SHIVAMOGGA | MALENADUTODAY NEWS
ಮಲೆನಾಡು ಟುಡೆ ಡಿಜಿಟಲ್ ನ್ಯೂಸ್ ಮೀಡಿಯಾ
Sep 15, 2024 shimoga news
ಭದ್ರಾವತಿಯಲ್ಲಿಂದು ಅಲ್ಲಿನ ಪ್ರಸಿದ್ಧ ಹಿಂದೂ ಮಹಾಸಭಾ ಗಣಪತಿಯನ್ನು ವಿಸರ್ಜನೆ ಮಾಡಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಶಿವಮೊಗ್ಗ ಪೊಲೀಸರು ಬಿಗಿಬಂದೋಬಸ್ತ್ ಕೈಗೊಂಡಿದ್ದಾರೆ. ನಿನ್ನೆ ರಾತ್ರಿ ಸ್ವತಃ ಎಸ್‌ಪಿ ಮಿಥುನ್ ಕುಮಾರ್ ತಮ್ಮ ಪೊಲೀಸ್ ಪಡೆಗೆ ಭದ್ರತೆಯ ಬಗ್ಗೆ ಬ್ರಿಫಿಂಗ್ ಮಾಡಿದ್ದಾರೆ.
ಭದ್ರಾವತಿ ಹಿಂದೂ ಮಹಾಸಭಾ ಗಣಪತಿ- Bhadravathi Hindu Mahasabha Ganapati
ಗಣಪತಿಯ ವಿಸರ್ಜನಾ ಮೆರವಣಿಗೆ ಬಂದೋಬಸ್ತ್ ಕರ್ತವ್ಯಕ್ಕೆ 02 ಹೆಚ್ಚುವರಿ ಪೊಲೀಸ್ ಅಧೀಕ್ಷಕರು, 17 ಪೊಲೀಸ್ ಉಪಾಧೀಕ್ಷಕರು, 45 ಪೋಲಿಸ್ ನಿರೀಕ್ಷಕರು, 65 ಪೊಲೀಸ್ ಉಪನಿರೀಕ್ಷಕರು, 190 ಸಹಾಯಕ ಪೊಲೀಸ್ ನಿರೀಕ್ಷಕರು, 1450 ಪೊಲೀಸ್ ಹೆಡ್ ಕಾನ್ಸ್ ಟೆಬಲ್ ಮತ್ತು ಪೊಲೀಸ್ ಕಾನ್ಸ್ ಟೆಬಲ್ ಗಳು, 450 ಗೃಹರಕ್ಷಕ ದಳ ಸಿಬ್ಬಂದಿಗಳು, 01 RAF ತುಕಡಿ, 05 ಡಿ.ಎ.ಆರ್ ತುಕಡಿ, 01 ಕ್ಯೂ.ಆರ್.ಟಿ ತುಕಡಿ ಮತ್ತು 08 ಕೆಎಸ್ಆರ್.ಪಿ ತುಕಡಿಗಳನ್ನು ನಿಯೋಜಿಸಲಾಗಿದೆ.
ಬಂದೋಬಸ್ತ್ ಕರ್ತವ್ಯಕ್ಕೆ ನಿಯೋಜನೆ ಮಾಡಲಾದ ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ ಮಿಥುನ್ ಕುಮಾರ್ ಜಿ.ಕೆ ಐಪಿಎಸ್, ಮಾನ್ಯ ಪೊಲೀಸ್ ಅಧೀಕ್ಷಕರು, ಶಿವಮೊಗ್ಗ ಜಿಲ್ಲೆ ನಿನ್ನೆ ಸಂಜೆ ಭದ್ರಾವತಿ ನಗರದ ಕನಕ ಮಂಟಪ ಮೈದಾನದಲ್ಲಿ ಬ್ರೀಫಿಂಗ್ ನಡೆಸಿ, ಬಂದೋಬಸ್ತ್ ಸಂದರ್ಭದಲ್ಲಿ ನಿರ್ವಹಿಸಬೇಕಾದ ಕರ್ತವ್ಯಗಳ ಕುರಿತು ಸಲಹೆ ಮತ್ತು ಸೂಚನೆಗಳನ್ನು ನೀಡಿದರು.
ಪೊಲೀಸ್ ರೂಟ್ ಮಾರ್ಚ್
ಇನ್ನೂ ನಿನ್ನೆ ದಿನ ಪೊಲೀಸ್ ಇಲಾಖೆ ಭದ್ರಾವತಿಯಲ್ಲಿ ರೂಟ್ ಮಾರ್ಚ್ ಸಹ ನಡೆಸಿದೆ. ಭದ್ರಾವತಿ ನಗರದ ಕನಕ ಮಂಟಪದಿಂದ ಪ್ರಾರಂಭವಾದ ರೂಟ್ ಮಾರ್ಚ್‌ನ್ನ ಹಳದಮ್ಮ ಬೀದಿ, ಖಾಜಿ ಮೊಹಲ್ಲಾ, ಬಸವೇಶ್ವರ ವೃತ್ತ, ಪರಿಮಳ ಹೋಟೆಲ್ ಕ್ರಾಸ್, ರಂಗಪ್ಪ ವೃತ್ತ, ಹೊಳೆಹೊನ್ನೂರು ವೃತ್ತ, ಸಂತೆ ಮೈಧಾನ ಹೊಸಮನೆ, ಹೊಸಮನೆ ಪೊಲೀಸ್ ಠಾಣಾ ಮುಂಭಾಗ, ಗಾಂಧಿ ವೃತ್ತ, ಮಾದವಚಾರ್ ವೃತ್ತದಿಂದ ಕನಕಮಂಟಪಕ್ಕೆ ಬಂದು ಮುಕ್ತಾಯ ಮಾಡಲಾಯಿತು.
ನಿಮ್ಮ ವಾಟ್ಸಾಪ್‌ನಲ್ಲಿ ನೋಡಿ, ಜಸ್ಟ್ ಒಂದು ಫಾಲೋ ಕೊಡಿ
ನಮ್ಮ ವಾಟ್ಸ್ಯಾಪ್ ಗ್ರೂಪ್ ಲಿಂಕ್ ಇದು ಕ್ಲಿಕ್ ಮಾಡಿ https://chat.whatsapp.com/FxYXrxP9Vbq6Xd5jML5sQN
TODAY ವಾಟ್ಸ್ಯಾಪ್ ಚಾನಲ್ ಫಾಲೋ ಮಾಡಿ https://whatsapp.com/channel/0029Va9I91s3LdQVrdq7yl1h
ಗೂಗಲ್ ನ್ಯೂಸ್ ಜಸ್ಟ್ ಫಾಲೋಕೊಡಿ https://news.google.com/publications/CAAqBwgKMLWipQwwx5q0BA?ceid=IN:en&oc=3