SHIVAMOGGA NEWS / ONLINE / Malenadu today/ Nov 21, 2023 NEWS KANNADA
Shivamogga | udupi Malnenadutoday.com | ಉಡುಪಿ ಜಿಲ್ಲೆ ನೇಜಾರುವಲ್ಲಿ ನಡೆದಿದ್ದ ಮಹಿಳೆ ಮತ್ತು ಆಕೆಯ ಮೂವರು ಮಕ್ಕಳ ಹತ್ಯೆ ಪ್ರಕರಣದ ವಿಚಾರದಲ್ಲಿ ಶಿವಮೊಗ್ಗದ ವ್ಯಕ್ತಿಯೊಬ್ಬನ ವಿರುದ್ಧ ಎಫ್ಐಆರ್ ದಾಖಲಾಗಿದೆ..
READ :ಕುಂಸಿ ಪೊಲೀಸ್ ಸ್ಟೇಷನ್ ಲಿಮಿಟ್ಸ್ನಲ್ಲಿ ಎರಡು ಕಾರುಗಳ ನಡುವೆ ಡಿಕ್ಕಿ
ನಡೆದ ದಾರುಣ ಘಟನೆಗೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಪ್ರಚೋದನಕಾರಿ ಪೋಸ್ಟ್ ಹರಿಬಿಟ್ಟಿರುವ ವಿಚಾರದಲ್ಲಿ ಶಿವಮೊಗ್ಗ ಮೂಲದ ವ್ಯಕ್ತಿಯೊಬ್ಬರ ವಿರುದ್ಧ ಉಡುಪಿ ನಗರ ಪೊಲೀಸರು ಸ್ವಯಂ ಪ್ರೇರಿತ suo moto case ದಾಖಲಿಸಿದ್ದಾರೆ.
READ :ಸತ್ತೋಗಿದ್ದ ರೌಡಿಯನ್ನ ಜೀವಂತವಾಗಿ ಹಿಡ್ಕೊಂಡು ಬಂದ ಬೆಂಗಳೂರು ಪೊಲೀಸ್! ಏನಿದು ಕೇಸ್!
ಆರೋಪಿ ಹಫೀಜ್ ಮೊಹಮ್ಮದ್ ಎಂಬಾತ ತನ್ನ ಫೇಸ್‌ಬುಕ್ ಪುಟದಲ್ಲಿ ಪ್ರಕರಣದ ಸಂಬಂಧ ಕಾಮೆಂಟ್ ಮಾಡಿದ್ದರು. ಆರೋಪಿಯನ್ನು ಸ್ಥಳಮಹಜರಿಗೆ ಕರೆದುಕೊಂಡು ಬಂದ ಸಂದರ್ಭದ ಬಗ್ಗೆ ಹಾಕಿರುವ ಪೋಸ್ಟ್ ಇದಾಗಿದ್ದು, ಪೋಸ್ಟ್ ನಲ್ಲಿರುವ ವಿಷಯವನ್ನು ಇಲ್ಲಿ ಹೇಳಲಾಗದು.
ಆತ ಹಾಕಿರುವ ಪೋಸ್ಟ್ ಪ್ರಚೋಧನಕಾರಿಯಾಗಿದ್ದರಿಂದ ಆರೋಪಿ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದು, ಸಾಮಾಜಿಕ ಸಾಮರಸ್ಯವನ್ನು ಕದಡುವ ಉದ್ದೇಶದಿಂದ ಪೋಸ್ಟ್ ಮಾಡಲಾಗಿದೆ ಎಂದು ಆರೋಪಿಸಲಾಗಿದೆ.
