ಮಟಮಟ ಮಧ್ಯಾಹ್ನ ಯುವತಿಯನ್ನು ಕಾಡಿಗೆ ಎಳೆದೊಯ್ದು ದರೋಡೆ! ಚಿತ್ರದುರ್ಗಕ್ಕೆ ಹೊರಟಿದ್ದಾಗ ಜಾವಳ್ಳಿಯಲ್ಲಿ ಘಟನೆ

A young woman was dragged to the forest and robbed in the afternoon! Incident at Javali while going to Chitradurga

ಮಟಮಟ ಮಧ್ಯಾಹ್ನ ಯುವತಿಯನ್ನು ಕಾಡಿಗೆ ಎಳೆದೊಯ್ದು ದರೋಡೆ! ಚಿತ್ರದುರ್ಗಕ್ಕೆ ಹೊರಟಿದ್ದಾಗ ಜಾವಳ್ಳಿಯಲ್ಲಿ ಘಟನೆ
Chitradurga, javalli

Shivamogga  Apr 17, 2024  | ಶಿವಮೊಗ್ಗ ತಾಲ್ಲೂಕು ಜಾವಳ್ಳಿಯಲ್ಲಿ ತಲೆತಗ್ಗಿಸುವ ಘಟನೆಯೊಂದು ನಡೆದಿದೆ. ದೂರದೂರಿಗೆ ಪ್ರಯಾಣ ಮಾಡ್ತಿದ್ದ ಯುವತಿಯೊಬ್ಬಳನ್ನ ಕಾಡಿಗೆ ಎಳದೊಯ್ದು ಡಕಾಯಿತಿ ಮಾಡಿದ್ದಷ್ಟೆ ಅಲ್ಲದೆ ಆಕೆಯ ಸ್ನೇಹಿತನ ಮೇಲೂ ಹಲ್ಲೆ ಮಾಡಿದ ಘಟನೆ ನಡೆದಿದೆ. ಅದೃಷ್ಟಕ್ಕೆ ತೋಟದಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿಯೊಬ್ಬನಿಂದ ಇಬ್ಬರು ದರೋಡೆಕೋರರಿಂದ ಪಾರಾಗಿ ಬಂದಿದ್ದಾರೆ. 



ಹೊಳೆಹೊನ್ನೂರು ಪೊಲೀಸ್‌ ಸ್ಟೇಷನ್‌ನಲ್ಲಿ ಕೇಸ್‌ 

ಶಿವಮೊಗ್ಗದ ಹೊಳೆಹೊನ್ನೂರು ಪೊಲೀಸ್‌ ಸ್ಟೇಷನ್‌ ಲಿಮಿಟ್ಸ್‌ ನಲ್ಲಿ  ಈ ಘಟನೆ ನಡೆದಿದ್ದು ಕಳೆದ 14 ನೇ ತಾರೀಖು ಮಧ್ಯಾಹ್ನ  2 ಗಂಟೆಗೆ ಕೃತ್ಯ ನಡೆದಿದೆ. ಶಿವಮೊಗ್ಗ ಸುಬ್ಬಯ್ಯ ಕಾಲೇಜಿನಿಂದ ಯುವತಿ ಯೊಬ್ಬರು ತಮ್ಮ ಸ್ನೇಹಿತ ಜಗದೀಶ್‌ ಜೊತೆಗೆ ಬೈಕ್‌ನಲ್ಲಿ ಚಿತ್ರದುರ್ಗಕ್ಕೆ ಹೊರಟಿದ್ದರು. (ವೈಯಕ್ತಿಕ ವಿವರಗಳು ಗೌಪ್ಯವಾಗಿದೆ) ಜಾವಳ್ಳಿ ಸಮೀಪ ಯುವತಿ ನೇಚರ್‌ ಕಾಲ್‌ಗೆ ಅಂತಾ ಬೈಕ್‌ ನಿಲ್ಲಿಸಿ ಅಲ್ಲಿಯೇ ಇದ್ದ ನೀಲಗಿರಿ ಪ್ಲಾಂಟೇಶನ್‌ಗೆ ತೆರಳಿದ್ದಾರೆ. ಈ ವೇಳೆ ಸ್ನೇಹಿತ ಬೈಕ್‌ ಬಳಿಯೇ ನಿಂತಿದ್ದ. ಆದರೆ ಅತ್ತ ಯುವತಿ ಪ್ಲಾಂಟೇಶನ್‌ನೊಳಗೆ ಹೋಗಿದ್ದಾಗ ಅಲ್ಲಿಗೆ ಬಂದ ದರೋಡೆಕೋರರ ಗುಂಪೊಂದು ಯುವತಿಯನ್ನ ಹಿಡಿದು ಹಲ್ಲೆ ಮಾಡಿದೆ. 

ಆರು ಜನರಿದ್ದ ತಂಡ ಯುವತಿಯ 20 ಗ್ರಾಂ ಬಂಗಾರದ ಚೈನ್ ಅನ್ನು ಕಿತ್ತು ಕೊಂಡು ಹಲ್ಲೆ ನಡೆಸಿದೆ. ಈ ವೇಳೆ ಯುವತಿ ಕಿರುಚಲು ಆರಂಭಿಸಿದ್ದಾಳೆ. ಆಕೆಯ ಆರ್ತನಾದ ಕೇಳಿ ಸ್ನೇಹಿತ ಅಲ್ಲಿಗೆ ಬಂದು ದರೋಡೆಕೋರರಿಂದ ಯುವತಿಯನ್ನ ರಕ್ಷಿಸಲು ಮುಂದಾಗಿದ್ದಾರೆ. ಈ ವೇಳೆ ಆತನ ಮೇಲೂ ಹಲ್ಲೆ ನಡೆಸಿದ ಗುಂಪು ಆತನ ಬಳಿಯಿದ್ದ 3000/ ರೂ ಹಣವನ್ನು ಮತ್ತು ಒಂದು ವಾಚ್ ಮತ್ತು ವಿವೋ ಕಂಪನಿಯ ವೈ 16 ಮೊಬೈಲ್ ಅನ್ನು ಕಿತ್ತು ಕೊಂಡಿದೆ. 

ಇದೇ ವೇಳೆ ಗಲಾಟೆಯಾಗುತ್ತಿರುವುದನ್ನ ಗಮನಿಸಿದ ಅಲ್ಲಿನ ತೋಟವೊಂದರಲ್ಲಿದ್ದ ವ್ಯಕ್ತಿಯೊಬ್ಬರು ಏ..ಏನದು.. ಎಂದು ಕೂಗಿಕೊಂಡು ಓಡಿ ಬಂದಿದ್ದಾರೆ. ಇದನ್ನ ಗಮನಿಸಿದ ತಂಡ ಅಲ್ಲಿಂದ ಕಾಲ್ಕಿತ್ತಿದೆ. ಯುವತಿಯನ್ನ ರಕ್ಷಿಸಿದ ತೋಟದ ಕೆಲಸಗಾರ, ಊರು ಕೇರಿಯವರನ್ನ ಕರೆದು ವಿಷಯ ತಿಳಿಸಿದ್ದಾರೆ. ಊರಿನವರು ಸುತ್ತಮುತ್ತ ಆರೋಪಿಗಳಿಗಾಗಿ ಹುಡುಕಾಡಿದ್ದಾರೆ. ಅಷ್ಟರಲ್ಲಿ ದುಷ್ಕರ್ಮಿಗಳು ತಪ್ಪಿಸಿಕೊಂಡಿದ್ದಾರೆ. ಇನ್ನೂ ದರೋಡೆ ಕೋರರ ತಂಡದಲ್ಲಿದ್ದ ಒಬ್ಬ ವ್ಯಕ್ತಿಯನ್ನ ಅಲ್ಲಿದ್ದವರು ಗುರುತಿಸಿದ್ದಾರೆ. 

ಇಷ್ಟೆಲ್ಲಾ ವಿವರಗಳೊಂದಿಗೆ ಯುವತಿ ಹೊಳೆಹೊನ್ನೂರು ಪೊಲೀಸ್‌ ಸ್ಟೇಷನ್‌ನಲ್ಲಿ ಕೇಸ್‌ ದಾಖಲಿಸಿದ್ದು,  ಐಪಿಸಿ ಸೆಕ್ಷನ್‌  395 ದರೋಡೆ ಹಾಗೂ ಸೆಕ್ಷನ್‌ 397 ಮರಣ ಅಥವಾ ತೀವ್ರ ಗಾಯಗೊಳಿಸಿ ಸುಲಿಗೆ ಮಾಡಿದ ಆರೋಪದಡಿಯಲ್ಲಿ ಎಫ್‌ಐಆರ್‌ ಫೈಲ್‌ ಮಾಡಿದ್ದಾರೆ. 

ಐಪಿಸಿ ಸೆಕ್ಷನ್‌ ಹೇಳುವುದೇನು?

395. ದರೋಡೆಗಾಗಿ ದಂಡನೆ- ದರೋಡೆಯನ್ನು ಮಾಡುವ ಯಾರೇ ವ್ಯಕ್ತಿಯು ಅಜೀವ ಕಾರಾವಾಸದಿಂದ ಅಥವಾ ಹತ್ತು ವರ್ಷಗಳವರೆಗೆ ವಿಸ್ತರಿಸಬಹುದಾದ ಅವಧಿಯ ಕಠಿಣ ಕಾರಾವಾಸದಿಂದ ದಂಡಿತನಾಗತಕ್ಕದ್ದು ಮತ್ತು ಜುಲ್ಮಾನೆಗೂ ಸಹ ಗುರಿಯಾಗತಕ್ಕದ್ದು.

397. ಮರಣ ಅಥವಾ ತೀವ್ರ ಗಾಯವನ್ನುಂಟು ಮಾಡಲು ಪ್ರಯತ್ನಿಸಿ ಸುಲಿಗೆ ಅಥವಾ ದರೋಡೆ ಮಾಡುವುದು. ಸುಲಿಗೆ ಅಥವಾ ದರೋಡೆ ಮಾಡುವ ಸಮಯದಲ್ಲಿ ಅಪರಾಧಿಯು ಮಾರಕ ಆಯುಧವನ್ನು ಬಳಸಿದರೆ ಅಥವಾ ಯಾರೇ ವ್ಯಕ್ತಿಗೆ ತೀವ್ರ ಗಾಯವನ್ನುಂಟು ಮಾಡಿದರೆ ಅಥವಾ ಯಾರೇ ವ್ಯಕ್ತಿಗೆ ಮರಣ ಅಥವಾ ತೀವ್ರ ಗಾಯವನ್ನುಂಟು ಮಾಡಲು ಪ್ರಯತ್ನಿಸಿದರೆ ಅವನಿಗೆ ವಿಧಿಸಬೇಕಾದ ಕಾರಾವಾಸವು ಏಳು ವರ್ಷಗಳಿಗಿಂತ ಕಡಿಮೆಯಾಗಿರತಕ್ಕದ್ದಲ್ಲ.