ಮನೆಯಲ್ಲಿದ್ದುಕೊಂಡೆ ಮೈಸೂರಲ್ಲಿ ಮರ್ಡರ್ ಸ್ಕೆಚ್ ಹಾಕಿದ್ದ ಹಂದಿ ಅಣ್ಣಿ! ಪೊಲಿಸರೇ ಕೊಟ್ಟಿದ್ರು ವೆಹಿಕಲ್! ಆಮೇಲೆ ಗೊತ್ತಾಗಿದ್ದು ಗಾಂಧಿ ಬಜಾರ್ ನ ಆ ಸತ್ಯ! JP FLASHBACK
While at home, Handi Anni had sketched a murder in Mysore. The vehicle was given by the police! Then he realized the truth of Gandhi Bazar. JP FLASHBACK

ಲವಕುಶ ಮರ್ಡರ್ ಕೇಸ್ ನಲ್ಲಿ ಖುಲಾಸೆಗೊಂಡಿದ್ದ ಹಂದಿ ಅಣ್ಣಿ ಸುಪಾರಿ ಕೊಲೆಯನ್ನು ಭದ್ರಾವತಿ ಪೊಲೀಸರು ಭೇದಿಸಿದ್ದು ಹೇಗೆ ಗೊತ್ತಾ? ಹಂದಿ ಅಣ್ಣಿಯ ಈ ಕೃತ್ಯಕ್ಕೆ ಪೊಲೀಸರೇ ವಾಹನ ವ್ಯವಸ್ಥೆ ಮಾಡಿಕೊಟ್ಟಿದ್ದು ಹೇಗೆ ಗೊತ್ತಾ..? ಮಾರುವೇಷದ ಅಟ್ಯಾಕ್ಗೆ ಬೆಚ್ಚಿಬಿದ್ದಿದ್ದ ಅಣ್ಣಿ ಮತ್ತೊಂದು ರಾಬರಿ ಕಥೆ ಹೇಳಿದ್ದ .ಅದೇನು ಅಂತಿರಾ..ಜೆಪಿ ಫ್ಲ್ಯಾಶ್ ಬ್ಯಾಕ್.
ಲವಕುಶ ಹತ್ಯೆ ಮಾಡಿದ ಅಣ್ಣಿ ತಂಡ ಬೆಂಗಳೂರಿನಲ್ಲಿ ಅರೆಸ್ಟ್.
2006 ಆಗಸ್ಟ್ 7 ಸೋಮವಾರ. ಅವತ್ತು ಲವಕುಶ ರನ್ನು ಕೊಲೆ ಮಾಡಿ ಪರಾರಿಯಾಗಿದ್ದ ಹಂದಿ ಅಣ್ಣಿ ತಂಡ ಪತ್ರಕರ್ತ ರವಿ ಬೆಳೆಗೆರೆ ಮುಖಾಂತರ ನ್ಯಾಯಾಲಯಕ್ಕೆ ಶರಣಾಗಿತ್ತು. ಹಂದಿ ಅಣ್ಣಿ, ರಾಘು, ಪ್ರಶಾಂತ್ , ವೆಂಕಟೇಶ್, ಸುರೇಶ್, ಮಂಜ, ಲಕ್ಷ್ಮಣ ಅಂದು ಬಂಧಿತರಾದ 7 ಆರೋಪಿಗಳಾಗಿದ್ದರು. ಲವಕುಶ ಹತ್ಯೆ ಗೆ ತಮಿಳು ಕುಮಾರ ಕಾರಣವೆಂಬುದು ಗೊತ್ತಾಗುತ್ತಿದ್ದಂತೆ ಶಿವಮೊಗ್ಗದಲ್ಲಿ,ಪೊಲೀಸರು ತಮೀಳು ಕುಮಾರನ್ನು ಬೇಟೆಯಾಡಲು ಶುರುಮಾಡಿದ್ದರು. 2006 ಡಿಸಂಬರ್ 11 ರ ರಾತ್ರಿ ಶಿವಮೊಗ್ಗದ ಹೊಳೆಬೆನವಳ್ಳಿ ತೋಟದ ಮನೆಯ ಪಂಪ್ ಹೌಸ್ ನಲ್ಲಿ ಮಲಗಿದ್ದ ತಮೀಳು ಕುಮಾರ್ ನನ್ನು ಪೊಲೀಸರು ಎನ್ಕೌಂಟರ್ ಮಾಡಿದ್ದರು.
ಇತ್ತ ಲವಕುಶ ಮರ್ಡರ್ ಕೇಸಿಗೆ ಸಂಬಂಧಿಸಿದಂತೆ ನ್ಯಾಯಾಲಯದಲ್ಲಿ ಶರಣಾಗಿದ್ದ ಹಂದಿ ಅಣ್ಣಿ ತಂಡವನ್ನು ನ್ಯಾಯಾಲಯದ ಮೂಲಕವೇ ಶಿವಮೊಗ್ಗದ ಪೊಲೀಸರು ಕಸ್ಟಡಿಗೆ ತೆಗೆದುಕೊಂಡರು. ಅದಾದ ನಂತರ ಚಾರ್ಚ್ ಶೀಟ್ ಕೂಡ ಸಲ್ಲಿಸಿದ್ದರು. ಸತತ ಐದು ವರ್ಷಗಳ ಕಾಲ ವಿಚಾರಣೆ ನಡೆಯಿತು. ಸಾಕ್ಷ್ಯಾಧಾರಗಳ ಕೊರತೆಯಿಂದ ನ್ಯಾಯಾಲಯ ಹಂದಿ ಅಣ್ಣಿಗ್ಯಾಂಗ್ ನ್ನು ಪ್ರಕರಣದಿಂದ ಖುಲಾಸೆಗೊಳಿಸಿತು. ಮಟಮಟ ಮದ್ಯಾಹ್ನವೇ ಶಿವಮೊಗ್ಗ ನಗರದಲ್ಲಿ ನಡೆದ ಲವಕುಶ ಮರ್ಡರ್ ಸಾಕ್ಷ್ಯಾಧಾರಗಳ ಕೊರತೆಯಿಂದ ಕೇಸ್ ಖಲ್ಲಾಸ್ ಆಗಿತ್ತು. ಇದು ಲವಕುಶ ಗ್ಯಾಂಗ್ ನ ನಿದ್ದೆಗೆಡಿಸಿತ್ತು.
ಮೈಸೂರಿನ ಕಾರ್ಪೋರೇಟರ್ ಪುತ್ರನ ಹತ್ಯೆಗೆ ಸಂಚು.
ಲವಕುಶ ಕೊಲೆ ಪ್ರಕರಣದಿಂದ ಹಂದಿ ಅಣ್ಣಿ ಮತ್ತು ತಂಡ ಖುಲಾಸೆಗೊಂಡು ಜೈಲಿಂದ ಹೊರಬರುತ್ತಲೇ ಅಂದಿನ ಎಸ್ಪಿ ರಮಣಗುಪ್ತಾ ಆತನ ಮೇಲೆ ಹದ್ದಿನ ಕಣ್ಣಿಡಲು ಶಿವಮೊಗ್ಗ-ಭದ್ರಾವತಿ ಪೊಲೀಸರಿಗೆ ಸೂಚನೆ ನೀಡಿದ್ರು. ಅದರಲ್ಲೂ ಅಣ್ಣಿ ಭದ್ರಾವತಿ ಹುಡುಗರೊಡನೆ ಸಂಪರ್ಕ ಬೆಳೆಸಿರುವುದನ್ನು ಗಮನಿಸಿದ ಅಂದಿನ ಡಿವೈಎಸ್ಪಿ ಶ್ರೀಧರ್ ಆತನ ಬೆನ್ನು ಹತ್ತಿದ್ರು . ಬಹುಷಃ ಆತನ ಮೊಬೈಲ್ ಟ್ಯಾಪ್ ಮಾಡಿದ್ದರಿಂದಾಗಿ ಮೈಸೂರಿನಲ್ಲಿ ಸುಪಾರಿ ಹತ್ಯೆಯೊಂದಕ್ಕೆ ಅಣ್ಣಿ ಸ್ಕೆಚ್ ಹಾಕುತ್ತಿದ್ದಾನೆಂಬ ಸಂಗತಿ ಪೊಲೀಸರ ಗಮನಕ್ಕೆ ಬಂತು. ಆಗ ರಂಗಕ್ಕಿಳಿದಿದ್ದು, ಹೊಸಮನೆ ಶಿವಾಜಿ ಸರ್ಕಲ್ ಪೊಲೀಸ್ ಠಾಣೆಯ ಸಬ್ ಇನ್ಸ್ ಪೆಕ್ಟರ್ ಕೆ.ಕುಮಾರ್ ಮತ್ತವರ ತಂಡ.
ಹಂದಿ ಅಣ್ಣಿ ಭದ್ರಾವತಿ ಹುಡುಗರನ್ನು ಮೈಸೂರಿಗೆ ಕರೆದೊಯ್ದು ಅಲ್ಲಿ ಅನುಮಾನಸ್ಪದ ಚಟುವಟಿಕೆಯಲ್ಲಿ ತೊಡಗಿರುವುದು ಪೊಲೀಸರ ಗಮನಕ್ಕೆ ಬಂದಿತ್ತು. ಹೀಗಾಗಿ ವೇಷಮರೆಸಿಕೊಂಡು ಅಖಾಡಕ್ಕೆ ಇಳಿದಿದ್ದ ಸಬ್ ಇನ್ಸ್ ಪೆಕ್ಟರ್ ಕುಮಾರ್ ಮತ್ತವರ ತಂಡ ಮೈಸೂರಿನಲ್ಲಿ ಅವಿನಾಶ್ ಮತ್ತು ದೀಪುವನ್ನು ಅರೆಸ್ಟ್ ಮಾಡಿದ್ರು. ಈ ವೇಳೆ ಗೊತ್ತಾಗಿದ್ದು ಆತಂಕಕಾರಿ ವಿಚಾರವಾಗಿತ್ತು. ಮೈಸೂರಿನಲ್ಲಿ ಆಗನಕಾರ್ಪೊರೇಟರ್ ಆಗಿದ್ದವರ ಮಗನೊಬ್ಬನನ್ನು ಹತ್ಯೆ ಮಾಡಲು ಈ ಟೀಂ ಸ್ಕೆಚ್ ರೂಪಿಸಿತ್ತು. ಕೇವಲ ಡೌಟ್ ಮೇಲೆ ಕಾರ್ಯಾಚರಣೆ ಕೈಗೊಂಡಿದ್ದ ಶಿವಮೊಗ್ಗ ಪೊಲೀಸರು, ಹೈಪ್ರೋಫೈಲ್ ಮರ್ಡರ್ ಸ್ಕೆಚ್ನ್ನ ವಿಫಲಗೊಳಿಸಿದ್ದರು.
ಅವತ್ತೆ ಭದ್ರಾವತಿ ಪೊಲೀಸರು ಹಂದಿ ಅಣ್ಣಿಯನ್ನ ಆತನ ಮನೆಯಿಂದಲೇ ವಶಕ್ಕೆ ಪಡೆದರು. ಅಂದರೆ ಹತ್ಯೆಗೆ ಸ್ಕೆಚ್ ಹಾಕಿಕೊಟ್ಟು ತಣ್ಣಗೆ ಶಿವಮೊಗ್ಗಕ್ಕೆ ಬಂದಿದ್ದ ಅಣ್ಣಿ, ಟೀವಿ ನೋಡುತ್ತಾ ಕುಳಿತಿದ್ದ. ಹತ್ಯೆ ಸುದ್ದಿ ಟೀವಿಗಳಲ್ಲಿ ಬಿತ್ತರವಾಗುತ್ತದೆ ಎಂಬುದು ಆತನ ಲೆಕ್ಕಚಾರವಾಗಿತ್ತು. ಆದರೆ ಮನೆಗೆ ನುಗ್ಗಿದ್ದ ಪೊಲೀಸರು ಹಂದಿ ಅಣ್ಣಿಯನ್ನು ವಿಚಾರಣೆಗೊಳಪಡಿಸಿದಾಗ, ಗೊತ್ತಾದ ಸಂಗತಿ ಕಾರ್ಪೊರೇಟರ್ಗಳ ನಡುವಿನ ಒಳಜಗಳವನ್ನು ಸಾರಿ ಸಾರಿ ಹೇಳಿತ್ತು. ಕ್ರೈಂ ಎಪಿಸೋಡ್ಗಳಲ್ಲಿ ಬಿತ್ತರಗೊಂಡಿದ್ದ ಅವತ್ತಿನ ಸ್ಟೋರಿಯಲ್ಲಿ ಇಬ್ಬರು ಕಾರ್ಪೊರೇಟರ್ ನಡುವಿನ ಜಗಳದಿಂದಾಗಿ, ಓರ್ವನ ಮಗನಿಗೆ ಸುಪಾರಿ ನಿಕ್ಕಿಯಾಗಿತ್ತು. ಇದಕ್ಕಾಗಿ ಬೂದಿ ಮಹೇಶ್ ನಿಗೆ ಸುಪಾರಿ ಕೊಡಲಾಗಿತ್ತು. ಆತನಿಗೆ ಹತ್ಯೆ ಮಾಡಲು ಧೈರ್ಯ ಸಾಲದೆ ಆತ ಹಂದಿ ಅಣ್ಣಿಯನ್ನ ಸಂಪರ್ಕಿಸಿದ್ದ
Read / ಇನ್ನೊಂದು ವಾರದಲ್ಲಿ ವಿಮಾನ ಹಾರಾಟ! ಟಿಕೆಟ್ಗೆ ₹500 ಸಬ್ಸಿಡಿ! ಏಕೆಗೊತ್ತಾ?
ಸುಪಾರಿಗೆ ವಾಹನ ವ್ಯವಸ್ಥೆ ಕಲ್ಪಿಸಿಕೊಟ್ಟಿದ್ದೇ ಪೊಲೀಸರು
ಜೈಲಿಂದ ಹೊರಬಂದ ಅಣ್ಣಿ 25 ಲಕ್ಷ ರೂಪಾಯಿ ಗಳಿಗೆ ವ್ಯವಹಾರ ಕುದುರಿಸಿ ಹಣ ಪಡೆದಿದ್ದ. ಬೂದಿ ಮಹೇಶ, ಗೋಕುಲ್ ,ಅವಿನಾಶ್,ದೀಪು ಮೊದಲಾದವರನ್ನು ಸೆಟ್ ಮಾಡಿ ಮೈಸೂರಿನಲ್ಲಿ ಕುಮಾರನನ್ನು ಹತ್ಯೆ ಮಾಡುವುದು ಹೇಗೆ ನಂತರ ತಪ್ಪಿಸಿಕೊಳ್ಳುವುದು ಹೇಗೆ ಮೊದಲಾದವುಗಳ ಬಗ್ಗೆ ನಿರ್ದೇಶನ ನೀಡಿದ್ದ. ಮೈಸೂರಿನಲ್ಲಿ ಕೊಲೆ ಮಾಡಿದವರು ಭದ್ರಾವತಿಯವರಾದರೆ, ಅವರನ್ನು ಪತ್ತೆ ಹಚ್ಚಲು ಪೊಲೀಸರಿಗೆ ಸಾದ್ಯವಾಗೊಲ್ಲ ಎಂಬುದು ಸುಪಾರಿ ಕೊಟ್ಟವರ ಲೆಕ್ಕಚಾರವಾಗಿತ್ತು.
ಆದರೆ ಈ ಪ್ಲಾನ್ ಫೇಲ್ ಆಗೋದಕ್ಕೆ ಬಲವಾದ ಕಾರಣವಿತ್ತು. ಏಕೆಂದರೆ ಆರೋಪಿಗಳ ಚಲನವಲನದ ಮೇಲೆ ಕಣ್ಣಿಟ್ಟಿದ್ದ ಪೊಲೀಸರು ಏನೋ ನಡೆಯುತ್ತಿದೆ ಎಂಬುದನ್ನ ಊಹಿಸಿದ್ದರು. ಹೀಗಾಗಿ ಆರೋಪಿಗಳ ಜೊತೆಗೆ ವೇಷ ಮರೆಸಿಕೊಂಡು ಮಾಹಿತಿ ಪಡೆಯುವ ಕೆಲಸಕ್ಕೆ ಕೈಹಾಕಿದ್ದರು. ಮೈಸೂರಿನಲ್ಲಿ ಸ್ಕೆಚ್ ಹಾಕಿದ್ದ ಆರೋಪಿಗಳಿಗೆ ವೆಹಿಕಲ್ವೊಂದು ಬೇಕಿತ್ತು.ಈ ಇನ್ಫಾರ್ಮೆಶನ್ ತಿಳಿದ ಅಧಿಕಾರಿಗಳು, ವೆಹಿಕಲ್ ವ್ಯವಸ್ಥೆಯನ್ನು ಆರೋಪಿಗಳಿಗೆ ಕಲ್ಪಿಸುತ್ತಾರೆ. ಬಳಿಕ ಆ ವಾಹನದ ಬೆನ್ನತ್ತಿ ಇನ್ನೇನು ಟಾರ್ಗೆಟ್ ರೀಚ್ ಆಗುವ ಸಂದರ್ಭದಲ್ಲಿ ಆರೋಪಿಗಳನ್ನ ಸುತ್ತುವರೆದು ಅಂದರ್ ಮಾಡುತ್ತಾರೆ.
ಶಿವಮೊಗ್ಗದ ಗಾಂಧಿ ಬಜಾರ್ನಲ್ಲಿ ನಡೆಸಿದ್ದರು ದರೋಡೆ
ಇತ್ತ ಶಿವಮೊಗ್ಗದಲ್ಲಿ ಹಂದಿ ಅಣ್ಣಿಯನ್ನು ವಿಚಾರಣೆಗೊಳಪಡಿಸಿದಾಗ ಆತ ಜೈಲಿನೊಳಗಿದ್ದುಕೊಂಡು ರಾಬರಿಯೊಂದನ್ನು ಮಾಡಿಸಿದ ಬಗ್ಗೆ ಬಾಯ್ಬಿಟ್ಟಿದ್ದ. ಜೈಲಿನಲ್ಲಿದ್ದ ಸಂದರ್ಭದಲ್ಲಿ ಅಣ್ಣಿ ಗಾಂದಿ ಬಜಾರ್ ನಲ್ಲಿ ದರೋಡೆಯೊಂದಕ್ಕೆ ಸ್ಕೆಚ್ ಹಾಕಿದ್ದ. 2014 ನವಂಬರ್ 11 ರಂದು ರಾತ್ರಿ ಗಾಂಧಿ ಬಜಾರ್ ನ ಚಿನ್ನಬೆಳ್ಳಿ ವ್ಯಾಪಾರಿ ಚಿನ್ನಯ್ಯ(ಹೆಸರು ಬದಲಾಯಿಸಲಾಗಿದೆ) ಸ್ಕೂಟಿಯಲ್ಲಿ ಮನೆಗೆ ಹೋಗುವಾಗ ಬೈಕ್ ನಲ್ಲಿ ಬಂದ ಯುವಕರು ಅಪಘಾತವೆಸಗಿ ಲಾಂಗ್ ನಿಂದ ಹೊಡೆದು 15 ಲಕ್ಷ ರೂಪಾಯಿ ಹಣವನ್ನು ದೋಚಿದ್ದರು.
ಅದು ಹಂದಿ ಅಣ್ಣಿ ಜೈಲಿನಲ್ಲಿದ್ದುಕೊಂಡೆ ರೂಪಿಸಿದ್ದ ಸ್ಕೆಚ್ ಆಗಿತ್ತು. ಅಂದು ರಾಬರಿ ಮಾಡಿದ್ದು ಮಾರ್ಕೇಟ್ ಲೋಕಿಯಾಗಿದ್ದ. ಅವತ್ತು ಲೋಕಿಯ ಜೊತೆಗಿದ್ದವರು, ಓಲಂಗ ಮಂಜ, ರಂಜನ್ , ಮೇಘಣ್ಣ, ಪರ್ಕಿ ಮಂಜ, ಬೂಕಾಳಿ ಮಂಜ, ಪವ. ಈ ರಾಬರಿಯಿಂದ ಬಂದಿದ್ದ ಹಣವನ್ನು ಇಟ್ಟುಕೊಂಡು ಅಣ್ಣಿ ಮೈಸೂರಿನಲ್ಲಿ ಒಂದು ಸ್ಕೆಚ್ ಹಾಕಿದ್ದ. ಆದರೆ ಶಿವಮೊಗ್ಗ ಪೊಲೀಸರು ಕ್ರೈಂ ನಡೆಯುವ ಮುನ್ನವೇ ಕ್ರೈ ಸೀನ್ಗೆ ಕ್ಲೈಮ್ಯಾಕ್ಸ್ ನೀಡಿತ್ತು.
Read / ಇನ್ನೊಂದು ವಾರದಲ್ಲಿ ವಿಮಾನ ಹಾರಾಟ! ಟಿಕೆಟ್ಗೆ ₹500 ಸಬ್ಸಿಡಿ! ಏಕೆಗೊತ್ತಾ?
ನಮ್ಮ ವಾಟ್ಸ್ಯಾಪ್ ಗ್ರೂಪ್ ಲಿಂಕ್ ಇದು ಕ್ಲಿಕ್ ಮಾಡಿ
Twitter ನಲ್ಲಿ ನಾವಿದ್ದೇವೆ, ಫಾಲೋ ಮಾಡಿ : Malenadutoday.com
Instagram ನಲ್ಲಿ ಕ್ಲಿಕ್ ಮಾಡಿ : Malenadutoday.com
Telegram ನಲ್ಲಿ ಸುದ್ದಿ ಪಡೆಯಲು ಲಿಂಕ್ ಒತ್ತಿ : Malenadutoday.com
MALENADUTODAY.COM/ SHIVAMOGGA / KARNATAKA WEB NEWS/
HASHTAGS| sagar karnataka Bhadravathi Latest News, #shivamogga live news #karnatakalocalnews, #karnataka assembly elections 2023shivamogga today news,shivamogga latest news#Shivamogga #ShivamoggaNews #Shimoga #MalnadNews #LocalNews #KannadaNewsWebsite #LatestNewsKannada #ಮಲೆನಾಡು_ಸುದ್ಧಿ #ಶಿವಮೊಗ್ಗ_ನ್ಯೂಸ್ #malenadutodaynews, #todaynewsChilsagar karnataka Bhadravathi Latest News, #shivamogga live news #karnatakalocalnews, #karnataka assembly elections 2023, shivamogga,shivamogga accident,road accident,accident,road accident in shivamogga,shivamogga