Shri Ram Mandir Ayodhya | ಅಯೋಧ್ಯೆಯಲ್ಲಿ ಆ ದಿನಗಳು ಹೇಗಿತ್ತು ! ಏನಾಯ್ತು !ಶಾಸಕ ಚನ್ನಬಸಪ್ಪ ರವರು ಹೇಳಿದ್ದೇನು?

Shri Ram Mandir Ayodhya | How were those days in Ayodhya? What happened! What did MLA Channabasappa say?

Shri Ram Mandir Ayodhya |  ಅಯೋಧ್ಯೆಯಲ್ಲಿ ಆ ದಿನಗಳು ಹೇಗಿತ್ತು ! ಏನಾಯ್ತು !ಶಾಸಕ ಚನ್ನಬಸಪ್ಪ ರವರು ಹೇಳಿದ್ದೇನು?
Shri Ram Mandir Ayodhya | How were those days in Ayodhya? What happened! What did MLA Channabasappa say?

SHIVAMOGGA  |  Jan 21, 2024  |  ಇನ್ನೇನು ಅಯೋಧ್ಯೆಯ ಅಧಿಪತಿಯ ಪ್ರಾಣ ಪ್ರತಿಷ್ಟಾಪನೆಗೆ ಕ್ಷಣ ಹತ್ತಿರವಾಗುತ್ತಿದೆ. ಅದಕ್ಕಾಗಿ ದೇಶದೆಲ್ಲೆಡೆ ವಿಶೇಷ ಸಿದ್ದತೆಗಳು ನಡೆಯುತ್ತಿದೆ. ಇದರ ನಡುವೆ ಶಿವಮೊಗ್ಗ ನಗರ ಶಾಸಕ ಎಸ್​.ಎನ್​.ಚೆನ್ನಬಸಪ್ಪ (MLA S.N. Channabasappa) ರವರು ಮಾಧ್ಯಮವೊಂದಕ್ಕೆ ರಾಮ ಮಂದಿರ ಹಾಗೋ ಅಯೋಧ್ಯೆಯ ವಿಚಾರವಾಗಿ ಹಂಚಿಕೊಂಡ ಮಾತುಗಳ ಸಂಕ್ಷೀಪ್ತ ವಿವರವನ್ನು ನಿಮ್ಮ ಮುಂದೆ ನೀಡಲು ಬಯಸುತ್ತೇವೆ.. 

ಶಿವಮೊಗ್ಗ ನಗರ ಶಾಸಕ ಎಸ್​.ಎನ್​.ಚೆನ್ನಬಸಪ್ಪ

ರಾಜ್ಯ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ  ಶಿವಮೊಗ್ಗ ನಗರ ಶಾಸಕರು ತಮ್ಮ ಅನುಭವಗಳನ್ನ ಬಿಚ್ಚಿಟ್ಟಿದ್ದಾರೆ. 1980 ರಲ್ಲಿ ಶಿವಮೊಗ್ಗ ರಾಜಕಾರಣವನ್ನು ಪ್ರವೇಶಿಸಿದ ಚೆನ್ನಬಸಪ್ಪರವರು ಅಯೋಧ್ಯೆಗೆ ಕರಸೇವಕರಾಗಿ ಹೋಗಿದ್ದರು. ಈ ಬಗ್ಗೆ ಅವರು ಮಾತನಾಡುತ್ತಾ. ಡಿಸೆಂಬರ್ ಆರನೇ ತಾರೀಖಿಗೆ ಎರಡು ದಿನ ಇದ್ದ ಸಂದರ್ಭದಲ್ಲಿ ಶಿವಮೊಗ್ಗದಿಂದ 2 ಸಾವಿರ ಮಂದಿ ಅಲ್ಲಿನ ಸಭೆಯಲ್ಲಿ ಪಾಲ್ಗೊಂಡಿದ್ದರು. 

ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ 

ಆ ಬೈಠಕ್​ನಲ್ಲಿ ಕೆಲವೊಂದು ಮುಖ್ಯವಾದ ತೀರ್ಮಾನಗಳಾಗಿದ್ದವು. ಮನೆಗೆ ಹೋಗದೇ ಇದ್ದರೂ ಪರವಾಗಿಲ್ಲ ಎನ್ನುವವರು ಕೈ ಎತ್ತಿ ಎಂದು ಕೇಳಲಾಗಿತ್ತು. ನಾನು ಸಹ ಕೈ ಎತ್ತಿದ್ದೆ ಎಂದು ಚನ್ನಬಸಪ್ಪರವರು ನೆನಪು ಮೆಲಕು ಹಾಕಿದ್ದಾರೆ. 

ವಿವಾದಿತ ಜಾಗದಲ್ಲಿ ಕರಸೇವೆ

ಮಾತು ಮುಂದುವರಿದು ವಿವಾದಿತ ಜಾಗದ ಕಟ್ಟಡ ಧ್ವಂಸದ ದಿನ ತೆಲುಗು ಘೋಷಣೆಗಳನ್ನು ಕೂಗುತ್ತಿದ್ದ ದೊಡ್ಡ ಸೈನ್ಯವೊಂದು ಅಲ್ಲಿಗೆ ಬಂದ ಬಗ್ಗೆ ಚನ್ನಬಸಪ್ಪರವರು ಹೇಳಿದ್ದಾರೆ. ಹಾಗೆ ಬಂದ ಜನ ಸಾಗರ ವಿವಾಧಿತ ಜಾಗಕ್ಕೆ ನುಗ್ಗಿ, ಬೇಲಿಗಳನ್ನ ಮುರಿದು, ಗೋಡೆಗಳನ್ನ ಒಡೆಯಲು ಆರಂಭಿಸಿದರು. ಅವರ ಬಳಿ ಹತಾರ ಇರದಿದ್ದರು, ಸಿಕ್ಕಿದರಲ್ಲಿಯೇ ಗೋಡೆಗಳನ್ನ ಒಡೆದರು, ಆ ಜನ ಸೈನ್ಯದ ಜೊತೆ ತಾವು ಸೇರಿ ಶ್ರೀರಾಮನ ಮೂರ್ತಿಯನ್ನು ತಂದು ಸುರಕ್ಷಿತವಾಗಿ ಹೊರಗೆ ಇಟ್ಟಿದ್ದೆವು. ಅದನ್ನ ಪೇಜಾವರ ಶ್ರೀಗಳು ಸುರಕ್ಷಿತವಾಗಿಸಿದರು. 

ಹೋಗಯ ಕಾಮ್ ಆಗಯ ರಾಮ್

ವಿವಾಧಿತ ಕಟ್ಟಡ ನೋಡ ನೋಡುತ್ತಿದ್ದಂತೆ ಕುಸಿಯಿತು. ಹೋಗಯ ಕಾಮ್ ಆಗಯಾ ರಾಮ್ ಎಂಬ ಘೋಷಣೆ ಕೇಳಿ ಬಂತು ಎನ್ನುತ್ತ ಶಿವಮೊಗ್ಗ ನಗರ ಶಾಸಕರು ಅಂದು ತಮಗಾದ ಪೆಟ್ಟಿನ ಬಗ್ಗೆಯು ಹೇಳಿದ್ದಾರೆ. ಗೋಡೆ ಕುಸಿವ ವೇಳೆ ಆದ ಪೆಟ್ಟಿನ ನೋವಿನಲ್ಲಿ ಹೊರಬಂದ ಅವರಿಗೆ ಶಿವಮೊಗ್ಗದ ಗೋಪಾಲಕೃಷ್ಣ ಮಹದೇವಪ್ಪರವರು ಸಿಕ್ಕಿದ್ದರಂತೆ. ಅವರನ್ನ ಸಂಪರ್ಕಿಸಿದ ಶಾಸಕರು ಬಳಿಕ ಪ್ರಜ್ಞೆ ತಪ್ಪಿದ್ದರು. ಎಚ್ಚರಗೊಂಡಾಗ ಬಯಲು ಆಸ್ಪತ್ರೆಯಲ್ಲಿ ಅವರಿ ಚಿಕಿತ್ಸೆ ನೀಡಲಾಗುತ್ತಿತ್ತು ಎಂದು ನೆನಪಿಸಿಕೊಳ್ಳುತ್ತಾರೆ. 

ದೇವಸ್ಥಾನವನ್ನು ಕಟ್ಟಿದ್ದರು

ವಿವಾಧಿತ ಜಾಗದಲ್ಲಿ ಕಂಡ ಪದ್ಮ ಕಮಲ ಚಿತ್ತಾರ, ವಾಲ್​ ಪೇಂಟಿಂಗ್​ ಬಗ್ಗೆ ತಿಳಿಸಿರುವ ಚನ್ನಬಸಪ್ಪರವರು ಆ ಸಮಯದಲ್ಲಿಯೇ ದೇವಸ್ಥಾನ ಕಟ್ಟಬೇಕು ಎಂದು ತೀರ್ಮಾನವಾಗಿ , ಕೆಡವಿದ ಕಟ್ಟಡದ ಮೇಲೆ ದೇವಾಲಯ ಕಟ್ಟಿದ್ದು , ಶ್ರೀರಾಮಲಲ್ಲಾ ಮೂರ್ತಿಯನ್ನ ಇರಿಸಿದ ಜಾಗದ ಹಿಂದಿನ ಗೋಡೆಗೆ ಐದು ಇಟ್ಟಿಗೆ ಇಟ್ಟಿದ್ದನ್ನ ಸ್ಮರಿಸಿಕೊಳ್ಳುತ್ತಾರೆ. 

ಸುವರ್ಣ ಕ್ಷಣ

ಇಷ್ಟೆ ಅಲ್ಲದೆ ವಾಪಸ್ ಆಗುವಾಗ ಕರಸೇವಕರಿದ್ದ ರೈಲುಗಳ ಮೇಲೆ ಕಲ್ಲು ತೂರಾಟ ಆಗಿದ್ದನ್ನ ನೆನಪಿಸಿಕೊಳ್ಳುವ ಶಾಸಕರು ಹಲವು ವಿಚಾರಗಳನ್ನು ಹಂಚಿಕೊಂಡಿದ್ಧಾರೆ. ಇದೀಗ ರಾಮನ ಪ್ರಾಣ ಪ್ರತಿಷ್ಟಾಪನೆಯಾಗುತ್ತಿರುವುದನ್ನ ತಮ್ಮ ಬದುಕಿನ ಶ್ರೇಷ್ಟ ಕ್ಷಣ ಎನ್ನುವ ಅವರು ಆ ಕ್ಷಣವನ್ನು ಸಂಭ್ರಮಿಸುವ ಸಿದ್ಧತೆಯಲ್ಲಿದ್ದಾರೆ.