comrade lingappa shivamogga/ ಈ ವಿಶೇಷ ಮಹನೀಯರು ಇನ್ನು ಮಾತಿಗೆ ಸಿಗರು! ಕ್ರಾಮೆಡ್​ ಲಿಂಗಪ್ಪರ ಹೆಗ್ಗಳಿಕೆ ಎಂತದ್ದು ಗೊತ್ತಾ

Comrade Lingappa died in Shimoga today

comrade lingappa shivamogga/ ಈ ವಿಶೇಷ ಮಹನೀಯರು ಇನ್ನು ಮಾತಿಗೆ ಸಿಗರು! ಕ್ರಾಮೆಡ್​ ಲಿಂಗಪ್ಪರ ಹೆಗ್ಗಳಿಕೆ ಎಂತದ್ದು ಗೊತ್ತಾ
comrade lingappa shivamogga

 comrade lingappa shivamogga,/ ಹಿರಿಯ ಪತ್ರಕರ್ತ ಕಾಮೇಡ್ ಲಿಂಗಪ್ಪ (97) ಶುಕ್ರವಾರ ಖಾಸಗಿ ಆಸ್ಪತ್ರೆ ಯಲ್ಲಿ ನಿಧನರಾಗಿದ್ದಾರೆ, ಕಳೆದ ಕೆಲದಿನಗಳ ಹಿಂದೆ, ತಮ್ಮ ಮನೆಯ ಸಮೀಪ ತಲೆ ಸುತ್ತು ಬಂದು ಬಿದ್ದಿದ್ದರಿಂದ ಅವರು ಗಾಯಗೊಂಡಿದ್ದರು. ಬಳಿಕ ಅವರನ್ನ ಖಾಸಗಿ  ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆನಂತರ ನಿನ್ನೆ ಅವರ ಆರೋಗ್ಯದಲ್ಲಿ ಏರುಪೇರು ಉಂಟಾಗಿ ಸಂಜೆ ಹೊತ್ತಿಗೆ ಕೊನೆಯುಸಿರೆಳೆದಿದ್ದಾರೆ.  ಮೃತರು ಮಗಳು ಮತ್ತು ಮೊಮ್ಮಗ ಸೇರಿದಂತೆ ಬಂಧು- ಬಳಗವನ್ನು ಅಗಲಿದ್ದಾರೆ. ಮೂಲತ ಕಾಮ್ರೆಡ್​ ಲಿಂಗಪ್ಪನವರು, ತುಮಕೂರು ಜಿಲ್ಲೆ ಗುಬ್ಬಿ ತಾಲೂಕಿನ ಎಂ.ಎನ್.ಕೋಟೆ ಗ್ರಾಮದವರು.  1926 ರಂದು ಜನಿಸಿದ್ದ ಲಿಂಗಪ್ಪ, ಚಿಕ್ಕ ವಯಸ್ಸಿನಲ್ಲಿಯೇ ತಂದೆತಾಯಿಯನ್ನು ಕಳೆದುಕೊಂಡು ಅನಾಥರಾಗಿದ್ದರು.

ನಂತರ ತುಮಕೂರಿನ ಸಿದ್ಧಗಂಗಾ ಮಠಕ್ಕೆ ಆಗಮಿಸಿದ್ದ ಅವರಿಗೆ ಅಲ್ಲಿ ಆಶ್ರಯ ದೊರಕಿರಲಿಲ್ಲ. ಬೆಂಗಳೂರಿನಲ್ಲಿ ಹೋಟೆಲ್ ಮತ್ತೀತರೆಡೆ ಕೂಲಿಕೆಲಸ ಮಾಡುತ್ತಿದ್ದರು. ಅಲ್ಲಿಂದ ಬಾಂಬೆಗೆ ತೆರಳಿದ ಅವರು ಹೋಟೆಲ್ ಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ತದನಂತರ ಬಾಂಬೆಯಲ್ಲಿ ಬಟ್ಟೆ ಹೊಲೆಯುವ ಕೆಲಸಕ್ಕೆ ಸೇರ್ಪಡೆಯಾಗಿದ್ದರು. ಮಹಾರಾಜರುಗಳಿಗೆ ಸೂಟ್ ಹೊಲಿಯುವ ಕೆಲಸ  ಮಾಡುತ್ತಿದ್ದರು. ಆನಂತರ  ಕಾರ್ಮಿಕ ಸಂಘಗಳನ್ನು ಕಟ್ಟಿಕೊಂಡು ಹಲವು ಹೋರಾಟ ನಡೆಸಿದ್ದರು. ಜಾರ್ಜ್ ಫರ್ನಾಂಡಿಸ್, ನಂಬೋದರಿ ಪಾಡ್, ಡಾಂಗೆ ಸೇರಿದಂತೆ ಹಲವು ನಾಯಕರ ಸಂಪರ್ಕಕ್ಕೆ ಬಂದ ಕಾಮ್ರೆಡ್ ಜೈಲುವಾಸ ಸಹ ಅನುಭವಿಸಿದ್ದರು.

ಬಾಂಬೆ ಪೊಲೀಸರ ಮೋಸ್ಟ್ ವಾಂಟೆಂಡ್ ಪಟ್ಟಿಯಲ್ಲಿದ್ದ ಲಿಂಗಪ್ಪನವರು ತಮ್ಮ ಅಕ್ಕನಿಗೆ ನೆರವಾಗುವ ಕಾರಣಕ್ಕೆ ಶಿವಮೊಗ್ಗಕ್ಕೆ ಬಂದಿದ್ದರು. ಇಲ್ಲಿ  ದುರ್ಗಿಗುಡಿಯಲ್ಲಿ ಬಾಂಬೆ ಟೈಲರ್ ಅಂಗಡಿ ತೆಗೆದು ಸೂಟ್ ಹೊಲಿಯುವ ಕಾಯಕ ಮುಂದುವರಿಸಿದ್ದರು.  50 ವರ್ಷಗಳ ಹಿಂದೆ ದಿವಗಂತ ನಾಗೇಂದ್ರರಾವ್, ಮಲ್ಲಾರಾಧ್ಯ ಮತ್ತೀತರ ಸಹವರ್ತಿಗಳ ಮಾರ್ಗದರ್ಶನದಲ್ಲಿ ‘ಕ್ರಾಂತಿಭಗತ್’ ಪತ್ರಿಕೆ ಆರಂಭಿಸಿದ್ದರು. ತಮ್ಮ ವರ್ಣರಂಜಿತ ಜೀವನದಲ್ಲಿ  ಲೋಕಸಭೆ, ವಿಧಾನಸಭೆ ಚುನಾವಣೆಗೂ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದರು.  ತಮ್ಮ ವಿಶಿಷ್ಟ ವ್ಯಕ್ತಿತ್ವ ಹಾಗೂ ಹೊಂದಾಣಿಕೆಯಿಲ್ಲದ ಸ್ವಭಾವದಿಂದಲೇ ಪ್ರತ್ರಕರ್ತ ಹಾಗೂ ಸಮಾಜದ ಮುಖ್ಯವಾಹಿನಿಯಲ್ಲಿ ಗುರುತಿಸಿಕೊಂಡಿದ್ದ ಕಾಮ್ರೆಡ್ ಲಿಂಗಪ್ಪನವರ ನಿಧನಕ್ಕೆ ಹಲವರು ಸಂತಾಪ ಸೂಚಿಸಿದ್ದಾರೆ.  ವಿಶೇಷ ಅಂದರೆ ಇತ್ತೀಚೆಗೆ ನಡೆದ ಸಿಎಂ ಕಾರ್ಯಕ್ರಮದ ವರದಿಯನ್ನ ಮಾಡಿದ್ದ ಕಾಮ್ರೆಡ್ ಲಿಂಗಪ್ಪನವರು ದೇಶದ ಹಿರಿಯ ಸಕ್ರಿಯ ಪತ್ರಕರ್ತ ಎಂದೇ ವರದಿಗಾರರ ವಲಯದಲ್ಲಿ ಚರ್ಚೆಯಾಗಿದ್ಧರು. 

ಸಿಟ್ಟು ಬಂದರೆ, ಎದುರಿಗಿದ್ದವರವನ್ನ ವಾಚಾಮಗೋಚರವಾಗಿ ನಿಂದಿಸ್ತಿದ್ದ ಕಾಮ್ರೆಡ್ ಲಿಂಗಪ್ಪನವರು ಅಧಿಕಾರಿಗಳ ವಲಯದಲ್ಲಿ ತಮ್ಮದೆ ಆದ ಭಯ ಹಾಗೂ ಗೌರವ ಎರಡನ್ನು ಸೃಷ್ಟಿಸಿದ್ದರು. ಮುಲಾಜಿಗೆ ಒಳಗಾಗದ ಕಾಮ್ರೆಡ್​ ತಮ್ಮ ವೇಷ ಭೂಷಣದಿಮದಲೇ ವಿಶಿಷ್ಟವಾಗಿ ಗುರುತಿಸಿಕೊಂಡಿದ್ದರು. ಇಳಿವಯಸ್ಸಿನಲ್ಲಿ ಟೊಪ್ಪಿ ಹಾಗೂ ಕೋಟನ್ನೆ ಧರಿಸಿ ಓಡಾಡ್ತಿದ್ದ ಕಾಮ್ರೆಡ್  ಕಾಗೋಡು ತಿಮ್ಮಪ್ಪ, ಬಂಗಾರಪ್ಪ, ಯಡಿಯೂರಪ್ಪ ಸೇರಿದಂತೆ ಹಿರಿಯ ನಾಯಕರನ್ನ ಏಕವಚನದಲ್ಲಿಯೇ ಕರೆದು ಮಾತನಾಡಿಸಿ ಬರುತ್ತಿದ್ದರು. ಪ್ರಶಸ್ತಿಗಳಿಂದ ಅಂತರದಲ್ಲಿದ್ದ ಕಾಮ್ರೆಡ್ ಹಿರಿಯರಿಂದ ಕಿರಿಯ ಪತ್ರಕರ್ತರವರೆಗೂ ಪ್ರತಿಯೊಬ್ಬರನ್ನ ಮಾತನಾಡಿಸುತ್ತಿದ್ದ ಪರಿ ಹಾಗೂ ಪತ್ರಿಕಾಗೋಷ್ಟಿಗಳಿಗೆ ಅವರು ಬರುತ್ತಿದ್ದ ರೀತಿಯೇ ಹೆಚ್ಚು ಚರ್ಚೆಯಾಗುತ್ತಿರುತ್ತದೆ

Read / ಗೊಂಬೆ ಭವಿಷ್ಯದಲ್ಲಿ ರಾಜಕಾರಣದ ಬಲಾವಣೆಯ ಸುಳಿವು! ಬಿಎಸ್​ವೈರ ಅಧಿಕಾರದ ಬಗ್ಗೆಯು ತಿಳಿಸಿದ್ದ ಯುಗಾದಿ ಅಮಾವಾಸ್ಯೆಯ ಹೇಳಿಕೆ!

Read / ಇನ್ನೊಂದು ವಾರದಲ್ಲಿ ವಿಮಾನ ಹಾರಾಟ! ಟಿಕೆಟ್​ಗೆ ₹500 ಸಬ್ಸಿಡಿ! ಏಕೆಗೊತ್ತಾ?

Read / ಬಿಜೆಪಿಯಲ್ಲಿ ಹಠಾವೋ! ಕಾಂಗ್ರೆಸ್​ನಲ್ಲಿ ಬಚಾವೋ! ಸಾಗರ ಟಿಕೆಟ್​ಗಾಗಿ ಕೆಪಿಸಿಸಿಯಲ್ಲಿ ಕಾಗೋಡು ತಿಮ್ಮಪ್ಪ- ಬೇಳೂರು ಗೋಪಾಲಕೃಷ್ಣ ಸಮರ

ನಮ್ಮ ವಾಟ್ಸ್ಯಾಪ್ ಗ್ರೂಪ್ ಲಿಂಕ್ ಇದು  ಕ್ಲಿಕ್ ಮಾಡಿ

Twitter ನಲ್ಲಿ ನಾವಿದ್ದೇವೆ, ಫಾಲೋ ಮಾಡಿ : Malenadutoday.com

Instagram ನಲ್ಲಿ ಕ್ಲಿಕ್​ ಮಾಡಿ : Malenadutoday.com

Telegram ನಲ್ಲಿ ಸುದ್ದಿ ಪಡೆಯಲು ಲಿಂಕ್ ಒತ್ತಿ : Malenadutoday.com 

HASHTAGS| sagar karnataka Bhadravathi Latest News, #shivamogga live news #karnatakalocalnews, #karnataka assembly elections 2023shivamogga today news,shivamogga latest news#Shivamogga #ShivamoggaNews #Shimoga #MalnadNews #LocalNews #KannadaNewsWebsite #LatestNewsKannada #ಮಲೆನಾಡು_ಸುದ್ಧಿ #ಶಿವಮೊಗ್ಗ_ನ್ಯೂಸ್ #malenadutodaynews, #todaynewsChilsagar karnataka Bhadravathi Latest News, #shivamogga live news #karnatakalocalnews, #karnataka assembly elections 2023shivamogga today,Shivamogga Crime News/ comrade lingappa shivamogga,ಶಿವಮೊಗ್ಗ ಕಾಮ್ರೆಡ್ ಲಿಂಗಪ್ಪ, ಕ್ರಾಂತಿ ಭಗತ್​  ಪತ್ರಿಕೆ, ಶಿವಮೊಗ್ಗ ಹಿರಿಯ ಪತ್ರಕರ್ತ, ದಂತಕಥೆ , ಶಿಮವೊಗ್ಗ ವರದಿಗಾರ,