ಬೆನ್ನಟ್ಟಿ ಬಂದು ತುಳಿದ ಕಾಡಾನೆ । ಹೊಸನಗರದಲ್ಲಿ ಮೃತನ ಕುಟುಂಬಕ್ಕೆ ಒಂದು ಲಕ್ಷ ನೆರವು ।

One death in elephant attack in Hosanagar. One lakh assistance to the family of the deceased in Hosanagar. Belur Gopalakrishna, Hosnagar Taluk News,

ಬೆನ್ನಟ್ಟಿ ಬಂದು ತುಳಿದ ಕಾಡಾನೆ । ಹೊಸನಗರದಲ್ಲಿ ಮೃತನ ಕುಟುಂಬಕ್ಕೆ ಒಂದು ಲಕ್ಷ ನೆರವು ।
Hosanagar. Belur Gopalakrishna, Hosnagar Taluk News,

SHIVAMOGGA | MALENADUTODAY NEWS | May 4, 2024    ‌ 

 

ಶಿವಮೊಗ್ಗ ಜಿಲ್ಲೆ ಹೊಸನಗರ ತಾಲ್ಲೂಕು ಬಸವಾಪುರ ಗ್ರಾಮದ ಬಳಿ ಕಾಡಾನೆ ದಾಳಿಗೆ ಓರ್ವ ರೈತ ಮೃತಪಟ್ಟಿದ್ದಾರೆ. ದರಗೆಲೆ ತರಲು ಕಾಡಿಗೆ ಹೋಗಿದ್ದ ಸಂದರ್ಭದಲ್ಲಿ ಆನೆ ದಾಳಿ ನಡೆಸಿದೆ.  ತಿಮ್ಮಪ್ಪ ಮಡಿವಾಳ (54) ಮೃತ ವ್ಯಕ್ತಿ.

 

ದರಗು ಒಟ್ಟಮಾಡುತ್ತಿದ್ದಾಗ  ಹಿಂದಿನಿಂದ ಬಂದ ಆನೆ ತಿಮ್ಮಪ್ಪರನ್ನ ಅಟ್ಟಾಡಿಸಿದೆ. ಅಲ್ಲದೆ ಬೆನ್ನಟ್ಟಿ ಬಂದು ತುಳಿದಿದೆ. ಇನ್ನೂ ತಿಮ್ಮಪ್ಪ ಜೊತೆಗೆ ಹೋಗಿದ್ದ ನಾಲ್ವರು ಮಹಿಳೆಯರು ಘಟನೆಯಲ್ಲಿ ಸ್ವಲ್ಪದರಲ್ಲಿಯೇ ಪಾರಾಗಿದ್ದಾರೆ.  ಸ್ಥಳಕ್ಕೆ  ಅರಣ್ಯ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿಕೊಟ್ಟು ಆನೆ ದಾಳಿಯ ಮಾಹಿತಿ ಕಲೆಹಾಕಿದ್ದಾರೆ. 

 

ಗ್ರಾಮಕ್ಕೆ ಭೇಟಿ ನೀಡಿ ಮೃತನ ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿದ ಸಾಗರ ಶಾಸಕ ಬೇಳೂರು ಗೋಪಾಲಕೃಷ್ಣ, ₹ 1 ಲಕ್ಷ ಧನಸಹಾಯ ಮಾಡಿದರು. ಸರ್ಕಾರದಿಂದ ಸೂಕ್ತ ಪರಿಹಾರ ಕೊಡಿಸುವ ಭರವಸೆ ನೀಡಿದರು.