KSRTC ಬಸ್​ಸ್ಟ್ಯಾಂಡ್​ ಲೇಡಿಗೆ ಶಾಕ್​ ಕೊಟ್ಟ ದೊಡ್ಡಪೇಟೆ ಪೊಲೀಸರು! ಬಯಲಾಯ್ತು ಕೇಸ್​!

Malenadu Today

KARNATAKA NEWS/ ONLINE / Malenadu today/ Oct 31, 2023 SHIVAMOGGA NEWS

DODDAPETE POLICE STATION |  ಶಿವಮೊಗ್ಗ KSRTC ಬಸ್​ ನಿಲ್ದಾಣದಲ್ಲಿ ವಾರಕ್ಕೆ ಮೂರು ಕಳ್ಳತನ ಪ್ರಕರಣ ನಡೆಯುತ್ತಿದ್ದರೂ, ದೊಡ್ಡಪೇಟೆ ಪೊಲೀಸರು ಯಾರೊಬ್ಬರನ್ನೂ ಹಿಡಿಯುತ್ತಿಲ್ವಾ ಎಂಬ ಅನುಮಾನ ಜನರಿಗೆ ಮೂಡಿತ್ತು. ಇದರ ನಡುವೆ ಪೊಲೀಸ್ ತನಿಖಾ ತಂಡ, ಜನರ ಅನುಮಾನವೊಂದನ್ನ ಬಗೆಹರಿಸಿದ್ದು, ಒಂದು ಪ್ರಕರಣವನ್ನು ಭೇದಿಸಿದೆ. 

2 ವಾರಗಳ ಹಿಂದೆ ಕೆಎಸ್​​​ಆರ್​ಟಿಸಿ ಬಸ್​ ನಿಲ್ದಾಣದಲ್ಲಿ ಪತ್ನಿಯನ್ನ ಹಾಗೂ ಮಕ್ಕಳನ್ನ ದಾವಣಗೆರೆ ಬಸ್​ಗೆ ಹತ್ತಿಸಿ ಬಂದಿದ್ದ ಪತಿಗೆ ಶಾಕಿಂಗ್​ ಸುದ್ದಿ ಕಿವಿಗೆ ಬಿದ್ದಿತ್ತು. ಬಸ್​ನಲ್ಲಿದ್ದ ಪತ್ನಿಯ ವ್ಯಾನಿಟಿ ಬ್ಯಾಗ್​ನಲ್ಲಿದ್ದ ಚಿನ್ನವನ್ನ ಕಳ್ಳರು ದೋಚಿದ್ದರು. ಈ ಬಗ್ಗೆ ಮಲೆನಾಡು ಟುಡೆಯಲ್ಲಿ ಬಂದಿದ್ದ ವರದಿ ಇಲ್ಲಿದೆ ಓದಿ READ : ದಾವಣಗೆರೆ ಬಸ್​ನಲ್ಲಿ ಸೀಟು ಹಿಡಿದು ಪತ್ನಿಯನ್ನ ಹತ್ತಿಸಿ ಬಂದ ಪತಿಗೆ ಶಾಕ್! ರಶ್​ನಲ್ಲಿಯೇ ನಡೆದಿತ್ತು ಕಮಾಲ್​!

ಸದ್ಯ ಪ್ರಕರಣವನ್ನು ದೊಡ್ಡಪೇಟೆ ಪೊಲೀಸ್ ಠಾಣೆಯ ಪೊಲೀಸ್ ಇನ್ ಸ್ಪೆಕ್ಟರ್ ಅಂಜನ್ ಕುಮಾರ್,  ಶ್ರೀನಿವಾಸ್, ಹಾಗು ಸಿಬ್ಬಂದಿಗಳಾದ   ಪಾಲಾಕ್ಷನಾಯ್ಕ ಲಚ್ಚಾನಾಯ್ಕ, ಚಂದ್ರನಾಯ್ಕ  ರಮೇಶ್  ನಿತಿನ್,  ಸುಮಿತ್ರಾ ಬಾಯಿ ಟೀಂ ಭೇದಿಸಿದೆ. 

ಪ್ರಕರಣದ ಸಂಬಂಧ ಮಂಜುನಾಥ ಬಡಾವಣೆ ನಿವಾಸಿಯಾದ ಮಹಿಳಾ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಅಲ್ಲದೆ ಆಕೆಯಿಂದ  22 ಗ್ರಾಂ ತೂಕದ ಒಂದು ಬಂಗಾರದ ನೆಕ್ಸಸ್, ಮತ್ತು ಒಂದು ಜೊತೆ ಬಂಗಾರದ ಜುಮಕಿ 11 ಗ್ರಾಂ ತೂಕದ ತೂಕದ ಬಂಗಾರದ ಒಡವೆಗಳನ್ನು ವಶಕ್ಕೆ ಪಡೆಯಲಾಗಿದೆ. ಮೇಲಾಗಿ ಈಕೆಯನ್ನು ಇನ್ನಷ್ಟು ವಿಚಾರಣೆಗೆ ಒಳಪಡಿಸಿದ್ದಾರೆ.  


Share This Article