನಿಜಕ್ಕೂ ಶಿವಮೊಗ್ಗದ ಮಟ್ಟಿಗೆ ದೊಡ್ಡ ಅಚ್ಚರಿ