SHIVAMOGGA NEWS / ONLINE / Malenadu today/ Nov 21, 2023 NEWS KANNADA
Bengaluru| Malnenadutoday.com | ಇದು ಬೆಂಗಳೂರು ಸುದ್ದಿ. ಅಲ್ಲಿನ ಪೊಲೀಸರು ಸತ್ತೋಗಿರುವ ರೌಡಿಯನ್ನ ಜೀವಂತವಾಗಿ ಹುಡುಕಿಕೊಂಡು ಬಂದು ಅಂದರ್ ಮಾಡಿದ್ದಾರೆ. ವಿಷಯ ಇಂಟ್ರಸ್ಟಿಂಗ್ ಆಗಿದೆ.
ಏನಿದು ಕೇಸ್.!
ಬೆಂಗಳೂರು ವೈಟ್ ಫೀಲ್ಡ್ ಪೊಲೀಸ್ ಸ್ಟೇಷನ್ ವ್ಯಾಪ್ತಿಯ ರೌಡಿ ಮಲ್ಲಿಕಾರ್ಜುನ್ ಅಲಿಯಾಸ್ ಮಲ್ಲಿ ಎಂಬಾತ, ಕೊಲೆ ಪ್ರಕರಣವೊಂದರಲ್ಲಿ ಎಸ್ಕೇಪ್ ಆಗಿದ್ದ. 2 ವರ್ಷವಾದರೂ ಈತನ ಸುಳಿವು ಸಿಕ್ಕಿರಲಿಲ್ಲ. ಈ ಬಗ್ಗೆ ಆತನ ಮನೆಯಲ್ಲಿ ಕೇಳಿದ್ರೆ, ತಮ್ಮ ಮನೆ ಮಗ ಸತ್ತುಹೋಗಿದ್ದಾನೆ ಎಂದಿದ್ದಾರೆ. ಆರೋಪಿಯ ಸ್ನೇಹಿತರ ಬಳಿಯು ಇದೇ ಉತ್ತರ ಬಂದಿದೆ.
READ :ಶಿಕಾರಿಪುರದಲ್ಲಿಯೇ ಬಿ.ವೈ.ವಿಜಯೇಂದ್ರರಿಗೆ ಟಾಂಗ್ ಕೊಟ್ಟ ಕಾಂಗ್ರೆಸ್! 30 ವರ್ಷದ ನಂತರ ಈ ಸಾಧನೆ
ರೌಡಿ ಶೀಟರ್ ಸತ್ತುಹೋದ ಮೇಲೆ ಆತನ ವಿರುದ್ಧದ ಕೇಸ್ಗಳು ಸಹ ಆಲ್ಮೋಸ್ಟ್ ಡೆತ್ ಆಗುತ್ತವೆ. ಆದರೆ ಪೊಲೀಸರು ಕೇಸ್ ಫೈಲ್ ಕ್ಲೋಸ್ ಮಾಡಲು ಸಿದ್ದರಿರಲಿಲ್ಲ. ಇನ್ಫಾರ್ಮ್ರ್ಗಳ ಮಾಹಿತಿ ಪಡೆದ ಪೊಲೀಸರಿಗೆ ರೌಡಿಶೀಟರ್ ಬದುಕಿರುವ ಸುಳಿವು ಸಿಕ್ಕಿದೆ. ಆತನನ್ನ ಟ್ರೇಸ್ ಮಾಡಿ ಅರೆಸ್ಟ್ ಮಾಡಿ ಜೈಲಿಗೆ ಕಳುಹಿಸಿದ್ದಾರೆ.
ತನ್ನನ್ನ ಪೊಲೀಸರು ಹಿಡಿಯುತ್ತಾರೆ ಎಂದು ತಾನು ಸತ್ತೋಗಿರುವುದಾಗಿ ಆರೋಪಿ ಬಿಂಬಿಸಿದ್ದ. ಊರೂರು ತಿರುಗುತ್ತಾ ತಲೆಮರೆಸಿಕೊಂಡು ಓಡಾಡುತ್ತಿದ್ದ. ಆದರೆ ಪೊಲೀಸರು ಜಸ್ಟ್ ಡೌಟ್ ಮೇಲೆ ಆರೋಪಿಯನ್ನ ಎತ್ತಾಕ್ಕೊಂಡು ಬಂದಿದ್ದಾರೆ
