3 ಅಡಿ ತೊಟ್ಟಿ, ಡ್ರಮ್‌ನಲ್ಲಿ ಮುಳುಗಿ ತಾಯಿ, ಮಗಳು ಸಾವು! ಆಶ್ರಮದಲ್ಲಿ ನಡೆದಿದ್ದು ಏನು?

Mother, daughter drown in 3-foot tank, drum What happened in the ashram? Chitradurga, Shivamogga, Bhadravathi, Ashram

3 ಅಡಿ ತೊಟ್ಟಿ, ಡ್ರಮ್‌ನಲ್ಲಿ ಮುಳುಗಿ ತಾಯಿ, ಮಗಳು ಸಾವು! ಆಶ್ರಮದಲ್ಲಿ  ನಡೆದಿದ್ದು ಏನು?
Chitradurga, Shivamogga, Bhadravathi, Ashram

Shivamogga Apr 19, 2024 ನೆರೆಯ ಜಿಲ್ಲೆ ಚಿತ್ರದುರ್ಗದಲ್ಲಿ  ಶಿವಮೊಗ್ಗ ಜಿಲ್ಲೆ ಭದ್ರಾವತಿ ತಾಲ್ಲೂಕಿನ ಇಬ್ಬರು ಸಾವನ್ನಪ್ಪಿದ್ದು ಅವರ ಮರಣದ ಬಗ್ಗೆ ಅನುಮಾನ ಮೂಡಿದೆ. ಈ ಸಂಬಂಧ ಪೊಲೀಸ್‌ ಇಲಾಖೆ ಗಂಭೀರ ತನಿಖೆ ನಡೆಸ್ತಿದೆ. 

ಚಿತ್ರದುರ್ಗ ನಗರದ ಕೆಳಗೋಟೆಯ ತಿಪ್ಪೇರುದ್ರಸ್ವಾಮಿ ಆಶ್ರಮದಲ್ಲಿ ತಾಯಿ ಮತ್ತು ಮಗಳು ನೀರಿನ ತೊಟ್ಟಿ ಹಾಗೂ ಡ್ರಮ್‌ನಲ್ಲಿ ಮುಳುಗಿ ಮೃತಪಟ್ಟಿರುವ ವಿಚಾರ ಮೊನ್ನೆ ಬೆಳಕಿಗೆ ಬಂದಿತ್ತು. ಈ ಘಟನೆ ಹಲವು ಅನುಮಾನಗಳಿಗೆ ಕಾರಣವಾಗಿದೆ. ಮೃತರನ್ನ  ಶಿವಮೊಗ್ಗ ಜಿಲ್ಲೆಯ ಭದ್ರಾವತಿಯ ಸುರೇಶ್‌ ಎಂಬುವರ ಪತ್ನಿ ಗೀತಾ (42) ಹಾಗೂ ಪುತ್ರಿ ಪ್ರಿಯಾಂಕಾ (20)  ಎಂದು ಗುರುತಿಸಲಾಗಿತ್ತು. ಆಶ್ರಮದಲ್ಲಿಯೆ ಹಲವು ವರ್ಷಗಳಿಂದ ಇದ್ದ ಕುಟುಂಬದಲ್ಲಿ ನಡೆದಿದ್ದು ಏನೂ ಎಂಬುದು ಇನ್ನೂ ಸಹ ನಿಗೂಢವಾಗಿದೆ. ಇಬ್ಬರ ಸಾವನ್ನಪ್ಪಿರುವ ಜಾಗದಲ್ಲಿ ಡೆತ್‌ ನೋಟ್‌ ಪತ್ತೆಯಾಗಿದೆ. ಆದಾಗ್ಯು ಡ್ರಮ್‌ ಹಾಗೂ ಮೂರು ಅಡಿಯ ತೊಟ್ಟಿಯಲ್ಲಿ ಮುಳುಗಿ ಆತ್ಮಹತ್ಯೆ ಮಾಡಿಕೊಳ್ಳಲು ಸಾಧ್ಯವೇ ಎಂಬ ಅನುಮಾನ ವ್ಯಕ್ತವಾಗಿದೆ ಹೀಗಾಗಿ ವಿಧಿವಿಜ್ಞಾನ ತಜ್ಞರು  ಈ ಬಗ್ಗೆ ವಿಶೇಷ ತನಿಖೆ ಕೈಗೊಂಡಿದ್ದಾರೆ