15 ಅಡಿ ಉದ್ದದ ಹೆಬ್ಬಾವು ಪತ್ತೆ! ಅರಣ್ಯ ಇಲಾಖೆಯಿಂದ ರಕ್ಷಣೆ

A 15-foot-long python has been found. Protection from forest department

15 ಅಡಿ ಉದ್ದದ ಹೆಬ್ಬಾವು ಪತ್ತೆ! ಅರಣ್ಯ ಇಲಾಖೆಯಿಂದ ರಕ್ಷಣೆ
A 15-foot-long python has been found. Protection from forest department

 

SHIVAMOGGA|  Jan 3, 2024  | ಶಿವಮೊಗ್ಗ ಜಿಲ್ಲೆ ಸೊರಬ ತಾಲ್ಲೂಕು ಬಸ್ತಿಕೊಪ್ಪದಲ್ಲಿ 15 ಅಡಿ ಉದ್ದದ ಹೆಬ್ಬಾವೊಂದನ್ನ ಸುರಕ್ಷಿತವಾಗಿ  ರಕ್ಷಣೆ ಮಾಡಲಾಗಿದೆ. 

ಹೆಬ್ಬಾವು 

ಬಸ್ತಿಕೊಪ್ಪದಲ್ಲಿ 15 ಅಡಿಗಳ ಹೆಬ್ಬಾವು ಪತ್ತೆಯಾಗಿದ್ದು, ಈ ಸಂಬಂಧ ಗ್ರಾಮಸ್ಥರು, ಅರಣ್ಯ ಇಲಾಖೆ ಸಿಬ್ಬಂದಿಗೆ ಮಾಹಿತಿ ನೀಡಿದ್ದರು. ಸೋಮವಾರ ರಾತ್ರಿ ಈ ಘಟನೆ ನಡೆದಿದ್ದು, ಇಲ್ಲಿನ ನಿವಾಸಿ ಗಣಪತಿ ಮಲ್ಲಾನಾಯ್ಕರ ಮನೆ ಎದುರಿನ ಹುಲ್ಲಿನ ರಾಶಿಯಲ್ಲಿ ಹೆಬ್ಬಾವು ಕಾಣಿಸಿತ್ತು. 

READ : ಶಿವಮೊಗ್ಗಕ್ಕಿಂದು ಬರಲಿದ್ದಾರೆ ಮೂವರು ಸಚಿವರು ! ವಿಶೇಷ ಏನು? ವಿವರ ಇಲ್ಲಿದೆ

ಇನ್ನು ವಿಷಯ ತಿಳಿದು ಸ್ಥಳಕ್ಕೆ ಬಂದ ಅರಣ್ಯ ಇಲಾಖೆ ಸಿಬ್ಬಂದಿ ಸ್ನೇಕ್​ ಆರೀಫ್‌ ಜೊತೆಗೂಡಿ ಹೆಬ್ಬಾವನ್ನ ಹಿಡಿದಿದ್ದಾರೆ. ಬಳಿಕ ಅದನ್ನ  ಗುಂಜನೂರು ಅರಣ್ಯಕ್ಕೆ ಬಿಟ್ಟಿದ್ದಾರೆ.  

15 ದಿನಗಳ ಹಿಂದೆಯೂ ಗ್ರಾಮದಲ್ಲಿ ಹೆಬ್ಬಾವು ಪತ್ತೆ ಯಾಗಿತ್ತು ಎಂದು ಗ್ರಾಮಸ್ಥರು ತಿಳಿಸಿದ್ದಾರೆ.  ಇನ್ನೂ ಈ ಕಾರ್ಯಚರಣೆಯಲ್ಲಿ ಆರ್‌ಎಫ್‌ಒ ಜಾವೇದ್ ಬಾಷಾ ಅಂಡಿಗೆ, ಉಪವಲಯ ಅರಣ್ಯಾಧಿಕಾರಿ ಸರಣಪ್ಪ, ಸಿಬ್ಬಂದಿ ಪ್ರಶಾಂತ್, ಹರೀಶ್, ಗ್ರಾಮಸ್ಥರಿದ್ದರು.