ಮಧು ಬಂಗಾರಪ್ಪ ಮುತ್ಸದ್ದಿ ಎಂದ ಬಿ.ವೈ.ವಿಜಯೇಂದ್ರ ಕುಮಾರ್ ಬಂಗಾರಪ್ಪರವರ ವಿಷಯದಲ್ಲಿ ಈ ಸುಳಿವು ಕೊಟ್ರು!

|In Shivamogga, B.Y. Vijayendra commented on Madhu Bangarappa and Kumar Bangarappa | ಬಿ.ವೈ.ವಿಜಯೇಂದ್ರ, ಮಧು ಬಂಗಾರಪ್ಪ, ಕುಮಾರ್ ಬಂಗಾರಪ್ಪ,

ಮಧು ಬಂಗಾರಪ್ಪ ಮುತ್ಸದ್ದಿ  ಎಂದ ಬಿ.ವೈ.ವಿಜಯೇಂದ್ರ ಕುಮಾರ್ ಬಂಗಾರಪ್ಪರವರ ವಿಷಯದಲ್ಲಿ ಈ ಸುಳಿವು ಕೊಟ್ರು!
In Shivamogga, B.Y. Vijayendra commented on Madhu Bangarappa and Kumar Bangarappa

SHIVAMOGGA  |  Jan 26, 2024  |  ಶಿವಮೊಗ್ಗಕ್ಕೆ ಇವತ್ತು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಬಂದಿದ್ದರು. ಈ ವೇಳೆ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಸಚಿವ ಮಧು ಬಂಗಾರಪ್ಪರವರ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿದರ. ಮಧು ಬಂಗಾರಪ್ಪರವರು ಮುತ್ಸದ್ದಿ ರಾಜಕಾರಣಿ ಅವರ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸುವುದಿಲ್ಲ. ಲೋಕಸಭೆ ಚುನಾವಣೆಯಲ್ಲಿ ಎಲ್ಲದಕ್ಕೂ ಉತ್ತರ ನೀಡುತ್ತೇವೆ ಎಂದಿದ್ದಾರೆ. 

 

ಬಿ.ವೈ. ವಿಜಯೇಂದ್ರ

ರಾಜ್ಯದ ಕಾಂಗ್ರೆಸ್ ನಾಯಕರು ಭ್ರಮೆಯಲ್ಲಿ ಇದ್ದಾರೆ ಎಂದ ಬಿ.ವೈ. ವಿಜಯೇಂದ್ರ, ಪಕ್ಷಕ್ಕೆ ಯಾರೇ ಬಂದರೂ ಸ್ವಾಗತ ಎಂದಿದ್ದಾರೆ. ಅಲ್ಲದೆ, ಕುಮಾ‌ರ್ ಬಂಗಾರಪ್ಪ ನಮ್ಮ ಜತೆ ಇದ್ದಾರೆ ಎಂದ ಅವರು ಹಿರಿಯ ಶಾಸಕ ಲಕ್ಷ್ಮಣ್ ಸವದಿ ದೈಹಿಕವಾಗಿ ಅಲ್ಲಿದ್ದರೂ ಮಾನಸಿಕವಾಗಿ ಇಲ್ಲಿದ್ದಾರೆ ಎಂದಿದ್ದಾರೆ. 

ಕುಮಾರ್ ಬಂಗಾರಪ್ಪ

ಕಾಂಗ್ರೆಸ್ ತನ್ನ ಪಕ್ಷದಲ್ಲಿರುವ ನಾಯಕರ ರಕ್ಷಣೆ ಮಾಡಿಕೊಳ್ಳಬೇಕಿದೆ. ಈ ನಿಟ್ಟಿನಲ್ಲಿ ಮಾಜಿ ಶಾಸಕ ಕುಮಾರ್ ಬಂಗಾರಪ್ಪರವರು ಬಿಜೆಪಿಯಲ್ಲಿದ್ದಾರೆ. ಕೆಲಸ ಮಾಡಿಯೂ ವಿಧಾನ ಸಭೆ ಚುನಾವಣೆಯಲ್ಲಿ ಸೋತಬಳಿಕ ನಿರಾಸೆಯಲ್ಲಿದ್ದಾರೆ ಮುಂದೆ ಎಲ್ಲವೂ ಸರಿಯಾಗಲಿದೆ ಎಂದು ತಿಳಿಸಿದ್ದಾರೆ