thirthahalli : ತೀರ್ಥಹಳ್ಳಿಯ ಬಿಳುಕೊಪ್ಪದಲ್ಲಿ ಅಪಘಾತ, ಬೈಕ್​ ಸವಾರ ಸಾವು

prathapa thirthahalli
Prathapa thirthahalli - content producer

thirthahalli:  ತೀರ್ಥಹಳ್ಳಿಯ ಬಿಳುಕೊಪ್ಪದಲ್ಲಿ ಅಪಘಾತ, ಬೈಕ್​ ಸವಾರ ಸಾವು

 ತೀರ್ಥಹಳ್ಳಿ ತಾಲೂಕಿನ ಬಿಳುಕೊಪ್ಪ ಶಾಲೆಯು ಎದುರು ಕಾರು ಹಾಗೂ ಬೈಕ್​ ನಡುವೆ ಭೀಕರ ಅಪಘಾತ ನಡೆದಿದ್ದು ಬೈಕ್​ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.ಹುಂಚದ ಕಟ್ಟೆಯ ಕೈಮರ ನಿವಾಸಿ ಚೇತನ್​ ಮೃತ ಸವಾರ ಎಂದು ತಿಳಿದು ಬಂದಿದೆ.

ಬಿಳುಕೊಪ್ಪ ಶಾಲೆಯ ಮುಂಭಾಗ ಇದುವರೆಗೂ 50 ಕ್ಕೂ ಹೆಚ್ಚು ಅಪಘಾತಗಳು ನಡೆದಿದೆ. ಆ ಪ್ರದೇಶದಲ್ಲಿ ರಸ್ತೆ ಚಿಕ್ಕದಿದ್ದು ತಿರುವು ಇರುವುದರಿಂದ  ವಾಹನಗಳಿಗೆ ಎದುರು ಬರುವ ವಾಹನಗಳು ಕಾಣದೇ ಇರುವುದೇ ಅಪಘಾತಕ್ಕೆ ಕಾರಣವಾಗಿದೆ. ಸಂಬಂಧಪಟ್ಟವರು ರಸ್ತೆ ಅಗಲೀಕರಣ ಮಾಡಿ ಇನ್ನು ಮುಂದಾದರೂ ಆಗುವ ಅಪಘಾತಗಳನ್ನು ತಡೆಯಲಿ ಎಂಬುವುದು ಸ್ಥಳೀಯರ ಆಗ್ರಹವಾಗಿದೆ.

TAGGED:
Share This Article