SHIVAMOGGA | Jan 20, 2024 | ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ಉದ್ಘಾಟನೆಯಾಗುತ್ತಿರುವ ಹಿನ್ನೆಲೆಯಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) 500 ರು. ಮುಖ ಬೆಲೆಯ ನೋಟಿನಲ್ಲಿ ಮಹಾತ್ಮ ಗಾಂಧಿ ಚಿತ್ರದ ಬದಲಾಗಿ ಶ್ರೀರಾಮನ ಚಿತ್ರವಿ ರುವ ಹೊಸ ನೋಟ ನ್ನು ಬಿಡುಗಡೆ ಮಾಡಲಿದೆ ಎಂಬ ಸುದ್ದಿಯೊಂದು ಜೋರಾಗಿ ಹರಿದಾಡುತ್ತಿದೆ. ಅಲ್ಲದೆ ಸೋಶಿಯಲ್ ಮೀಡಿಯಾಗಳಲ್ಲಿ ಈ ವಿಚಾರ ಟ್ರೆಂಡಿಂಗ್ನಲ್ಲಿ ಷೇರ್ ಆಗುತ್ತಿದೆ. ವೈರಲ್ ಆಗಿರುವ ಜಾಲತಾಣಗಳ ಈ ಸುದ್ದಿ ಬಗ್ಗೆ ಒಂದಿಷ್ಟು ಸತ್ಯ ಸಂಗತಿ ಇಲ್ಲಿದೆ
ಐನೂರು ರೂಪಾಯಿ ಶ್ರೀರಾಮನ ನೋಟು
ಸದ್ಯ ವೈರಲ್ ಆಗುತ್ತಿರುವ ಐನೂರು ರೂಪಾಯಿ ನೋಟಿನ ಫೋಟೋದಲ್ಲಿ ನೋಟಿನ ಮುಂಭಾಗದಲ್ಲಿ ಭಗವಾನ್ ರಾಮನ ಭಾವಚಿತ್ರವಿದ್ದು, ಹಿಮ್ಮುಖದಲ್ಲಿ ಮಹಾತ್ಮ ಗಾಂಧಿ ಮತ್ತು ಕೆಂಪು ಕೋಟೆಯ ಚಿತ್ರಗಳ ಬದಲಿಗೆ ರಾಮ ಮಂದಿರದ ಚಿತ್ರ ಬಿಡಿಸಲಾಗಿದೆ. ಆದರೆ ಇದು ಅಸಲಿ ನೋಟಲ್ಲ. ಬದಲಾಗಿ ಕೆಲವರು ಸೋಶಿಯಲ್ ಮೀಡಿಯಾದಲ್ಲಿ ತಮ್ಮತನ ತೋರಿಸಲು ಮತ್ತು ಬಿಂಬಿಸಲು ಮಾಡಿರುವ ಎಡಿಟೆಡ್ ನೋಟ್.
ಇನ್ನೂ ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿನ ಐನೂರು ರೂಪಾಯಿಯ ನೋಟಿನ ಬಗ್ಗೆ ಮಲೆನಾಡು ಟುಡೆ ತಂಡಕ್ಕೂ ಕುತೂಹಲ ಮೂಡಿತ್ತು. ಹೀಗಾಗಿ ನೋಟಿನ ಸೋಶಿಯಲ್ ಮೀಡಿಯಾ ಸರ್ಚ್ಗಳನ್ನು ಗೂಗಲ್ ನಲ್ಲಿ ಪರಿಶೀಲಿಸಿದಾಗ. ರಾಷ್ಟ್ರೀಯ ಮಾಧ್ಯಮಗಳು ಆರ್‌ಬಿಐ ಅಧಿಕಾರಿಗಳ ಜೊತೆ ಈ ಬಗ್ಗೆ ಸ್ಪಷ್ಟನೆ ಪಡೆದ ವಿಚಾರಗಳು ವರದಿ ಮಾಡಿರುವುದು ಕಂಡುಬಂದಿದೆ. ಆರ್‌ಬಿಐ ಮೂಲಗಳ ಪ್ರಕಾರ, ಈ ರೀತಿಯ ಯಾವುದೇ ನೋಟು ಸಹ ಬಿಡುಗಡೆಯಾಗುತ್ತಿಲ್ಲ. ಇದೆಲ್ಲಾ ಸೋಶಿಯಲ್ ಮೀಡಿಯಾ ಟ್ರೆಂಡ್ ಅಷ್ಟೆ .
ಪ್ರಭಾಸ್ ₹50 ಕೋಟಿ ದೇಣಿಗೆ ಸುದ್ದಿ ನಕಲಿ
ಶ್ರೀರಾಮ ಮಂದಿರ ನಿರ್ಮಾಣಕ್ಕೆ ನಟ ಪ್ರಭಾಸ್ 50 ಕೋಟಿ ರು. ದೇಣಿಗೆ ನೀಡಿದ್ದಾರೆ ಎಂಬ ಸುದ್ದಿಯೊಂದು ಜಾಲತಾಣಗಳಲ್ಲಿ ಕಳೆದ ಕೆಲ ದಿನಗಳಿಂದ ಭಾರೀ ವೈರಲ್ ಆಗಿದೆ. ‘ಆದರೆ ಇದು ಸಹ ಸುಳ್ಳುಸುದ್ದಿ. ಪ್ರಭಾಸ್ ಯಾವುದೇ ದೇಣಿಗೆ ನೀಡಿಲ್ಲ’ ಎಂದು ಅವರ ತಂಡದವರು ತಿಳಿಸಿದ್ದಾರೆ.
