ಕ್ವಿಂಟಾಲ್‌ ಅಡಿಕೆ ರೇಟು 55 ಸಾವಿರ ಪ್ಲಸ್‌ | ಅಡಕೆ ಮರದೆತ್ತರ ತಲುಪಿದ ದರ | ಇನ್ನೆಷ್ಟು ಜಾಸ್ತಿಯಾಗಬಹುದು? ತೀರ್ಥಹಳ್ಳಿ ಪ್ರತಾಪ್‌ ವರದಿ

The rate of arecanut per quintal is Rs 55,000 plus | The price of areca nut has reached the top of the tree | How much more can it be? Thirthahalli Pratap Report

ಕ್ವಿಂಟಾಲ್‌ ಅಡಿಕೆ ರೇಟು 55 ಸಾವಿರ ಪ್ಲಸ್‌ |  ಅಡಕೆ ಮರದೆತ್ತರ ತಲುಪಿದ ದರ | ಇನ್ನೆಷ್ಟು ಜಾಸ್ತಿಯಾಗಬಹುದು? ತೀರ್ಥಹಳ್ಳಿ ಪ್ರತಾಪ್‌ ವರದಿ
Thirthahalli Pratap, rate of arecanut per quintal

Shivamogga  Apr 17, 2024  | ಅರ್ಧ ಶತಕದ ಗಡಿ ದಾಟಿದ ಅಡಿಕೆ ರೇಟ್ \ ಅಡಿಕೆ ಸ್ಟಾಕ್ ಇಟ್ಟ ರೈತರ ಮೊಗದಲ್ಲಿ ಮಂದಹಾಸ \ ಅಡಿಕೆ ರೇಟ್ ಹೆಚ್ಚಲು ಕಾರಣವೇನು  ತೀರ್ಥಹಳ್ಳಿ ಪ್ರತಾಪ್‌ರವರ ವರದಿ

ಕಳೆದ ಮೂರ್ನಾಲ್ಕು ತಿಂಗಳುಗಳಿಂದ 47 ಸಾವಿರದಿಂದ  49 ಸಾವಿರ ರೂಪಾಯಿ ಆಸು ಪಾಸಿನಲ್ಲಿದ್ದ ಅಡಿಕೆ ಧಾರಣೆ ಕಳೆದ ಮೂರ್ನಾಲ್ಕು ದಿನಗಳಿಂದ ಏರುಗತಿಯಲ್ಲಿ ಸಾಗಿ ಕಳೆದ ಮಂಗಳವಾರ ಕ್ವಿಂಟಾಲ್ ಗೆ 50 ಸಾವಿರದ ಗಡಿ ದಾಟಿದೆ.  ಇವತ್ತಿಗೆ 10 ವರ್ಷಗಳ ಹಿಂದೆ ಅಡಿಕೆ ಧಾರಣೆ 80,000 ವರೆಗೂ ತಲುಪಿತ್ತು ಅದರ ನಂತರ ತೋಟದ ವ್ಯಾಪ್ತಿ ಗಣನೀಯವಾಗಿ ಏರಿಕೆ ಕಂಡಿತು.  ಹೀಗಾಗಿ ಅಡಿಕೆ ಪೂರೈಕೆ ಹೆಚ್ಚಳವಾಗಿ ರೇಟು ಕುಸಿಯಲು ಆರಂಭಿಸಿತು. ಆದಾಗ್ಯು ಡಿಮ್ಯಾಂಡ್‌ ಹೆಚ್ಚಳವಾದ ಹಿನ್ನೆಲೆಯಲ್ಲಿ ಕಳೆದ ಮಾರ್ಚ್, ಏಪ್ರಿಲ್ ತಿಂಗಳಲ್ಲಿ ಧಾರಣೆ ಪ್ರತಿ ಕ್ವಿಂಟಾಲ್‌ 57,000 ಮುಟ್ಟಿತ್ತು. ಆನಂತರ ಸುಗ್ಗಿ ಶುರುವಾಗುತ್ತಲೇ ಕ್ವಿಂಟಾಲ್‌ಗೆ 44-45  ಸಾವಿರಕ್ಕೆ ಕುಸಿಯಿತು. ಈ ಸಲ ಮತ್ತೆ ಅಡಕೆ ರೇಟು ಅಡಿಕೆ ಮರದ ತುದಿ ಮುಟ್ಟುತ್ತಿದೆ. ಜೊತೆಯಲ್ಲಿಯೇ ಅಡಕೆ ದರ ಆಕಾಶಕ್ಕೆ ಏರಬಹುದು ಎನ್ನುವ ನಿರೀಕ್ಷೆಯು ಹೆಚ್ಚಾಗಿದೆ. ಅಡಕೆ ಮಾರದೇ ಪಡಸಾಲೆಯಲ್ಲಿ ಇಟ್ಟಿರುವ ಮಂದಿ ಅಡಕೆ ರೇಟು ಎಲ್ಲಿತನಕ ಹೋಗಬಹುದು ಎಂಬ ಚರ್ಚೆ ನಡೆಸ್ತಿದ್ದಾರೆ. 

ಈ ಸಮಯದಲ್ಲಿ ಅಡಿಕೆ ರೇಟ್ ಹೆಚ್ಚಾಗಲು ಕಾರಣವೇನು?

ಸಾಮಾನ್ಯವಾಗಿ ಏಪ್ರಿಲ್ ಹಾಗೂ ಮೇ ತಿಂಗಳಲ್ಲಿ ಅಡಿಕೆ ರೇಟ್ ಹೆಚ್ಚಾಗುವುದು ಸಹಜ. ಅದರಂತೆ ಈ ಬಾರಿಯೂ ಸಹ ಅಡಿಕೆ ಧಾರಣೆ ಪ್ರತಿ ಕ್ವಿಂಟಾಲ್ ಗೆ ಅರ್ಧ ಶತಕದ ಗಡಿ ದಾಟಿದೆ. ಇದಕ್ಕೆ ಕಾರಣವೇನು ಎಂದು ನೋಡುವುದಾದರೆ. ಮಲೆನಾಡು ಪ್ರದೇಶಗಳಲ್ಲಿ ಈಗಾಗಲೇ ಅಡಿಕೆ ಸೀಸನ್ ಮುಗಿದಿದೆ. ಹಾಗೆಯೇ ಬಹುತೇಕ ಮಧ್ಯಮ ವರ್ಗದ ರೈತರು ಅಡಿಕೆಯ ಮೇಲೆ ಸಾಲ ತೆಗೆದು ಕೊಂಡಿರುವುದರಿಂದ ಈಗಾಗಲೇ ಅಡಿಕೆಯನ್ನು ಮಾರುಕಟ್ಟೆಗೆ ಕೊಟ್ಟಾಗಿರುತ್ತದೆ. ಆದರೆ ಶ್ರೀಮಂತ ಅಡಿಕೆ ಬೆಳೆಗಾರರು ಅಡಿಕೆ ಧಾರಣೆ ಐವತ್ತು ಸಾವಿರ ದಾಟಿದರೂ ಸಹ ಅಡಿಕೆಯನ್ನು ಮಾರಾಟ ಮಾಡುವ ಮನಸ್ಸು ಮಾಡುವುದಿಲ್ಲ ಏಕೆಂದರೆ ಅವರಿಗೆ ಅಡಕೆ ಮಾರಾಟ ಮುಗಿಯುವ ಹೊತ್ತಿಗೆ ರೇಟು ಆಕಾಶ ನೋಡುತ್ತೆ ಎಂಬ ಅನುಭವದ ಅರಿವಿರುತ್ತದೆ. 

ಇದಕ್ಕೆ ಪೂರಕವಾಗಿ ಕಳೆದ ವರ್ಷದ ಏಪ್ರಿಲ್ ಹಾಗೂ ಮೇ ತಿಂಗಳಲ್ಲಿ ಅಡಿಕೆ ಧಾರಣೆ ಪ್ರತಿ ಕ್ವಿಂಟಾಲ್‌ಗೆ  57000 ಸಾವಿರ ದಾಟಿತ್ತು. ಈ ಬಾರಿ 50000 ಸಾವಿರ ಅಷ್ಟೇ ಇದೇ ಹಾಗಾಗಿ ಇನ್ನೂ ಅಡಿಕೆ ರೇಟ್ ಹೆಚ್ಚಾಗಬಹುದು ಎಂಬ ನಿರೀಕ್ಷೆಯಲ್ಲಿ ಕಾಯುತ್ತಿದ್ದಾರೆ. ಈ ಕಡೆ ಅಡಿಕೆ ಮಂಡಿಗಳಲ್ಲಿಯು ಸಹ ಅಡಿಕೆ ಆವಕ ಕಡಿಮೆಯಾಗಿದೆ. ಅಡಿಕೆ ಟ್ರೇಡರ್ಸ್‌ ಡಿಮ್ಯಾಂಡ್‌ ಹೆಚ್ಚಾಗಿದೆ. ಹೀಗಾಗಿ ಅಡಿಕೆ ಬೆಲೆ ಹೆಚ್ಚಾಗುತ್ತಿದೆ. ಇದು ರೈತರನ್ನು ಮಂಡಿಗೆ ಸೆಳೆಯುವ ಮಾರ್ಕೆಟಿಂಗ್‌ ತಂತ್ರವೂ ಆಗಿರುತ್ತದೆ. .

ದಕ್ಷಿಣ ಭಾರತದಲ್ಲಿಯೇ  ಅತಿದೊಡ್ಡ ಅಡಿಕೆ ಮಾರುಕಟ್ಟೆ ಶಿವಮೊಗ್ಗ ಅಡಿಕೆ ಮಾರುಕಟ್ಟೆ ಆಗಿದ್ದು.  ಸೋಮವಾರದ ಶಿವಮೊಗ್ಗ ಅಡಿಕೆ ಮಂಡಿಯಲ್ಲಿ ಅಡಿಕೆ ಪ್ರತಿ ಕ್ವಿಂಟಾಲ್‌ಗೆ ಗರಿಷ್ಠ 50,599 ರೂ.ದಾಟಿದೆ 

ತೀರ್ಥಹಳ್ಳಿ ಪ್ರತಾಪ