ಹಿಂದೂ ಮಹಾಸಭಾದ ಮೊದಲ ಗಣಪತಿ ಪ್ರತಿಷ್ಟಾಪನೆಯಾಗಿದ್ದು ಶಿವಮೊಗ್ಗದಲ್ಲೆ! ಇಲ್ಲಿದೆ ನೋಡಿ ಇತಿಹಾಸದ ವಿನಾಯಕನ ದೃಶ್ಯಗಳು!

Here is the history and rare photos of Shivamogga Hindu Mahasabha Ganapati ಶಿವಮೊಗ್ಗದ ಹಿಂದೂ ಮಹಾಸಭಾ ಗಣಪತಿಯ ಇತಿಹಾಸ ಮತ್ತು ಅಪರೂಪದ ಫೋಟೋಗಳು ಇಲ್ಲಿವೆ

ಹಿಂದೂ ಮಹಾಸಭಾದ ಮೊದಲ ಗಣಪತಿ ಪ್ರತಿಷ್ಟಾಪನೆಯಾಗಿದ್ದು ಶಿವಮೊಗ್ಗದಲ್ಲೆ!  ಇಲ್ಲಿದೆ ನೋಡಿ ಇತಿಹಾಸದ ವಿನಾಯಕನ ದೃಶ್ಯಗಳು!

KARNATAKA NEWS/ ONLINE / Malenadu today/ Sep 27, 2023 SHIVAMOGGA NEWS’ 

ಶಿವಮೊಗ್ಗ ನಗರದ ಹಿಂದೂ ಮಹಾಸಭಾ ಗಣಪನಿಗೆ ವಿಶೇಷ ಗೌರವವಿದೆ. ಏಕೆಂದರೆ ದೇಶದೆಲ್ಲೆಡೆ ಸ್ವಾತಂತ್ರ್ಯದ ಹೋರಾಟದ ವೇದಿಕೆಗಾಗಿ ಗಣಪತಿಯನ್ನು ಕೂರಿಸುವಂತೆ ಲೋಕಮಾನ್ಯ ಬಾಲಗಂಗಾದರ್ ತಿಲಕ್ ಕರೆ ಕೊಟ್ಟ ಬೆನ್ನಲ್ಲೆ ರಾಜ್ಯದಲ್ಲಿ ಮೊಟ್ಟ ಮೊದಲು ಶಿವಮೊಗ್ಗದಲ್ಲಿ ಸಾರ್ವಜನಿಕ ಗಣೇಶೋತ್ಸವವನ್ನು ಆಚರಿಸಲು ಆರಂಭಿಸಲಾಯ್ತು. ಹಾಗೆ ಆರಂಭವಾದ ಗಣಪತಿಯೆ ಹಿಂದೂ ಮಹಾಸಭಾ ಗಣಪತಿ..

ಸ್ವಾತಂತ್ರ್ಯ ಪೂರ್ವ ಇತಿಹಾಸವನ್ನು ಹೊಂದಿರುವ ಹಿಂದೂ ಮಹಾಸಭಾ ಗಣಪತಿಯ ಇತಿಹಾಸವನ್ನು ಇಣುಕಿ ನೋಡುವ ಪ್ರಯತ್ನ ಮಾಡಿದರೆ, ವಿಘ್ನ ವಿನಾಶಕ ಆರಾಧನೆಯ ಹಿನ್ನೆಲೆಯಲ್ಲಿ ಎಷ್ಟೊಂದು ವಿಷಯ ಅಡಗಿದೆ ಎಂದನಿಸದೇ ಇರಲಾರದು. 

ಕೆಲವೆಡೆ ಪ್ರಮುಖವಾಗಿ ಮಹಾನಗರಗಳಲ್ಲಿ ಪ್ರತಿಷ್ಟಾಪಿಸಲ್ಪಟ್ಟ ಗಣಪತಿಗಳನ್ನು ಒಂದೇ ದಿನ ವಿಶೇಷವಾಗಿ ವಿಸರ್ಜಿಸುವ ಕ್ರಮವಿದೆ. ಆದರೆ ಶಿವಮೊಗ್ಗದಲ್ಲಿ ಒಂದೇ ಗಣಪತಿಯ ವಿಸರ್ಜನೆಗೆ ಇಡೀ ಊರು ಜಮಾಯಿಸುವುದಷ್ಟೆ ಅಲ್ಲದೆ ಹೊರ ಊರು, ತಾಲ್ಲೂಕು, ಜಿಲ್ಲೆಗಳಲ್ಲಿಂದಲೂ ಜನರು ಬರುತ್ತಾರೆ.

 

ಶಿವಮೊಗ್ಗದ ಕೋಟೆ ರಸ್ತೆಯಲ್ಲಿರುವ ಭೀಮೇಶ್ವರ ದೇವಸ್ಥಾನದಲ್ಲಿ ಹಿಂದು ಸಂಘಟನಾ ಮಹಾ ಮಂಡಳಿ ಪ್ರತಿವರ್ಷ ಚೌತಿಯಂದು ಗಣಪತಿಯನ್ನು ಕೂರಿಸುತ್ತದೆ. ಆನಂತರ ಅನಂತ ಚತುದರ್ಶಿಯಂದು ವಿಸರ್ಜಿಸುತ್ತದೆ. ವಿಸರ್ಜನೆಗೂ ಪೂರ್ವವಾಗಿ ಗಣಪತಿಯ ರಾಜಬೀದಿ ಉತ್ಸವವೂ ನಡೆಯುತ್ತದೆ. 

ಶಿವಮೊಗ್ಗದಲ್ಲಿ 1945 ರಲ್ಲಿ ಗಣೇಶ ಮೂರ್ತಿ ಪ್ರತಿಷ್ಟಾಪನೆಗೊಂಡಿತು. ಅದಕ್ಕೂ ಮೊದಲು ಅಂದರೆ, 1938 -39ರ ಹೊತ್ತಿಗೆ ಹಿಂದೂ ಮಹಾಸಭಾ ರಚನೆಯಾಗಿತ್ತು. ವೀರ ಸಾರ್ವಕರ್​ರವರ ಸಲಹೆಯಂತೆ ಹಿಂದೂ ಮಹಾಸಭಾ 1945 ರಲ್ಲಿ ಗಣಪತಿಯನ್ನು ಮೊದಲ ಸಲ ಪ್ರತಿಷ್ಟಾಪಿಸಿತ್ತು. ಮಂಜುನಾಥ್ ರಾಯರು, ಚಂದ್ರಶೇಖರ್ ಬೂಪಾಳಂ ನಂತಹ ಹಿರಿಯರ ನೇತ್ರತ್ವದಲ್ಲಿ ಅಂದು ಗಣೇಶ ಮೂರ್ತಿ ಸ್ಥಾಪಿಸಲಾಗಿತ್ತು. ಹಿಂದುಮಹಾಸಭಾ ರಾಜಕೀಯ ಕ್ಷೇತ್ರಕ್ಕೆ ಪಾದಾರ್ಪಣೆ ಮಾಡಿದ ನಂತರ ಶಿವಮೊಗ್ಗದಲ್ಲಿ ಹಿಂದು ಸಂಘಟನಾ ಮಂಡಳಿ ನೇತ್ರತ್ವದಲ್ಲಿ ಗಣೇಶೋತ್ಸವಕ್ಕೆ ಚಾಲನೆ ನೀಡಲಾಯಿತು. 

1944 ರಲ್ಲಿ ಶಿವಮೊಗ್ಗಕ್ಕೆ ಬಂದಿದ್ದರು,ಹಿಂದೂ ಮಹಾಸಭಾದ ರಾಷ್ಟ್ರೀಯ ಅಧಿವೇಶನ ಶಿವಮೊಗ್ಗದಲ್ಲಿ ಆಯೋಜನೆಗೊಂಡಿತ್ತು. ಆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಬಂದಿದ್ದ ಅವರು, ರಾಮಣ್ಣಶ್ರೇಷ್ಠಿ ಪಾರ್ಕ್ ಗಣಪತಿ ಮತ್ತು ಹಿಂದೂ ಮಹಾಸಭಾ ಗಣಪತಿ ಪ್ರತಿಷ್ಟಾಪನೆಗೆ ಸಲಹೆ ನೀಡಿದ್ದರು. ಮರುವರ್ಷವೇ ಗಣಪತಿ ಪ್ರತಿಷ್ಟಾಪನೆ ಆರಂಭಗೊಂಡಿತು.  

ದೇಶಕ್ಕೆ ಸ್ವಾತಂತ್ರ್ಯ ಬಂದ ವರ್ಷದಲ್ಲಿ ವೈಚಾರಿಕ ಮತ್ತು ಧಾರ್ಮಿಕ ವಿಚಾರೆಧಾರೆಗಳ ಬಿಸಿಬಿಸಿ ಚರ್ಚೆಗಳು ನಡೆಯುತ್ತಿದ್ದ ಸಂದರ್ಭವದು. ಪ್ರಾರ್ಥನಾ ಮಂದಿರಗಳ ಮುಂದೆ ಮಂಗಳವಾದ್ಯ ನುಡಿಸದಂತೆ ತಡೆಯಿತ್ತು. ಇದನ್ನು ಧಾರ್ಮಿಕ ಸ್ವಾತಂತ್ರ್ಯದ ಸಾವಿಂಧಾನಿಕ ಹಕ್ಕುಚ್ಯುತಿ ಎಂದು ಭಾವಿಸಿದ ಹಿಂದು ಮಹಾಮಂಡಳಿ, 1947 ರ ಗಣೇಶೋತ್ಸವ ಸಂದರ್ಭದಲ್ಲಿ ಮಂಗಳವಾದ್ಯ ನುಡಿಸುತ್ತಲೇ ಆಗ ಕರೆಯಲಾಗುತ್ತಿದ್ದ ದೊಡ್ಡಪೇಟೆಯಲ್ಲಿ ಸಾಗಲು ಮುಂದಾಯ್ತು..

ಧರ್ಮಸಿಂಗ್ ಎಂಬವರು ಮಸೀದಿ ಮುಂದೆ ತುತ್ತೂರಿ ಊದುತ್ತಾ ಸಾಗಿದರು. ಸನ್ನಿವೇಶ ಬದಲಾಗಿ ಗಲಾಟೆಯಾಯ್ತು.  ಶಿವಮೂರ್ತಿ ಎನ್ನುವ 26 ವರ್ಷದ ಯುವಕನ ಹತ್ಯೆಯಾಯ್ತು. 

ಗಲಭೆ ಹಿನ್ನಲೆಯಲ್ಲಿ ಶಿವಮೊಗ್ಗ ನಗರದಲ್ಲಿ ವಾರಗಟ್ಟಲೆ ಕರ್ಪೂ ವಿಧಿಸಲಾಯಿತು.ಗಣೇಶ ಪೊಲೀಸ್ ಠಾಣೆ ಮೆಟ್ಟಲೇರಿದ.ನಂತರ ಪೊಲೀಸರ ಸರ್ಪಗಾವಲಿನಲ್ಲಿ ವಿಸರ್ಜನೆ ಮಾಡಲಾಯಿತು.

ಶಿವಮೂರ್ತಿ ಯುವಕನ ನೆನಪಿನಲ್ಲಿ ಶಿವಮೊಗ್ಗದ ಕುವೆಂಪು ರಸ್ತೆಯಲ್ಲಿರುವ ವೃತ್ತಕ್ಕೆ ಶಿವಮೂರ್ತಿ ಸರ್ಕಲ್ ಎಂದು ನಾಮಕರಣ ಮಾಡಲಾಗಿದೆ. ಪ್ರತಿ ವರ್ಷ ಗಣಪತಿ ಹಬ್ಬದ ಸಂದರ್ಭದಲ್ಲಿ ಈ ಸರ್ಕಲ್ ವೃತ್ತದಲ್ಲಿ ಶಿವಮೂರ್ತಿ ಪೋಟೋ ಇಟ್ಟು ಪ್ರತಿವರ್ಷ ಗೌರವ ಸಲ್ಲಿಸಲಾಗುತ್ತಿದೆ. 

ಧಾರ್ಮಿಕ ಸ್ವಾತಂತ್ರ್ಯದ ಹಕ್ಕು ಪ್ರತಿಪಾಧಿಸಿ,ಹಿಂದು ಸಂಘಟನೆಯ ಅಧ್ಯಕ್ಷರಾಗಿದ್ದ ಹನುಮಂತರಾಯರು ಕೋರ್ಟ್ ಮೆಟ್ಟಲೇರಿದರು. 1950 ಜನವರಿ 30 ರಲ್ಲಿ  ಅಂದಿನ ಮೈಸೂರು ಶ್ರೇಷ್ಠ ನ್ಯಾಯಾಸ್ಥಾನದ ನ್ಯಾ. ಎನ್‌. ಬಾಲಕೃಷ್ಣಯ್ಯ ಮತ್ತು ನ್ಯಾ. ಮಲ್ಲಪ್ಪ ಅವರು ತೀರ್ಪು ನೀಡಿದ್ದರು, ಧಾರ್ಮಿಕ ಪದ್ಧತಿಗೆ ಅನುಗುಣವಾಗಿ ನೆಡೆಯುವ ಕಾರ್ಯ,ಅದು ಸಂವಿದಾನದತ್ತ ಹಕ್ಕು. ಅದನ್ನು ತಡೆಯಲು ಯಾರಿಗೂ ಅಧಿಕಾವಿಲ್ಲ ಎಂದು ತೀರ್ಪು ನೀಡಿತು.

1975 ರ ತುರ್ತು ಪರಿಸ್ಥಿತಿಯ ಕರಿನೆರಳು ಸಹ ಹಿಂದುಮಹಾಸಭಾ ಗಣೇಶಮೂರ್ತಿಯನ್ನು ಸಹ ತಟ್ಟದೆ ಬಿಟ್ಟಿರ್ಲಿಲ್ಲ. ಜಿಲ್ಲಾಡಳಿತ, ಮುಜರಾಯಿ ಇಲಾಖೆ ಸುಪರ್ಧಿಗೆ ಒಳಪಟ್ಟಿರುವ, ಭೀಮೇಶ್ವರ ದೇವಸ್ಥಾನದಲ್ಲಿ, ಹಿಂದುಮಹಾ ಸಂಘಟನಾ ಮಂಡಳಿಗೆ ಗಣೇಶಮೂರ್ತಿ ಪ್ರತಿಷ್ಠಾಪಿಸಲು ಅವಕಾಶ ನೀಡ್ಲಿಲ್ಲ. ಆದಾಗ್ಯು ಗಣಪತಿಯು ಕೋಟೆ ಪೊಲೀಸ್ ಸ್ಟೇಷನ್​ ಸಮೀಪವಿದ್ದ ಜಾಗದಲ್ಲಿ ಪ್ರತಿಷ್ಟಾಪನೆಗೊಂಡಿತು. 

1976 ರಲ್ಲಿ ಸಹ ಗಣೇಶ ಮೂರ್ತಿ ಕೂರಿಸಲು ಅವಕಾಶ ನೀಡದ ಸಂದರ್ಭದಲ್ಲಿ ಹಬ್ಬದ ಮಾರನೇ ದಿನ ಗಣೇಶನನ್ನು ಕೂರಿಸಲಾಯಿತು.ಮೆರವಣಿಗೆಗೆ ಅವಕಾಶ ನೀಡದೇ ಗಣಪತಿಯನ್ನು ಕೋಟೆ ಠಾಣೆಗೆ ಶಿಫ್ಟ್ ಮಾಡಲಾಗಿತ್ತು. ಅಲ್ಲಿ ನಿತ್ಯ ಪೂಜೆ ನಡೆಯುತ್ತಿತ್ತು, ಗಣೇಶ ಮೂರು ತಿಂಗಳು ಅಲ್ಲಿಯೇ ಇದ್ದ. ಹಿಂದೂ ಮುಖಂಡರೊಂದಿಗೆ ಪೊಲೀಸರು ಸಹ ಗಣೇಶನ ಆರಾಧನೆಯಲ್ಲಿ ತೊಡಗಿದ್ದರು, ಕೊನೆಗೆ ಪೊಲೀಸರೇ ಗಣೇಶ ಮೂರ್ತಿಯನ್ನು ವಿಸರ್ಜಿಸಿದರು 

ಆನಂತರ 51 ನೇ ವರ್ಷದ ಗಣೇಶೋತ್ಸವದ ಆಚರಣೆ ವೇಳೆ ನಡೆದ ಘಟನೆಗಳಿಂದ ಬೇಸತ್ತು  ಹಿಂದೂ ಸಂಘಟನೆ ಮಂಡಳಿಯವರು 7 ವರ್ಷಗಳ ಕಾಲ ವಿಸರ್ಜನಾ ಮೆರವಣಿಗೆಯನ್ನು ಸ್ಥಗಿತಗೊಳಿಸಿದ್ರು, ಬೀಮೇಶ್ವರ ದೇವಸ್ಥಾನದ ಪಕ್ಕದಲ್ಲಿರುವ ತುಂಗಾ ನದಿಗೆ ಗಣಪನನ್ನು ಸರಳವಾಗಿ ವಿಸರ್ಜನೆ ಮಾಡುತ್ತಿದ್ರು. ಆಗ ಸಾಕಷ್ಟು ಚರ್ಚೆಗಳು ನಡೆದವು, ವಿರೋಧ ವ್ಯಕ್ತವಾದವು, ಓಂ ಗಣಪತಿ ಆರಂಭವಾಯ್ತು, 

1947 ರ ಗಲಭೆ ಧಾರ್ಮಿಕ ಸಿದ್ದಾಂತದ ಹಿನ್ನಲೆಯಲ್ಲಿ ಆದ ಸಂಘರ್ಷ. ಆದಾದ ನಂತರ ಎಲ್ಲೂ ಎರಡು ಕೋಮಿನವರು ನೇರವಾಗಿ ಹೊಡೆದಾಡಿದ್ದೇ ಇಲ್ಲ. ಆದರೂ ಹೆಚ್ ಎಂ ಎಸ್ ಗಣಪ ಗಲಾಟೆ ಗಣಪನಾಗಿದ್ದ. ಆದರೆ ಈಗ ಮತ್ತೆ ಹಿಂದೂ ಮಹಾಸಭಾ ಗಣಪತಿ ಸಂಭ್ರಮದ ಸಂಕೇತವಾಗಿ ಶಿವಮೊಗ್ಗದಲ್ಲಿ ರಾರಾಜಿಸುತ್ತಿದ್ದಾನೆ. ನಾಳೆ ವಿಘ್ನ ನಿವಾರಕನ ಮೆರವಣಿಗೆ  ರಾಜಬೀದಿಗಳಲ್ಲಿ ಸಾಗಲಿದೆ. ಶಿವಮೊಗ್ಗ ವಿನಾಯಕನ ಎದುರು ನಾಳೆ ಉತ್ಸವ ನಡೆಸಲಿದೆ.. 


ಇನ್ನಷ್ಟು ಸುದ್ದಿಗಳು 

  1. BREAKING NEWS / ಜೋಗದ ಸಮೀಪ ನೀರಿಗಿಳಿದಿದ್ದ ಓರ್ವ ಅಧಿಕಾರಿ ಮತ್ತು ಬ್ಯಾಂಕ್ ಉದ್ಯೋಗಿ ಸಾವು! ಕಾರ್ಗಲ್​ ಸ್ಟೇಷನ್ ವ್ಯಾಪ್ತಿಯಲ್ಲಿ ನಡೆದಿದ್ದೇನು?

  2. ಲೋಡ್ ಗಾಡಿಯಿಂದ ಬಿದ್ದ ಮರದ ತುಂಡು ಬಡಿದು ಬೈಕ್​ ಸವಾರನ ಸ್ಥಿತಿ ಗಂಭೀರ! ಹೀಗೂ ಆಗುತ್ತೆ ಹುಷಾರು ತಪ್ಪದಿರಿ ವಾಹನ ಸವಾರರೇ?

  3. ದೌರ್ಜನ್ಯ ಪ್ರಕರಣ ! ಶಿವಮೊಗ್ಗ ಡಿಸಿಯಿಂದ 15 ಸೂಚನೆ! ಯುವಕನ ಸಾವು, ಮರಳು, ಅಧಿಕಾರಿಗಳಿಂದ ಕಿರುಕುಳ ಬಗ್ಗೆ ಜಿಲ್ಲಾಧಿಕಾರಿ ಹೇಳಿದ್ದೇನು?