ಮಾಜಿ ವಿಧಾನಪರಿಷತ್ ಸದಸ್ಯ ಡಾ.ಬಿಎಸ್. ವಿಶ್ವನಾಥನ್ ನಿಧನ!

Former Legislative Council member Dr. BS. Viswanathan passed away!ಮಾಜಿ ವಿಧಾನಪರಿಷತ್ ಸದಸ್ಯ ಡಾ.ಬಿಎಸ್. ವಿಶ್ವನಾಥನ್ ನಿಧನ!

ಮಾಜಿ ವಿಧಾನಪರಿಷತ್ ಸದಸ್ಯ ಡಾ.ಬಿಎಸ್. ವಿಶ್ವನಾಥನ್ ನಿಧನ!

KARNATAKA NEWS/ ONLINE / Malenadu today/ Sep 25, 2023 SHIVAMOGGA NEWS’



ವಿಧಾನಪರಿಷತ್ತಿನ ಮಾಜಿಸದಸ್ಯ ಡಾ.ಬಿಎಸ್. ವಿಶ್ವನಾಥನ್ (90) ಅನಾರೋಗ್ಯದಿಂದ ಭಾನುವಾರ ಬೆಂಗಳೂರಿನ ನಿವಾಸದಲ್ಲಿ ನಿಧನರಾಗಿದ್ದಾರೆ. 

ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ, ತಾಲೂಕಿನ ಕಟ್ಟೇಹಕ್ಕಲುಸಮೀಪದ  ಬಸರವಳ್ಳಿ ದಿ. ಸುಬ್ಬಯ್ಯ ಗೌಡರ ಪ್ರತ್ರ ವಿಶ್ವನಾಥನ್ ತಾಲೂಕು ಭೂ ಅಭಿವೃದ್ಧಿ ಬ್ಯಾಂಕ್‌ ಅಧ್ಯಕ್ಷ ಸ್ಥಾನದಿಂದ ಅಂತಾರಾಷ್ಟ್ರೀಯ ಮಟ್ಟದವರೆಗೂ ಕಾರ್ಯಕ್ಷೇತ್ರ ವಿಸ್ತರಿಸಿ ಸಹಕಾರ ಕ್ಷೇತ್ರದಲ್ಲಿ  ಅಗಾಧ ಸಾಧನೆ ಮೆರೆದಿದ್ದರು. 

 

ತೀರ್ಥಹಳ್ಳಿ ವಿಧಾನಸಭಾ ಕ್ಷೇತ್ರದಿಂದ ಶಾಂತವೇರಿ ಗೋಪಾಲಗೌಡರ ಎದುರು ಚುನಾವಣೆಗೆ ಸ್ಪರ್ಧಿಸಿ ಪರಾಭವಗೊಂಡಿದ್ದ ದಿವಂಗತರು ಎರಡು ಅವಧಿಗೆ ವಿಧಾನಪರಿಷತ್‌ ಸದಸ್ಯರಾಗಿ ಕಾರ್ಯ ನಿರ್ವಹಿಸಿದ್ದರು. 

ಸಾಂಸ್ಕೃತಿಕ ಲಲಿತಕಲೆಗಳ ಬಗ್ಗೆ ವಿಶೇಷ ಒಲವನ್ನು ಹೊಂದಿದ್ದ ದಿವಂಗತರು ವೀಣೆ ಶೇಷಣ್ಣ ರಂಥಸಾಂಸ್ಕೃತಿಕ ಕ್ಷೇತ್ರ ದದಿಗ್ಗಜರಒಲವಿಗೂಪಾತ್ರರಾಗಿದ್ದು ಮಾತ್ರವಲ್ಲದೇ, ಅಂತಹಕಲಾವಿದರನ್ನು ಒಗ್ಗೂಡಿಸಿ ತಾವೇ ಸ್ವತಃ ಹಲವಾರು ಕಾರ್ಯಕ್ರಮಗಳನ್ನು ಆಯೋಜಿಸಿದ್ದರು. 

ದಾಸ ಶ್ರೇಷ್ಠ ಪುರಂದರದಾಸರು ತಾಲೂಕಿನ ಆರಗ ಸಮೀಪದ ವಿಠಲಗುಂಡಿಯಲ್ಲಿ ಜನಿಸಿದ್ದರು ಎಂಬ ಐತಿಹಾಸಿಕ ಮಾಹಿತಿ ಹಿನ್ನೆಲೆ ವೈಯಕ್ತಿಕವಾಗಿಲಕ್ಷಾಂತರ ರೂಪಾಯಿ ವ್ಯಯಿಸಿ ಪುರಂದರ ವೇದಿಕೆ ಸ್ಥಾಪಿಸಿದ್ದರು. 

ಇನ್ನಷ್ಟು ಸುದ್ದಿಗಳು 

  1. BREAKING NEWS / ಜೋಗದ ಸಮೀಪ ನೀರಿಗಿಳಿದಿದ್ದ ಓರ್ವ ಅಧಿಕಾರಿ ಮತ್ತು ಬ್ಯಾಂಕ್ ಉದ್ಯೋಗಿ ಸಾವು! ಕಾರ್ಗಲ್​ ಸ್ಟೇಷನ್ ವ್ಯಾಪ್ತಿಯಲ್ಲಿ ನಡೆದಿದ್ದೇನು?

  2. ಲೋಡ್ ಗಾಡಿಯಿಂದ ಬಿದ್ದ ಮರದ ತುಂಡು ಬಡಿದು ಬೈಕ್​ ಸವಾರನ ಸ್ಥಿತಿ ಗಂಭೀರ! ಹೀಗೂ ಆಗುತ್ತೆ ಹುಷಾರು ತಪ್ಪದಿರಿ ವಾಹನ ಸವಾರರೇ?

  3. ದೌರ್ಜನ್ಯ ಪ್ರಕರಣ ! ಶಿವಮೊಗ್ಗ ಡಿಸಿಯಿಂದ 15 ಸೂಚನೆ! ಯುವಕನ ಸಾವು, ಮರಳು, ಅಧಿಕಾರಿಗಳಿಂದ ಕಿರುಕುಳ ಬಗ್ಗೆ ಜಿಲ್ಲಾಧಿಕಾರಿ ಹೇಳಿದ್ದೇನು?