ಇಂಜಿನಿಯರ್ ಪತ್ನಿಯ ಕೊಲೆ! ಮಿಸ್ಸಿಂಗ್​​ ಆದ 32 ಲಕ್ಷ ರೂಪಾಯಿ ಎಲ್ಲಿ? ಆತ ಗೋವಾಕ್ಕೆ ಹೋಗದೇ ಮನೇಗೇಕೆ ಬಂದಿದ್ದ! ನಿಗೂಢ ಹತ್ಯೆಯ ಇನ್​ಸೈಡ್ ಸ್ಟೋರಿ JP ಬರೆಯುತ್ತಾರೆ

Malenadu Today

KARNATAKA NEWS/ ONLINE / Malenadu today/ Jun 19, 2023 SHIVAMOGGA NEWS  

ರೆಗ್ಯುಲರ್ ಆಗಿ ಆ ಇಂಜಿನಿಯರ್ ಗೆ ಚಾಲಕನಾಗಿ ಹೋಗ್ತಿದ್ದವನು, ಅಂದು ಗೋವಾಕ್ಕೆ ಯಾಕೆ ಹೋಗಲಿಲ್ಲ….ಮನೆಯಲ್ಲಿ 35 ಲಕ್ಷ ಹಣವಿದ್ದ ಮಾಹಿತಿ ಈತನಿಗೆ ಮಾತ್ರ ಗೊತ್ತಿತ್ತಾ…? .ಟುಡೆ ತನಿಖಾ ವರದಿ

 ಜೆಪಿ ಬರೆಯುತ್ತಾರೆ

17-06-23 ರ ಸಂಜೆ ಶಿವಮೊಗ್ಗ ನಗರದ ವಿಜಯ ನಗರದ 2ನೇ ತಿರುವಿನಲ್ಲಿ ಮನೆಯಲ್ಲಿದ್ದ ಒಂಟಿ ಮಹಿಳೆ ಕಮಲಮ್ಮ(57)  ಕೊಲೆಯಾದ ಘಟನೆ ಆತಂಕವನ್ನು ಸೃಷ್ಟಿಸಿದೆ. ಮನೆಯ ಯಜಮಾನ ಗೋವಾ ಪ್ರವಾಸಕ್ಕೆ ಹೋಗಿದ್ದಾರೆ. ಇತ್ತ ಮಕ್ಕಳು ದೂರದೂರಿನಲ್ಲಿ ಕೆಲಸ ಮಾಡುತ್ತಿದ್ದಾರೆ. ಹಾಗಾಗಿ  ಕಮಲಮ್ಮ ಒಬ್ಬಂಟಿಯಾಗಿದ್ದಾರೆ ಎಂಬುದು ಯಾರಿಗೆ ಬೇಗ ಗೊತ್ತಾಗುತ್ತೆ. ಒಂದಾ ಅಕ್ಕಪಕ್ಕದ ಮನೆಯವರಿಗೆ ಇಲ್ಲವೇ ಕುಟುಂಬದವರಿಗೆ ಗೊತ್ತಿರಬೇಕು. ಆದರೆ ಇಲ್ಲಿ ಸಂಬಂಧವೇ ಇಲ್ಲದ ಮೂರನೇ ವ್ಯಕ್ತಿ ಪರಕಾಯ ಪ್ರವೇಶ ಮಾಡಿದ್ದಾನೆ. ಅದು ಯಾರು ಅಂತಾ ಕೆದಕುತ್ತಾ ಹೋದರೆ. ಅನುಮಾನದ ವಾಸನೆ ಸೀದಾ ಮನೆಯ ಕಾರು ಚಾಲಕನನ್ನೇ ಬೊಟ್ಟು ಮಾಡಿ ತೋರಿಸುತ್ತೆ.

ಮನೆಯಲ್ಲಿ ಮಿಸ್ಸಿಂಗ್​ 35 ಲಕ್ಷ ರೂಪಾಯಿ

ಹೌದು ಶಿವಮೊಗ್ಗ ನಗರದ ಪ್ರತಿಷ್ಠಿತ ವಿಜಯ ನಗರ ಬಡಾವಣೆಯಲ್ಲಿ ಮನೆಯಲ್ಲಿದ್ದ ಒಂಟಿ ಮಹಿಳೆಯನ್ನು ಕೊಲೆ ಮಾಡಿ, ದುಷ್ಕರ್ಮಿಗಳು 35 ಲಕ್ಷ ರೂಪಾಯಿ ಹಣ ದೋಚಿದ್ದರು. ಇಡೀ ಪ್ರಕರಣ ಮೋಟೋ ಇದೇ ಅನ್ನುವುದರಲ್ಲಿ ಯಾವುದೇ ಅನುಮಾನಗಳೇ ಪೊಲೀಸರಿಗೆ ಉಳಿದಿಲ್ಲ. 

ಗೋವಾ ಹೋಗಿದ್ದ ಸಮಯದಲ್ಲಿಯೇ ನಡೀತು ಹತ್ಯೆ?

ಮಲ್ಲಿಕಾರ್ಜುನಯ್ಯ ಕೆಲ ದಿನಗಳಲ್ಲಿ ನಿವೃತ್ತಿಯಾಗುವವರಿದ್ದು. ಈ ಹಿನ್ನೆಲೆಯಲ್ಲಿ  ಸ್ನೇಹಿತರೊಂದಿಗೆ  ಗೋವಾಕ್ಕೆ ತೆರಳಿದ್ರು.  ಈ ಮಧ್ಯೆ ಮಗ ಬೆಂಗಳೂರಿನಲ್ಲಿ ಈಗ ತಾನೆ ಎಂಬಿಬಿಎಸ್ ಮುಗಿಸಿ MD ಮಾಡುತ್ತಿದ್ದಾರೆ. ಮಗನ ಮೆಡಿಕಲ್ ಶುಲ್ಕ ಪಾವತಿಸಲು ಮಲ್ಲಿಕಾರ್ಜುನಯ್ಯ ಮನೆಯಲ್ಲಿ 35 ಲಕ್ಷ ಹಣವನ್ನು ಇಟ್ಟಿದ್ರು. ಈ ವಿಷಯ ಮನೆ ಚಾಲಕನಿಗೆ ಮಾತ್ರ ಗೊತ್ತಿತ್ತು. 

ಮನೆಯಲ್ಲಿ ಮಗ ಮಗಳು ಗಂಡನಿಲ್ಲದ ಹೊತ್ತಿನಲ್ಲಿ ಕಮಲಮ್ಮ ಏಕಾಂಗಿಯಾಗಿರುವುದನ್ನ ಗಮನಿಸಿದವರೇ ಈ ಹತ್ಯೆ ಮಾಡಿರಲು ಸಾಧ್ಯ. ಅಲ್ಲದೆ, ಹಣ ಇರುವ ವಿಷಯವೂ ಗೊತ್ತಿದ್ದೆ ಕೃತ್ಯವೆಸಗಿದ್ದಾರೆ ದುಷ್ಕರ್ಮಿಗಳು. 

ಕಾಡುವ ಅನುಮಾನಗಳು

ಮಲ್ಲಿಕಾರ್ಜುನಯ್ಯನವರ ಅವರು ಎಲ್ಲೇ ಹೋದ್ರೂ, ತಮ್ಮ ಖಾಸಗಿ ಕಾರಿಗೆ ಆ ಚಾಲಕನೇ ಹೋಗುತ್ತಿದ್ದ. ಆದ್ರೆ ಮೊನ್ನೆ ಮಲ್ಲಿಕಾರ್ಜುನಯ್ಯನವರು ಗೋವಾಕ್ಕೆ ಹೋಗುವಾಗ ಯಾಕೆ ಈತ ಹೋಗಲಿಲ್ಲ. 

ತನಗೆ ಗೊತ್ತಿದ್ದ ಬೇರೆ ಕಾರು ಚಾಲಕನನ್ನ ಯಾಕೆ ಕಳುಹಿಸಿದ. ಇದರ ಹಿಂದೆ ಕೊಲೆ ಮಾಡುವ ಮೋಟಿವ್ ಇದ್ದೀತಾ?

ಕಾರು ಚಾಲಕನಿಗೆ ಕಮಲಮ್ಮ ಒಬ್ಬರೇ ಇರುವ ಮಾಹಿತಿ ಪಕ್ಕಾ ಇತ್ತು. ಅದನ್ನು ತಿಳಿದೆ ಆತ  ಕೃತ್ಯಕ್ಕೆ ಸ್ಕೆಚ್​ ಹಾಕಿದ್ದನಾ?  ಕಾರು ಚಾಲಕನ ಪಾತ್ರ ಇಲ್ಲವಾದ್ರೆ..ಕಮಲನ್ನ ಕೊಲೆ ನಂತ್ರ ಆತನ ಮೊಬೈಲ್  ಯಾಕೆ ಸ್ವಿಚ್ ಆಫ್ ಆಯ್ತು.?

ಕಮಲಮ್ಮರ ಬಳಿಯಲ್ಲಿ ಹಣ ಕೇಳಿದ್ದ ಚಾಲಕ

ಮಲ್ಲಿಕಾರ್ಜುನಯ್ಯವರ ಮನೆಯಲ್ಲಿ  ಹಣವಿರುವ ಬಗ್ಗೆ ಈತನಿಗೆ ಮಾಹಿತಿ ಪಕ್ಕಾ ಇತ್ತು. ಹೀಗಾಗಿ ಈತ ಮಲ್ಲಿಕಾರ್ಜುನಯ್ಯವರು ಗೋವಾಕ್ಕೆ ಹೋದ್ರೆ  ಕಮಲಮ್ಮ ಒಬ್ಬರೇ ಇರ್ತಾರೆ ಅನ್ನೋದು ಚಾಲಕನಿಗೆ ಪಕ್ಕಾ ಇತ್ತು. ಹೀಗಾಗಿಯೇ ಹಣ ಕೇಳುವ ನೆಪದಲ್ಲಿ ಶುಕ್ರವಾರ  ಕಮಲಮ್ಮರ ಮನೆಗೆ ಹೋಗಿದ್ದಾನೆ. ಆಗ ಕಮಲಮ್ಮ ಅವರು ಗಂಡನಿಗೆ ಪೋನಾಯಿಸಿ, ಚಾಲಕ ಹಣ ಕೇಳುತ್ತಿರುವುದಾಗಿ ಹೇಳಿದ್ದಾರೆ.  ಅಂದು  ಕಮಲಮ್ಮ ತಮ್ಮ ಗಂಡನಿಗೆ ಫೋನ್ ಮಾಡದೆ ಹೋದಲ್ಲಿ ಅಂದೇ ಆಕೆಯ ಕೊಲೆಯಾಗುತ್ತಿತ್ತೇನೋ? 

ಅಂದಹಾಗೆ ಈ ಕೊಲೆಯನ್ನ ಒಬ್ಬನೇ ಮಾಡಿಲ್ಲ ಎಂಬುದು ಪೊಲೀಸರಿಗೆ ಸ್ಪಷ್ಟವಾಗಿದೆ. ಆರೋಪಿಯೊಂದಿಗೆ ಇನ್ನು ಇಬ್ಬರು ಅಥವಾ ಮೂರು ಮಂದಿ ಕೈಜೋಡಿಸಿರಬಹುದಾದ ಸಾಧ್ಯತೆಗಳು ಹೆಚ್ಚಿದೆ.ಕೊಲೆ ನಂತ್ರ ಮನೆಯಲ್ಲಿದ್ದ 35 ಲಕ್ಷ ರೂಪಾಯಿ ನಗದು ದೋಚಿದ್ದಾರೆ ಎಂದರೆ, ಸಧ್ಯಕ್ಕೆ ಆರೋಪಿಗಳು ದೂರದೂರುಗಳಲ್ಲಿ ಶೆಲ್ಟರ್ ಪಡೆದು, ಆರಾಮಾಗಿದ್ದಾರೆ ಎಂದೇ ಲೆಕ್ಕ. ಕೈಯಲ್ಲಿ ಲಕ್ಷ ಗಟ್ಟಲೇ ಹಣವಿರುವಾಗ, ಇವರು ಸಿಕ್ಕಿಬೀಳೋದು ಕಷ್ಟವಾದ್ರೂ, ಪೊಲೀಸರು ಆರೋಪಿಗಳ ಬೆನ್ನು ಬಿದ್ದಿದ್ದಾರೆ. 

ಕ್ರೈಂ ಸೀನ್ ನಲ್ಲಿ ನೇರಾನೇರ ಅನುಮಾನಗಳು ಸ್ಪಷ್ಟವಾಗಿದೆ.  ಗೊತ್ತಿದ್ದವರಿಂದಲೇ ಕೊಲೆ ನಡೆದಿದೆ ಎಂಬುದು ಮೋಲ್ನೋಟಕ್ಕೆ ಸಾಕ್ಷಿಕರಿಸುತ್ತೆ. ಎಸ್ಪಿ ಮಿಥುನ್ ಕುಮಾರ್ ಆರೋಪಿಗಳ ಪತ್ತೆ ಮೂರು ತನಿಖಾ ತಂಡಗಳನ್ನು ರಚಿಸಿದ್ದಾರೆ.

Share This Article