ಗಂಟೆ ಹನ್ನೆರಡಾದರೂ ತಗ್ಗದ ಜನ ಜಂಗುಳಿ! ಮೊಬೈಲ್ಗಳಲ್ಲಿ ಉಗ್ರಂ ವೀರಂ ಹಾವಳಿ! ಗಾಂಧಿಬಜಾರ್ ನಲ್ಲಿ ಹೇಗಿತ್ತು ಗೊತ್ತಾ ಸನ್ನಿವೇಶ
A crowd of people rushed to see the Hindu Mahasabha Ganpati decoration at Gandhi Bazaar in Shimoga ಶಿವಮೊಗ್ಗದ ಗಾಂಧಿ ಬಜಾರ್ನಲ್ಲಿ ಹಿಂದೂ ಮಹಾಸಭಾ ಗಣಪತಿ ಅಲಂಕಾರ ನೋಡಲು ಜನರ ದಂಡೆ ದಾವಿಸಿತ್ತು
KARNATAKA NEWS/ ONLINE / Malenadu today/ Sep 28, 2023 SHIVAMOGGA NEWS’
ಹಿಂದೂ ಮಹಾಸಭಾ ಗಣಪತಿ ಮೆರವಣಿಗೆ ಹಿನ್ನೆಲೆಯಲ್ಲಿ ಶಿವಮೊಗ್ಗ ಸಿಟಿ ಕೇಸರಿ ಮಯವಾಗಿದೆ. ಎಲ್ಲಿ ನೋಡಿದರೂ ಲೈಟಿಂಗ್ಸ್ ಹಾಗೂ ಕೇಸರಿ ಬಣ್ಣದ ಬಟಿಂಗ್ಸ್, ಬ್ಯಾನರ್ಗಳು ರಾರಾಜಿಸುತ್ತಿವೆ. ವಿಶೇಷವಾಗಿ ಈ ಸಲ ಸನಾತನ ಹಿಂದೂ ಧರ್ಮದ ಕಾನ್ಸೆಪ್ಟ್ನಲ್ಲಿ ಅಲಂಕಾರ ಕೈಗೊಳ್ಳಲಾಗಿದ್ದು, ಎಲ್ಲೆಡೆ ಸನಾತನ ಹಿಂಧೂ ಧರ್ಮಕ್ಕೆ ಸಂಬಂಧಿಸಿದ ಘಟನೆಗಳು ಹಾಗೂ ಇತಿಹಾಸ ಪುರುಷರ ಚಿತ್ರಗಳು ಮತ್ತು ದೇವರ ಅವತಾರಗಳ ಚಿತ್ರಣವನ್ನು ಪ್ರದರ್ಶನ ಮಾಡಲಾಗುತ್ತಿದೆ.
ಇನ್ನೂ ಶಿವಮೊಗ್ಗ ನಗರದ ಶಿವಪ್ಪನಾಯಕ ವೃತ್ತದಲ್ಲಿ ಸ್ಥಾಪಿಸಲಾಗಿರುವ ಉಗ್ರ ನರಸಿಂಹನ ಅವತಾರ ನೋಡಲು ಜನಸಾಗರವೇ ಮುಗಿಬಿದ್ದಿದೆ. ನಿನ್ನೆ ಪೊಲೀಸ್ ಇಲಾಖೆ ರಾತ್ರಿ 8.30 ಸುಮಾರಿಗೆ ಅಂಗಡಿಗಳನ್ನು ಕ್ಲೋಸ್ ಮಾಡಿಸಿತ್ತು. ಆದರೆ, ಜನರು ಮನೆಗೆ ಹೋಗದೇ ಶಿವಪ್ಪನಾಯಕ ಸರ್ಕಲ್ ಬಳಿಗೆ ದಾವಿಸಿದರು, ಗೋಪಿ ಸರ್ಕಲ್, ಅಮೀರ್ ಅಹಮದ್ ಸರ್ಕಲ್ ಹಾಗೂ ಶಿವಪ್ಪನಾಯಕ ಸರ್ಕಲ್ಗಳಲ್ಲಿ ನಡೆಯುತ್ತಿರುವ ಕೆಲಸ ಹಾಗೂ ಮಾಡಲಾದ ಅಲಂಕಾರಗಳನ್ನು ಕಣ್ತುಂಬಿಕೊಳ್ತಿದ್ದ ಜನರು ಸೆಲ್ಪಿ ಫೋಟೋಗಳನ್ನು ತೆಗೆದುಕೊಳ್ಳುತ್ತಿದ್ದರು. ಅಲ್ಲದೆ ವಿಡಿಯೋ ಮಾಡಿ ರೀಲ್ಸ್ಗಳಲ್ಲಿ ಹರಿಬಿಡುತ್ತಿದ್ದರು.
ನಿನ್ನೆ ರಾತ್ರಿ ಒಂದು ಗಂಟೆ ಸುಮಾರಿನವವರೆಗೂ ಶಿವಪ್ಪನಾಯಕ ವೃತ್ತದಲ್ಲಿ ಜನ ಜಂಗುಳಿ ಮನೆ ಮಾಡಿತ್ತು. ಕುಟುಂಬ ಸಮೇತ ಬರುತ್ತಿದ್ದ ಜನರನ್ನು ಪೊಲೀಸರು ನಿಯಂತ್ರಿಸುವ ಕೆಲಸ ಮಾಡಲಿಲ್ಲ. ಬದಲಾಗಿ ಇನ್ನಷ್ಟು ಬಂದೋಬಸ್ತ್ ಮಾಡಿ ಜನರ ಸಂಭ್ರಮಕ್ಕೆ ಅವಕಾಶ ಮಾಡಿಕೊಟ್ಟರು. ಸೆಲ್ಪಿ ಪಾಯಿಂಟ್ಗಳಲ್ಲಿ ಸೆಲ್ಪಿ ತೆಗೆದುಕೊಳ್ತಿದ್ದ ಜನರು ಉಗ್ರನರಸಿಂಹನ (Ugra Narasimha) ಅವತಾರಕ್ಕೆ ಫಿದಾ ಆಗಿದ್ದಾರೆ.
ಇನ್ನಷ್ಟು ಸುದ್ದಿಗಳು
-
ಹಿಂದೂ ಮಹಾಸಭಾ ಗಣಪತಿ ರಾಜಬೀದಿ ಉತ್ಸವ! ವಿಶೇಷ ಕಾರ್ಯನಿರ್ವಾಹಕ ದಂಡಾಧಿಕಾರಿಗಳ ನೇಮಕ! ಎಲ್ಲೆಲ್ಲಿಗೆ ಯಾರ್ಯಾರು ಓದಿ
-
2 ಲಕ್ಷ ಜನ! 3 ಸಾವಿರಕ್ಕೂ ಹೆಚ್ಚು ಪೊಲೀಸ್ ! ನಾಳಿನ ಬಂದೋಬಸ್ತ್ ಬಗ್ಗೆ ಎಸ್ಪಿ ಬ್ರೀಫಿಂಗ್!
-
ಹಿಂದೂ ಮಹಾಸಭಾದ ಮೊದಲ ಗಣಪತಿ ಪ್ರತಿಷ್ಟಾಪನೆಯಾಗಿದ್ದು ಶಿವಮೊಗ್ಗದಲ್ಲೆ! ಇಲ್ಲಿದೆ ನೋಡಿ ಇತಿಹಾಸದ ವಿನಾಯಕನ ದೃಶ್ಯಗಳು!