ತುಂಗಾನದಿಯಲ್ಲಿ ಬ್ರಹ್ಮಾವರ ನಿವಾಸಿ ಶವ ಪತ್ತೆ! ಕಮಾನು ಸೇತುವೆ ಬಳಿ ಸಿಕ್ತು ಬೆಂಗಳೂರು ರಿಜಿಸ್ಟರ್​ ಕೆಟಿಎಂ ಬೈಕ್ ! ಸಂಶಯ

Brahmavar resident's body found in Tunga river Bengaluru-registered KTM bike found near Thirthahalli arch bridge Doubt

ತುಂಗಾನದಿಯಲ್ಲಿ ಬ್ರಹ್ಮಾವರ ನಿವಾಸಿ ಶವ ಪತ್ತೆ! ಕಮಾನು ಸೇತುವೆ ಬಳಿ ಸಿಕ್ತು ಬೆಂಗಳೂರು ರಿಜಿಸ್ಟರ್​ ಕೆಟಿಎಂ ಬೈಕ್ ! ಸಂಶಯ
Brahmavar, Bengaluru-registered KTM bike , Thirthahalli arch bridge

Shivamogga  Feb 25, 2024 ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲ್ಲೂಕು ತುಂಗಾನದಿ ಯಲ್ಲಿ ನಿನ್ನೆ ಅಪರಿಚಿತ ಮೃತದೇಹವೊಂದು ಪತ್ತೆಯಾಗಿತ್ತು.   ಇದೀಗ ಮೃತದೇಹದ ಗುರುತು ಪತ್ತೆಯಾಗಿದೆ. 

ತೀರ್ಥಹಳ್ಳಿ ಪಟ್ಟಣದ ತೂಗು ಸೇತುವೆ ಬುಡದ ತುಂಗಾನದಿಯಲ್ಲಿ ಶನಿವಾರ ಬೆಳಗ್ಗೆ ಪುರುಷ ಶವವೊಂದು ಕೊಳೆತ ಸ್ಥಿತಿಯಲ್ಲಿ ದೊರೆತಿತ್ತು. 

ಮೃತನನ್ನು ಉಡುಪಿ ಜಿಲ್ಲೆ ಬ್ರಹ್ಮಾವರ ತಾಲೂಕಿನ ಬೈಕಾಡಿ ಗ್ರಾಮದ ನಿತಿನ್‌ ಫರ್ನಾಂಡಿಸ್ (44) ಎಂದು ಗುರುತಿಸಲಾಗಿದೆ. ಅವಿವಾಹಿತವಾಗಿದ್ದ ಈತ ಖಾಸಗಿ ಸಂಸ್ಥೆಯ ಅಕೌಂಟೆಂಟ್ ಅಗಿದ್ದು ಮದ್ಯ ವ್ಯಸನಿಯೂ ಆಗಿದ್ದ ಎನ್ನಲಾಗಿದೆ.ಕಳೆದ ಮಂಗಳವಾರದಿಂದ ಇವರು ಕಾಣೆಯಾಗಿದ್ದರು

ಇನ್ನೊಂದೆಡೆ  ತೀರ್ಥಹಳ್ಳಿ  ಪಟ್ಟಣದ ಕುರುವಳ್ಳಿಯ ತುಂಗಾ ಕಾಮಾನು ಸೇತುವೆ ಸಮೀಪ ಸ್ಮಶಾನಕ್ಕೆ ಹೋಗುವ ದಾರಿಯ ಪಕ್ಕದಲ್ಲಿ ಅನಾಮಧೇಯ ಬೈಕ್ ವೊಂದು ಶನಿವಾರ ಪತ್ತೆಯಾಗಿದೆ.

KTM ಬೈಕ್ ಆಗಿದ್ದು ಬೆಂಗಳೂರು ಮೂಲದ ರಿಜಿಸ್ಟರ್ ನಂ ಹೊಂದಿದೆ. KA04KD1905 ಸಂಖ್ಯೆಯ ಬೈಕ್ ಇದಾಗಿದ್ದು ಕಳೆದ ಮೂರು ದಿನಗಳಿಂದ ಬೈಕ್ ನಿಂತಲ್ಲಿಯೇ ನಿಂತಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.ಯಾರದ್ದು ಏನು ಎಂದು ಪೊಲೀಸ್ ತನಿಖೆಯಿಂದ ತಿಳಿಯಬೇಕಿದೆ.