Shivamogga | Feb 7, 2024 | ಶಿವಮೊಗ್ಗ ಜಿಲ್ಲೆ ಶಿಕಾರಿಪುರ ತಾಲ್ಲೂಕಿನ ದೊಡ್ಡಪೇಟೆ ಸಮೀಪ ನಡೆದ ಚಾಕು ಇರಿತ ಪ್ರಕರಣ ಶಿವಮೊಗ್ಗದಲ್ಲಿ ಸೂಕ್ಷ್ಮ ವಿಚಾರವಾಗಿ ಪರಿವರ್ತನೆಗೊಂಡಿದೆ. ಈ ಸಂಬಂಧ ಏನೇನಲ್ಲಾ ಆಯ್ತು, ಯಾರೆಲ್ಲಾ ಪ್ರತಿಕ್ರಿಯೆ ನೀಡಿದ್ರು ಎಂಬುದರ ವಿವರವನ್ನು ಮಲೆನಾಡು ಟುಡೆ ನೀಡುತ್ತಿದೆ.
ಮುಖ್ಯವಾಗಿ ಘಟನೆ ಹಿನ್ನೆಲೆಯಲ್ಲಿ ಚಾಕು ಇರಿತಕ್ಕೆ ಒಳಗಾದ ಯುವಕ ಸುಶೀಲ್ರ ಸಹೋದರ ಈ ಬಗ್ಗೆ ಮಾತನಾಡಿದ್ದಾರೆ. ಈ ಬಗ್ಗೆ ಮಲೆನಾಡು ಟುಡೆ ಹಾಗೂ ಇತರೇ ಮಾಧ್ಯಮಗಳೊಂದಿಗೆ ಮಾತನಾಡಿದ ಸುಶೀಲ್ ಸಹೋದರ ಯೋಗೀಶ್ ಘಟನೆ ವೇಳೆ ಸ್ಥಳದಲ್ಲೇ ಇದಿದ್ದಾಗಿ ತಿಳಿಸಿದ್ದಾರೆ.
ಹೇಗಾಯ್ತು ಘಟನೆ
ನನ್ನ ಅಣ್ಣ ರಾತ್ರಿ ಒಂಬತ್ತಕ್ಕೆ ಮನೆ ಮುಂದೆ ನಾಯಿನ ಹೊರಗಡೆ ಸುತ್ತಿಸುತ್ತಾ ಇದ್ರು. ಈ ವೇಳೆ ಆಗ ನಾನು ಮನೆಯ ಒಳಗೆ ಮೊಬೈಲ್ ನೋಡುತ್ತಿದ್ದೆ. ಅದೇ ಸಂದರ್ಭದಲ್ಲಿ ಹೊರಗಡೆ ಜಗಳವಾಗುತ್ತಿದ್ದ ಹಾಗೆ ಕೇಳಿಸಿತು. ತಕ್ಷಣ ಹೊರಗೆ ಬಂದು ನೋಡಿದ್ದಾಗ ಅಣ್ಣನಿಗೆ ನಾಲ್ಕು ಜನರು ಚಾಕುವಿನಿಂದ ಚುಚ್ಚಿ ಓಡಿ ಹೋಗ್ತಾ ಇದ್ರು.
ನಾನೂ ಅವರನ್ನ ಹಿಡಿಯಲು ಮುಂದಾದೆ. ಆದ್ರೆ ತಪ್ಪಿಸಿಕೊಂಡು ಓಡಿಹೋದರು. ಬಳಿಕ ಅಣ್ಣನನ್ನು ಕರೆದುಕೊಂಡು ಬಂದು ಶಿಕಾರಿಪುರ ತಾಲೂಕು ಆಸ್ಪತ್ರೆ ಗೆ ತೋರಿಸಿದ್ವಿ. ಅಲ್ಲಿ ಆಗದ ನಂತರ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ಕರೆತರಲಾಯಿತು ಎಂದು ತಿಳಿಸಿದ್ದಾರೆ.
ಕಣ್ಣೀರಿಟ್ಟ ತಂದೆ
ಇನ್ನೂ ಇದೇ ವಿಚಾರದ ಬಗ್ಗೆ ಸುಶೀಲ್ರ ತಂದೆ ಚೆನ್ನವೀರಪ್ಪರವರು ಸಹ ಮಾತನಾಡಿದ್ದಾರೆ. ಶಿವಮೊಗ್ಗ ಜಿಲ್ಲೆ ಶಿಕಾರಿಪುರ ಪಟ್ಟಣದಲ್ಲಿ ನಡೆದ ಘಟನೆಯ ಬಗ್ಗೆ ಮಾತನಾಡಿದ ಅವರು, ಘಟನೆ ನೆನೆದು ಕಣ್ಣಿರಿಟ್ಟಿದ್ದಾರೆ.
ವೀಲಿಂಗ್ ಮಾಡಬೇಡಿ ಎಂದು ಬುದ್ದಿವಾದ ಹೇಳಿದಕ್ಕೆ ನನ್ನ ಮಗನ ಮೇಲೆ ಹಲ್ಲೆ ಮಾಡಿದ್ದಾರೆ ನನ್ನ ಮಗ ಯಾರ ತಂಟೆಗೂ ಹೋಗುತ್ತಿರಲಿಲ್ಲ .ಬುದ್ದಿವಾದ ಹೇಳಿದಕ್ಕೆ ರಾತ್ರಿ ನಮ್ಮಮನೆ ಮುಂದೆ ಬಂದು ಹಲ್ಲೆ ಮಾಡಿದ್ದಾರೆ. ಸದ್ಯ ತಮ್ಮ ಮಗ ಶಿವಮೊಗ್ಗದ ಮೆಟ್ರೋ ಆಸ್ಪತ್ರೆ ಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ ಎಂದು ತಿಳಿಸಿದ್ದಾರೆ.
ಪೊಲೀಸ್ ತನಿಖೆ
ಇದೇ ವಿಚಾರದಲ್ಲಿ ತನಿಖೆ ನಡೆಸ್ತಿರುವ ಪೊಲೀಸ್ ಇಲಾಖೆ ಈಗಾಗಲೇ ಮೂವರು ಆರೋಪಿಗಳನ್ನ ಬಂದಿಸಿದೆ. ಅಲ್ಲದೆ ಪ್ರಕರಣದ ತನಿಖೆ ತೀವ್ರಗೊಳಿಸಿರುವ ಪೊಲೀಸರು ಪರಾರಿಯಾದವರನ್ನು ಹುಡುಕಾಡುತ್ತಿದ್ದಾರೆ. ಇನ್ನೊಂದೆಡೆ ಗಾಯಾಳುವನ್ನು ಸಹ ಭೇಟಿ ಮಾಡಿರುವ ಎಸ್ಪಿ ಮಿಥುನ್ ಕುಮಾರ್ ಪ್ರಕರಣದ ಪೂರ್ತಿ ಮಾಹಿತಿ ಪಡೆದುಕೊಂಡು ಮೆಲ್ವಿಚಾರಣೆ ನಡೆಸ್ತಿದ್ದಾರೆ.
ನಡೆದ ಘಟನೆ ಸಂಬಂಧ ಮಾಧ್ಯಮಗಳಿಗೂ ಮಾತನಾಡಿರುವ ಅವರು, ಸುಶೀಲ್ ಸಾಕುನಾಯಿ ಜೊತೆ ವಾಕಿಂಗ್ ಮಾಡುವಾಗ ಗಲಾಟೆ ನಡೆದಿದೆ. ಘಟನೆ ನಡೆದ ಸಂಬಂಧ ಮೂವರನ್ನ ಬಂಧಿಸಲಾಗಿದೆ ಎಂದು ವಿವರಿಸಿದ್ದಾರೆ.
ಎಸ್ಪಿ ಮಿಥುನ್ ಕುಮಾರ್
ಅಪ್ರಾಪ್ತ ಬಾಲಕ ಸೈಕಲ್ ವೀಲಿಂಗ್ ಮಾಡುವಾಗ ಮೊದಲು ಮಾತಿನ ಚಕಮಕಿ ನಡೆದಿದೆ . ಬುದ್ದಿ ಹೇಳಿದ್ದಕ್ಕೆ ಸುಶೀಲ್ ಮೇಲೆ ಚಾಕುವಿನಿಂದ ಅಪ್ರಾಪ್ತ ಬಾಲಕ ಹಲ್ಲೆ ಮಾಡಿದ್ದಾನೆ. ಹಲ್ಲೆ ಮಾಡಿದ ಕೂಡಲೇ ಆರೋಪಿಗಳು ಅಲ್ಲಿಂದ ಪರಾರಿಯಾಗಿದ್ದಾರೆ. ಸುಶೀಲ್ ಇದೀಗ ಆರೋಗ್ಯವಾಗಿದ್ದಾರೆ.
ಅವರಿಗೆ ಚಿಕಿತ್ಸೆ ಮುಂದುವರೆದಿದೆ ಎಂದು ತಿಳಿಸಿದ್ಧಾರೆ
ಎರಡು ದಿನಗಳ ಮೊದಲೇ ಜಗಳ ನಡೆದಿತ್ತಾ?
ಚಾಕು ಇರಿತಕ್ಕೆ ಘಟನೆಗೂ ಎರಡು ದಿನಗಳ ಹಿಂದೆ ನಡೆದಿದ್ದ ಗಲಾಟೆ ಕಾರಣ, ಆರೋಪಿ ಹಾಗೂ ಗಾಯಾಳುಗೂ ಜಗಳವಾಗಿತ್ತು ಎಂಬ ವಿಚಾರವನ್ನು ಈ ನಡುವೆ ಹರಿಬಿಡಲಾಗಿದೆ. ಇದರ ಬಗ್ಗೆಯು ಎಸ್ಪಿ ಮಿಥುನ್ ಕುಮಾರ್ ಸ್ಪಷ್ಟನೆ ನೀಡಿದ್ದಾರೆ.
ಹರಿದಾಡುತ್ತಿರುವ ವಿಚಾರದ ಬಗ್ಗೆ ತನಿಖೆ ನಡೆಸಲಾಗಿದ್ದು, ಗಾಯಾಳು ಆರೋಪಿಗಳನ್ನ ಇದೇ ಮೊದಲ ಸಲ ನೋಡಿರುವುದಾಗಿ ಹೇಳಿದ್ದಾರೆ. ಅವರಿಗೂ ತಮಗೂ ಯಾವುದೇ ಲಿಂಕ್ ಇಲ್ಲ ಎಂದಿದ್ದಾರೆ. ಇನ್ನೂ ಎರಡು ದಿನಗಳ ಹಿಂದೇ ಅಪ್ರಾಪ್ತ ಆರೋಪಿಯು ಅದೇ ಸ್ಥಳದಲ್ಲಿ ವೀಲ್ಹೀಂಗ್ ಮಾಡುತ್ತಿದ್ದ ಬಗ್ಗೆ ವಿಚಾರ ತಿಳಿದುಬಂದಿದೆ. ಇದನ್ನ ಗಮನಿಸಿದ್ದ ಪೊಲೀಸರೊಬ್ಬರು ಗದರಿಸಿ ವಾಪಸ್ ಕಳಿಹಿಸಿದ್ದಾರೆ. ಆತ ಮೈನರ್ ಆಗಿದ್ದ ಕಾರಣಕ್ಕೆ ವಿಲ್ಹೀಂಗ್ ಮಾಡಬಾರದು ಎಂದು ಬುದ್ದಿವಾದ ಹೇಳಿ ಕಳುಹಿಸಿದ್ದಾರೆ. ಈ ವೇಳೆ ಸುಶೀಲ್ ರ ತಾಯಿ ಅದನ್ನು ಗಮನಿಸಿದ್ದರು. ಆದರೆ ಸುಶೀಲ್ ಅಲ್ಲಿ ಇರಲಿಲ್ಲ.
ಬಿ.ವೈ. ರಾಘವೇಂದ್ರ
ಅತ್ತ ಶಿಕಾರಿಪುರದಲ್ಲಿ ಘಟನೆ ಬೆನ್ನಲ್ಲೆ ಪೊಲೀಸ್ ಸ್ಟೇಷನ್ ಎದುರು ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಸಂಸದ ಬಿ.ವೈ.ರಾಘವೇಂದ್ರರವರ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದ ಹಿಂದೂ ಕಾರ್ಯಕರ್ತರು ಹಾಗು ಬಿಜೆಪಿ ಕಾರ್ಯಕರ್ತರು ಪೊಲೀಸ್ ಇಲಾಖೆಯು ವಿರುದ್ಧವೂ ಆಕ್ರೋಶ ಹೊರಹಾಕಿತು. ಈ ವೇಳೆ ಮಾತನಾಡಿದ ಸಂಸದ ಬಿ.ವೈ.ರಾಘವೇಂದ್ರ ರಾಜ್ಯದಲ್ಲಿ ಅಲ್ಪಸಂಖ್ಯಾತರ ತುಷ್ಟಿಕರಣ ಹೆಚ್ಚಾಗಿದೆ . ಇದರ ಪರಿಣಾಮ ಹಿಂದೂ ಕಾರ್ಯಕರ್ತರ ಮೇಲೆ ಹಲ್ಲೆ ದೌರ್ಜನ್ಯ ನಡೆಯುತ್ತಿದೆ ನಾವೇನು ಮಾಡಿದರು ನಡೆಯುತ್ತದೆ ಎಂಬ ಭಾವನೆಗೆ ಅಲ್ಪಸಂಖ್ಯಾತರು ಬಂದಂತಿದೆ ಸಮುದಾಯದ ಹಿರಿಯರು ತಮ್ಮ ಮಕ್ಕಳಿಗೆ ಬುದ್ಧಿ ಹೇಳುವ ಕೆಲಸ ಮಾಡುತ್ತಿಲ್ಲ ಎಂದು ಆರೋಪಿಸಿದ್ರು.
ಸರ್ಕಾರ ಇನ್ನಾದರೂ ಅಲ್ಪಸಂಖ್ಯಾತರ ತುಷ್ಟಿಕರಣ ಕೈಬಿಡಬೇಕು ಎಂದು ಆಗ್ರಹಿಸಿದ ಬಿ.ವೈ.ರಾಘವೇಂದ್ರರವರು ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಜರಗಿಸುವ ಧೈರ್ಯ ಸರ್ಕಾರ ತೋರಲಿ ಎಂದರು. ಅಲ್ಲದೆ ಹಿಂದೂ ಪರ ಕಾರ್ಯಕರ್ತರ ಧೈರ್ಯಗಿಡುವುದು ಬೇಡ ನಾವು ಅವರ ಪರ ಇದ್ದೇವೆ ಪಕ್ಷ ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿದೆ ಹೋರಾಟದ ಮೂಲಕ ಈ ಸರ್ಕಾರಕ್ಕೆ ಎಚ್ಚರಿಕೆ ನೀಡುತ್ತವೆ ಎಂದರು.
