ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿಯ ಮುಡುಬ ಬಳಿ ಟ್ರ್ಯಾಕ್ಸ್ -ಕಾರು ನಡುವೆ ಭೀಕರ ಅಪಘಾತ

ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿಯ ಮುಡುಬ ಬಳಿ ಟ್ರ್ಯಾಕ್ಸ್ -ಕಾರು ನಡುವೆ ಭೀಕರ ಅಪಘಾತ

ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿಯ ಮುಡುಬ ಬಳಿ ಟ್ರ್ಯಾಕ್ಸ್ -ಕಾರು ನಡುವೆ ಭೀಕರ ಅಪಘಾತ

KARNATAKA NEWS/ ONLINE / Malenadu today/ Sep 10, 2023 SHIVAMOGGA NEWS

 

ಶಿವಮೊಗ್ಗ ಜಿಲ್ಲೆಯ ತೀರ್ಥಳ್ಳಿ ತಾಲೂಕು ಮುಡಬ ಬಳಿ ಭೀಕರ ಅಪಘಾತ ಸಂಭವಿಸಿದೆ. ಇಲ್ಲಿನ ಚೌಡೇಶ್ವರಿ ದೇವಸ್ಥಾನದ ಎದುರು ಈ ಘಟನೆ ಸಂಭವಿಸಿದೆ, ದಿನಾಂಕ 10 ರ ಮಧ್ಯಾಹ್ನ ಮೂರು ಗಂಟೆ ಸುಮಾರಿಗೆ ಈ ಘಟನೆ ಸಂಭವಿಸಿದೆ 

 

ಶಿವಮೊಗ್ಗದಿಂದ ಮಂಗಳೂರು ಕಡೆಗೆ ಹೊರಟಿದ್ದ ಟ್ರಾಕ್ಸ್ ಹಾಗೂ ಕುಂದಾಪುರದಿಂದ ಮಂಗಳೂರು ಶಿವಮೊಗ್ಗ ಕಡೆಗೆ ಹೊರಟಿದ್ದ ಇನ್ನೋವಾ ಕಾರು ನಡುವೆ ಡಿಕ್ಕಿ ಯಾಗಿದೆ

 

ಘಟನೆಯಲ್ಲಿ ಇನೋವಾ ಕಾರಿನ ಒಂದು ಭಾಗ ಜಖಂಗೊಂಡಿದೆ. ಇನ್ನೊಂದುಕಡೆ ಅಪಘಾತವಾದ ಬೆನ್ನಲ್ಲೆ ಟ್ರ್ಯಾಕ್ಸ್ ರಸ್ತೆ ಬದಿಯ ಏರಿಗೆ,  ಡಿಕ್ಕಿ ಹೊಡೆದು ನಿಂತಿದೆ. ಘಟನೆಯಲ್ಲಿ ಟ್ರ್ಯಾಕ್ಸ್ ನ ಬಹುಭಾಗ ಜಖಂಗೊಂಡಿದೆ..

 

ಅದೃಷ್ಟವಶಾತ್ ಘಟನೆಯಲ್ಲಿ ಯಾರಿಗೂ ಪ್ರಾಣಾಪಾಯ ಉಂಟಾಗಿಲ್ಲ..ಸಣ್ಣಪುಟ್ಟ ಗಾಯಗಳೊಂದಿಗೆ ವಾಹನದಲ್ಲಿದ್ದವರು ಬಚಾವ್ ಆಗಿದ್ದಾರೆ‌..ಡೊಳ್ಳು ಸೆಟ್ ತಂಡ ಟ್ರ್ಯಾಕ್ಸ್ ನಲ್ಲಿ ಪ್ರಯಾಣಿಸುತಿತ್ತು…

 

ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಪೊಲೀಸರು ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. 


 

ಇನ್ನಷ್ಟು ಸುದ್ದಿಗಳು