TVS ಬೈಕ್​ & OLD ಕಾರು | ಭೂಮಿ ಹುಣ್ಣಿಮೆ ದಿನ ನಡೆದಿದ್ದು ಅಪಘಾತವಲ್ಲ! ಕೊಲೆ? ಏನಿದು ಶಿವಮೊಗ್ಗದಲ್ಲಿ?

Details of the incident that took place in Soraba, Shimoga district ಶಿವಮೊಗ್ಗ ಜಿಲ್ಲೆ ಸೊರಬದಲ್ಲಿ ನಡೆದ ಘಟನೆ ವಿವರ

TVS  ಬೈಕ್​ & OLD ಕಾರು |  ಭೂಮಿ ಹುಣ್ಣಿಮೆ ದಿನ ನಡೆದಿದ್ದು ಅಪಘಾತವಲ್ಲ! ಕೊಲೆ? ಏನಿದು ಶಿವಮೊಗ್ಗದಲ್ಲಿ?

KARNATAKA NEWS/ ONLINE / Malenadu today/ Oct 31, 2023 SHIVAMOGGA NEWS

SORABA |  ಶಿವಮೊಗ್ಗ ಜಿಲ್ಲೆ ಸೊರಬ ತಾಲ್ಲೂಕಿನಲ್ಲಿ ಕಳೆದ ಶನಿವಾರ ಅಪಘಾತದ ಘಟನೆಯೊಂದು ನಡೆದಿತ್ತು. ಆದರೆ ಈ ಪ್ರಕರಣ ರೋಚಕ ಟ್ವಿಸ್ಟ್ ಪಡೆದುಕೊಂಡಿದೆ. ಸಣ್ಣದೊಂದು ಅಚಾತುರ್ಯದಿಂದಾಗಿ ನಡೆದಿದ್ದು ಕೊಲೆ ಎಂಬ ಅನುಮಾನ ಮೂಡಿಸಿದ್ದಷ್ಟೆ ಅಲ್ಲದೆ ಈ ಸಂಬಂಧ  ಐಪಿಸಿ IPC 1860 (U/s-120B,302,201) ಅಡಿಯಲ್ಲಿ ಸೊರಬ ಪೊಲೀಸ್ ಸ್ಟೇಷನ್​ನಲ್ಲಿ ಎಫ್ಐಆರ್ ಸಹ ದಾಖಲಾಗಿದೆ 

ಭೂಮಿ ಹುಣ್ಣಿಮೆಯ ದಿನ ಇಲ್ಲಿನ ಕುಂಬತ್ತಿ ಮಾವಲಿ ರಸ್ತೆಯಲ್ಲಿ ಘಟನೆಯೊಂದು ನಡೆದಿತ್ತು. ಭೂಮಿ ಹುಣ್ಣಿಮೆಯ ಅಂಗವಾಗಿ ಚರುಗ ಚೆಲ್ಲಲು ಇಲ್ಲಿನ ನಿವಾಸಿ ಮಂಜಪ್ಪ ಎಂಬವರು ಹೊಲಕ್ಕೆ ಹೊರಟಿದ್ದರು. ಅವರು ಹೊರಟಿದ್ದ ಟಿವಿಎಸ್​ ಬೈಕ್​ಗೆ ಕಾರೊಂದು ಡಿಕ್ಕಿ ಹೊಡೆದಿತ್ತು. ಕಾರು ಡಿಕ್ಕಿಯಾಗಿದ್ದಷ್ಟೆ ಅಲ್ಲದೆ ಮಂಜಪ್ಪರವರ ಸಮೇತ ಟಿವಿಎಸ್​ ಬೈಕ್​​ನ್ನ ಸಾಕಷ್ಟು ದೂರ ಎಳೆದುಕೊಂಡು ಹೋಗಿತ್ತು. ಈ ಘಟನೆಯಲ್ಲಿ ಮಂಜಪ್ಪ ಸಾವನ್ನಪ್ಪಿದ್ದರು. ಇನ್ನೊಂದೆಡೆ ನಂಬರ್​ ಪ್ಲೇಟ್ ಸಹ ಇಲ್ಲ ಹಳೆಯ ಕಾರನ್ನ ಅಲ್ಲಿಯೇ ಬಿಟ್ಟು ಆರೋಪಿಗಳು ಪರಾರಿಯಾಗಿದ್ದರು. 

READ : KSRTC ಬಸ್​ಸ್ಟ್ಯಾಂಡ್​ ಲೇಡಿಗೆ ಶಾಕ್​ ಕೊಟ್ಟ ದೊಡ್ಡಪೇಟೆ ಪೊಲೀಸರು! ಬಯಲಾಯ್ತು ಕೇಸ್​!

ಮೇಲ್ನೋಟಕ್ಕೆ ಈ ಘಟನೆ ಅಪಘಾತ ಎಂಬಂತೆ ಕಂಡಿತ್ತು. ಆನಂತರ ಇದೊಂದು ಕೊಲೆ ಎಂದು ಸ್ಪಷ್ಟವಾಗಿದೆ. ಇದಕ್ಕೆ ಕಾರಣವಾಗಿದ್ದು ಘಟನೆಯನ್ನು ನೋಡಿದವರು. ಹೌದು, ಮಂಜಪ್ಪರವರಿಗೆ ಅಪಘಾತವಾದ ದೃಶ್ಯವನ್ನು ಅಲ್ಲಿಯ ನಿವಾಸಿಯೊಬ್ಬರು ನೋಡಿದ್ದಾರೆ. ಕಾರಿನಲ್ಲಿದ್ದವರು ಉದ್ದೇಶಪೂರ್ವಕವಾಗಿ ಡಿಕ್ಕಿ ಹೊಡೆಸಿ ಅಪಘಾತ ಮಾಡಿರುವ ಬಗ್ಗೆ ಪ್ರತ್ಯಕ್ಷದರ್ಶಿ ಮಾಹಿತಿ ನೀಡಿದ್ದು, ಕಾರಿನಲ್ಲಿದ್ದವರು ಯಾರು ಎಂಬುದನ್ನ ಸಹ ತಿಳಿಸಿದ್ದಾರೆ.

ಮಂಜಪ್ಪರವರ ಸಹೋದರಿ ಕುಟುಂಬ ಈ ಕೃತ್ಯವೆಸಗಿರುವುದಾಗಿ ಮಂಜಪ್ಪರವರ ಪತ್ನಿ ದೂರು ನೀಡಿದ್ದಾರೆ. ಆಸ್ತಿ ವಿವಾದ ಕೋರ್ಟ್​ನಲ್ಲಿದ್ದು, ಇದೇ ಕಾರಣಕ್ಕೆ ಈ ಕೃತ್ಯವೆಸಗಿದ್ದಾರೆ ಎಂದು ಆರೋಪಿಸಲಾಗಿದೆ. ಸದ್ಯ ಪೊಲೀಸರು ಓರ್ವ ಮಹಿಳೇ ಸೇರಿ ನಾಲ್ವರ ವಿರುದ್ಧ ಕೇಸ್ ದರ್ಜ್ ಮಾಡಿದ್ದಾರೆ.