ದೇವಿ ವಿಗ್ರಹ, ಕಿರೀಟ, ಕಾಸಿನ ಸರ! ಬರೋಬ್ಬರಿ ಮೂರುವರೆ ಕೋಟಿ ಮಾಲ್​ ! ಶಿವಮೊಗ್ಗ ಪೊಲೀಸರ ಕಾರ್ಯಾಚರಣೆ

Shivamogga police department had undertaken a property return parade to return the goods found in cases of property theft to the heirs. 

ದೇವಿ ವಿಗ್ರಹ, ಕಿರೀಟ, ಕಾಸಿನ ಸರ! ಬರೋಬ್ಬರಿ ಮೂರುವರೆ ಕೋಟಿ ಮಾಲ್​ ! ಶಿವಮೊಗ್ಗ ಪೊಲೀಸರ ಕಾರ್ಯಾಚರಣೆ

SHIVAMOGGA  |  Jan 1, 2024  |  2023ನೇ ಸಾಲಿನಲ್ಲಿ ಸ್ವತ್ತು ಕಳವು ಪ್ರಕರಣಗಳಲ್ಲಿ ಪತ್ತೆ ಮಾಡಿದ ಮಾಲುಗಳನ್ನು ವಾರಸುದಾರರಿಗೆ  ಹಿಂದಿರುಗಿಸುವ ಕವಾಯತು (Property Return Parade) ನ್ನ ಶಿವಮೊಗ್ಗ ಪೊಲೀಸ್ ಇಲಾಖೆ ಕೈಗೊಂಡಿತ್ತು. 

ದಿನಾಂಕಃ 30-12-2023 ರಂದು ಶಿವಮೊಗ್ಗ ಜಿಲ್ಲಾ ಪೊಲೀಸ್  ವತಿಯಿಂದ, ಪೊಲೀಸ್ ಕವಾಯತು ಮೈದಾನ ಡಿಎಆರ್ ಶಿವಮೊಗ್ಗದಲ್ಲಿ 2023ನೇ ಸಾಲಿನಲ್ಲಿ ಸ್ವತ್ತು ಕಳವು ಪ್ರಕರಣಗಳಲ್ಲಿ ಪತ್ತೆ ಮಾಡಿದ ಮಾಲುಗಳನ್ನು ವಾರಸುದಾರರಿಗೆ  ಹಿಂದಿರುಗಿಸುವ ಕವಾಯತನ್ನು ಹಮ್ಮಿಕೊಂಳ್ಳಲಾಗಿತ್ತು. 

CEIR ( Central Equipment Identity Register)  

ಈ ವೇಳೆ , 2023ನೇ ಸಾಲಿನ 181 ಪ್ರಕರಣಗಳು ಮತ್ತು ಹಿಂದಿನ ವರ್ಷಗಳ 42 ಪ್ರಕರಣಗಳು ಸೇರಿ ಒಟ್ಟು 223 ಪ್ರಕರಣಗಳನ್ನು ಪತ್ತೆ ಮಾಡಿ, ಅಂದಾಜು ಮೌಲ್ಯ 3,55,24,368/- ರೂಗಳ ಮಾಲುಗಳನ್ನು ವಶ ಪಡಿಸಿಕೊಳ್ಳಲಾಗಿದೆ ಎಂದು ಎಸ್​ಪಿ ಮಾಹಿತಿ ನೀಡಿದ್ದಾರೆ. ಇನ್ನೂ ಇದೇ ವೇಳೆ   CEIR ( Central Equipment Identity Register)  ಪೋರ್ಟಲ್ ಮುಖಾಂತರ ಕಳೆದು ಹೋದ ಒಟ್ಟು 333 ಮೊಬೈಲ್ ಫೋನ್ ಗಳನ್ನು ಪತ್ತೆ ಹಚ್ಚಲಾಗಿರುತ್ತದೆ. 



2023ನೇ ಸಾಲಿನಲ್ಲಿ ಶಿವಮೊಗ್ಗ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ಒಟ್ಟು 492 ಸ್ವತ್ತು ಕಳವು ಪ್ರಕರಣಗಳು ವರದಿಯಾಗಿದೆ ಎಂದು ತಿಳಿಸಿದ ಎಸ್​ಪಿಯವರು ಈ ಪೈಕಿ 1 ಲಾಭಕ್ಕಾಗಿ ಕೊಲೆ,  7 ದರೋಡೆ, 11 ಸುಲಿಗೆ, 1 ಶ್ರೀ ಗಂಧ ಮರದ  ತುಂಡುಗಳ ಕಳ್ಳತನ,  7 ಸರಗಳ್ಳತನ, 7 ಜಾನುವಾರು ಕಳವು, 8 ಮನೆಗಳ್ಳತನ, 27 ಸಾಮಾನ್ಯ ಕಳವು, 43 ಕನ್ನಕಳವು, 63 ವಾಹನ ಕಳವು ಹಾಗೂ 6 ವಂಚನೆ ಪ್ರಕರಣಗಳು ಸೇರಿದಂತೆ ಒಟ್ಟು 181 ಪ್ರಕರಣಗಳನ್ನು ಪತ್ತೆ ಮಾಡಲಾಗಿದೆ ಎಂದು ತಿಳಿಸಿದ್ರು. 

ಒಟ್ಟಾರೆ ಅಂದಾಜು ಮೌಲ್ಯ 2,96,29,775/- ರೂ ಗಳ ಬಂಗಾರದ ಆಭರಣಗಳು, ಬೆಳ್ಳಿಯ ಆಭರಣಗಳು, ಮೊಬೈಲ್ ಫೋನ್, ವಾಹನಗಳು, ಜಾನುವಾರು, ನಗದು ಹಣ, ಎಲೆಕ್ಟ್ರಾನಿಕ್ ವಸ್ತುಗಳು, ಅಡಿಕೆ ಮತ್ತು ಇತರೆ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದ್ರು 

ಹಿಂದಿನ ವರ್ಷಗಳಲ್ಲಿ ವರದಿಯಾದ ಪ್ರಕರಣಗಳಲ್ಲಿ 19 ಮನೆಗಳ್ಳತನ,  2 ಮೋಸ, 6 ಸಾಮಾನ್ಯ ಕಳವು ಮತ್ತು 15 ವಾಹನ ಕಳವು ಸೇರಿದಂತೆ ಒಟ್ಟು 42  ಪ್ರಕರಣಗಳನ್ನು ಸಹಾ ಪತ್ತೆ ಮಾಡಿ ಅಂದಾಜು ಮೌಲ್ಯ 58,94,593/- ರೂಗಳ ಮಾಲುಗಳನ್ನು ವಶ ಪಡಿಸಿಕೊಂಡಿದ್ದು ಸದರಿ ಮಾಲನ್ನು  ಹಾಗೂ CEIR ಪೋರ್ಟಲ್ ಮುಖಾಂತರ ಪತ್ತೆ ಹಚ್ಚಲಾದ ಮೊಬೈಲ್ ಫೋನ್ ಗಳನ್ನು ಈ ದಿನ ವಾರಸುದಾರರಿಗೆ ಹಿಂದಿರುಗಿಸಲಾಗಿದೆ.